
ಒಂದು ಕಾಲದಲ್ಲಿ ಬ್ರಿಟನ್‌ನಲ್ಲಿ ನೆಲೆಸಲು ಭಾರತೀಯರ ನಡುವೆ ಪೈಪೋಟಿ ಇರುತ್ತಿತ್ತು, ಇಂದು ಅದೇ ಬ್ರಿಟನ್‌ನಿಂದ ಸ್ವದೇಶಕ್ಕೆ ಮರಳಲು ಭಾರತೀಯರಲ್ಲಿ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿದೆ. ಇದಕ್ಕೆ ಕಾರಣವೂ ಅಷ್ಟೇ ಪ್ರಬಲವಾಗಿದೆ. ಪ್ರಸ್ತುತ ಇಡೀ ಜಗತ್ತು, ವಿಶೇಷವಾಗಿ ಯುರೋಪಿನ ಹಲವು ದೇಶಗಳು ಅನಿಯಂತ್ರಿತ ವಲಸೆಯ ಸಮಸ್ಯೆಯಿಂದ ತತ್ತರಿಸಿ ಹೋಗಿವೆ. ಮುಖ್ಯವಾಗಿ ಇಸ್ಲಾಮಿಕ್ ವಲಸಿಗರ ಹೆಚ್ಚುತ್ತಿರುವ ಸಂಖ್ಯೆಯಿಂದಾಗಿ ಸಾಮಾಜಿಕ ಉದ್ವಿಗ್ನತೆ, ಸಾಂಸ್ಕೃತಿಕ ಸಂಘರ್ಷ, ಅಪರಾಧಗಳು ಮತ್ತು ಭದ್ರತೆಯ ಸಮಸ್ಯೆಗಳು ತಲೆಯೆತ್ತಿವೆ. ಹಲವು ಸ್ಥಳಗಳಲ್ಲಿ ಸಾಂಸ್ಕೃತಿಕ ಗುರುತು ನಶಿಸುವ ಸಂಕಟ ಉದ್ಭವಿಸಿದೆ. ಈ ವಲಸಿಗರಿಂದಾಗಿ ಅನೇಕ ದೇಶಗಳ ಜನಸಂಖ್ಯೆಯಿಂದ ಹಿಡಿದು ಅರ್ಥವ್ಯವಸ್ಥೆಯವರೆಗೆ ಪ್ರತಿಯೊಂದರ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಅದರಿಂದ ಫ್ರಾನ್ಸ್, ಜರ್ಮನಿ, ಸ್ವೀಡನ್, ಬೆಲ್ಜಿಯಂ, ಇಂಗ್ಲೆಂಡ್‌ನಂತಹ ದೇಶಗಳ ಸ್ಥಳೀಯ ನಾಗರಿಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಯುರೋಪಿನ ರಾಜಕೀಯ ಚರ್ಚೆಗಳಲ್ಲಿ ವಲಸೆಯು ಅತ್ಯಂತ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಈ ನಿಟ್ಟಿನಲ್ಲಿ ಇದು ಜಾಗತಿಕ ಸಮಸ್ಯೆಯಾಗಿ ರೂಪಾಂತರಗೊಂಡಿದೆ. ಬ್ರಿಟನ್‌ನಲ್ಲಂತೂ ವಲಸಿಗರ ಮಹಾಪೂರದಿಂದಾಗಿ ಲಂಡನ್ ಲಂಡನಿಸ್ತಾನ್ (ಇಸ್ಲಾಮೀಕರಣ) ಆಗುವ ಅಂಚಿನಲ್ಲಿದೆ. ಇದರಿಂದಾಗಿ ಅಲ್ಲಿನ ಸುಶಿಕ್ಷಿತ ಮತ್ತು ಶಾಂತಿಪ್ರಿಯ ಭಾರತೀಯರ ಮನಸ್ಸಿನಲ್ಲಿ ಅಸುರಕ್ಷತೆಯ ಭಾವನೆ ಮೂಡಿದೆ ಮತ್ತು ಇದುವೇ ಅವರು ಭಾರತಕ್ಕೆ ಮರಳುತ್ತಿರುವುದರ ಮುಖ್ಯ ಕಾರಣವಾಗಿದೆ.
ಕೆಲವು ದಶಕಗಳ ಹಿಂದೆ ಭಾರತೀಯರಲ್ಲಿ ವಿದೇಶಕ್ಕೆ ಹೋಗಿ ನೆಲೆಸಬೇಕು ಎಂಬ ಭ್ರಮೆಯ ಕಲ್ಪನೆ ಇತ್ತು. ವಿಶೇಷವಾಗಿ ಇಂಗ್ಲೆಂಡ್, ಅಮೆರಿಕ, ಕೆನಡಾ ಅಥವಾ ಯುರೋಪಿನ ದೇಶಗಳು ಎಂದರೆ ಯಶಸ್ಸಿನ ಶಿಖರ ಎಂದೇ ನಂಬಲಾಗಿತ್ತು. ಹಣ, ಪ್ರತಿಷ್ಠೆ ಮತ್ತು ಭೌತಿಕ ಸುಖಸೌಕರ್ಯಗಳಂತಹ ತಾತ್ಕಾಲಿಕ ವಿಷಯಗಳು ಶಾಶ್ವತ ಯಶಸ್ಸಿನ ಮಾನದಂಡಗಳಾದವು. ಈ ತಥಾಕಥಿತ ಮತ್ತು ಕ್ಷಣಿಕ ಯಶಸ್ಸಿಗಾಗಿ ಲಕ್ಷಾಂತರ ಭಾರತೀಯರು ಮಾತೃಭೂಮಿಗೆ ವಿದಾಯ ಹೇಳಿದರು. ಭಾರತದಲ್ಲಿ ಅವಕಾಶಗಳಿಲ್ಲ, ವ್ಯವಸ್ಥೆಯಿಲ್ಲ, ಭವಿಷ್ಯವಿಲ್ಲ ಎಂದು ಟೀಕಿಸುತ್ತಾ ಅನೇಕರು ವಿದೇಶ ಸೇರಿದರು.

ಕಳೆದ ಕೆಲವು ದಶಕಗಳಲ್ಲಿ ಇಂಗ್ಲೆಂಡ್‌ನಲ್ಲಿ ಭಾರತೀಯರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಯಿತು. ೨೦೨೧ ರ ಇಂಗ್ಲೆಂಡ್ ಮತ್ತು ವೇಲ್ಸನ ಜನಗಣತಿಯ ಪ್ರಕಾರ, ಅಲ್ಲಿ ಅಂದಾಜು ೧೮ ಲಕ್ಷ ೬೪ ಸಾವಿರ ಭಾರತೀಯರು ವಾಸಿಸುತ್ತಿದ್ದಾರೆ. ಈ ಪ್ರಮಾಣವು ಒಟ್ಟು ಜನಸಂಖ್ಯೆಯ ಅಂದಾಜು ಶೇಕಡಾ ೩.೧ ರಷ್ಟಿದೆ. ಭಾರತೀಯರನ್ನು ಅಲ್ಲಿನ ಅತ್ಯಂತ ದೊಡ್ಡ ಏಷ್ಯನ್ ಸಮುದಾಯ ಎಂದು ಪರಿಗಣಿಸಲಾಗಿದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಚಿತ್ರಣವು ವೇಗವಾಗಿ ಬದಲಾಗುತ್ತಿರುವುದು ಕಂಡುಬರುತ್ತಿದೆ. ವರ್ಷ ೨೦೨೪-೨೫ ರ ಅವಧಿಯಲ್ಲಿ ಅಂದಾಜು ೫೮ ಸಾವಿರ ಭಾರತೀಯರು ಇಂಗ್ಲೆಂಡ್ ತೊರೆದಿದ್ದಾರೆ. ಇವರಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಉದ್ಯೋಗ-ವ್ಯವಹಾರ ಮಾಡುವವರೂ ಸೇರಿದ್ದಾರೆ. ಇದರಲ್ಲಿ ವಲಸಿಗರ ಸಮಸ್ಯೆಯೊಂದಿಗೆ ಸಾಮಾಜಿಕ ಅಸುರಕ್ಷತೆ, ಸೀಮಿತ ಉದ್ಯೋಗಾವಕಾಶಗಳು, ವಲಸೆಗೆ ಸಂಬಂಧಿಸಿದ ಕಠಿಣ ನೀತಿಗಳು ಮುಂತಾದ ಕಾರಣಗಳು ಸೇರಿವೆ. ಪರಿಣಾಮವಾಗಿ, ಯಾರಿಗೆ ಒಂದು ಕಾಲದಲ್ಲಿ ಭಾರತವನ್ನು ಬಿಡುವುದು ಪ್ರಗತಿಯ ಸಂಕೇತವೆಂದು ಅನಿಸುತ್ತಿತ್ತೋ, ಅವರ ಮನಸ್ಸಿನಲ್ಲಿಯೇ ಈಗ ಸ್ವದೇಶವೇ ಸರ್ವಸ್ವ ಎಂಬ ಭಾವನೆ ಮೂಡಿದೆ. ಹಣವೇ ಸರ್ವಸ್ವವಲ್ಲ ಎಂಬುದು ಅವರಿಗೆ ಈಗ ಮನವರಿಕೆಯಾಗಿದೆ. ಅದು ಜೀವಕ್ಕಿಂತ ದೊಡ್ಡದಂತೂ ಖಂಡಿತಾ ಅಲ್ಲ.
ಸ್ವಾತಂತ್ರ್ಯವೀರ ಸಾವರಕರರು ಇಂಗ್ಲೆಂಡ್‌ದಲ್ಲಿ ಇದ್ದಾಗ ಅವರನ್ನು ಮಾತೃಭೂಮಿಯ ಸೆಳೆತವು ಅಸ್ವಸ್ಥಗೊಳಿಸಿತ್ತು. ಅವರ ಅಸ್ವಸ್ಥತೆ ಅಥವಾ ವಿದೇಶವನ್ನು ತೊರೆಯುವ ನಿರ್ಧಾರವು ಭಾರತದ ಮೇಲಿದ್ದ ಅವರ ಉನ್ನತ ಮಟ್ಟದ ದೇಶಪ್ರೇಮದ ಕಾರಣದಿಂದಾಗಿತ್ತು. ಭಾರತಮಾತೆಯನ್ನು ಬ್ರಿಟಿಷರ ನೊಗದಿಂದ ಮುಕ್ತಗೊಳಿಸುವುದೇ ಅವರ ಜೀವನದ ಧ್ಯೇಯವಾಗಿತ್ತು. ಇಂದು ಭಾರತಕ್ಕೆ ಮರಳುತ್ತಿರುವ ಭಾರತೀಯರು ಸಾವರಕರ ಅವರಿಂದ ಪ್ರೇರಣೆ ಪಡೆದು, ಭಾರತದ ಮುಂದಿರುವ ಸಂಕಟಗಳಿಂದ ದೇಶವನ್ನು ಮುಕ್ತಗೊಳಿಸುವ ಜೀವನ ಧ್ಯೇಯವನ್ನು ಹೊಂದಬೇಕು, ಇದುವೇ ಅವರು ಮಾತೃಭೂಮಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ !
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !