
‘ನಗುವುದು’ ಇದು ನಿಸರ್ಗವು ಮನುಷ್ಯನಿಗೆ ನೀಡಿದ ಒಂದು ವಿಲಕ್ಷಣ ಕೊಡುಗೆಯಾಗಿದೆ. ನಾವು ಯಾವಾಗ ಬೇಕಾದರೂ ನಗಬಹುದು. ನಗುವ ವೃತ್ತಿಯು ಕೇವಲ ಮನುಷ್ಯನಲ್ಲಿ ಮಾತ್ರ ಕಂಡುಬರುತ್ತದೆ. ‘ನಗುವುದು’ ಇದು ಆಂತರಿಕ, ಮಾನಸಿಕ ಮತ್ತು ಬೌದ್ಧಿಕ ವ್ಯಾಯಾಮವಾಗಿದೆ. ಆನಂದ ಮತ್ತು ನಗುಮುಖದಿಂದಿರುವುದರಿಂದ ಒತ್ತಡ ಹೆಚ್ಚಾಗುವುದಿಲ್ಲ. ಎಲ್ಲ ರೋಗಗಳಲ್ಲಿ ಲಾಭದಾಯಕ ಮತ್ತು ಸಹಜಸುಲಭವಾಗಿ ಲಭ್ಯವಿರುವ ಔಷಧಿ ಎಂದರೆ ‘ಭಗವಂತನ ನಾಮಸ್ಮರಣೆಯೊಂದಿಗೆ ನಗುವುದು.’ ಯಾವಾಗಲೂ ನಗುಮುಖದಿಂದ ಇರುವುದರಿಂದ ನಮ್ಮ ಜೀವನವು ಬಹಳ ಸುಂದರವಾಗುತ್ತದೆ.

೧. ನಗುವುದರಿಂದ ಸ್ವತಃ ಪ್ರಸನ್ನನಾಗಿದ್ದು ಇತರರನ್ನೂ ಪ್ರಸನ್ನರನ್ನಾಗಿಡಲು ಸಾಧ್ಯವಾಗುವುದು
ಒಬ್ಬ ಅಪರಿಚಿತ ವ್ಯಕ್ತಿಯತ್ತ ನೋಡಿ ನಾವು ಕೇವಲ ಮುಗುಳ್ನಕ್ಕರೆ, ಇಬ್ಬರಲ್ಲಿ ಆತ್ಮೀಯತೆ ಬೆಳೆದು ಪ್ರೇಮಭಾವ ಹೆಚ್ಚಾಗುತ್ತದೆ. ಪರಸ್ಪರರಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ಪ್ರೇರಣೆ ಹುಟ್ಟುತ್ತದೆ. ಇದು ಅದರಲ್ಲಿನ ಸಕಾರಾತ್ಮಕ ಸ್ಪಂದನಗಳ ಪರಿಣಾಮವಾಗಿರುತ್ತದೆ. ನಗುವವನು ಸ್ವತಃ ಪ್ರಸನ್ನನಾಗಿರುತ್ತಾನೆ ಮತ್ತು ಇತರರನ್ನೂ ಪ್ರಸನ್ನವಾಗಿಡುತ್ತಾನೆ.
೨. ನಗುವುದರಿಂದ ವ್ಯಾಯಾಮವಾಗಿ ದೇಹವು ಆರೋಗ್ಯಕರವಾಗಲು ಸಹಾಯವಾಗುವುದು
ಅ. ಸೂರ್ಯನು ಕತ್ತಲನ್ನು ದೂರಗೊಳಿಸುವ ಹಾಗೆ ‘ನಗು’ವು ಚಿಕ್ಕ-ಪುಟ್ಟ ರೋಗಗಳನ್ನು ಸಹಜವಾಗಿ ದೂರಗೊಳಿಸುತ್ತದೆ.
ಆ. ದಿನದ ಆರಂಭದಲ್ಲಿ ಕೆಲವು ಸಮಯ ನಗುವ ವ್ಯಾಯಾಮ ಮಾಡಿದರೆ ದಿನವಿಡಿ ತಾಜಾತನ, ಉತ್ಸಾಹಿ ಮತ್ತು ಶಕ್ತಿಯನ್ನು ಅನುಭವಿಸಬಹುದು.
ಇ. ನಗುವುದರಿಂದ ಪುಪ್ಪುಸಗಳಿಗೆ ಒಳ್ಳೆಯ ವ್ಯಾಯಾಮವಾಗು ತ್ತದೆ. ನಗುವ ವ್ಯಕ್ತಿಯ ಶ್ವಾಸಕೋಶಗಳಲ್ಲಿನ ಅನಗತ್ಯ ದ್ರವ್ಯಗಳು ಹೊರಹೋಗಿ ರಕ್ತಸಂಚಾರವು ಸರಾಗವಾಗುತ್ತದೆ. ವ್ಯಕ್ತಿಯ ಉಸಿರಾಟದ ಕ್ಷಮತೆಯು ಹೆಚ್ಚಾಗಿ ಅವನ ಆಯುಷ್ಯವು ಹೆಚ್ಚಾಗುತ್ತದೆ. ಅವನ ದೇಹದ ತೂಕವು ನಿಯಂತ್ರಣದಲ್ಲಿರುತ್ತದೆ. ಅಶಕ್ತತೆ, ಉಸಿರಾಟದ ತೊಂದರೆ ಮತ್ತು ಅಸ್ತಮಾದ ರೋಗವಿದ್ದಲ್ಲಿ ನಗುವುದು ಲಾಭದಾಯಕವಾಗಿದೆ. ಶ್ವಾಸಕೋಶಗಳ ಆರೋಗ್ಯಕ್ಕಾಗಿ ನಗುವ ವ್ಯಾಯಾಮವು ಉಪಯುಕ್ತವಾಗಿದೆ.
ಈ. ಚಿಂತೆ, ಕೋಪ, ಅಸೂಯೆ, ದ್ವೇಷ ಮುಂತಾದ ವಿಷಕಾರಿ ಮನೋಭಾವನೆಗಳ ಹೆಚ್ಚಳವನ್ನು ನಗುವುದರಿಂದ ತಡೆಯಬಹುದು ನಗುವುದರಿಂದ ವ್ಯಕ್ತಿಯ ಮನಃಸ್ಥಿತಿ ಸುಧಾರಿಸುತ್ತದೆ, ಒತ್ತಡ ಕಡಿಮೆಯಾಗುತ್ತದೆ ಮತ್ತು ರೋಗನಿರೋಧಕ ಶಕ್ತಿಯು ಹೆಚ್ಚಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ವ್ಯಕ್ತಿಯ ದೇಹದಲ್ಲಿ ಲಾಭದಾಯಕ ಪರಿವರ್ತನೆ ಆಗುತ್ತದೆ. ಆದ್ದರಿಂದ ನಮ್ಮ ಮುಖವು ಯಾವಾಗಲು ನಗುಮುಖವಾಗಿರಬೇಕು.
ಉ. ನಗುವುದರಿಂದ ವ್ಯಕ್ತಿಯ ದೇಹದಲ್ಲಿನ ‘ಕ್ಯಾಲೋರಿಗಳು’ ಬಳಸಲ್ಪಡುವುದರಿಂದ ವ್ಯಕ್ತಿಯ ರಕ್ತದೊತ್ತಡ ಕಡಿಮೆಯಾಗುತ್ತದೆ.
ಊ. ‘ನಗುವುದು’ ಇದು ಅನೇಕ ರೋಗಗಳಿಗೆ ಗುಣಕಾರಿ ಔಷಧಿಯಾಗಿದೆ. ಮುಕ್ತವಾಗಿ ಮತ್ತು ಮನಃಪೂರ್ವಕವಾಗಿ ನಗುವುದರಿಂದ ದೇಹದಲ್ಲಿ ‘ಎನ್ಡ್ರೋಫ್ರಿನ್ಸ್ ಹಾರ್ಮೋನ್ಸ್’ಗಳು ಸಕ್ರಿಯವಾಗುತ್ತವೆ. ಆದ್ದರಿಂದ ತಿನ್ನುವ ಇಚ್ಛೆ ಅಥವಾ ಲಾಲಸೆಯು ನಿಯಂತ್ರಣದಲ್ಲಿರುತ್ತದೆ.
ಎ. ವ್ಯಕ್ತಿಯು ಆನಂದದಲ್ಲಿರುವುದರಿಂದ ಅವನ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡುವ ವ್ಯವಸ್ಥೆ ಸಕ್ಷಮವಾಗುತ್ತದೆ. ಇದರಿಂದ ವಿವಿಧ ಸೊಂಕುಗಳು ಮತ್ತು ‘ಅಲರ್ಜಿ’ಗಳಂತಹ ರೋಗಗಳಿಂದ ಅವನ ರಕ್ಷಣೆಯಾಗುತ್ತದೆ. ಅವನು ‘ಅಲರ್ಜಿ’ ಯಂತಹ ರೋಗಗಳಿಗೆ ತುತ್ತಾಗುವುದಿಲ್ಲ.
ಐ. ಒಂದು ಸಂಶೋಧನೆಗನುಸಾರ ೧೦ ನಿಮಿಷ ವ್ಯಾಯಾಮ ಮಾಡಿದರೆ ಹೃದಯದ ಬಡಿತವು ಎಷ್ಟು ತೀವ್ರವಾಗುತ್ತದೆಯೋ, ಅಷ್ಟು ಹೃದಯದ ಬಡಿತವನ್ನು ಕಾಯ್ದುಕೊಳ್ಳಲು ಒಂದು ನಿಮಿಷ ನಕ್ಕರೂ ಸಾಕಾಗುತ್ತದೆ.
ಓ. ವ್ಯಕ್ತಿಯು ನಗುತ್ತಿರುವಾಗ ಆ ವ್ಯಕ್ತಿಯ ದೇಹ, ಮನಸ್ಸು, ಭಾವನೆಗಳು ಮತ್ತು ವಿಚಾರಗಳು ಏಕರೂಪವಾಗುತ್ತವೆ. ಅವನ ದೇಹದ ಕಂಪನದಲ್ಲಿ ಒಂದು ಲಯಬದ್ಧತೆ ಬರುತ್ತದೆ.
ಔ. ಭಗವಂತನ ನಾಮಸ್ಮರಣೆ ಮಾಡುತ್ತ ನಗುವ ವ್ಯಕ್ತಿಯ ದೇಹದಲ್ಲಿ ಲಾಭದಾಯಕ ಹಾರ್ಮೋನ್ಸ್‌ಗಳು ಸಿದ್ಧವಾಗುತ್ತವೆ. ಮುಗ್ಧ ಮತ್ತು ನಿಷ್ಕಪಟ ನಗುವಿನಿಂದ ಬೇರೆ ‘ಹಾರ್ಮೋನ್ಸ್’ಗಳು ಸ್ರವಿಸಿ ಅವು ನೊವು ನಿವಾರಕವಾಗಿ ಕಾರ್ಯ ಮಾಡುತ್ತವೆ. ಅವು ‘ಅಲರ್ಜಿ’ಯ ಮೇಲೆ ಚಿಕಿತ್ಸೆ ಮಾಡುತ್ತವೆ ಮತ್ತು ಅನೇಕ ರೋಗಗಳಿಂದ ನಮ್ಮನ್ನು ಮುಕ್ತಗೊಳಿಸುತ್ತವೆ.
ಅಂ. ಓರ್ವ ಆಧುನಿಕ ವೈದ್ಯರು, ‘ಗಹಗಹಿಸಿ ನಗುವುದರಿಂದ ಮತ್ತು ಮನಸ್ಸನ್ನೂ ಯಾವಾಗಲೂ ಪ್ರಸನ್ನವಾಗಿಡುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಕ್ಷಮವಾಗಿರುತ್ತದೆ. ರಕ್ತಕಣಗಳು ಹೆಚ್ಚುತ್ತವೆ. ನರಮಂಡಲವು ತಾಜಾ ಮತ್ತು ಕಾರ್ಯಕ್ಷಮವಾಗಿರುತ್ತದೆ. ಇದರಿಂದ ಮನುಷ್ಯನು ಆರೋಗ್ಯವಾಗಿರಲು ಸಹಾಯವಾಗುತ್ತದೆ. ಅವನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿ ಅವನು ಯಾವಾಗಲೂ ಪ್ರಸನ್ನನಾಗಿರುತ್ತಾನೆ’, ಎಂದು ಹೇಳಿದ್ದಾರೆ.
– ಶ್ರೀ. ಅಶೋಕ ಲಿಮಕರ (ವಯಸ್ಸು ೭೪ ವರ್ಷ), ಸನಾತನ ಆಶ್ರಮ, ದೇವದ, ಪನವೇಲ. (೧೨.೫.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು