೧. ಅಂಗೈಯಲ್ಲಿನ ‘ಎಮ್ (ಒ)’ದ ಗುರುತು ಮತ್ತು ಅರ್ಧಚಂದ್ರಾಕೃತಿ ಹೇಗೆ ನೋಡಬೇಕು ?
ಮನುಷ್ಯನ ಅಂಗೈಗಳ ಮೇಲೆ ಅನೇಕ ಚಿಹ್ನೆಗಳಿರುತ್ತವೆ. ಅವುಗಳಲ್ಲಿ ಮುಂದೆ ನೀಡಿರುವ ೨ ಚಿಹ್ನೆಗಳಿಗೆ ಹೆಚ್ಚು ಮಹತ್ವವಿದೆ.
|
|
|
ಅ. ಮೊದಲಿನ ಚಿಹ್ನೆಯು ಆಂಗ್ಲದಲ್ಲಿನ ‘ಎಮ್ (ಒ)’ ಅಕ್ಷರದ ಆಕಾರದ ಚಿಹ್ನೆಯಾಗಿದೆ. ಅಂಗೈಯಲ್ಲಿನ ೧. ಹೃದಯರೇಖೆ, ೨. ಮಸ್ತಕರೇಖೆ, ೩. ಭಾಗ್ಯರೇಖೆ ಮತ್ತು ೪. ಆಯುಷ್ಯರೇಖೆಯ ಸಂಯೋಗದಿಂದ ಈ ಚಿಹ್ನೆಯು ಸಿದ್ಧವಾಗುತ್ತದೆ. (ಛಾಯಾಚಿತ್ರ ೧)
ಆ. ಎರಡನೇ ಚಿಹ್ನೆಯು ಅರ್ಧಚಂದ್ರಾಕೃತಿಯಂತಿದೆ. ಎರಡೂ ಅಂಗೈಗಳ ಅಂಚುಗಳನ್ನು (ಬದಿಗಳನ್ನು) ಒಂದಕ್ಕೊಂದು ಜೋಡಿಸಿದಾಗ ಒಂದು ವೇಳೆ ಅವುಗಳ ಮೇಲೆ ಹೃದಯರೇಖೆಯು ಒಂದಕ್ಕೊಂದು ಜೋಡಿಸಿದರೆ, ಅರ್ಧಚಂದ್ರಾಕೃತಿ ಸಿದ್ಧವಾಗುತ್ತದೆ. (ಛಾಯಾಚಿತ್ರ ೨)
೨. ಅಂಗೈಯಲ್ಲಿನ ‘ಎಮ್ (ಒ)’ದ ಚಿಹ್ನೆ ಮತ್ತು ಅರ್ಧಚಂದ್ರಾಕೃತಿಯ ಮಹತ್ವ

ಅ. ವ್ಯಕ್ತಿಯ ಅಂಗೈಗಳ ಮೇಲೆ ‘ಎಮ್ (ಒ)’ದ ಚಿಹ್ನೆ ಮತ್ತು ಚಂದ್ರಾಕೃತಿಯಿದ್ದರೆ ಅವನ ಜೀವನದಲ್ಲಿ ಹೆಚ್ಚು ಸಮಸ್ಯೆಗಳು ಬರುತ್ತವೆ; ಆದರೆ ವ್ಯಕ್ತಿಯಲ್ಲಿ ಬಹಳ ಸಾಮರ್ಥ್ಯವಿರುತ್ತದೆ. ಅವನಿಗೆ ಜೀವನದಲ್ಲಿ ಅರ್ಥಪೂರ್ಣ ಧ್ಯೇಯವನ್ನು ಸಾಧಿಸ ಬೇಕೆಂಬ ತಳಮಳವಿರುತ್ತದೆ.
ಆ. ಈ ಚಿಹ್ನೆಗಳಿರುವ ವ್ಯಕ್ತಿಗೆ ‘ಏನೋ ಒಂದು ಅಪೂರ್ಣತೆ ಇದೆ ಮತ್ತು ನನ್ನ ಜೀವನದ ಗುರಿ ಇದಕ್ಕಿಂತ ದೊಡ್ಡದಾಗಿದೆ’, ಎಂದೆನಿಸುತ್ತದೆ. ಸಾಮಾನ್ಯ ಜನರಿಗಿಂತ ಅವನ ವಿಚಾರಗಳು ಭಿನ್ನವಾಗಿರುತ್ತವೆ. ಈ ಜನರು ಸಾಮಾನ್ಯ ಜನರಿಗಿಂತ ವಿಶೇಷವಾಗಿರುತ್ತಾರೆ.
ಇ. ಈ ಎರಡೂ ಚಿಹ್ನೆಗಳು ಆಧ್ಯಾತ್ಮಿಕದೃಷ್ಟಿಯಲ್ಲಿ ಶುಭ ವಾಗಿರುತ್ತವೆ. ಈ ಚಿಹ್ನೆಗಳಿರುವ ಜನರಿಗೆ ‘ತಮ್ಮ ಬದುಕಿನಲ್ಲಿ ಒಂದು ಮಹತ್ತರವಾದ ಪರಿವರ್ತನೆ ಸಂಭವಿಸಲಿದೆ ಎಂಬ ಅಚಲವಾದ ನಂಬಿಕೆ ಸದಾ ಇರುತ್ತದೆ’. ಇಂತಹ ಜನರು ಕೇವಲ ಆಹಾರ, ನಿದ್ರೆ, ಇಂದ್ರಿಯಸುಖ ಮುಂತಾದವುಗಳಿಗಾಗಿ ಜನಿಸಿರದೇ ಅವರ ಧ್ಯೇಯವು ಇತರರಿಗಿಂತ ಭಿನ್ನವಾಗಿರುತ್ತದೆ; ಆದರೆ ಅವರಿಗೆ ಆ ಧ್ಯೇಯದ ಅರಿವು ಆಗಿರುವುದಿಲ್ಲ. ಆದ್ದರಿಂದ ಧ್ಯೇಯದ ಅರಿವು ಆಗುವವರೆಗೆ ಅವರ ಜೀವನದಲ್ಲಿ ಅನೇಕ ಏರಿಳಿತಗಳು ಬರುತ್ತವೆ. ‘ಆಧ್ಯಾತ್ಮಿಕ ಉನ್ನತಿ’ ಇದೊಂದೇ ಅವರ ಧ್ಯೇಯವಾಗಿರುತ್ತದೆ. ಈ ಧ್ಯೇಯದ ಅರಿವಾದ ನಂತರ ‘ನಾನು ಏನು ಹುಡುಕುತ್ತಿದ್ದೆನೋ, ಅದು ಇದೇ ಆಗಿದೆ’, ಎಂಬ ಸತ್ಯವು ಅವರಿಗೆ ತಿಳಿಯುತ್ತದೆ. ವಿಧಿಯು ಈ ವ್ಯಕ್ತಿಗಳನ್ನು ಯಾವುದೋ ಒಂದು ವಿಶೇಷ ಕಾರ್ಯಕ್ಕಾಗಿ ಆಯ್ಕೆ ಮಾಡಿರುತ್ತದೆ.
ಈ. ಪ್ರಾಚೀನ ಕಾಲದಲ್ಲಿ ಈ ಚಿಹ್ನೆಗಳ ಬಗ್ಗೆ ಅಧ್ಯಯನ ನಡೆಸಲಾಗಿದ್ದು ಸಪ್ತರ್ಷಿಗಳಿಗೆ ಈ ಚಿಹ್ನೆಗಳ ಬಗ್ಗೆ ಜ್ಞಾನವಿತ್ತು. ಹಿಂದೂ ಧರ್ಮದಲ್ಲಿ ಭೃಗು ಋಷಿಗಳು ಈ ಚಿಹ್ನೆಗಳ ಅರ್ಥವನ್ನು ಬಿಡಿಸಿ ಹೇಳಿದರು, ಹಾಗೆಯೇ ಬೌದ್ಧ ಧರ್ಮದಲ್ಲಿಯೂ ಅವುಗಳ ಉಲ್ಲೇಖವಿರುವುದು ಕಂಡುಬರುತ್ತದೆ. ಪಾಶ್ಚಾತ್ಯ ದೇಶದಲ್ಲಿನ ಹಸ್ತರೇಖಾಶಾಸ್ತ್ರದ ಜನನಿಯಾಗಿರುವ ೧೮ ನೇ ಶತಮಾನದ ಹಸ್ತರೇಖಾತಜ್ಞರಾದ ‘ಕಿರೋ’ ಇವರೂ ಈ ಚಿಹ್ನೆಗಳ ಆಧ್ಯಾತ್ಮಿಕ ಮಹತ್ವವನ್ನು ಹೇಳಿದ್ದಾರೆ.
ಹಸ್ತರೇಖಾತಜ್ಞೆ ಚೇತನಾ (ಸುನೀತಾ) ಇವರು ವಿಶೇಷ ಅಧ್ಯಯನ ಮಾಡದಿದ್ದರೂ ಅವರು ಹಸ್ತರೇಖಾಶಾಸ್ತ್ರವನ್ನು ಕರಗತ ಮಾಡಿರುವುದರ ಬಗ್ಗೆ ಗಮನಕ್ಕೆ ಬಂದ ಕಾರಣ !
ನನಗೆ ಚಿಕ್ಕಂದಿನಿಂದಲೂ ‘ನಮ್ಮ ಅಂಗೈಗಳ ಮೇಲೆ ಏಕೆ ರೇಖೆಗಳಿರುತ್ತವೆ ? ಎಲ್ಲರ ಕೈಗಳ ಮೇಲೆ ರೇಖೆಗಳು ಒಂದೇ ತರಹ ಏಕೆ ಇರುವುದಿಲ್ಲ ? ಈ ಹಸ್ತರೇಖೆಗಳು ಏನು ಸೂಚಿಸುತ್ತವೆ ?’, ಎಂಬ ಪ್ರಶ್ನೆಗಳು ಬರುತ್ತಿದ್ದವು. ನನ್ನ ತಂದೆಗೆ ಗೂಢಶಾಸ್ತ್ರಗಳ ಆಸಕ್ತಿ ಇತ್ತು. ಒಮ್ಮೆ ನನಗೆ ಮನೆಯಲ್ಲಿ ಪಾಶ್ಚಾತ್ಯ ಹಸ್ತರೇಖಾತಜ್ಞ ‘ಕಿರೋ’ ಇವರ ಹಸ್ತರೇಖಾಶಾಸ್ತ್ರದ ವಿಷಯದ ಗ್ರಂಥವು ಕಣ್ಣಿಗೆ ಬಿದ್ದಿತು. ಆ ಸಮಯದಲ್ಲಿ ನಾನು ೬ ನೇ ತರಗತಿಯಲ್ಲಿದ್ದೆನು. ನಾನು ಎರಡು ದಿನಗಳಲ್ಲಿಯೇ ಸಂಪೂರ್ಣ ಗ್ರಂಥವನ್ನು ಓದಿದೆನು. ಈ ಗ್ರಂಥದಲ್ಲಿನ ಮಾಹಿತಿಯು ನನಗೆ ತುಂಬಾ ಕುತೂಹಲವೆನಿಸಿತು. ನಾನು ನನ್ನ ಅಂಗೈಗಳಲ್ಲಿನ ರೇಖೆಗಳ ಬಗ್ಗೆ ನಿರೀಕ್ಷಣೆ ಮಾಡತೊಡಗಿದೆನು ಮತ್ತು ಅವುಗಳಲ್ಲಿ ಆಗುವ ಬದಲಾವಣೆಗಳನ್ನು ನೋಡತೊಡಗಿದೆನು. ನಾನು ಜಿಜ್ಞಾಸೆಯಿಂದ ಇತರರ ಹಸ್ತರೇಖೆಗಳನ್ನೂ ನೋಡ ತೊಡಗಿದೆನು. ಆಗ ‘ತನ್ನ ಮತ್ತು ಇತರರ ಹಸ್ತರೇಖೆಗಳ ಬಗ್ಗೆ ಮೊದಲಿಗಿಂತ ಹೆಚ್ಚು ಉತ್ತಮ ನಿರೀಕ್ಷಣೆ ಮಾಡಲು ಈಶ್ವರನು ನನಗೆ ಸಹಾಯ ಮಾಡುತ್ತಿದ್ದಾನೆ’, ಎಂದು ನನಗೆ ಅನಿಸಿತು. ‘ಕಿರೋ’ ಇವರ ಗ್ರಂಥವನ್ನು ಓದಿದ ನಂತರ ನಾನು ಹಸ್ತರೇಖಾಶಾಸ್ತ್ರಕ್ಕೆ ಸಂಬಂಧಿಸಿದ ಬೇರೆ ಯಾವುದೇ ಗ್ರಂಥವನ್ನು ಓದಲಿಲ್ಲ. ಯಾವುದಾದರೊಂದು ಲೇಖನವು ಓದಲು ಸಿಕ್ಕರೆ ಅದನ್ನು ನಾನು ಖಂಡಿತ ಓದುತ್ತೇನೆ; ಆದರೆ ನನ್ನ ಬಳಿ ಹಸ್ತರೇಖಾಶಾಸ್ತ್ರಕ್ಕೆ ಸಂಬಂಧಿಸಿದ ಇತರ ಯಾವುದೇ ಗ್ರಂಥಗಳು ಲಭ್ಯವಿಲ್ಲ. ಬಹುಶಃ ಕಳೆದ ಜನ್ಮದಲ್ಲಿ ನಾನು ಹಸ್ತರೇಖಾಶಾಸ್ತ್ರದ ಅಧ್ಯಯನ ಮಾಡಿರಬಹುದು ಆದ್ದರಿಂದ ಈ ಜನ್ಮದಲ್ಲಿ ನನಗೆ ಹೆಚ್ಚಿನ ಅಧ್ಯಯನದ ಅಗತ್ಯವಿಲ್ಲದೇ ಕೇವಲ ಪುನರ್ಮನನ ಮಾಡುವದಷ್ಟೇ ಸಾಕು ಎಂದೆನಿಸುತ್ತದೆ.’
– ಹಸ್ತರೇಖಾತಜ್ಞೆ ಸುನೀತಾ ಶುಕ್ಲಾ
ಉ. ಕೆಲವರ ಅಂಗೈಗಳ ಮೇಲೆ ಈ ೨ ಚಿಹ್ನೆಗಳು ಹುಟ್ಟಿದಾಗಿನಿಂದಲೇ ಇರುತ್ತವೆ, ಇನ್ನು ಕೆಲವರ ಅಂಗೈಗಳ ಮೇಲೆ ಅವು ನಂತರ ವಿಕಸನಗೊಳ್ಳುತ್ತವೆ. ಈ ಚಿಹ್ನೆಗಳು ಅಂಗೈಗಳ ಮೇಲೆ ಹುಟ್ಟಿದಾಗಿನಿಂದಲೇ ಇರುವ ವ್ಯಕ್ತಿಗಳು ಈ ಜನ್ಮದಲ್ಲಿ ಮಾಡಬೇಕಾಗಿರುವ ಸಮಷ್ಟಿ ಕಾರ್ಯವು ಈ ಮೊದಲೇ ಆಯ್ಕೆಯಾಗಿರುತ್ತದೆ. ಈ ಚಿಹ್ನೆಗಳು ಅಂಗೈಗಳ ಮೇಲೆ ನಂತರ ವಿಕಸನಗೊಂಡಿರುವ ವ್ಯಕ್ತಿಗಳು ಕಠೋರ ಸಾಧನೆ ಮಾಡಿ ಉಚ್ಚ ಆಧ್ಯಾತ್ಮಿಕ ಮಟ್ಟವನ್ನು ತಲುಪಿರುತ್ತಾರೆ. ಆದ್ದರಿಂದ ದೈವೀ ಕಾರ್ಯಕ್ಕಾಗಿ ಅವರು ಆ ಈಶ್ವರನ ಮಾಧ್ಯಮವಾಗಿರುತ್ತಾರೆ.
ಊ. ಈ ಎರಡೂ ಚಿಹ್ನೆಗಳು ವೈಶಿಷ್ಟ್ಯಪೂರ್ಣವಾಗಿದ್ದು ಅವು ಕೇವಲ ಶೇ. ೪ ರಷ್ಟು ಜನರ ಅಂಗೈಗಳಲ್ಲಿ ಕಂಡುಬರುತ್ತವೆ. ಈ ಚಿಹ್ನೆಗಳು ಅಂಗೈಗಳ ಮೇಲೆ ಕಾರಣವಿಲ್ಲದೇ ಮೂಡುವುದಿಲ್ಲ, ಅವು ಮೂಡುವ ಹಿಂದೆ ವ್ಯಕ್ತಿಯ ದೀರ್ಘ ಆಧ್ಯಾತ್ಮಿಕ ಪ್ರವಾಸವಿರುತ್ತದೆ, ಅವನ ಅನೇಕ ಜನ್ಮಗಳ ಸಾಧನೆ ಇರುತ್ತದೆ, ಹಾಗೆಯೇ ವರ್ತಮಾನ ಜನ್ಮದಲ್ಲಿ ಮೋಕ್ಷಪ್ರಾಪ್ತಿಯ ದಿಶೆಯಿಂದ ನಿರಂತರ ಅವನ ಪ್ರಯತ್ನಗಳು ನಡೆದಿರುತ್ತವೆ.
ಎ. ಈ ಚಿಹ್ನೆಗಳಿರುವ ಜೀವಗಳಲ್ಲಿ ಸೂಕ್ಷ್ಮವನ್ನು ತಿಳಿಯುವ ಕ್ಷಮತೆ ಇರುತ್ತದೆ. ಅವರಿಗೆ ಒಳಗಿನಿಂದ ಜ್ಞಾನ ಪಡೆಯುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ಅವರು ಸಹಜವಾಗಿ ಸೂಕ್ಷ್ಮದಲ್ಲಿನ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ. ಈ ಎಲ್ಲ ವಿಷಯಗಳಿಂದ ಅವರ ಜೀವನದಲ್ಲಿ ಯಾವುದೇ ಅಡತಡೆಗಳು ಬಂದರೂ ಕೂಡ ಅವರಿಗೆ ಅದು ಅಡೆತಡೆಗಳು ಅನಿಸದೇ ಯೋಗ್ಯ ನಿರ್ಧಾರವನ್ನು ತೆಗೆದುಕೊಳ್ಳುವ ಮಾರ್ಗವೆನಿಸುತ್ತದೆ. ಆದ್ದರಿಂದ ಅವರಿಗೆ ನಿರ್ಧಾರವನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಪ್ರಗತಿಯ ಮುಂದಿನ ಹಂತದಲ್ಲಿರುವ ಈ ಜೀವವು ಜ್ಞಾನಿ, ಪ್ರಗತಿಪರ ಮತ್ತು ಪ್ರವೀಣನಾಗಿದ್ದು ಬಹುಶಃ ಇದು ಅವನ ಕೊನೆಯ ಜನ್ಮ ವಾಗಿರಬಹುದು.
ಐ. ‘ಇಂತಹ ಲಕ್ಷಣಗಳಿರುವ ಜೀವವು (ವ್ಯಕ್ತಿಯು) ಮಾಯೆಯ ಸಣ್ಣಪುಟ್ಟ ವಿಷಯಗಳಲ್ಲಿ ಸಿಲುಕಿಕೊಳ್ಳುವುದಿಲ್ಲ; ಏಕೆಂದರೆ ತನ್ನ ಜೀವನದಲ್ಲಿ ‘ಅತಿ ಮುಖ್ಯವಾದುದು ಯಾವುದು ?’ ಎಂಬ ಅರಿವು ಅವನಿಗೆ ಉಂಟಾಗಿರುತ್ತದೆ.’ ಅವನ ಜೀವನದಲ್ಲಿ ಅಲ್ಪ ಕಾಲ ಉಳಿಯುವ ಪ್ರೀತಿ, ಮನಃಪೂರ್ವಕವಾಗಿ ಸ್ವೀಕರಿಸದಿರುವ ಕುಟುಂಬ ಸದಸ್ಯರು, ವಿಶ್ವಾಸದ್ರೋಹ ಮಾಡುವ ಸ್ನೇಹ, ಮನಸ್ಸಿಗೆ ಕಿರಿಕಿರಿಯನ್ನುಂಟು ಮಾಡುವ ಉದ್ಯೋಗ, ಕೈಗೆಟುಕಲಾರದ ಕನಸುಗಳಂತಹ ದುಃಖದಾಯಕ ಘಟನೆಗಳು ಘಟಿಸುತ್ತವೆ; ಆದರೆ ಈ ವಿಷಯಗಳು ಆ ಜೀವಕ್ಕೆ ತೊಂದರೆ ಕೊಡಲು ಸಂಭವಿಸಿರುವುದಿಲ್ಲ, ‘ಆ ಜೀವವು ಈ ಎಲ್ಲ ಘಟನೆಗಳನ್ನು ಎದುರಿಸಲು ಸಿದ್ಧವಾಗಿದೆಯೇ ?’, ಎಂದು ನೋಡಲು ಘಟಿಸಿರುತ್ತವೆ. ಆ ಸಮಯದಲ್ಲಿ ‘ಎಲ್ಲವೂ ಕುಸಿದು ಬೀಳುತ್ತಿದೆ’, ಎಂದು ಅನಿಸುತ್ತಿರುವಾಗ ‘ಜೀವಕ್ಕೆ ಪ್ರಗತಿಯನ್ನು ಸಾಧಿಸುವ ತಳಮಳ ಎಷ್ಟಿದೆ ?’, ಎಂಬುದನ್ನು ಈಶ್ವರನು ನೋಡುತ್ತಿರುತ್ತಾನೆ.’
– ಹಸ್ತರೇಖಾತಜ್ಞೆ ಸುನೀತಾ ಶುಕ್ಲಾ, ಋಷಿಕೇಶ, ಉತ್ತರಾಖಂಡ. (೧೧.೬.೨೦೨೫)


ಪ್ರವೇಶದ್ವಾರದ ಸ್ಥಾನ ಮತ್ತು ಇತರ ನಿಯಮಗಳು
ದ್ವಾರವೇಧ
ಪ್ರವೇಶದ ವಿಧಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪಾಟಲೀಪುತ್ರದಲ್ಲಿ (ಬಿಹಾರ) ‘ಅಂತರರಾಷ್ಟ್ರೀಯ ಜ್ಯೋತಿಷ್ಯ, ವಾಸ್ತು ಮತ್ತು ತಂತ್ರ ಸಮ್ಮೇಳನ’ದಲ್ಲಿ ಸನ್ಮಾನ
ಏಪ್ರಿಲ್ನಲ್ಲಿ ಮೂರನೇ ಮಹಾಯುದ್ಧದ ಮುನ್ಸೂಚನೆ! – ಗ್ರಹಗತಿಗಳ ಆಧಾರದ ಮೇಲೆ ಜ್ಯೋತಿಷಿಗಳ ದಾವೆ
ವಾಸ್ತು ಪದವಿನ್ಯಾಸ