
ಭಾರತವು ಇಂದು ಕಡಿಮೆಪಕ್ಷ ೫ ಕೋಟಿ ಬಾಂಗ್ಲಾದೇಶಿ ನುಸುಳುಕೋರರನ್ನು ಸಹಿಸಿಕೊಳ್ಳುತ್ತಿದೆ. ‘ಸಿಬಿಐ’ನ ಮಾಜಿ ನಿರ್ದೇಶಕ ಜೊಗಿಂದರ್ ಸಿಂಗ್ ಅವರು ೨೦ ವರ್ಷಗಳ ಹಿಂದೆಯೇ ಈ ಅಂಕಿ-ಅಂಶಗಳನ್ನು ಜಗತ್ತಿನೆದುರು ಇಟ್ಟಿದ್ದರು. ಈ ಸಂಖ್ಯೆಯು ಅತ್ಯಂತ ಭಯಾನಕವಾಗಿದೆ. ಅದಾದ ನಂತರ ಲಕ್ಷಾಂತರ ರೋಹಿಂಗ್ಯಾಗಳಿಗೂ ಭಾರತವು ಆಶ್ರಯ ನೀಡಿದ್ದರಿಂದ ಈ ಸಮಸ್ಯೆಯು ಮತ್ತಷ್ಟು ಉಗ್ರ ರೂಪವನ್ನು ತಳೆದಿದೆ. ಇದಕ್ಕೆ ಲಗಾಮು ಹಾಕಲು ಕೇಂದ್ರ ಹಣಕಾಸು ಸಚಿವಾಲಯವು ಇತ್ತೀಚೆಗೆ ಒಂದು ಅತ್ಯಂತ ಮಹತ್ವಾಕಾಂಕ್ಷೆಯ ಭದ್ರತಾ ಯೋಜನೆಯನ್ನು ಘೋಷಿಸಿದೆ. ಅದೇ ‘ಸ್ಮಾರ್ಟ್ ಬಾರ್ಡರ್ ಪ್ರಾಜೆಕ್ಟ್’ ! ದೇಶದೊಳಗಿನ ನಕ್ಸಲೀಯ ಸಮಸ್ಯೆಯನ್ನು ಬಹುತೇಕ ನಿರ್ಮೂಲನೆ ಮಾಡಿ ಐತಿಹಾಸಿಕ ಸಾಧನೆ ಮಾಡಿರುವ ಭದ್ರತಾ ಸಂಸ್ಥೆಗಳು, ಈಗ ‘ಸ್ಮಾರ್ಟ್’ ಆಗಿ ನುಸುಳುಕೋರರನ್ನು ತಡೆಯುವ ಜವಾಬ್ದಾರಿಯನ್ನು ಹೊತ್ತುಕೊಂಡಿವೆ.
ಅಭೇದ್ಯ ಸಾರ್ವಭೌಮತ್ವ !
ಗೃಹ ಸಚಿವ ಅಮಿತ ಶಾಹ ಅವರು ಗಡಿ ಭದ್ರತಾ ಪಡೆಯ ೬೦ ನೇ ಸಂಸ್ಥಾಪನಾದಿನದ ಅಂಗವಾಗಿ ಆಯೋಜಿಸಲಾಗಿದ್ದ ವಾರ್ಷಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುವಾಗ ಈ ಯೋಜನೆಯನ್ನು ಘೋಷಿಸಿದರು. ಶಾಹ ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದ ಉದ್ದೇಶವು ಅತ್ಯಂತ ಸೂಕ್ತ ಹಾಗೂ ಸೂಚಕವಾಗಿದೆ. ಗೃಹ ಸಚಿವರು ಮಾತನಾಡಿ, “ನುಸುಳುವಿಕೆಯನ್ನು ತಡೆಯುವುದು ಮತ್ತು ಆ ಮಾರ್ಗದ ಮೂಲಕ ಭಾರತದ ಜನಸಂಖ್ಯಾರಚನೆಯಲ್ಲಿ ‘ಕೃತಕ ಬದಲಾವಣೆ’ ತರುವ ‘ಸಂಚನ್ನು’ ಧ್ವಂಸಗೊಳಿಸುವುದು ನಮ್ಮ ಸ್ಪಷ್ಟ ಉದ್ದೇಶವಾಗಿದೆ” ಎಂದರು. ಶಾಹ ಅವರ ಈ ಹೇಳಿಕೆಯು ದೇಶದ ‘ಹಿಂದೂ ಗುರುತಿಗೆ’ ಸರಕಾರಿ ರಕ್ಷಣೆ ಒದಗಿಸುವ ಮುನ್ಸೂಚನೆಯನ್ನು ನೀಡಿದೆ. ಹಿಂದೂ ಬಹುಸಂಖ್ಯಾತ ಭಾರತದ ಪ್ರಸ್ತುತ ಪರಿಸ್ಥಿತಿ ಹೇಗಿದೆಯೆಂದರೆ, ಇಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶಗಳಿಂದಾಗಿ ಈಗಾಗಲೇ ಭಾರತದ ಅಖಂಡತೆಗೆ ಸವಾಲು ಎದುರಾಗಿದೆ. ಇದರೊಂದಿಗೆ ಹೊರಗಿನ ನುಸುಳುಕೋರರು ಯಾವುದೇ ಅಡೆತಡೆಯಿಲ್ಲದೆ ಒಳನುಗ್ಗುತ್ತಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತದೆ ಎಂಬುದರಲ್ಲಿ ಸಂದೇಹ ವಿಲ್ಲ.

ಇದು ಹೀಗೆಯೇ ಮುಂದುವರಿದರೆ, ಮುಂದಿನ ಕೆಲವು ದಶಕಗಳಲ್ಲಿ ನಾವು ಇನ್ನೂ ಹಲವು ವಿಭಜನೆಗಳನ್ನು ಎದುರಿಸಬೇಕಾಗಬಹುದು. ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರು ಹಲವು ಬಾರಿ ‘ನಾಲ್ಕನೇ ತಲೆಮಾರಿನ ಯುದ್ಧ’ದ ಬಗ್ಗೆ ಮಾತನಾಡಿದ್ದಾರೆ. ಭಾರತದ ಶತ್ರುಗಳು ದೇಶದ ಧಾರ್ಮಿಕ, ಸೈದ್ಧಾಂತಿಕ, ಜನಸಂಖ್ಯಾ ಮುಂತಾದ ಆಂತರಿಕ ಭಿನ್ನಾಭಿಪ್ರಾಯಗಳನ್ನು ದುರುಪಯೋಗಿಸಿಕೊಂಡು ಆಂತರಿಕ ಅಸ್ಥಿರತೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ. ಇದು ಅಂತಿಮವಾಗಿ ಸಾರ್ವಭೌಮತ್ವಕ್ಕೆ ಸವಾಲೊಡ್ಡಬಹುದು. ಈ ಸಾಧ್ಯತೆಯು ಕಣ್ಣಿಗೆ ಕಾಣಿಸುವ ಮೊದಲೇ ಭಾರತವು ಭಗೀರಥ ಪ್ರಯತ್ನಗಳನ್ನು ಪ್ರಾರಂಭಿಸಬೇಕಾಗಿದೆ. ಈ ಯೋಜನೆಯು ಆ ಪ್ರಯತ್ನಗಳ ನಾಂದಿಯಾಗಬಹುದು ಎಂದು ಆಶಿಸೋಣ.

ಅಭೇದ್ಯ ೬ ಸಾವಿರ ಕಿ.ಮೀ. !
ಒಂದು ವರ್ಷದೊಳಗೆ ಸರಕಾರವು ಪಾಕಿಸ್ತಾನ ಮತ್ತು ಬಾಂಗ್ಲಾದೇಶದೊಂದಿಗಿನ ೬ ಸಾವಿರ ಕಿಲೋಮೀಟರ್ ಉದ್ದದ ಗಡಿಯಲ್ಲಿ ‘ಅಭೇದ್ಯ ಭದ್ರತಾ ಜಾಲ’ವನ್ನು ನಿರ್ಮಿಸಲಿದೆ. ಬಂಗಾಳ, ಅಸ್ಸಾಂ ಮತ್ತು ತ್ರಿಪುರಾದಲ್ಲಿ ಭಾಜಪ ಅಧಿಕಾರದಲ್ಲಿರುವುದರಿಂದ ಈ ಯೋಜನೆಯನ್ನು ಬಲವಾಗಿ ಮುನ್ನಡೆಸಲು ಈಗ ಸುಲಭವಾಗಿ ಸಾಧ್ಯವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಂಗಾಳದ ಶುಭೇಂದು ಅಧಿಕಾರಿ ಅವರ ಸರಕಾರದ ಸಹಾಯದಿಂದ ಬಾಂಗ್ಲಾದೇಶದ ಗಡಿಯಲ್ಲೂ ಈಗ ಬೇಲಿ ಹಾಕಲು ಸಾಧ್ಯವಾಗುತ್ತದೆ. ಆದರೆ ಇದು ಕೇವಲ ತಂತಿಯ ಬೇಲಿಯಾಗಿರುವುದಿಲ್ಲ. ಇದು ಸ್ಮಾರ್ಟ್ ಮತ್ತು ಹಾಗಾಗಿಯೇ ಅಭೇದ್ಯವೂ ಆಗಿರುತ್ತದೆ. ಪಾಕಿಸ್ತಾನದೊಂದಿಗಿನ ಭಾರತದ ಗಡಿಯ ವಿಷಯದಲ್ಲೂ ಇದೇ ವ್ಯವಸ್ಥೆ ಇರಲಿದೆ. ಅಮಿತ ಶಾಹ ಅವರು ಶೀಘ್ರದಲ್ಲೇ ರಾಜಸ್ಥಾನದಿಂದ ತಮ್ಮ ಸಭೆಗಳನ್ನು ಆರಂಭಿಸಲಿದ್ದಾರೆ. ರಾಜ್ಯದ ಪಾಕ್ ಗಡಿಗೆ ಹೊಂದಿಕೊಂಡಿರುವ ೫ ಜಿಲ್ಲೆಗಳ ಪೊಲೀಸ್ ಆಯುಕ್ತರು, ಜಿಲ್ಲಾಧಿಕಾರಿಗಳು, ಗುಪ್ತಚರ ಅಧಿಕಾರಿಗಳು ಮುಂತಾದವರೊಂದಿಗೆ ಗೃಹ ಸಚಿವರು ೨ ದಿನಗಳ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ವ್ಯವಸ್ಥೆಯು ‘ಸ್ಮಾರ್ಟ್’ ಆಗಿರುತ್ತದೆ; ಏಕೆಂದರೆ ಇದರಲ್ಲಿ ಲೇಸರ್ ಕ್ಯಾಮೆರಾಗಳು, ಎಐ ವ್ಯವಸ್ಥೆ ಹಾಗೂ ಡ್ರೋನ್‌ಗಳ ಮೂಲಕ ಗಡಿಗಳ ಮೇಲೆ ಕಣ್ಣಿಡಬಹುದು. ಇದರಿಂದಾಗಿ ಬೆಟ್ಟ-ಕಣಿವೆಗಳು, ನದಿ-ನಾಲೆಗಳು, ಜವಳು ಪ್ರದೇಶಗಳಂತಹ ದುರ್ಗಮ ಮತ್ತು ಸೈನಿಕರನ್ನು ನೇಮಿಸಲು ಸಾಧ್ಯವಾಗದ ಪ್ರದೇಶಗಳಲ್ಲಿ ತಂತ್ರಜ್ಞಾನವು ದಣಿವರಿಯಿಲ್ಲದೆ ಕೆಲಸ ಮಾಡುತ್ತದೆ. ಭಯೋತ್ಪಾದಕರು ಭಾರತದ ಗಡಿಯೊಳಗೆ ಯಾವ ರೀತಿ ನುಸುಳಿದರೂ ಸೈನಿಕರಿಗೆ ಅದರ ‘ತಾಂತ್ರಿಕ ಸುಳಿವು’ ಸಿಗುತ್ತದೆ ಮತ್ತು ಅವರಿಗೆ ತಕ್ಕ ಪ್ರತ್ಯುತ್ತರ ನೀಡಲು ಸಾಧ್ಯವಾಗುತ್ತದೆ. ಈ ಆಶಾದಾಯಕ ಯೋಜನೆಯು ನಮ್ಮ ೬ ಸಾವಿರ ಕಿ.ಮೀ. ಗಡಿಯನ್ನು ಸುರಕ್ಷಿತಗೊಳಿಸಿ, ಮುಂಬರುವ ದಿನಗಳಲ್ಲಿ ಭಾರತದಲ್ಲಿ ನುಸುಳುಕೋರರ ಸಂಖ್ಯೆ ಹೆಚ್ಚಾಗದಂತೆ ತಡೆಯುತ್ತದೆ ಎಂಬುದು ಖಚಿತ.
ನುಸುಳುಕೋರ ಭಯೋತ್ಪಾದಕರು !
ಕೇಂದ್ರ ಸರಕಾರದ ಈ ಕಾರ್ಯತಂತ್ರದ ಯೋಜನೆಯ ಅನಿವಾರ್ಯತೆಯನ್ನು ನಾವು ಅರ್ಥಮಾಡಿಕೊಳ್ಳಬೇಕು. ನುಸುಳುಕೋರರು ಭಾರತದ ಸಾರ್ವಭೌಮತ್ವಕ್ಕೆ ಕೇವಲ ಜನಸಂಖ್ಯಾ ದೃಷ್ಟಿಯಿಂದ ಹಾಗೂ ಭದ್ರತೆಯ ದೃಷ್ಟಿಯಿಂದಲೂ ಹಲವು ಬಾರಿ ಸವಾಲು ಹಾಕಿದ್ದಾರೆ. ಪಾಕಿಸ್ತಾನವಿರಲಿ ಅಥವಾ ಬಾಂಗ್ಲಾದೇಶವಿರಲಿ, ಅನೇಕ ಭಯೋತ್ಪಾದಕರು ನುಸುಳುಕೋರರ ರೂಪದಲ್ಲಿ ಭಾರತವನ್ನು ಪ್ರವೇಶಿಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರು ಸಾಮಾನ್ಯವಾಗಿ ಜಮ್ಮು-ಕಾಶ್ಮೀರ ಅಥವಾ ನೇಪಾಳದ ಮೂಲಕ ಉತ್ತರಪ್ರದೇಶಕ್ಕೆ ನುಸುಳಿದ ಘಟನೆಗಳು ಬೆಳಕಿಗೆ ಬಂದಿವೆ; ಆದರೆ ಪಾಕಿಸ್ತಾನದ ಅನೇಕ ಭಯೋತ್ಪಾದಕರು ಬಾಂಗ್ಲಾದೇಶದ ಗಡಿಯ ಮೂಲಕವೂ ಭಾರತದೊಳಗೆ ನುಸುಳಿರುವ ಉದಾಹರಣೆಗಳಿವೆ. ಭಯೋತ್ಪಾದಕರು ಭಾರತ-ಬಾಂಗ್ಲಾದೇಶದ ಮುಕ್ತ ಗಡಿಯ ಮೂಲಕ ಅಥವಾ ನದಿ ಮಾರ್ಗದ ಮೂಲಕ ಭಾರತಕ್ಕೆ ನುಸುಳುತ್ತಾರೆ. ಗಡಿಗೆ ಹೊಂದಿಕೊಂಡಿರುವ ಮುಸಲ್ಮಾನ ಬಹುಸಂಖ್ಯಾತ ಜಿಲ್ಲೆಗಳಿಂದ ಈ ಭಯೋತ್ಪಾದಕರಿಗೆ ಭಾರತದ ಇತರ ಭಾಗಗಳಿಗೆ ಹೋಗುವುದು ಸುಲಭವಾಗುತ್ತದೆ. ೨೦೦೯ ರಲ್ಲಿ ಪಾಕಿಸ್ತಾನದ ಹೈದರಾಬಾದ್ ನಿವಾಸಿಯಾಗಿದ್ದ ಹಾಗೂ ‘ಹರಕತ್-ಉಲ್-ಜಿಹಾದ್-ಅಲ್-ಇಸ್ಲಾಮಿ’ಯ ತರಬೇತಿ ಪಡೆದ ಭಯೋತ್ಪಾದಕ ಮೊಹಮ್ಮದ್ ಅಬ್ದುಲ್ ನಾಸಿರ್ ಬಾಂಗ್ಲಾದೇಶದ ಮೂಲಕ ಭಾರತಕ್ಕೆ ನುಸುಳಿದ್ದನು. ಭಾರತದ ಭಾಗ್ಯನಗರ ಪೊಲೀಸರು ಅವನನ್ನು ಬಂಧಿಸಿದರು. ೨೦೧೧ ರಲ್ಲಿ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಸಜ್ಜಾದ್ ಅಹ್ಮದ್ ಮತ್ತು ಅವನ ಸಹಚರರು ಬಾಂಗ್ಲಾದೇಶದಿಂದ ಒಳನುಗ್ಗುತ್ತಿದ್ದಾಗ ಮಾಲ್ದಾ-ಮುರ್ಷಿದಾಬಾದ್ ಪ್ರದೇಶದಲ್ಲಿ ವಶಕ್ಕೆ ಪಡೆಯಲಾಗಿತ್ತು. ಇಂತಹ ಅನೇಕ ಉದಾಹರಣೆಗಳಿವೆ. ಭಯೋತ್ಪಾದಕರು ಭದ್ರತಾ ಸಂಸ್ಥೆಗಳ ಕೈಗೆ ಸಿಗದ ಉದಾಹರಣೆಗಳೂ ಅನೇಕ ಇರಬಹುದು.
ಭಾರತ ನಿಜಕ್ಕೂ ಎಷ್ಟು ‘ಸ್ಮಾರ್ಟ್’ ?
ಈ ಯೋಜನೆಯು ಖಂಡಿತವಾಗಿ ಫಲಪ್ರದವಾಗುತ್ತದೆ ಇದರಲ್ಲಿ ಸಂದೇಹವಿಲ್ಲದಿದ್ದರೂ, ಈಗಾಗಲೇ ಭಾರತದೊಳಗಿರುವ ನುಸುಳುಕೋರರು ಮತ್ತು ಭಯೋತ್ಪಾದಕರ ಗತಿಯೇನು ಎಂಬ ಜಟಿಲ ಪ್ರಶ್ನೆ ಹಾಗೆಯೇ ಉಳಿದಿದೆ. ಕೋಟ್ಯಂತರ ನುಸುಳುಕೋರರನ್ನು ಹುಡುಕಿ ಹೊರತೆಗೆಯುವುದು ಅತ್ಯಂತ ಕಠಿಣವಾದ ಕೆಲಸವಾಗಿದೆ. ‘ವಿಶೇಷ ಆಳವಾದ ಮರುಪರಿಶೀಲನೆ’ಯ ಪ್ರಕ್ರಿಯೆಯು ಈ ಸಮಸ್ಯೆಯ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ; ಆದರೆ ಅಕ್ರಮ ಎಂದು ಸಾಬೀತಾದ ನುಸುಳುಕೋರರನ್ನು ದೇಶದಿಂದ ಹೇಗೆ ಓಡಿಸುವುದು ಎಂಬುದಕ್ಕೆ ಸದ್ಯಕ್ಕೆ ಭಾರತದ ಬಳಿ ಉತ್ತರವಿಲ್ಲ. ‘ದೇಶಾದ್ಯಂತ ‘ಡೆಮೋಗ್ರಫಿ ಮಿಷನ್’ ಎಂಬ ಯೋಜನೆಯನ್ನು ತಂದು ಪ್ರತಿಯೊಬ್ಬ ನುಸುಳುಕೋರನನ್ನು ಭಾರತದಿಂದ ಹೊರಹಾಕುತ್ತೇವೆ’ ಎಂದು ಗೃಹಸಚಿವರು ಸೂಚನೆ ನೀಡಿದ್ದರೂ, ಕೋಟ್ಯಂತರ ಜನರನ್ನು ಹುಡುಕುವುದು ಮತ್ತು ಅವರಿಗೆ ಬೆಂಬಲ ನೀಡುವ ಭಾರತೀಯರ ವಿರುದ್ಧ ಕ್ರಮ ಕೈಗೊಳ್ಳುವುದು ಸುಲಭದ ಮಾತಲ್ಲ ಎಂಬುದು ಅಷ್ಟೇ ಸತ್ಯ.
ವಿಷಯ ಇಲ್ಲಿಗೇ ಮುಗಿಯುವುದಿಲ್ಲ. ತನ್ನ ಸ್ವಂತ ಮನೆಯನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ, ಇದನ್ನು ಒಪ್ಪಿಕೊಳ್ಳೋಣ; ಆದರೆ ನೆರೆಮನೆಯಲ್ಲಿರುವ ನಮ್ಮ ಕುಟುಂಬದವರ ಗತಿಯೇನು ? ಇದನ್ನೂ ಕುಟುಂಬದ ಮುಖ್ಯಸ್ಥರು ಅಷ್ಟೇ ಆದ್ಯತೆಯಿಂದ ನೋಡಬೇಕಾಗುತ್ತದೆ. ಕಳೆದ ೨ ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ದುಸ್ಥಿತಿ ಎಲ್ಲರಿಗೂ ತಿಳಿದಿದೆ. ‘ಹ್ಯೂಮನ್ ರೈಟ್ಸ್ ಕಾಂಗ್ರೆಸ್ ಫಾರ್ ಬಾಂಗ್ಲಾದೇಶಿ ಮೈನಾರಿಟೀಸ್’ ಸಂಸ್ಥೆಯು ೨೦೨೬ ರ ಮೊದಲ ೪ ತಿಂಗಳುಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಘಟನೆಗಳ ವರದಿಯನ್ನು ಬಿಡುಗಡೆ ಮಾಡಿದೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ನಂತರವೂ ೬೪ ಜಿಲ್ಲೆಗಳ ಪೈಕಿ ೬೨ ಜಿಲ್ಲೆಗಳಲ್ಲಿ ಹಿಂದೂಗಳ ಮೇಲೆ ದಾಳಿಗಳಾಗಿರುವ ಅಂಕಿ-ಅಂಶಗಳು ಇದರಲ್ಲಿವೆ. ೧೦೦ ಹಿಂದೂಗಳ ಹತ್ಯೆ, ೨೮ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ೯೫ ದೇವಸ್ಥಾನಗಳ ಧ್ವಂಸ ಮತ್ತು ಮೂರ್ತಿ ಭಂಜನೆಯಂತಹ ಒಟ್ಟು ೫೦೫ ಘಟನೆಗಳ ವಿವರಗಳು ಇದರಲ್ಲಿವೆ. ಭಾರತವು ತನ್ನ ಸ್ವಂತ ಗಡಿಗಳನ್ನು, ತನ್ನ ಸ್ವಂತ ನಾಗರಿಕರನ್ನು ಸುರಕ್ಷಿತವಾಗಿರಿಸಿಕೊಳ್ಳುವುದರ ಜೊತೆಗೆ, ಇತರ ದೇಶಗಳಲ್ಲಿರುವ ಹಿಂದೂ ಸಹೋದರರನ್ನು ರಕ್ಷಿಸಲು ‘ಸ್ಮಾರ್ಟ್’ ಪ್ರಯತ್ನಗಳನ್ನು ಯೋಜಿಸಬೇಕು ಎಂಬುದೇ ಈ ನುಸುಳುಕೋರ ತಡೆಯುವ ಅಭಿಯಾನದ ಹಿನ್ನೆಲೆಯಲ್ಲಿ ಭಾರತದ ಹಿಂದೂಗಳು ಕೇಂದ್ರ ಸರಕಾರದ ಮುಂದೆ ಇಡುತ್ತಿರುವ ಆರ್ತ ಪ್ರಾರ್ಥನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು
ಶರೀರದ ‘ಪರಿವರ್ತನೆ’ಯ ನಿಯಮ !
ಆಧ್ಯಾತ್ಮಿಕ ಉಪಾಯಗಳ ವಿಷಯದಲ್ಲಿ ಇದನ್ನು ನೆನಪಿನಲ್ಲಿಡಿ !
ಭಾಜಪಗೂ ತಿಳಿದಿರಲಿಲ್ಲ, ಹಾಗೆ ನಡೆಯಿತು ಬಂಗಾಳಿ ಹಿಂದೂಗಳ ‘ಸಂಘಟಿತ’ ಮತದಾನ !
ಧರ್ಮನಿರಪೇಕ್ಷತೆ ಮತ್ತು ಹಿಂದೂ ರಾಷ್ಟ್ರ !
ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |