ಹಿಂದೂ ರಾಷ್ಟ್ರದ ವಿಜಯದ ಧ್ವಜವನ್ನು ಏರಿಸೋಣ !

ಯುಗಾದಿ ಹಬ್ಬವೆಂದರೆ ಮಂಗಲಮಯ, ನವಚೈತನ್ಯ, ಉತ್ಸಾಹ ಮತ್ತು ಆನಂದದ ದಿನವಾಗಿದೆ. ಶ್ರೀಮಂತರಿರಲಿ ಅಥವಾ ಬಡವರಿರಲಿ, ಸಂಪೂರ್ಣ ಹಿಂದೂ ಸಮಾಜವು ತಮ್ಮ ಮನೆಯ ಮುಂದೆ ಹೊಸ ವರ್ಷದ ಬ್ರಹ್ಮಧ್ವಜವನ್ನು ನಿಲ್ಲಿಸಿ ಈ ಹಬ್ಬವನ್ನು ಆಚರಿಸುತ್ತದೆ. ಅದರಲ್ಲಿ ಭವ್ಯ ಶೋಭಾಯಾತ್ರೆಗಳು, ವಿವಿಧ ಸಾಂಸ್ಕೃತಿಕ ಚಿತ್ರರಥಗಳು, ಪಾರಂಪರಿಕ ಉಡುಗೆ ತೊಡುಗೆಗಳು, ಡೋಲು-ನಗಾರಿ ಹಾಗೂ ಲೇಜಿಮ್‌ಗಳಂತಹ ವಾದ್ಯಗಳ ಧ್ವನಿ, ‘ಜೈ ಭವಾನಿ, ಜೈ ಶಿವಾಜಿ’ ಮತ್ತು ‘ಹರ ಹರ ಮಹಾದೇವ’ ಮುಂತಾದ ಜಯಘೋಷಗಳಿರುತ್ತವೆ !

ಹೊಸ ವರ್ಷವನ್ನು ಸ್ವಾಗತಿಸುವ ಈ ವರ್ಷಾರಂಭವು ನಿಜಕ್ಕೂ ದೊಡ್ಡ ಸಂಭ್ರಮದ, ಆನಂದದ ಉತ್ಸವವಾಗಿರುತ್ತದೆ. ಬ್ರಹ್ಮದೇವನು ಸೃಷ್ಟಿಯನ್ನು ನಿರ್ಮಿಸಿದ ದಿನವಾದ ಇದು ಎಷ್ಟು ದೊಡ್ಡ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಾಗಿದೆ ! ‘ಈ ಪೃಥ್ವಿಯ ಕೋಟ್ಯಂತರ ವರ್ಷಗಳ ಆಧ್ಯಾತ್ಮಿಕ ಪರಂಪರೆಯನ್ನು ಕಾಪಾಡಿಕೊಂಡು ಬಂದಿರುವ ಸನಾತನ ಧರ್ಮವು ಈಶ್ವರನಿರ್ಮಿತ ಧರ್ಮವಾಗಿದೆ’ ಎಂಬುದಕ್ಕೆ ಇದೇ ಸಾಕ್ಷಿ. ಆದ್ದರಿಂದ, ಹಿಂದೂಗಳು ತಮ್ಮ ಅಂಗಳದಲ್ಲಿ ನಿಲ್ಲಿಸಿದ ಬ್ರಹ್ಮಧ್ವಜವು ಕೇವಲ ಒಂದು ಉತ್ಸವದ ಸಂಕೇತವಲ್ಲ, ಅದು ನಮ್ಮ ಸನಾತನ ಹಿಂದೂ ಧರ್ಮದ ಮಹಾನ್ ಸಂಸ್ಕೃತಿಯ ದ್ಯೋತಕವಾಗಿದೆ ಎಂಬುದನ್ನು ಪ್ರತಿಯೊಬ್ಬ ಹಿಂದೂ ನೆನಪಿನಲ್ಲಿಡಬೇಕು. ಹಿಂದೂ ಸಮಾಜವು ಅತ್ಯಂತ ಉತ್ಸಾಹದಿಂದ ಸನಾತನ ಹೊಸ ವರ್ಷವನ್ನು ಆಚರಿಸುತ್ತದೆ ಎಂಬುದನ್ನು ಮನಗಂಡಿದ್ದ ಕ್ರೂರಿ ಔರಂಗಜೇಬನು, ೩೩೬ ವರ್ಷಗಳ ಹಿಂದೆ ಹಿಂದೂಗಳ ಛತ್ರಪತಿ ಧರ್ಮವೀರ ಸಂಭಾಜಿ ಮಹಾರಾಜರನ್ನು ಅತಿ ನಿರ್ದಯವಾಗಿ ಚಿತ್ರಹಿಂದೆ ನೀಡಿ ಹತ್ಯೆ ಮಾಡಿದನು. ‘ಇಸ್ಲಾಂ ಧರ್ಮವನ್ನು ಸ್ವೀಕರಿಸು’ ಎಂಬ ಔರಂಗಜೇಬನ ಬೇಡಿಕೆಗೆ ಕಿಂಚಿತ್ತೂ ಮಣಿಯದೆ, ಛತ್ರಪತಿ ಸಂಭಾಜಿ ಮಹಾರಾಜರು ತೋರಿದ ಧರ್ಮಾಭಿಮಾನಕ್ಕೆ ಇತಿಹಾಸದಲ್ಲಿ ಬೇರೆ ಸಾಟಿಯಿಲ್ಲ. ಯಾವನು ಹಿಂದೂಗಳ ರಾಜನನ್ನು ಕೊಂದು ಹಿಂದುತ್ವವನ್ನು ನಾಶ ಮಾಡಲು ಸಂಚು ಹೂಡಿದ್ದನೋ, ಅಂತಹ ಔರಂಗಜೇಬನನ್ನು ಇಂದಿಗೂ ಕೆಲವು ಮತಾಂಧ ಮುಸಲ್ಮಾನರು ಬಹಿರಂಗವಾಗಿ ವೈಭವೀಕರಿಸುತ್ತಿದ್ದಾರೆ. ಈ ಹಿಂದೆ ಗುಟ್ಟಾಗಿ ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬನನ್ನು ‘ಶಹನಶಾ’ ಎನ್ನುತ್ತಿದ್ದವರು ಈಗ ಬಹಿರಂಗವಾಗಿ ಈ ಕ್ರೂರಿಗಳನ್ನು ಕೊಂಡಾಡುತ್ತಿದ್ದಾರೆ. ಅಲ್ಪಸಂಖ್ಯಾತರಾಗಿದ್ದಾಗಲೇ ಇಷ್ಟೊಂದು ಬಹಿರಂಗವಾಗಿ ಔರಂಗಜೇಬನ ವೈಭವೀಕರಣ ನಡೆಯುತ್ತಿದ್ದರೆ, ಭವಿಷ್ಯದಲ್ಲಿ ಅವರು ಬಹುಸಂಖ್ಯಾತರಾದರೆ ಕೇವಲ ವೈಭವೀಕರಣ ಮಾತ್ರವಲ್ಲ ಅವನ ಹಾದಿಯನ್ನೇ ತುಳಿಯಬಹುದು ಎಂದು ಅನಿಸುತ್ತದೆ. ಆದ್ದರಿಂದ ಹಿಂದೂಗಳು ಬ್ರಹ್ಮಧ್ವಜವನ್ನು ನಿಲ್ಲಿಸಬೇಕಾದರೆ, ಅದು ಯಾವ ಸನಾತನ ಧರ್ಮದ ಸಂಕೇತವಾಗಿದೆಯೋ ಆ ಧರ್ಮವನ್ನು ರಕ್ಷಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಈ ಹೊಸ ವರ್ಷದ ಆರಂಭವು ಕೇವಲ ಶೋಭಾಯಾತ್ರೆ, ವಾದ್ಯಗಳ ಅಬ್ಬರಕ್ಕೆ ಸೀಮಿತವಾಗಬಾರದು; ಬದಲಿಗೆ ಇದು ‘ಹಿಂದೂ ರಾಷ್ಟ್ರ’ ಸ್ಥಾಪನೆಯ ದಿಕ್ಕಿನಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಲು ಪ್ರೇರಣೆಯಾಗಬೇಕು ಎಂಬುದನ್ನು ಹಿಂದೂಗಳು ಸಮಯವಿರುವಾಗಲೇ ಅರ್ಥಮಾಡಿಕೊಳ್ಳಬೇಕು.

ಪರಾಕಾಷ್ಠೆಯ ಪ್ರಯತ್ನಗಳಿಗೆ ಪರ್ಯಾಯವಿಲ್ಲ !

ಭಾರತದಲ್ಲಿ ಬಾಂಗ್ಲಾದೇಶಿ ನುಸುಳುಕೋರರನ್ನು ನೆಲೆಸುವಂತೆ ಮಾಡಿ ಮುಸಲ್ಮಾನರ ಸಂಖ್ಯೆಯನ್ನು ವೇಗದಿಂದ ಹೆಚ್ಚಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಸೈಕಲ್ ರಿಪೇರಿ ಅಂಗಡಿಯಿಂದ ಹಿಡಿದು ಹೋಟೆಲ್, ಮಾಲ್‌ಗಳ ವರೆಗೆ ಮತ್ತು ಹಣ್ಣು ಮಾರಾಟಗಾರರಿಂದ ಹಿಡಿದು ಎಲೆಕ್ಟ್ರಿಕ್ ವಸ್ತುಗಳ ರಿಪೇರಿ ಮಾಡುವ ವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮುಸಲ್ಮಾನರ ಸಂಖ್ಯೆಯನ್ನು ಹೆಚ್ಚಿಸಿ ಭಾರತದ ಆರ್ಥಿಕತೆಯನ್ನು ಇಸ್ಲಾಂಗೆ ಅಧೀನವಾಗಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ. ಅಲ್ಪಸಂಖ್ಯಾತರು ಎಂದು ಮುದ್ದಿಸುತ್ತಾ ಮುದ್ದಿಸುತ್ತಾ ದೇಶದ ಬಹುತೇಕ ಕ್ಷೇತ್ರಗಳಲ್ಲಿ ಮುಸಲ್ಮಾನರು ತಮ್ಮ ಹಿಡಿತ ಸಾಧಿಸಿದ್ದಾರೆ. ಒಂದೆಡೆ ಭಾರತದ ಈ ಇಸ್ಲಾಮೀಕರಣದ ಸಂಕಟವು ಬಾಗಿಲಿಗೆ ಬಂದು ನಿಂತಿದ್ದರೆ, ಇನ್ನೊಂದೆಡೆ ಮತಾಂಧರ ಈ ಹುಂಬತನಕ್ಕೆ ಕಡಿವಾಣ ಹಾಕಲು ಸರಕಾರವು ಯಾವುದೇ ದೃಢವಾದ ನಿಲುವನ್ನು ತೆಗೆದುಕೊಳ್ಳದಿದ್ದರೆ, ಭವಿಷ್ಯದಲ್ಲಿ ಇದು ಹಿಂದೂಗಳಿಗೆ ಅಪಾಯದ ಕರೆ ಗಂಟೆಯಾಗಿದೆ. ಮುಂಬರುವ ದಿನಗಳಲ್ಲಿ ಯಾವುದೇ ಕೋಮುಗಲಭೆಯಾದರೆ, ಅದರಲ್ಲಿ ಪೊಲೀಸ್ ಮತ್ತು ಆಡಳಿತ ವರ್ಗವು ಹಿಂದೂಗಳ ಮೇಲೆಯೇ ಒತ್ತಡ ಹೇರುತ್ತದೆ ಎಂಬುದನ್ನು ಹಿಂದೂಗಳು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಮುಂಬರುವ ದಿನಗಳಲ್ಲಿ ಭಾರತವನ್ನು ‘ಹಿಂದೂ ರಾಷ್ಟ್ರ’ ಮಾಡಲು ಹಿಂದೂಗಳು ಪರಾಕಾಷ್ಠೆಯ ಪ್ರಯತ್ನ ಮಾಡುವುದನ್ನು ಬಿಟ್ಟರೆ ಬೇರೆ ಪರ್ಯಾಯವಿಲ್ಲ.

ಇಸ್ಲಾಮಿಕ್ ಸಂಘಟನೆಗಳು ೨೦೪೭ ರ ವರೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡಲು ಪ್ರಯತ್ನಿಸುತ್ತಿವೆ. ಔರಂಗಜೇಬನ ವೈಭವೀಕರಣ, ಬಾಂಗ್ಲಾದೇಶದ ಮುಸಲ್ಮಾನರನ್ನು ಭಾರತದಲ್ಲಿ ನೆಲೆಸುವಂತೆ ಮಾಡುವುದು, ವಕ್ಫ್ ಬೋರ್ಡ್ ಮೂಲಕ ಹಿಂದೂಗಳ ಭೂಮಿಯನ್ನು ಕಬಳಿಸುವುದು, ಹಲಾಲ್ ಪ್ರಮಾಣೀಕರಣದ ಮೂಲಕ ಆರ್ಥಿಕತೆಯನ್ನು ನಿಯಂತ್ರಿಸುವುದು ಮತ್ತು ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಸೆಳೆಯುವುದು, ಅತ್ಯಂತ ವೇಗದಿಂದ ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುವುದು ಈ ಎಲ್ಲ ರೀತಿಯು ಭಾರತವನ್ನು ಇಸ್ಲಾಮೀ ರಾಷ್ಟ್ರವನ್ನಾಗಿ ಮಾಡುವ ದಿಕ್ಕಿನಲ್ಲೇ ನಡೆಯುತ್ತಿರುವ ಪ್ರಯತ್ನಗಳಾಗಿವೆ. ಆದ್ದರಿಂದ, ಮುಂಬರುವ ಯುಗಾದಿ ಹಬ್ಬವನ್ನು ಕೇವಲ ಶೋಭಾಯಾತ್ರೆಗಳಿಗೆ ಸೀಮಿತಗೊಳಿಸದೆ, ಹಿಂದೂಗಳು ಸಂಘಟಿತಶಕ್ತಿಯ ಸಂಕೇತವನ್ನಾಗಿ ಮಾಡಬೇಕು. ಹಿಂದುತ್ವವನ್ನು ತಮ್ಮ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಆಡಳಿತಗಾರರನ್ನು ಸರಿದಾರಿಗೆ ತರಬೇಕು, ಅವರು ಪ್ರಖರ ಹಿಂದುತ್ವದ ನಿಲುವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಬೇಕು ಮತ್ತು ಹಿಂದೂ ಧರ್ಮದ ಮೇಲಾಗುತ್ತಿರುವ ವಿವಿಧ ದಾಳಿಗಳ ವಿರುದ್ಧ ಹೋರಾಡಲು ಸಜ್ಜಾಗಬೇಕು. ಇದಕ್ಕಾಗಿ ಹಿಂದೂಗಳೇ, ಹೊಸ ವರ್ಷದ ಆರಂಭದಲ್ಲಿ ಸಂಕಲ್ಪ ಮಾಡೋಣ. ಭಾರತದ ಈ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಉಳಿಸಲು ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲು ಶ್ರಮಿಸೋಣ. ಮೊಘಲರು ಮತ್ತು ಬ್ರಿಟಿಷರ ಆಕ್ರಮಣದ ನಂತರವಾದರೂ ಹಿಂದೂಗಳಾಗಿ ಸ್ವಾಭಿಮಾನದಿಂದ ಬದುಕಲು ಜಗತ್ತಿನಲ್ಲಿ ಕನಿಷ್ಠ ಒಂದು ದೇಶವನ್ನಾದರೂ ನಿರ್ಮಿಸೋಣ. ಹಿಂದೂ ರಾಷ್ಟ್ರದ ವಿಜಯದ ಧ್ವಜವನ್ನು ನಿಲ್ಲಿಸುವುದನ್ನು ಬಿಟ್ಟರೆ ನಮಗೆ ಬೇರೆ ಪರ್ಯಾಯವೇ ಇಲ್ಲ !