
೧. ಸಮ್ಮೋಹನ ಚಿಕಿತ್ಸೆಯಿಂದ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ಮಾನಸಿಕ ರೋಗ ನಿವಾರಣೆಯಾಗಲು ಸಾಧ್ಯವಿಲ್ಲ ಎಂದು ಕೆಲವು ಮನೋವೈದ್ಯರಲ್ಲಿರುವ ತಪ್ಪು ಕಲ್ಪನೆ
‘ಕೆಲವು ಮನೋವೈದ್ಯರಲ್ಲಿ ಒಂದು ತಪ್ಪು ಕಲ್ಪನೆಯಿದೆ, ಅದೇನೆಂದರೆ ಸಮ್ಮೋಹನ ಚಿಕಿತ್ಸೆಯಿಂದ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ಎಂಬ ಮಾನಸಿಕ ಕಾಯಿಲೆಯು ನಿವಾರಣೆ ಆಗುವುದಿಲ್ಲ; ಏಕೆಂದರೆ ಇದರಲ್ಲಿ ಮೆದುಳಿನ ನಿರ್ದಿಷ್ಟ ಕೋಶಗಳಲ್ಲಿ ಬದಲಾವಣೆಗಳಾಗಿರುತ್ತವೆ. (ಮಾನಸಿಕ ಕಾಯಿಲೆಗಳ ‘ಸೈಕೋಸಿಸ್’ ಎಂಬ ಪ್ರಕಾರದಲ್ಲಿ ಕೆಲವು ದೊಡ್ಡ ಕಾಯಿಲೆಗಳು ಬರುತ್ತವೆ, ಅದರಲ್ಲಿ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ಕೂಡ ಒಂದು.) ಆದರೆ ನಮ್ಮ ಸಂಶೋಧನೆಯಲ್ಲಿ ಕಂಡುಬಂದ ವಿಷಯವೇನೆಂದರೆ, ರೋಗಿಯು ಸಮ್ಮೋಹನ ಚಿಕಿತ್ಸೆಯನ್ನು ಸ್ವೀಕರಿಸುವ ಕ್ಷಮತೆಯನ್ನು ಹೊಂದಿದ್ದು, ಸತತವಾಗಿ ಸುಮಾರು ೮ ರಿಂದ ೯ ತಿಂಗಳುಗಳ ಕಾಲ ಚಿಕಿತ್ಸೆ ಪಡೆದರೆ, ಅವರಲ್ಲಿನ ಹೆಚ್ಚಿನವರ ಕಾಯಿಲೆ ಗುಣಮುಖವಾಗಲು ಸಾಧ್ಯವಿದೆ. ನಮ್ಮ ಈ ಸಂಶೋಧನೆಯ ಬಗ್ಗೆ ಕೆಲವು ಮನೋವೈದ್ಯರ ಅಭಿಪ್ರಾಯ ಹೀಗಿದೆ, ‘ಈ ಕಾಯಿಲೆಯು ಈ ಚಿಕಿತ್ಸೆಯಿಂದ ಗುಣವಾಗಲು ಅಸಾಧ್ಯ; ಏಕೆಂದರೆ ಸಮ್ಮೋಹನ ಸ್ಥಿತಿಯಲ್ಲಿ ಕೇವಲ ಸೂಚನೆಗಳನ್ನು ನೀಡುವ ಮೂಲಕ ಮೆದುಳಿನ ಕೋಶಗಳಲ್ಲಿ ಬದಲಾವಣೆ ತರಲು ಹೇಗೆ ತಾನೇ ಸಾಧ್ಯ ?’ ಇಂತಹ ಭಿನ್ನಾಭಿಪ್ರಾಯಗಳ ಸಮಯದಲ್ಲಿ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ ಗುಣಮುಖವಾಗುತ್ತದೆಯೇ ಅಥವಾ ಇಲ್ಲವೇ ?’ ಎನ್ನುವುದು ಚರ್ಚೆಯ ವಿಷಯವಾಗಬಾರದು; ಏಕೆಂದರೆ ಹೆಚ್ಚಿನ ರೋಗಿಗಳು ಗುಣಮುಖವಾಗುತ್ತಿರುವುದು ಒಂದು ವಾಸ್ತವವಾಗಿದೆ. ಆದ್ದರಿಂದ, ‘ಇದು ಗುಣಮುಖವಾಗಲು ಇರುವ ವೈಜ್ಞಾನಿಕ ಕಾರಣವೇನಿರಬಹುದು ?’ ಎಂಬ ಬಗ್ಗೆ ನಾವು ವಿಚಾರ ಮಾಡಬೇಕು.
೨. ಸೂಚನೆಗಳಿಂದ ದೇಹದ ಇತರ ಭಾಗಗಳ ಕೋಶಗಳಲ್ಲಿ ಬದಲಾವಣೆಯಾದ ಕೆಲವು ಉದಾಹರಣೆಗಳು
‘ಕೇವಲ ಸೂಚನೆಗಳಿಂದ ಮೆದುಳಿನ ಕೋಶಗಳಲ್ಲಿ ಬದಲಾವಣೆ ಹೇಗೆ ಸಾಧ್ಯ ?’ ಎಂಬುದು ಮುಖ್ಯವಾದ ವಾದದ ಅಂಶವಾಗಿದೆ. ಮೊದಲು ನಾವು ಅದಕ್ಕೆ ಉತ್ತರವನ್ನು ನೋಡೋಣ.
ಅ. ಸೂಚನೆ ಅಥವಾ ವಿಚಾರಗಳಿಂದ ದೈಹಿಕ ಬದಲಾವಣೆಗಳು ಸಂಭವಿಸುತ್ತವೆ ಎಂಬುದು ಸಾಮಾನ್ಯ ವಿಷಯವಾಗಿದೆ. ಹೊಟ್ಟೆಯ ‘ಅಲ್ಸರ್’ ವಿಧಗಳಲ್ಲಿ ಒಂದಾದ, ಅಂದರೆ ಅತಿಯಾದ ಚಿಂತೆಯಿಂದ ಉಂಟಾದ ‘ಅಲ್ಸರ್’. ‘ಎಕ್ಸಿಮಾ’ ಈ ರೀತಿಯ ಕೋಶಗಳಲ್ಲಿ ಬದಲಾವಣೆಯಾಗಿರುವ, ಆದರೆ ಚಿಂತೆಯಿಂದ ಉಂಟಾಗಿರುವ ದೈಹಿಕ ರೋಗಗಳನ್ನು ಸಮ್ಮೋಹನ ಚಿಕಿತ್ಸೆಯ ಮೂಲಕ, ಅಂದರೆ ಕೇವಲ ಸೂಚನೆಗಳನ್ನು ನೀಡುವ ಮೂಲಕ ಗುಣಪಡಿಸಲು ಸಾಧ್ಯವಿದೆ.
ಆ. ‘ವಿಚಾರಗಳಿಂದ ದೇಹದ ಜೀವಕೋಶಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ’ ಎನ್ನುವುದಕ್ಕೆ ಇನ್ನೊಂದು ಉದಾಹರಣೆಯೆಂದರೆ, ಯಾವ ವ್ಯಕ್ತಿಗಳಿಗೆ ನಮಗೆ ಗಂಟಲು, ಎದೆ ಅಥವಾ ಗರ್ಭಾಶಯದ ಕ್ಯಾನ್ಸರ್ ಆಗಬಹುದು’, ಎಂಬ ಅತಿಯಾದ ಭಯವಿರುತ್ತದೆಯೋ, ಅಂತಹವರಲ್ಲಿ ಅನೇಕರಿಗೆ ಆಯಾ ಅಂಗಗಳ ಕ್ಯಾನ್ಸರ್ ಉಂಟಾಗಿರುವುದು ಕಂಡುಬಂದಿದೆ.
ಇ. ಅದೇ ರೀತಿ, ‘ದೇವರ ಅಥವಾ ಯಾರಾದರೊಬ್ಬ ಸಂತರ ಆಶೀರ್ವಾದ ಅಥವಾ ಪ್ರಸಾದದಿಂದ ನಾವು ಗುಣಮುಖ ವಾಗುತ್ತೇವೆ’ ಎಂಬ ಅಚಲ ಶ್ರದ್ಧೆ ಉಳ್ಳವರಲ್ಲಿ ಕೆಲವರ ಕ್ಯಾನ್ಸರ್ ತಾನಾಗಿಯೇ ಗುಣಮುಖವಾಗಿರುವುದೂ ಕಂಡುಬಂದಿದೆ, ಅಂದರೆ ಒಂದು ರೀತಿಯ ಸ್ವಯಂ-ಸೂಚನೆಗಳಿಂದಲೇ ಕ್ಯಾನ್ಸರ್ ಬರುವುದು ಅಥವಾ ಅದು ಗುಣಮುಖವಾಗುವುದು ಅಂತಹ ದೈಹಿಕ ಬದಲಾವಣೆಗಳು ಸಂಭವಿಸಿರುವುದು ಕಂಡುಬಂದಿದೆ. ಇದರಿಂದ, ‘ಕೇವಲ ಸೂಚನೆಗಳಿಂದ ಮೆದುಳಿನ ಜೀವ ಕೋಶಗಳಲ್ಲಿ ಬದಲಾವಣೆ ಸಾಧ್ಯವಿಲ್ಲ’ ಎಂದು ಹೇಳುವುದು ಎಷ್ಟು ಅಯೋಗ್ಯವಾಗಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದಿರಬಹುದು.
೩. ಸಮ್ಮೋಹನ ಸ್ಥಿತಿಯಲ್ಲಿ ನೀಡುವ ಸೂಚನೆಗಳಿಂದ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ರೋಗಿಯ ಮೆದುಳಿನ ಕೋಶಗಳಲ್ಲಿ ಬದಲಾವಣೆ ಉಂಟಾಗುವ ಕುರಿತು ಸ್ಪಷ್ಟೀಕರಣ
ಸಮ್ಮೋಹನ ಚಿಕಿತ್ಸೆಯ ಸಂದರ್ಭದಲ್ಲಿ ಮನಸ್ಸಿನ ಎಲ್ಲಾ ಕಾಯಿಲೆಗಳಿಗಿಂತ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ವನ್ನು ಸ್ವಲ್ಪ ಭಿನ್ನವಾಗಿ ನೋಡಲು ಕಾರಣವೇನೆಂದರೆ, ಇದರಲ್ಲಿ ಮೆದುಳಿನ ನಿರ್ದಿಷ್ಟ ಕೋಶಗಳಲ್ಲಿ ದೈಹಿಕ ಬದಲಾವಣೆಗಳು ಸಂಭವಿಸುತ್ತವೆ ಎಂಬುದು ಇತ್ತೀಚೆಗೆ ಸಾಬೀತಾಗಿದೆ. ಆದರೆ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ವನ್ನು ಪ್ರತ್ಯೇಕವಾಗಿ ನೋಡುವ ಅವಶ್ಯಕತೆಯಿಲ್ಲ. ಮನಸ್ಸಿನ ಯಾವುದೇ ಕಾಯಿಲೆ ಇರುವ ವ್ಯಕ್ತಿಯ ವಿಚಾರಗಳು, ಭಾವನೆಗಳು ಅಥವಾ ಕೃತಿಗಳಲ್ಲಿ ಏನಾದರೂ ಬದಲಾವಣೆ ಉಂಟಾದಾಗ, ಮೆದುಳಿನ ಯಾವುದಾದರೊಂದು ಜೀವಕೋಶದಲ್ಲಿ ಏನೋ ಒಂದು ಬದಲಾವಣೆ ಸಂಭವಿಸಿ ಇರಲೇಬೇಕು. ಒಬ್ಬ ಮನುಷ್ಯ ಮೊದಲು ಆತುರದ ಸ್ವಭಾವ ದವನಾಗಿರಲಿಲ್ಲ, ಆದರೆ ನಂತರ ಆತುರಗಾರನಾದನು ಎಂದು ತಿಳಿಯೋಣ. ಅಂದರೆ ಅವನ ಮೆದುಳಿನ ಕೋಶಗಳಲ್ಲಿ ಏನೋ ಬದಲಾವಣೆ ಉಂಟಾಗಿರುತ್ತದೆ. ಆದರೆ ಪ್ರಸ್ತುತ ಸಂಶೋಧನಾ ಪದ್ಧತಿಗಳು ಇನ್ನೂ ಅಪೂರ್ಣವಾಗಿರುವುದರಿಂದ ಆ ಬದಲಾವಣೆಗಳ ಬಗ್ಗೆ ನಮಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಅಷ್ಟೇ. ನಮಗೆ ಮಾಹಿತಿ ಇಲ್ಲ ಎಂದರೆ ಅಲ್ಲಿ ಬದಲಾವಣೆ ಆಗಿಲ್ಲ ಎಂದು ಅರ್ಥವಲ್ಲ. ತಂದೆ-ತಾಯಿಗಳು ಸಣ್ಣ ಮಕ್ಕಳಿಗೆ ‘ಹೇಗೆ ಮಾತನಾಡಬೇಕು ?, ಹೇಗೆ ವರ್ತಿಸಬೇಕು ?’ ಇತ್ಯಾದಿಗಳನ್ನು ಕಲಿಸುತ್ತಾರೆ. ಆ ಮಾಹಿತಿಯು ಮೆದುಳಿನಲ್ಲಿ ಎಲ್ಲೋ ಒಂದು ಕಡೆ ಸಂಗ್ರಹವಾಗುತ್ತದೆ, ಅಂದರೆ ಮೆದುಳಿನ ಕೋಶಗಳಲ್ಲಿ ಏನೋ ಒಂದು ಬದಲಾವಣೆಯಾಗುತ್ತದೆ. ಆ ಬದಲಾವಣೆಯನ್ನು ತಂದೆ-ತಾಯಿಗಳು ಕೇವಲ ಮಾತನಾಡುವುದರ ಮೂಲಕವೇ ಮಾಡಿಸಿರುತ್ತಾರೆ. ಅದೇ ರೀತಿ, ಸಮ್ಮೋಹನ ಚಿಕಿತ್ಸೆಯಲ್ಲಿಯೂ ಮಾತಿನ ಮೂಲಕವೇ ಮೆದುಳಿನ ಕೋಶಗಳಲ್ಲಿ ಬದಲಾವಣೆ ತಂದು ಕೆಲವು ರೋಗಿಗಳ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ವನ್ನು ಗುಣಪಡಿಸಲು ಸಾಧ್ಯವಿದೆ.
೪. ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ಸಮ್ಮೋಹನ ಚಿಕಿತ್ಸೆಯಿಂದ ಗುಣಮುಖವಾಗದಿರುವ ಕಾರಣ
ಈಗ ಎರಡನೇ ಅಂಶವೇನೆಂದರೆ, ‘ಪ್ರತಿಯೊಬ್ಬ ರೋಗಿಯ ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ವು ಸಮ್ಮೋಹನ ಚಿಕಿತ್ಸೆಯಿಂದ ಏಕೆ ಗುಣವಾಗುವುದಿಲ್ಲ ?’ ಅದಕ್ಕೆ ಕಾರಣವೇನೆಂದರೆ, ಹೊಟ್ಟೆಯ ‘ಅಲ್ಸರ್’ ಮತ್ತು ಚರ್ಮದ ‘ಎಕ್ಸಿಮಾ’ ಇತ್ಯಾದಿ ರೋಗಗಳು ಹೇಗೆ ಕೆಲವರಲ್ಲಿ ದೈಹಿಕ ಕಾರಣಗಳಿಂದ ಬರುತ್ತವೆ ಮತ್ತು ಇನ್ನು ಕೆಲವರಲ್ಲಿ ಅಂರ್ತಮನಸ್ಸಿನ ಚಿಂತೆಯಿಂದ ಬರುತ್ತವೆ. ಅದೇ ರೀತಿ, ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ಕೆಲವರಲ್ಲಿ ದೈಹಿಕ ಕಾರಣದಿಂದ, ಅಂದರೆ ಮೆದುಳಿನ ನಿರ್ದಿಷ್ಟ ಕೋಶಗಳಲ್ಲಿನ ಬದಲಾವಣೆಯಿಂದ ಬರುತ್ತಿರಬಹುದು ಮತ್ತು ಇನ್ನು ಕೆಲವರಲ್ಲಿ ಚಿಂತೆಯಿಂದ ಬರುತ್ತದೆ. ‘ಪ್ಯಾರನಾಯ್ಡ್ ಸಿಜೋಫ್ರೇನಿಯಾ’ ಉಂಟಾದಾಗ ಅದರ ಮೆದುಳಿನ ನಿರ್ದಿಷ್ಟ ಕೋಶಗಳಲ್ಲಿ ಬದಲಾವಣೆಯಾಗುತ್ತಿರಬಹುದು. ಅಂತರ್ಮಮನಸ್ಸಿನ ಚಿಂತೆಯಿಂದಾಗಿ ಈ ಕಾಯಿಲೆ ಬಂದಿದ್ದರೆ, ಅದು ಸಮ್ಮೋಹನ ಚಿಕಿತ್ಸೆಯಿಂದ ಗುಣಮುಖವಾಗಬಹುದು. ಆದರೆ ಇತರ ಕಾರಣಗಳಿಂದ, ಅಂದರೆ ಉದಾಹರಣೆಗೆ ಆಧ್ಯಾತ್ಮಿಕ ಕಾರಣಗಳಿಂದ ಇದು ಬಂದಿದ್ದರೆ, ಆಗ ಅದು ಕೇವಲ ಈ ಚಿಕಿತ್ಸೆಯಿಂದ ಗುಣಮುಖವಾಗದಿರಬಹುದು. ಇದೇ ಅಂಶವು ಎಲ್ಲಾ ದೊಡ್ಡ ಮನೋವಿಕಾರಗಳಿಗೂ ಅನ್ವಯಿಸುತ್ತದೆ.
– ಪರಾತ್ಪರ ಗುರು ಡಾ. ಜಯಂತ ಆಠವಲೆ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ