ಯುಗಾದಿ ಎಂದರೆ ವಿಜಯ ಮತ್ತು ಸಮೃದ್ಧಿಯ ಪ್ರತೀಕ
ಯುಗಾದಿ ಭಾರತದ ಒಂದು ಮಹತ್ವದ ಹಬ್ಬವಾಗಿದ್ದು ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಶುಕ್ಲ ಪಾಡ್ಯದಂದು ಅದನ್ನು ಆಚರಿಸಲಾಗುತ್ತದೆ. ಇದು ಶಾಲಿವಾಹನ ಸಂವತ್ಸರದ ಮೊದಲ ದಿನವಾಗಿದೆ. ‘ವೇದಾಂಗ ಜ್ಯೋತಿಷ್ಯ’ ಗ್ರಂಥದಲ್ಲಿ ಹೇಳಲಾದ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು ಮುಹೂರ್ತವಾಗಿದೆ. ಈ ದಿನ ಹೊಸ ವಸ್ತುಗಳ ಖರೀದಿ, ವ್ಯವಸಾಯಗಳ ಆರಂಭ, ಹೊಸ ಕಾರ್ಯಗಳ ಪ್ರಾರಂಭ, ಚಿನ್ನದ ಖರೀದಿ ಇತ್ಯಾದಿಗಳನ್ನು ಮಾಡಲಾಗುತ್ತದೆ. ಮನೆಯ ಬಾಗಿಲಿನಲ್ಲಿ ನಿಲ್ಲಿಸಿರುವ ಬ್ರಹ್ಮಧ್ವಜವು ವಿಜಯ ಮತ್ತು ಸಮೃದ್ಧಿಯ ಸಂಕೇತವೆಂದು ನಂಬಲಾಗಿದೆ.

ಯುಗಾದಿ – ಒಂದೇ ವರ್ಷದಲ್ಲಿ ಎರಡು ಯುಗಾದಿಗಳು
ಸಾಮಾನ್ಯವಾಗಿ ಶಾಲಿವಾಹನ ಶಕೆಯ ಒಂದು ಹಿಂದೂ ವರ್ಷದಲ್ಲಿ ವರ್ಷದ ಆರಂಭದಲ್ಲಿ ಒಂದು ಮತ್ತು ಒಂದೇ ಯುಗಾದಿ ಬರುತ್ತದೆ; ಆದರೆ ಶಕೆ ೧೯೩೮ ರಲ್ಲಿ ಎರಡು ಯುಗಾದಿಗಳು ಬಂದಿದ್ದವು. ೮ ಏಪ್ರಿಲ್ ೨೦೧೬ ರಿಂದ ಆರಂಭವಾದ ಶಾಲಿವಾಹನ ಶಕೆ ೧೯೩೮ ರ ಹೊಸ ವರ್ಷದಲ್ಲಿ ವರ್ಷದ ಆರಂಭ ಮತ್ತು ವರ್ಷದ ಅಂತ್ಯದಲ್ಲಿ ಹೀಗೆ ಎರಡು ಯುಗಾದಿಗಳು ಬಂದಿದ್ದವು. ೮ ಎಪ್ರಿಲ್ ೨೦೧೬ ರಂದು ಯುಗಾದಿ ಬಂದಿತ್ತು; ಆದರೆ ನಂತರದ ವರ್ಷದ ಶಕೆ ೧೯೩೯ ಚೈತ್ರ ಶುಕ್ಲ ಪಾಡ್ಯವು ಕ್ಷಯ ತಿಥಿ ಆಗಿದ್ದರಿಂದ ಆ ದಿನ ಅಂದರೆ ೨೯ ಮಾರ್ಚ್ ೨೦೧೭ ರಂದು ಯುಗಾದಿ ಇರಲಿಲ್ಲ. ಅದನ್ನು ಹಿಂದಿನ ದಿನ ೨೮ ಮಾರ್ಚ್ ೨೦೧೭ ರಂದು ಇದ್ದ ಅಮಾವಾಸ್ಯೆಯ ದಿನ-ಬೆಳಗ್ಗೆ ೮.೨೭ ಗಂಟೆಗೆ ಫಾಲ್ಗುಣ ಅಮಾವಾಸ್ಯೆ ಮುಗಿದ ನಂತರ ಆಚರಿಸಬೇಕಾಯಿತು.
ಯುಗಾದಿ – ಸಾಂಸ್ಕೃತಿಕ ಇತಿಹಾಸ
ಬ್ರಹ್ಮದೇವನು ಇದೇ ದಿನ ವಿಶ್ವವನ್ನು ಸೃಷ್ಟಿಸಿದನು ಎಂದು ಹೇಳಲಾಗುತ್ತದೆ. ಶಾಲಿವಾಹನ ಎಂಬ ಹೆಸರಿನ ಕುಂಬಾರನ ಮಗನು ಶಕರನ್ನು ಸೋಲಿಸಲು ೬ ಸಾವಿರ ಮಣ್ಣಿನ ಸೈನಿಕರ ವಿಗ್ರಹಗಳನ್ನು ಸಿದ್ಧಮಾಡಿ ಅವುಗಳಲ್ಲಿ ಜೀವ ತುಂಬಿ ಅವರ ಸಹಾಯದಿಂದ ಇದೇ ದಿನ ಶಕರನ್ನು ಸೋಲಿಸಿದನು, ಎಂದು ಹೇಳಲಾಗುತ್ತದೆ. ಇದೇ ಶಾಲಿವಾಹನ ರಾಜನ ಹೆಸರಿನಿಂದ ಹೊಸ ಕಾಲಗಣನೆ ಶಾಲಿವಾಹನ ಶಕೆ ಆರಂಭವಾಯಿತು. ಪ್ರಾಚೀನ ಮಾನವನು ಯಾವಾಗ ದೇವರ ವಿಚಾರ ಮಾಡಿ ಪೂಜೆಯನ್ನು ಆರಂಭಿಸಿದನೋ, ಅದು ದೇವಿಯ, ಸ್ತ್ರೀಯ ರೂಪದಲ್ಲಿ ಆರಂಭವಾಯಿತು. ಆ ಸ್ತ್ರೀ ಎಂದರೆ ಆದಿಶಕ್ತಿ, ಆದಿಮಾತಾ ಪಾರ್ವತಿ, ಎಂದು ನಂಬಲಾಗುತ್ತದೆ. ಪಾರ್ವತಿ ಮತ್ತು ಶಂಕರನ ವಿವಾಹವು ಪಾಡ್ಯದ ದಿನ ನಿಶ್ಚಯವಾಗಿ ತೃತೀಯಾದಂದು ನೆರವೇರಿತು. ಪಾಡ್ಯದಂದು ಪಾರ್ವತಿಯ ಶಕ್ತಿ ರೂಪವನ್ನು ಪೂಜಿಸಲಾಗುತ್ತದೆ, ಇದಕ್ಕೇ ‘ಚೈತ್ರ ನವರಾತ್ರಿ’ ಎನ್ನಲಾಗುತ್ತದೆ. ಮದುವೆಯ ನಂತರ ನವಮಿಯಂದು ಯೋಗಿನಿಯರ ಅಧಿಪತಿ ಎಂದು ಪಾರ್ವತಿಗೆ ಅಭಿಷೇಕ ಮಾಡಲಾಯಿತು. ಕಾಶ್ಮೀರದ ಹೆಣ್ಣು ಮಕ್ಕಳಿಗೆ ‘ಪಾರ್ವತಿಯ ರೂಪ’ವೆಂದು ಶ್ರೀಕೃಷ್ಣನು ಹೇಳಿದ್ದಾನೆ. ಪಾರ್ವತಿಯು ತವರಿಗೆ ಬರುತ್ತಾಳೆ ಮತ್ತು ಅಕ್ಷಯ ತದಿಗೆಯಂದು ಮರಳಿ ಗಂಡನ ಮನೆಗೆ ಹೋಗುತ್ತಾಳೆ ಎಂಬ ನಂಬಿಕೆಯೂ ಇದೆ. ಪಾರ್ವತಿಯ ಮದುವೆಯಾದ ನಂತರ, ಅವಳು ತವರುಮನೆಯ ಹೆಣ್ಣಾಗಿ ಒಂದು ತಿಂಗಳು ತವರುಮನೆಯಲ್ಲಿ ಉಳಿಯುತ್ತಾಳೆ. ಆಗ ಅವಳ ಮೇಲಿನ ಪ್ರೀತಿಗಾಗಿ ಚೈತ್ರಗೌರಿಯ ಅರಿಶಿಣಕುಂಕುಮ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಅಕ್ಷಯ ತದಿಗೆಯಂದು ಅವಳು ಅತ್ತೆ ಮನೆಗೆ ಹೋಗುತ್ತಾಳೆ.
(ಸಂದರ್ಭ – ಶಕ್ರೋತ್ಸವದ (ಇಂದ್ರೋತ್ಸವದ) ಉಲ್ಲೇಖಗಳು ಸಂಸ್ಕೃತ ರಘುವಂಶದಲ್ಲಿ ಮತ್ತು ಭಾಸರ (ನಾಟಕಕಾರ) ‘ಮಧ್ಯಮವ್ಯಾಯೋಗ’ ಮತ್ತು ಶುದ್ರಕನ ‘ಮೃಚ್ಛಕಟಿಕಮ್’ ಈ ನಾಟಕಗಳಲ್ಲಿ ಬಂದಿದೆ.)
(ಆಧಾರ : ‘ಸಂತಸಾಹಿತ್ಯ’ದ ಜಾಲತಾಣ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು