ಗುಜರಾತ ಧಾರ್ಮಿಕಸ್ವಾತಂತ್ರ್ಯ ಕಾನೂನು-೨೦೦೩, ಹಿಂದೂಗಳ ಮತಾಂತರ ಮತ್ತು ಉಚ್ಚ ನ್ಯಾಯಾಲಯದ ತೀರ್ಪು !

೧. ಗುಜರಾತನಲ್ಲಿ ೧೦೦ ಕ್ಕೂ ಹೆಚ್ಚು ಹಿಂದೂಗಳ ಬಲವಂತದ ಮತಾಂತರ

‘ಗುಜರಾತನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಮತಾಂಧ ಮುಸಲ್ಮಾನರು ಸಾಮಾನ್ಯವರ್ಗದ, ಹಾಗೆಯೇ ಪರಿಶಿಷ್ಟ ಜಾತಿ ಮತ್ತು ಜನಾಂಗದ ೧೦೦ ಕ್ಕೂ ಹೆಚ್ಚು ಜನರನ್ನು ಬಲವಂತವಾಗಿ ಮತಾಂತರಿಸಿದರು. ಈ ಬಗ್ಗೆ ಆಮೋಡದಲ್ಲಿ (ಭರೂಚ್ ಜಿಲ್ಲೆ) ೧೫.೧೧.೨೦೨೧ ರಂದು ಮತಾಂಧರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಯಿತು. ಇದರ ನಂತರ ಈ ಪ್ರಕರಣದ ಕುರಿತು ತನಿಖೆ ಆರಂಭಿಸಲಾಯಿತು.

೨. ‘ಗುಜರಾತ ಧಾರ್ಮಿಕಸ್ವಾತಂತ್ರ್ಯ ಕಾನೂನು ೨೦೦೩’ ರಲ್ಲಿನ ತಿದ್ದುಪಡಿ ಮತ್ತು ಗುಜರಾತ ಉಚ್ಚ ನ್ಯಾಯಾಲಯದಲ್ಲಿನ ಆವಾಹನೆ !

ಗುಜರಾತ ಉಚ್ಚ ನ್ಯಾಯಾಲಯದ ಎದುರು ‘ಗುಜರಾತ ಧಾರ್ಮಿಕಸ್ವಾತಂತ್ರ್ಯ ಕಾನೂನು-೨೦೦೩’ ರಲ್ಲಿ ೨೦೨೧ ರಲ್ಲಿ ತಿದ್ದುಪಡಿ ಮಾಡಲಾಯಿತು. ಆ ತಿದ್ದುಪಡಿಯ ಕಲಂ ೩ ರಲ್ಲಿ, ‘ಅಂತರಧರ್ಮೀಯ ವಿವಾಹವಾಗಿದ್ದರೆ, ಅದರ ಅರ್ಥ ಹಿಂದೂ ಹುಡುಗಿ ಮುಸಲ್ಮಾನ ಅಥವಾ ಕ್ರೈಸ್ತ ಪಂಥಕ್ಕೆ ಮತಾಂತರಗೊಂಡಿದ್ದಾಳೆ ಎಂದು ಪರಿಗಣಿಸಬೇಕು,’ ಎಂಬ ತಿದ್ದುಪಡಿಯನ್ನು ತರಲಾಯಿತು. ಇದರ ಕೆಲವು ಕಲಂಗಳ ಸಿಂಧುತ್ವವನ್ನು  ಪರಿಶೀಲಿಸಲು, ವಿಶೇಷವಾಗಿ ಕಲಂ ೩ ರ (ಸುಧಾರಿತ) ಕುರಿತು, ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಲಾಯಿತು. ನಂತರ ಉಚ್ಚ ನ್ಯಾಯಾಲಯವು ಸರಕಾರಕ್ಕೆ ‘ಕಾರಣಗಳನ್ನು ತೋರಿಸಿ’ ನೋಟಿಸ್ ಕಳುಹಿಸುವ ಆದೇಶ ನೀಡಿತು. ಇದರ ಜೊತೆಗೆ, ಈ ಕಾನೂನಿನ ಅಡಿಯಲ್ಲಿ ದಾಖಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸಲು ಕೂಡ ಅನೇಕ ಅರ್ಜಿಗಳು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸ ಲ್ಪಟ್ಟವು. ಅದೇ ರೀತಿ, ಭರೂಚ್‌ನ ಮತಾಂಧರು ತಮ್ಮ ಮೇಲಿನ ಮೊಕದ್ದಮೆಗಳನ್ನು ರದ್ದುಪಡಿಸಲು ಗುಜರಾತ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು.

(ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ

೩. ರಾಜ್ಯ ಸರಕಾರ ಮತ್ತು ಪೊಲೀಸ್ ಆಡಳಿತದ ತೀವ್ರ ವಿರೋಧ 

ಈ ಎಲ್ಲ ರಿಟ್ ಮತ್ತು ಕ್ರಿಮಿನಲ್ ಅರ್ಜಿಗಳಿಗೆ ರಾಜ್ಯ ಸರಕಾರ ಮತ್ತು ಪೊಲೀಸ್ ಆಡಳಿತದ ವತಿಯಿಂದ ತೀವ್ರ ವಿರೋಧವನ್ನು ವ್ಯಕ್ತಪಡಿಸಲಾಯಿತು. ಈ ಸಮಯದಲ್ಲಿ ಅವರು ಮತಾಂತರಕ್ಕಾಗಿ ಹೇಗೆ ಸಾಮ, ದಾಮ, ದಂಡ, ಭೇದ ತಂತ್ರಗಳನ್ನು ಬಳಸಲಾಯಿತು ಎಂಬುದಕ್ಕೆ ಪುರಾವೆಯಾಗಿ ವಿವಿಧ ಧ್ವನಿಚಿತ್ರೀಕರಣಗಳು, ಅನೇಕ ವ್ಯಕ್ತಿಗಳ ಸಾಕ್ಷ್ಯಗಳು, ವಿವಿಧ ಸ್ಥಳಗಳ ಪಂಚನಾಮೆಗಳನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು. ಈ ಪುರಾವೆಗಳ ಪ್ರಕಾರ, ಮತಾಂಧರು ಮೊದಲು ಹಿಂದೂಗಳ ಮನೆಯಲ್ಲಿದ್ದ ದೇವರ ಪ್ರತಿಮೆಗಳು ಮತ್ತು ಛಾಯಾಚಿತ್ರಗಳನ್ನು ಎಸೆಯುವಂತೆ ಹೇಳಿದರು. ನಂತರ ಅವರಿಗೆ ‘ಕಲಮಾವನ್ನು ಪಠಿಸಲು’ ಹೇಳಿದರು, ಇದರ ಜೊತೆಗೆ ತಕ್ಷಣವೇ ಅವರ ಆಧಾರಕಾರ್ಡ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಸಿದ್ಧಪಡಿಸಿದರು. ಅವರಿಗೆ ವಿದೇಶದಲ್ಲಿ ಒಳ್ಳೆಯ ಉದ್ಯೋಗ ಮತ್ತು ವ್ಯವಹಾರ ಪ್ರಾರಂಭಿಸಲು ಆರ್ಥಿಕ ಸಹಾಯ, ಉತ್ತಮ ಮನೆಗಳನ್ನು ನೀಡುವ ಆಮಿಷಗಳನ್ನು ಸಹ ಒಡ್ಡಲಾಯಿತು. ಈ ಆಮಿಷಗಳನ್ನು ಒಪ್ಪಲು ನಿರಾಕರಿಸಿದ ಹಿಂದೂಗಳಿಗೆ ಬೆದರಿಕೆಗಳನ್ನು ಒಡ್ಡಲಾಯಿತು. ಈ ರೀತಿ ೧೦೦ಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರಿಸಲಾಯಿತು. ಸಹಜವಾಗಿಯೇ ಮತಾಂಧರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿ ದರು. ಅವರು, ಯಾರ ಮತಾಂತರವಾಗಿದೆಯೆಂದು ಹೇಳಿಕೊಂಡಿದ್ದಾರೋ, ಅವರಲ್ಲಿ ಒಬ್ಬರೂ ಆರೋಪಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬೇಡಿಕೆ ಇಟ್ಟಿಲ್ಲ. ಇದರರ್ಥ ಈ ಮತಾಂತರಗಳು ಬಲವಂತವಾಗಿ ಅಥವಾ ಆಮಿಷವಿಲ್ಲದೆ ಸ್ವಯಂಪ್ರೇರಣೆಯಿಂದ ಆಗಿವೆ, ಎಂದು ಹೇಳಿದರು.

ಈ ಸಮಯದಲ್ಲಿ ರಾಜ್ಯ ಸರಕಾರದ ವತಿಯಿಂದ, ಸ್ವಯಂಪ್ರೇರಿತ ಮತ್ತು ಕಾನೂನಿನ ವ್ಯಾಪ್ತಿಯಲ್ಲಿರುವ (೧೮ ವರ್ಷದ ಹುಡುಗಿ ಮತ್ತು ೨೧ ವರ್ಷದ ಹುಡುಗನ ವಿವಾಹ) ವಿವಾಹಗಳಾಗಿದ್ದರೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬಾರದು ಎಂಬ ಆದೇಶವನ್ನು ಕೆಲವು ಅರ್ಜಿಗಳಲ್ಲಿ ಉಚ್ಚ ನ್ಯಾಯಾಲಯವು ನೀಡಿದೆ. ಇದರ ಅರ್ಥ ಎಲ್ಲ ಮತಾಂತರಗಳ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬಾರದು ಎಂದಲ್ಲ, ಎಂದು ತಿಳಿಸಲಾಯಿತು.

ಕೆಲವು ಮತಾಂಧರೂ ಮೊದಲು ಹಿಂದೂಗಳೇ ಆಗಿದ್ದರು; ಆದರೆ ಅವರ ಪೂರ್ವಜರು ಇಸ್ಲಾಂಅನ್ನು ಸ್ವೀಕರಿಸಿದರು, ಅದೇ ರೀತಿ ಈ ಜನರು ಸಹ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದಾರೆ. ಆದ್ದರಿಂದ ಇದರಲ್ಲಿ ತಪ್ಪೇನಿಲ್ಲ, ಎಂದು ಹೇಳಿದರು.

೪. ಗುಜರಾತ ಉಚ್ಚ ನ್ಯಾಯಾಲಯದಿಂದ ಮತಾಂಧರ ಅರ್ಜಿಗಳು ತಿರಸ್ಕೃತ !

ಕೇವಲ ಕಾನೂನಿನ ಸಿಂಧುತ್ವ ಅಥವಾ ಕಾನೂನಿನಲ್ಲಿ ಮಾಡಿದ ಸುಧಾರಣೆಗಳ ಸಿಂಧುತ್ವವನ್ನು ಪರಿಶೀಲಿಸಲು ಸಲ್ಲಿಸಿದ ರಿಟ್ ಅರ್ಜಿಗಳು ಅಥವಾ ಪ್ರಕರಣಗಳು ಬಾಕಿ ಇರುವವರೆಗೆ, ಹೊಸ ಕಾನೂನು ಅಥವಾ ಸುಧಾರಣೆಯ ಪ್ರಕಾರ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಬಾರದು ಎಂದು ಅರ್ಥವಲ್ಲ. ಇದು ಸಾರ್ವಕಾಲಿಕ ಸತ್ಯವಾಗಿದೆ. ನಂತರ ಸರಕಾರವು ಮತಾಂತರ ವಿರೋಧಿ ಕಾನೂನನ್ನು ಸಿದ್ಧಪಡಿಸಿದರೆ ಅಥವಾ ಅದರಲ್ಲಿ ಸುಧಾರಣೆಗಳನ್ನು ಮಾಡಿದರೆ ಮತ್ತು ಅವುಗಳನ್ನು ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯವು ಸಿಂಧುಗೊಳಿಸಿದರೆ, ಆಗ ಮಧ್ಯಂತರ ಅವಧಿಯಲ್ಲಿ ದಾಖಲಾದ ಮೊಕದ್ದಮೆಗಳಲ್ಲಿ ಅಪರಾಧಿಗಳಿಗೆ ಲಾಭ ಸಿಗುತ್ತದೆ. ಈ ಸಾರಾಸಾರ ವಿಚಾರವನ್ನು ಪರಿಗಣಿಸಿ, ಗುಜರಾತ ಉಚ್ಚ ನ್ಯಾಯಾಲಯವು ಮತಾಂಧರ  ಕ್ರಿಮಿನಲ್ ಮತ್ತು ರಿಟ್ ಅರ್ಜಿಗಳನ್ನು ತಿರಸ್ಕರಿಸಿತು ಹಾಗೂ ಅವರಿಗೆ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುವಂತೆ ತಿಳಿಸಿತು.

೫. ಹಿಂದೂಗಳ ಬಲವಂತದ ಮತಾಂತರ, ಇದು ಆಡಳಿತಕ್ಕೆ ನಾಚಿಕೆಗೇಡು !

‘ಒಬ್ಬ ಹಿಂದೂ ಮತಾಂತರಗೊಂಡಾಗ, ಹಿಂದೂಗಳ ಒಬ್ಬ ಶತ್ರು ಹೆಚ್ಚಾಗುತ್ತಾನೆ,’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಗುಜರಾತ್‌ನಲ್ಲಿ ೧೦೦ ಕ್ಕೂ ಹೆಚ್ಚು ಜನರು ಮತಾಂತರಗೊಂಡಿದ್ದಾರೆ. ಇದರ ಅರ್ಥ ಹಿಂದೂಗಳಿಗೆ ಅಷ್ಟೇ ಅಪಾಯ ಹೆಚ್ಚಿದೆ. ಇಂತಹ ಮತಾಂತರಗಳು ದೇಶದ ಇತರ ಭಾಗಗಳಲ್ಲಿಯೂ ನಡೆಯುತ್ತಿವೆ. ಗುಜರಾತನಲ್ಲಿ ಕಳೆದ ೨ ದಶಕಗಳಿಗೂ ಹೆಚ್ಚು ಕಾಲದಿಂದ ಭಾಜಪ ಸರಕಾರ ಅಧಿಕಾರದಲ್ಲಿದೆ. ಅಂತಹ ಸ್ಥಳದಲ್ಲಿ ಹಿಂದೂಗಳ ಮತಾಂತರವಾಗುವುದು ಆಶ್ಚರ್ಯಕರ ವಿಷಯವಾಗಿದೆ.

ಶ್ರೀಕೃಷ್ಣಾರ್ಪಣಮಸ್ತು.

– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೨.೧೦.೩೦೨೫)