
ಮಹಾರಾಷ್ಟ್ರದ ಲೋಹಗಡದಲ್ಲಿ ನಡೆದ ಕೇತನ ಅಗರ್ವಾಲ್ ಹತ್ಯಾಕಾಂಡದ ಪ್ರಕರಣವು ಪ್ರಸ್ತುತ ಎಲ್ಲೆಡೆ ಚರ್ಚೆಯಲ್ಲಿದೆ. ಆತನನ್ನು ಕೊಲೆ ಮಾಡಿದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲವರು ಅವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ, ಇನ್ನು ಕೆಲವರು ಸಿಯಾಳಿಗೆ ಲೋಹಗಡದ ಕಣಿವೆಯ ತಡೆಗೋಡೆಯಿಂದ ಕೆಳಗೆ ತಳ್ಳುವ ಶಿಕ್ಷೆ ನೀಡಬೇಕೆಂದು ಸೂಚಿಸಿದ್ದಾರೆ. ಇನ್ನೂ ಕೆಲವು ವಾರಗಳ ಕಾಲ ಅದರ ಬಗ್ಗೆ ತೀವ್ರವಾಗಿ ಚರ್ಚೆ ನಡೆಯುತ್ತದೆ ಮತ್ತು ಒಂದು ದಿನ ಇಬ್ಬರೂ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿ ಸಮಾಜದಲ್ಲಿ ತಲೆ ಎತ್ತಿ ತಿರುಗಾಡುತ್ತಾರೆ. ಅಷ್ಟರಲ್ಲಿ ಜನತೆ ಆ ಪ್ರಕರಣವನ್ನು ಮರೆತೂ ಬಿಟ್ಟಿರುತ್ತಾರೆ. ಇಂತಹ ಅನೇಕ ಹತ್ಯಾಕಾಂಡಗಳು ನಡೆಯುತ್ತಲೇ ಇರುತ್ತವೆ.

೨೦೨೫ ರಲ್ಲಾದ ಪ್ರಕರಣದಲ್ಲಿ ರಾಜಾ ಮತ್ತು ಸೋನಮ್ ಅವರ ವಿವಾಹವಾಗಿತ್ತು; ಆದರೆ ಸೋನಮ್‌ಗೆ ಮತ್ತೊಬ್ಬ ಯುವಕನೊಂದಿಗೆ ಪ್ರೇಮಸಂಬಂಧವಿತ್ತು. ಆದ್ದರಿಂದ ಆಕೆ ತನ್ನ ಪ್ರಿಯಕರ ಮತ್ತು ಸ್ನೇಹಿತನ ಸಹಾಯದಿಂದ ರಾಜಾನನ್ನು ಕೊಂದಳು. ನೌಕಾದಳದ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಎಂಬಾತನನ್ನೂ ಮುಸ್ಕಾನ್ ಕೊಲೆ ಮಾಡಿದಳು. ಏಕೆ ? ಎಂದರೆ ಆಕೆಗೆ ತನ್ನ ಪ್ರಿಯಕರನೊಂದಿಗೆ ಮದುವೆಯಾಗಬೇಕಿತ್ತಂತೆ. ಮುಸ್ಕಾನ್ ಹತ್ಯೆಯ ನಂತರ ಸೌರಭ್‌ನ ದೇಹವನ್ನು ೧೫ ತುಂಡುಗಳಾಗಿಸಿದಳು. ಬೆರಳಚ್ಚುಗಳನ್ನು ನಾಶಪಡಿಸಲು ಆತನ ಮಣಿಕಟ್ಟನ್ನು ಕತ್ತರಿಸಿದಳು. ಶ್ವೇತಾ ಪ್ರಿಯಕರನೊಂದಿಗೆ ಸೇರಿ ತನ್ನ ತಂದೆ, ತಾಯಿ ಮತ್ತು ತಂಗಿಯನ್ನು ಕೊಲೆ ಮಾಡಿದಳು. ಇಂತಹ ಕ್ರೂರ ಕೃತ್ಯವನ್ನು ಮಾಡುವ ಬುದ್ಧಿ ಬರುವುದಾದರೂ ಹೇಗೆ ? ಇಂತಹ ಎಷ್ಟು ಪ್ರಕರಣಗಳಿರಬಹುದು ?

ಮಾನವತಾವಾದಿ ಸಂಘಟನೆಗಳು ಏಕೆ ಮೌನವಾಗಿವೆ ?
ಮಹಿಳೆಯರ ಮೇಲೆ ಎಲ್ಲಾದರೂ ದೌರ್ಜನ್ಯ ನಡೆದರೆ ತಕ್ಷಣವೇ ವಿವಿಧ ಮಹಿಳಾ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ತಥಾಕಥಿತ ಮಾನವತಾವಾದಿ ಸಂಘಟನೆಗಳು, ಸ್ತ್ರೀಮುಕ್ತಿ ಸಂಘಟನೆಗಳು ತಕ್ಷಣವೇ ಸಕ್ರಿಯವಾಗುತ್ತವೆ; ಆದರೆ ಮಹಿಳೆಯರಿಂದ ಪುರುಷರ ಮೇಲೆ ಅನ್ಯಾಯವಾದರೆ ಇದೇ ಸಂಘಟನೆಗಳು ಮತ್ತು ಕಾರ್ಯಕರ್ತರು ಯಾವ ಬಿಲದಲ್ಲಿ ಹೋಗಿ ಅಡಗಿಕೊಳ್ಳುತ್ತಾರೆ? ಕ್ರೂರ ಕೊಲೆಗಳನ್ನು ಮಾಡಿದ ಸೋನಮ್, ಮುಸ್ಕಾನ್, ಶ್ವೇತಾ, ಸಿಯಾ ಅವರ ವಿರುದ್ಧ ಈ ಸಂಘಟನೆಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಎಲ್ಲೂ ನೋಡಲು ಅಥವಾ ಓದಲು ಸಿಕ್ಕಿಲ್ಲ. ಮಹಿಳೆಯರ ಈ ರಾಕ್ಷಸಿ ಪ್ರವೃತ್ತಿ ಈ ಸಂಘಟನೆಗಳಿಗೆ ಕಾಣಿಸಲಿಲ್ಲವೇ ಅಥವಾ ಕಾಣಿಸಿದರೂ ಅದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಿದರೇ ? ಇಲ್ಲಿ ಸ್ತ್ರೀ ಅಥವಾ ಪುರುಷ ಎಂಬ ದೃಷ್ಟಿಕೋನದಿಂದ ನೋಡದೆ ನ್ಯಾಯ, ಸಮಾನತೆ, ಮಾನವೀಯತೆಯ ಹಿನ್ನೆಲೆಯಲ್ಲಿ ಯೋಚಿಸಬೇಕು. ಸಂತ್ರಸ್ತ ಪುರುಷ ಅಥವಾ ಆತನ ಕುಟುಂಬಕ್ಕೂ ನ್ಯಾಯ ಸಿಗಬೇಕು.
ಈ ಸಂಘಟನೆಗಳು ಅಪರಾಧಿ ಮಹಿಳೆಯರ ವಿರುದ್ಧ ಆಂದೋಲನಗಳನ್ನು ಏಕೆ ಮಾಡುವುದಿಲ್ಲ ? ನ್ಯಾಯದ ಮಾನದಂಡ ಎಲ್ಲರಿಗೂ ಸಮನಾಗಿ ಏಕೆ ಇಲ್ಲ? ಸ್ತ್ರೀವಾದಿ ಚಳವಳಿಗಳ ಸ್ವರೂಪವು ಏಕಪಕ್ಷೀಯವಾಗುತ್ತಿರುವುದರಿಂದ ಅವರ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದೆಯೇ? ಇದರ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.
‘ಏಕಮ್ ನ್ಯಾಯ್ ಫೌಂಡೇಶನ್ ಎಂಬ ಸಂಸ್ಥೆಯು ಜೂನ್ ೨೦೨೬ ರಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರ ಸೇರಿ ಪತಿಯನ್ನು ಕೊಲೆ ಮಾಡಿರುವ ದೇಶಾದ್ಯಂತದ ೪೨ ಘಟನೆಗಳನ್ನು ದಾಖಲಿಸಿದೆ. ಈ ಅಂಕಿ-ಅಂಶಗಳು ಬಹುಶಃ ಇನ್ನೂ ಹೆಚ್ಚಿರಬಹುದು. ಆದ್ದರಿಂದ ಈ ಅಂಶಗಳನ್ನು ನಿರ್ಲಕ್ಷಿಸಿ ಮುನ್ನಡೆಯಲು ಸಾಧ್ಯವಿಲ್ಲ. ಮಾಧ್ಯಮಗಳೂ ಇಂತಹ ಘಟನೆಗಳಿಗೆ ಪ್ರಚಾರ ನೀಡುವಾಗ, ಇವು ರಾಷ್ಟ್ರೀಯ ವಿಷಯಗಳೇನೋ ಎಂಬಂತೆ ಜನರೆದುರು ಪದೇ ಪದೇ ತರಬಾರದು. ಅದರ ಮೇಲೆ ನಿಯಂತ್ರಣ ತರಬೇಕಾಗಿದೆ. ಸ್ವಕೇಂದ್ರಿತನದಿಂದಾಗಿ ಯಾವುದೇ ಹಂತಕ್ಕೆ ಹೋಗುವ ಸದ್ಯದ ಹೆಚ್ಚುತ್ತಿರುವ ಪ್ರವೃತ್ತಿಗಳನ್ನು ನೋಡಿದರೆ, ದೇಶಕ್ಕೆ ನೈತಿಕ ಅಧಿಷ್ಠಾನದ ಅಗತ್ಯವಿದೆ. ಈ ನೈತಿಕ ಬಲವು ಧರ್ಮಾಚರಣೆ ಮತ್ತು ಈಶ್ವರನ ಆರಾಧನೆಯಿಂದಲೇ ಪ್ರಾಪ್ತವಾಗಲು ಸಾಧ್ಯ. ಇದಕ್ಕಾಗಿ ಪ್ರತಿಯೊಬ್ಬ ನಾಗರಿಕನೂ ಪ್ರಯತ್ನಿಸಿದರೆ ಸುಸಂಸ್ಕೃತ ಮತ್ತು ನ್ಯಾಯನಿಷ್ಠ ಸಮಾಜದ ಭದ್ರ ಬುನಾದಿ ನಿರ್ಮಾಣವಾಗುತ್ತದೆ.
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ