ವಾಸ್ತುಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಮಾಲೆ : ಲೇಖನ ಕ್ರಮಾಂಕ ೭

ದಿಕ್ಕುಗಳು ಮತ್ತು ವಾಸ್ತುಶಾಸ್ತ್ರ – ಭಾಗ ೨

ಈಶ್ವರನು ಸೃಷ್ಟಿಯನ್ನು ನಿರ್ಮಿಸಿದಾಗ, ಅದರಲ್ಲಿ ಯಾವುದೇ ವಸ್ತುವಿನ ಸ್ಥಾನವನ್ನು ನಿಶ್ಚಿತಗೊಳಿಸಲು ಭಗವಂತನು ದಿಕ್ಕುಗಳನ್ನು ನಿರ್ಮಿಸಿದನು. ದಿಕ್ಕುಗಳಿಂದಾಗಿ ಯಾವುದೇ ವಸ್ತುವು ನಿಖರವಾಗಿ ಎಲ್ಲಿದೆ ಎಂದು ನಾವು ಹೇಳಬಹುದು, ಉದಾ. ನಾನು ಗೋವಾದಲ್ಲಿ ಇರುತ್ತೇನೆ; ಆದರೆ ‘ಗೋವಾದಲ್ಲಿ ಯಾವ ದಿಕ್ಕಿನಲ್ಲಿ ? ಉತ್ತರವೇ ಅಥವಾ ದಕ್ಷಿಣವೇ ?’, ಎಂದು ನಿಖರವಾಗಿ ಹೇಳಿದರೆ ಮಾತ್ರ ನಾವು ನಿಖರವಾಗಿ ಆ ಸ್ಥಾನವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ‘ದಿಕ್ಕು’ ಎಂಬ ವಿಷಯವು ವಾಸ್ತುಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ; ಏಕೆಂದರೆ ದಿಕ್ಕುಗಳ ಜ್ಞಾನವಾದರೆ ಮಾತ್ರ ನಾವು ವಾಸ್ತುಶಾಸ್ತ್ರದ ನಿಯಮಗಳ ಬಗ್ಗೆ ವಿಚಾರ ಮಾಡಬಹುದು. ವಾಸ್ತುಶಾಸ್ತ್ರವಾಗಿರಲಿ, ಸಾಧನೆಯಾಗಿರಲಿ ಅಥವಾ ಜೀವನವಾಗಿರಲಿ, ಈ ಎಲ್ಲಾ ಕಡೆಗಳಲ್ಲಿ ದಿಕ್ಕು ಸ್ಪಷ್ಟವಾಗಿರುವುದು ಮಹತ್ವದ್ದಾಗಿದೆ. ಪ್ರತಿಯೊಂದು ದಿಕ್ಕಿನ ಕಾರಕತ್ವವನ್ನು ಶಾಸ್ತ್ರವು ನಿಶ್ಚಿತಗೊಳಿಸಿ ಕೊಟ್ಟಿದೆ. (ಮನುಷ್ಯನ ಜೀವನದ ಯಾವ ವಿಷಯದ ಮೇಲೆ ದಿಕ್ಕು ಪರಿಣಾಮ ಬೀರುತ್ತದೆಯೋ, ಅದನ್ನು ಆ ದಿಕ್ಕಿನ ‘ಕಾರಕತ್ವ’ ಎಂದು ಹೇಳುತ್ತಾರೆ.) ದಿಕ್ಕಿನ ಶುಭಾಶುಭಗಳಿಗನುಸಾರ ಮನುಷ್ಯನು ಫಲವನ್ನು ಅನುಭವಿಸುತ್ತಾನೆ. ಪ್ರತಿಯೊಂದು ದಿಕ್ಕಿಗೆ ಒಬ್ಬ ಪಾಲಕನಿದ್ದಾನೆ, ಅವನನ್ನು ನಾವು ‘ದಿಕ್ಪಾಲ’ ಎಂದು ಕರೆಯುತ್ತೇವೆ. ಈ ದಿಕ್ಪಾಲಕ ಆ ದಿಕ್ಕಿನ ಅಧಿಪತಿಯಾಗಿರುತ್ತಾನೆ ಮತ್ತು ದಿಕ್ಕಿನ ಕಾರಕತ್ವಕ್ಕೆ ಅನುಗುಣವಾಗಿ ಫಲ ನೀಡುವ ಕಾರ್ಯ ಮಾಡುತ್ತಾನೆ. ವಾಸ್ತುಶಾಸ್ತ್ರದ ದೃಷ್ಟಿಯಿಂದ ಎಲ್ಲಿ ಏನಿರಬೇಕು ಅಥವಾ ಏನಿರಬಾರದು ? ಎಂಬುದನ್ನು ತಿಳಿಯುವ ಮೊದಲು ಪ್ರತಿಯೊಂದು ದಿಕ್ಕಿನ ವೈಶಿಷ್ಟ್ಯ ಮತ್ತು ಕಾರಕತ್ವವನ್ನು ತಿಳಿದರೆ ವಾಸ್ತುವಿನ ನಿಯಮಗಳು ಹೇಗೆ ಸಿದ್ಧವಾದವು ? ಎಂಬುದು ತಿಳಿಯುವುದು.
೧. ಪೂರ್ವ ದಿಕ್ಕು
ಅ. ದೇವತೆ : ಇದು ಪ್ರಥಮ ದಿಕ್ಕಾಗಿದ್ದು ಇದೇ ದಿಕ್ಕಿನಲ್ಲಿ ಪ್ರಾತಃಕಾಲದಲ್ಲಿ ಸೂರ್ಯೋದಯವಾಗುತ್ತದೆ. ಈ ದಿಕ್ಕಿನ ದೇವತೆ ಸೂರ್ಯನಾಗಿದ್ದಾನೆ. ಸೂರ್ಯನಿಂದಲೇ ನಮಗೆ ಆತ್ಮಿಕ ಶಕ್ತಿ ಸಿಗುತ್ತದೆ.
ಆ. ಪಾಲಕ, ವಾಹನ, ನಗರ, ಆಯುಧ : ಈ ದಿಕ್ಕಿನ ಪಾಲಕ ಇಂದ್ರನಾಗಿದ್ದು ಶಚಿ (ಸುಖ ನೀಡುವವಳು) ಅವನ ಪತ್ನಿಯಾಗಿದ್ದಾಳೆ; ಆದ್ದರಿಂದ ಎಲ್ಲಾ ರೀತಿಯ ಸೌಖ್ಯಗಳು ಈ ದಿಕ್ಕಿನಿಂದ ಸಿಗುತ್ತವೆ. ಐರಾವತ (ಅತಿಯಾದ ಶ್ರೀಮಂತಿಕೆ) ಅವನ ವಾಹನವಾಗಿದೆ ಮತ್ತು ಅಮರಾವತಿ ಅವನ ನಗರವಾಗಿರುವುದರಿಂದ ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ನಮಗೆ ಪೂರ್ವ ದಿಕ್ಕಿನಿಂದ ಸಿಗುತ್ತವೆ. ಅವನ ಆಯುಧ ವಜ್ರ, ಅಂದರೆ ಅತ್ಯಂತ ಪ್ರಭಾವಶಾಲಿ ಅಸ್ತ್ರವಾಗಿದೆ !
ಇ. ಲಾಭ : ಈ ದಿಕ್ಕಿನಲ್ಲಿ ಐಶ್ವರ್ಯಲಕ್ಷ್ಮಿಯ ಸ್ಥಾನವಿದೆ; ಆದ್ದರಿಂದ ವಾಸ್ತುವಿನ ಎಲ್ಲಾ ಗ್ರಂಥಗಳಲ್ಲಿ ಮನೆಯು ಪೂರ್ವಾಭಿಮುಖವಾಗಿರ ಬೇಕು ಎಂಬ ಆಗ್ರಹಿಸಲಾಗಿದೆ. ರಾಜಕೀಯ ವ್ಯಕ್ತಿಗಳಿಗೆ ಈ ದಿಕ್ಕು ಮಹತ್ವದ್ದಾಗಿದ್ದು ಇದು ಪ್ರಸಿದ್ಧಿಯನ್ನು ತಂದುಕೊಡುವ ದಿಕ್ಕಾಗಿದೆ. ಅದೇ ರೀತಿ ಸಂತಾನಪ್ರಾಪ್ತಿಗಾಗಿ ಈ ದಿಕ್ಕು ನಿರ್ದೋಷ ವಾಗಿರುವುದು ಆವಶ್ಯಕವಾಗಿರುತ್ತದೆ. ಪೂರ್ವ ದಿಕ್ಕು ಮನುಷ್ಯನ ಜೀವನದಲ್ಲಿ ಪ್ರಸಿದ್ಧಿ, ಆರೋಗ್ಯ ಮತ್ತು ವಿದ್ಯೆಯ ವಿಷಯಗಳ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕು ಯಾವಾಗಲೂ ತೆರೆದಿದ್ದರೆ ಮನೆಯವರಿಗೆ ಸಕಾರಾತ್ಮಕ ಶಕ್ತಿಯ ಲಾಭವಾಗುತ್ತದೆ.

೨. ಆಗ್ನೇಯ ದಿಕ್ಕು
ಅ. ದೇವತೆ : ಶುಕ್ರನು ದಿಕ್ಕಿನ ದೇವತೆಯಾಗಿದ್ದಾನೆ. ಪ್ರಣಯ, ವಿಲಾಸಿ ವಸ್ತುಗಳು, ಸಂತಾನಸೌಖ್ಯ, ಶಕ್ತಿ, ಅಗ್ನಿ ಇತ್ಯಾದಿ ಸಂಗತಿಗಳು ನಮಗೆ ಆಗ್ನೇಯ ದಿಕ್ಕಿನಿಂದ ಸಿಗುತ್ತವೆ.
ಆ. ಪಾಲಕ, ವಾಹನ, ನಗರ, ಆಯುಧ: ಅಗ್ನಿಯು ಈ ದಿಕ್ಕಿನ ಪಾಲಕನಾಗಿದ್ದಾನೆ. ಸದಾ ಕಾರ್ಯನಿರತ ಮತ್ತು ಶಕ್ತಿಶಾಲಿಯಾಗಿರಲು ಈ ದಿಕ್ಕು ನಮಗೆ ಸಹಾಯ ಮಾಡುತ್ತದೆ. ಅತೀ ಹೆಚ್ಚಿನ ಅಗ್ನಿ ಮನುಷ್ಯನಿಗೆ ತೊಂದರೆದಾಯಕ ಹಾಗೂ ಮತ್ತು ಕಡಿಮೆ ಅಗ್ನಿ ನಿರುಪಯುಕ್ತವಾಗಿದೆ. ಅದೇ ರೀತಿ ಈ ದಿಕ್ಕು ಸಮತೋಲನದಲ್ಲಿದ್ದರೆ ಮಾತ್ರ ವಾಸ್ತುವು ಶಕ್ತಿಯುತವಾಗಿರುತ್ತದೆ. ತೇಜೋವತಿ (ತೇಜಸ್ಸನ್ನು ಪ್ರದಾನಿಸುವ ನಗರ) ಅಗ್ನಿಯ ನಗರ ಹಾಗೂ ಟಗರು ಅಗ್ನಿಯ ವಾಹನವಾಗಿದೆ. ಟಗರು ಎಂದರೆ ಕಾರ್ಯಮಗ್ನತೆ !
ಕೋಪ ಮತ್ತು ಕ್ರೋಧ ಇವು ದಿಕ್ಪಾಲಕನ ಶಸ್ತ್ರ ಗಳಾಗಿರುವುದರಿಂದ ಈ ದಿಕ್ಕು ನಕಾರಾತ್ಮಕವಾಗಿದ್ದರೆ ಮನೆಯಲ್ಲಿ ಕ್ರೋಧದ ವಾತಾವರಣವಿರುತ್ತದೆ. ಆಗ್ನೇಯ ದಿಕ್ಕು ದೋಷಪೂರ್ಣವಾಗಿದ್ದರೆ ಕುಟುಂಬ ದಲ್ಲಿ ವಾಗ್ವಾದ ಮತ್ತು ಜಗಳಗಳಾಗುತ್ತವೆ.
ಇ. ಪತ್ನಿ : ಸ್ವಾಹಾ ಈ ದಿಕ್ಪಾಲಕನ ಪತ್ನಿ ಆಗಿದ್ದಾಳೆ, ಅಂದರೆ ಇಲ್ಲಿನ ಶಕ್ತಿಯ ಸಹಾಯದಿಂದ ವಾಸ್ತುವಿನಲ್ಲಿನ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸಬಹುದು. ಅದಕ್ಕಾಗಿ ಈ ದಿಕ್ಕು ಮಹತ್ವದ್ದಾಗಿದೆ.
ಈ. ಲಾಭ : ಧಾನ್ಯಲಕ್ಷ್ಮಿಯ ಸ್ಥಾನ ಆಗ್ನೇಯ ದಿಕ್ಕಿಗೆ ಇರುತ್ತದೆ; ಆದ್ದರಿಂದ ಜೀವನಾವಶ್ಯಕ ಪ್ರಾಣಶಕ್ತಿಯು ಇಲ್ಲಿಂದ ಸಿಗುತ್ತದೆ. ಶುಕ್ರಗ್ರಹವು ವಿಲಾಸ ಮತ್ತು ವ್ಯಸನಗಳಿಗೆ ಕಾರಕವಾಗಿದೆ. ಆದ್ದರಿಂದ ಈ ದಿಕ್ಕು ಹದಗೆಟ್ಟರೆ ವ್ಯಕ್ತಿಯನ್ನೂ ಅದೇ ದಿಕ್ಕಿಗೆ ಕರೆದೊಯ್ಯುತ್ತದೆ. ಶುಕ್ರ ಗ್ರಹವು ಸ್ತ್ರೀ ಗ್ರಹವಾಗಿರುವುದರಿಂದ ಮನೆಯ ಸ್ತ್ರೀಯರ ಆರೋಗ್ಯವನ್ನು ಪರಿಪೂರ್ಣವಾಗಿಡುತ್ತದೆ. ದಿಕ್ಕು ಹದಗೆಟ್ಟರೆ ಸ್ತ್ರೀಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಚಿಕ್ಕ ಮಕ್ಕಳಿಗೆ ಈ ದಿಕ್ಕು ಶಕ್ತಿಯನ್ನು ನೀಡುತ್ತದೆ. ಆದ್ದರಿಂದ ವ್ಯಾಯಾಮಶಾಲೆ ಅಥವಾ ಕಠಿಣ ಪರಿಶ್ರಮದ ಸಾಧನಗಳು ಈ ದಿಕ್ಕಿನಲ್ಲಿರುವುದು ಒಳ್ಳೆಯದು !
೩. ದಕ್ಷಿಣ ದಿಕ್ಕು
ಅ. ದೇವತೆ : ಮಂಗಳನು ಈ ದಿಕ್ಕಿನ ದೇವತೆಯಾಗಿದ್ದಾನೆ.
ಆ. ಮಹತ್ವ : ‘ಈ ದಿಕ್ಕು ನಕಾರಾತ್ಮಕವಾಗಿದೆ’, ಎಂಬ ತಪ್ಪು ಕಲ್ಪನೆ ಸಮಾಜದಲ್ಲಿದೆ; ಆದರೆ ವಾಸ್ತುಶಾಸ್ತ್ರದ ಪ್ರಕಾರ ಈ ದಿಕ್ಕನ್ನು ನಕಾರಾತ್ಮಕ ಎಂದಿಲ್ಲ. ಯಮನು ಈ ದಿಕ್ಕಿನ ಪಾಲಕನಾಗಿದ್ದಾನೆ. ಯಮನು ಮೃತ್ಯುವಿನ ದೇವತೆಯಾಗಿರುವುದರಿಂದ ಅಂತಿಮ ಸತ್ಯವನ್ನು ಹೇಳುವ ದಿಕ್ಕಾಗಿದೆ. ಆದ್ದರಿಂದ ಭೌತಿಕ ವಿಷಯಗಳಲ್ಲಿ ಮುಳುಗಿದವರಿಗೆ ಇದು ಬೇಡವೆನಿಸುತ್ತದೆ; ಆದರೆ ಈ ದಿಕ್ಕಿನಲ್ಲಿ ‘ಮೋಕ್ಷ’ ಎಂಬ ಪುರುಷಾರ್ಥವಿದೆ. ಭೌತಿಕ ಸುಖವನ್ನು ತ್ಯಾಗ ಮಾಡಿದವರಿಗೆ ಈ ದಿಕ್ಕು ಬಹಳಷ್ಟು ಶಕ್ತಿಯನ್ನು ಪ್ರದಾನಿಸುತ್ತದೆ.
ಇ. ಪತ್ನಿ : ದಿಕ್ಪಾಲಕನ ಪತ್ನಿ ಶ್ಯಾಮಲಾ ಇವಳು ದೇವಿಯಾಗಿದ್ದಾಳೆ. ಇವಳು ರೂಪ-ಬಣ್ಣಕ್ಕಿಂತ ಗುಣಕರ್ಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾಳೆ. ಇಂದಿನ ಕಾಲದಲ್ಲಿ ಗುಣಕರ್ಮಗಳು ಯಾರಿಗೂ ಬೇಡವಾಗಿದ್ದು, ಈ ದಿಕ್ಕು ನಕಾರಾತ್ಮಕವಾಗಿದೆ ಅನಿಸುತ್ತದೆ.
ಈ. ನಗರ, ವಾಹನ, ಆಯುಧ : ಈ ದಿಕ್ಪಾಲಕನ ನಗರ ಸಂಯಮನೀ, ಅಂದರೆ ಬುದ್ಧಿ ಮತ್ತು ಸಂಯಮಾಚರಣಿಗಳಿಗೆ ಇದು ಲಾಭ ನೀಡುತ್ತದೆ. ಈ ದಿಕ್ಕು ಹದಗೆಟ್ಟರೆ ನೀತಿ-ನಿಯಮ, ಸಂಯಮ ಮುಂತಾದ ವಿಷಯಗಳು ಪಾಲನೆಯಾಗುವುದಿಲ್ಲ. ಮಹಿಷ (ಎಮ್ಮೆ) ಈ ದಿಕ್ಕಿನ ವಾಹನವಾಗಿದೆ, ಅಂದರೆ ಆಲಸ್ಯ ಮತ್ತು ತನ್ನಲ್ಲೇ ಮಗ್ನರಾಗಿರುವವರ ಮೇಲೆ ಈ ದಿಕ್ಕು ಪರಿಣಾಮ ಬೀರುತ್ತದೆ.
ಕಾಲಪಾಶ ದಿಕ್ಪಾಲಕನ ಆಯುಧವಾಗಿದೆ, ಅಂದರೆ ವಾಸ್ತುವಿನಲ್ಲಿ ದಕ್ಷಿಣ ದಿಕ್ಕು ಸರಿಯಾಗಿದ್ದರೆ ಅನುಕೂಲಕರ ಕಾಲದ ಲಾಭ ನಮಗೆ ಪಡೆಯಲು ಸಾಧ್ಯವಾಗುತ್ತದೆ.
ಉ.ಲಾಭ : ಆದಿಲಕ್ಷ್ಮಿಯ ಸ್ಥಾನ ಈ ದಿಕ್ಕಿನಲ್ಲಿರುತ್ತದೆ. ಈ ದಿಕ್ಕು ಮಂಗಳ ಗ್ರಹದ್ದಾಗಿರುವುದರಿಂದ ಈ ದಿಕ್ಕಿನಿಂದ ಧೈರ್ಯ ಸಿಗುತ್ತದೆ. ಮಂಗಳನು ಸೇನಾಪತಿಯಾಗಿರುವುದರಿಂದ ಬುದ್ಧಿ ಮತ್ತು ಸಾಮರ್ಥ್ಯದ ಬಳಕೆ ಮಾಡಲು ಈ ದಿಕ್ಕು ಪ್ರೇರೇಪಿಸುತ್ತದೆ. ಈ ದಿಕ್ಕು ಲಯದತ್ತ ಒಯ್ಯುವ ವ್ಯವಹಾರಗಳನ್ನು, ಉದಾ. ಜೂಜು, ಮದ್ಯಪಾನ ಇತ್ಯಾದಿ ವಿಷಯಗಳಿಗೆ ಪ್ರೇರೇಪಿಸುತ್ತದೆ. ಇದನ್ನು ‘ಸಂಕಷ್ಟಗಳ ದಿಕ್ಕು’ ಎಂದೂ ನಂಬಲಾಗುತ್ತದೆ. ಈ ದಿಕ್ಕನ್ನು ಆದಷ್ಟು ಮುಚ್ಚಿಟ್ಟರೆ ಒಳ್ಳೆಯದು!
೪. ನೈಋತ್ಯ ದಿಕ್ಕು
ಅ. ದೇವತೆ : ಈ ದಿಕ್ಕಿನ ದೇವತೆ ರಾಹು. ಇದು ಪೃಥ್ವಿತತ್ವದ ದಿಕ್ಕಾಗಿದ್ದು ಸ್ಥಿರತೆಯನ್ನು ಪ್ರದಾನಿಸುತ್ತದೆ; ಆದರೆ ದಿಕ್ಪಾಲಕನಾದ ನಿಋತಿಯು ಅಸುರ ಕುಲದವನಾಗಿರುವುದರಿಂದ ಜಡತ್ವ, ಕಷ್ಟ, ರೋಗ, ಸಂಕಟಗಳು ಸಹ ಈ ದಿಕ್ಕಿನ ಕಾರಕತ್ವಗಳಾಗಿವೆ.
ಆ. ವಾಹನ : ದಿಕ್ಪಾಲಕನಾದ ನಿಋತಿಯು ಮನುಷ್ಯನನ್ನೇ ತನ್ನ ವಾಹನವೆಂದು ತಿಳಿದು ವ್ಯಕ್ತಿಯ ಮನಸ್ಸಿನ ಮೇಲೆ ಆರೂಢನಾಗಿ ಅವನ ಬುದ್ಧಿಯನ್ನು ಮುಗಿಸುವ ಕಾರ್ಯವನ್ನು ಮಾಡುತ್ತಾನೆ.
ಇ.ಲಾಭ : ಇದು ಭೂತ, ಪ್ರೇತ,ಪಿಶಾಚ, ರಾಕ್ಷಸ ಇಂತಹ ಕೆಟ್ಟ ಶಕ್ತಿಗಳ ದಿಕ್ಕಾಗಿದೆ. ಆದ್ದರಿಂದ ಈ ದಿಕ್ಕು ಹದಗೆಟ್ಟರೆ ಕೆಟ್ಟ ಶಕ್ತಿಗಳ ಕಾಟ ವಾಸ್ತುವಿನಲ್ಲಿ ಹೆಚ್ಚಾಗಬಹುದು. ಈ ದಿಕ್ಕನ್ನು ಒಂದು ವೇಳೆ ನಾವು ಅನುಕೂಲಕರವಾಗಿಸಿದರೆ, ಮನುಷ್ಯನ ಮೇಲೆ ಆರೂಢನಾಗಿ ನಿಋತಿಯು ಮನೆ ಮಾಲೀಕನಿಗೆ ಅಧಿಪತ್ಯವನ್ನೂ ಪ್ರದಾನಿಸುತ್ತಾನೆ; ಆದ್ದರಿಂದ ‘ಈ ದಿಕ್ಕಿನಲ್ಲಿ ಮಾಲೀಕನ ಕೊಠಡಿ ಇರಬೇಕು’, ಎಂದು ಶಾಸ್ತ್ರಕಾರರು ಹೇಳಿದ್ದಾರೆ.
ಈ. ಪತ್ನಿ,ನಗರ : ದೀರ್ಘಾದೇವಿಯು ಈ ದಿಕ್ಪಾಲಕನ ಪತ್ನಿಯಾಗಿದ್ದು ಈ ದಿಕ್ಕಿನಿಂದ ಸಿಗುವ ಪರಿಣಾಮಗಳು ದೀರ್ಘ ಕಾಲ ಉಳಿಯುತ್ತವೆ. ಕೃಷ್ಣಾಂಗವು ನಗರವಾಗಿದೆ, ಅಂದರೆ ಕೃಷ್ಣಕೃತ್ಯಗಳನ್ನು ಮಾಡಲು ಪ್ರವೃತ್ತರನ್ನಾಗಿಸುವ ದಿಕ್ಕು ಇದಾಗಿದೆ, ಆದ್ದರಿಂದ ಇದನ್ನು ಯೋಗ್ಯ ಮತ್ತು ಸಕಾರಾತ್ಮಕವಾಗಿ ಇಟ್ಟರೆ ಮಾತ್ರ ವಾಸ್ತುವಿನಲ್ಲಿ ನೈತಿಕತೆ ಉಳಿಯುತ್ತದೆ.
ಉ. ಆಯುಧ :ಕುಂತ ಅಂದರೆಪಾಶ, ಇದು ಇವನ ಆಯುಧವಾಗಿದೆ, ಅಂದರೆ ಮೋಹಪಾಶದಲ್ಲಿ ಸಿಲುಕಿಸುವಂತದ್ದಾಗಿದೆ. ಇದು ಧೈರ್ಯಲಕ್ಷ್ಮಿಯ ದಿಕ್ಕಾಗಿರುವುದರಿಂದ ಅದು ಸರಿಯಾಗಿದ್ದರೆ ವಾಸ್ತುವಿನಲ್ಲಿರುವ ಜನರಿಗೆ ಧೈರ್ಯವನ್ನು ಪ್ರದಾನಿಸುತ್ತದೆ.
ಈ ದಿಕ್ಕಿನಲ್ಲಿ ದೊಡ್ಡ ದೋಷಗಳು ಉಂಟಾದರೆ ವೈಫಲ್ಯ, ಅಪಘಾತ, ನಿರಾಶೆ, ಆತ್ಮಹತ್ಯೆಯಂತಹ ಪರಿಣಾಮಗಳು ಉಂಟಾಗಬಹುದು. ಈ ದಿಕ್ಕು ಎಷ್ಟರ ಮಟ್ಟಿಗೆ ಮುಚ್ಚಿರುತ್ತದೆಯೋ ಅಷ್ಟು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಈ ದಿಕ್ಕು ಅಶುಭ ಪರಿಣಾಮವನ್ನು ನೀಡುತ್ತದೆ.
– ಶ್ರೀ. ಶ್ರೇಯಸ ಪಿಸೋಳಕರ (ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ), ಗೋವಾ. (೨೩.೧೨.೨೦೨೫)
ಪ್ರವೇಶದ್ವಾರದ ಸ್ಥಾನ ಮತ್ತು ಇತರ ನಿಯಮಗಳು
ಪ್ರವೇಶದ ವಿಧಗಳು
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರಿಗೆ ಪಾಟಲೀಪುತ್ರದಲ್ಲಿ (ಬಿಹಾರ) ‘ಅಂತರರಾಷ್ಟ್ರೀಯ ಜ್ಯೋತಿಷ್ಯ, ವಾಸ್ತು ಮತ್ತು ತಂತ್ರ ಸಮ್ಮೇಳನ’ದಲ್ಲಿ ಸನ್ಮಾನ
ಏಪ್ರಿಲ್ನಲ್ಲಿ ಮೂರನೇ ಮಹಾಯುದ್ಧದ ಮುನ್ಸೂಚನೆ! – ಗ್ರಹಗತಿಗಳ ಆಧಾರದ ಮೇಲೆ ಜ್ಯೋತಿಷಿಗಳ ದಾವೆ