ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದಲ್ಲಿ ಅನುಭವಿಸಿದ ‘ಸನಾತನ ಪ್ರಭಾತ’ದ ಜನಪ್ರಿಯತೆ !

ಶ್ರೀಕ್ಷೇತ್ರ ಅಯೋಧ್ಯೆ ಧಾಮದಲ್ಲಿ ೨೨ ಜನವರಿ ೨೦೨೪ ರಂದು ನೂತನ ಶ್ರೀರಾಮಮಂದಿರದಲ್ಲಿ ಆದ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಈ ಭೂತಲದಲ್ಲಿ ‘ನ ಭೂತೋ, ನ ಭವಿಷ್ಯತಿ’, ಎಂಬುದಾಗಿತ್ತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪೆಯಿಂದ ಈ ಸಮಾರಂಭದ ಬಗ್ಗೆ ನೇರ ವರದಿ ಮಾಡುವಾಗ ನನಗೆ ಮತ್ತು ಶ್ರೀ. ಪ್ರೀತಮ ನಾಚಣಕರ ಇವರಿಗೆ ‘ಸನಾತನ ಪ್ರಭಾತ?ದ ಜನಪ್ರಿಯತೆಯ ಬಗ್ಗೆ ಬಂದ ಅನುಭವವನ್ನು ಇಲ್ಲಿ ಕೊಡುತ್ತಿದ್ದೇನೆ.

ಸಂಕಲನ : ಶ್ರೀ. ನೀಲೇಶ ಕುಲಕರ್ಣಿ, ವಿಶೇಷ ಪ್ರತಿನಿಧಿ, ಸನಾತನ ಪ್ರಭಾತ

ಪ.ಪೂ. ಈಶ್ವರಬುವಾ ರಾಮದಾಸಿ

೧. ಸಂತರಿಗೆ ‘ಸನಾತನ ಪ್ರಭಾತ’ದ ಬಗ್ಗೆ ಇರುವ ಆತ್ಮೀಯತೆ !

೧ ಅ. ಸಾಂಗಲಿಯ ಸಂತ ಪ.ಪೂ. ಈಶ್ವರಬುವಾ ರಾಮದಾಸಿಯವರಿಗೆ ‘ಸನಾತನ ಪ್ರಭಾತ’ವು ಅಯೋಧ್ಯೆಯಲ್ಲಿಯೂ ಇರುವುದನ್ನು ನೋಡಿ ತುಂಬಾ ಆನಂದವಾಗುವುದು : ‘ಸನಾತನ ಪ್ರಭಾತ’ವು ಸದೈವ ಸಂತರ ಆಶೀರ್ವಾದ ಪಡೆದ ಏಕೈಕ ನಿಯತಕಾಲಿಕೆಯಾಗಿದೆ. ಇದರ ಬಗ್ಗೆ ನಮಗೆ ಪ್ರತ್ಯಕ್ಷ ಅನುಭೂತಿ ಅಯೋಧ್ಯೆಯಲ್ಲಿ ಬಂದಿತು. ನಾವು ಅಯೋಧ್ಯೆಯಲ್ಲಿನ ಪ್ರಸಿದ್ಧ ಲತಾ ಚೌಕಿನಲ್ಲಿ ವರದಿಗಾಗಿ ಹೋದಾಗ ಅಲ್ಲಿ ಸಾಂಗಲಿಯ ಸಂತ ಪ.ಪೂ. ಈಶ್ವರಬುವಾ ರಾಮದಾಸಿಯವರು ನಮಗೆ ಆಕಸ್ಮಿಕವಾಗಿ ಭೇಟಿಯಾದರು. ಈ ಹಿಂದೆ ನಾನು ಅವರನ್ನು ಎಂದಿಗೂ ಪ್ರತ್ಯಕ್ಷ ನೋಡಿರಲಿಲ್ಲ. ಆದರೂ ಅವರ ಉಡುಪು ನೋಡಿ ‘ಅವರು ಮಹಾರಾಷ್ಟ್ರದವರಿದ್ದಾರೆ’, ಎಂದು ಗಮನಕ್ಕೆ ಬಂದಿತು. ನಾವು ಅವರಲ್ಲಿ ಮಾತನಾಡುವಾಗ ಕೈಯಲ್ಲಿ ‘ಸನಾತನ ಪ್ರಭಾತ’ದ ‘ಮೈಕ್” ಇತ್ತು. ಆ ‘ಮೈಕ್‌ನ್ನು ನೋಡಿಯೇ ಅವರಿಗೆ ‘ನಾವು ಸನಾತನದವರು’ ಎಂದು ತಿಳಿಯಿತು ಮತ್ತು ಅವರಿಗೆ ತುಂಬಾ ಆನಂದವಾಯಿತು.

ರಾಮ ಭಕ್ತರನ್ನು ಸಂದರ್ಶಿಸುತ್ತಿರುವ ಶ್ರೀ. ನಿಲೇಶ ಕುಲಕರ್ಣಿ

ಜನರು ‘ಸನಾತನ ಪ್ರಭಾತ’ವು ಗೊತ್ತಿದೆ’, ಎನ್ನುವುದು

ನಾವು ಅನೇಕ ಸಂತರು, ಹಿಂದುತ್ವನಿಷ್ಠರು, ಗಣ್ಯರು ಮುಂತಾದವರ ಅಭಿಪ್ರಾಯ ತೆಗೆದುಕೊಂಡೆವು. ಆಗ  ಅನೇಕರು ‘ಸನಾತನ ಪ್ರಭಾತ’ದ ‘ಮೈಕ್‌ನ್ನು ನೋಡಿ ನಮ್ಮ ಬಳಿ ಬಂದರು ಮತ್ತು ‘ಸನಾತನ ಪ್ರಭಾ’ವು ನಮಗೆ ಗೊತ್ತಿದೆ’, ಎಂದು ಅವರು ಆತ್ಮೀಯತೆಯಿಂದ ಹೇಳಿದರು. ಆ ಸಮಯದಲ್ಲಿ ಅವರ ಮುಖದ ಮೇಲೆ ‘ತಮ್ಮವರೇ ಭೇಟಿಯಾಗಿದ್ದಾರೆ?, ಎಂಬ ಭಾವವು ಕಾಣಿಸುತ್ತಿತ್ತು.

– ಶ್ರೀ. ನೀಲೇಶ ಕುಲಕರ್ಣಿ

ಅವರು ತುಂಬಾ ಉತ್ಸಾಹದಿಂದ ”ಅರೆ ವ್ಹಾ, ‘ಸನಾತನ ಪ್ರಭಾತ’ವು ಇಲ್ಲಿಯೂ ಇದೆ. ತುಂಬಾ ಒಳ್ಳೆಯದು” ಎಂದು ಹೇಳಿದರು. ಅನಂತರ ಅವರು ತಮ್ಮ ಪರಿಚಯ ಮಾಡಿಕೊಟ್ಟ ನಂತರ ‘ಈ ಸಂತರು ನಮಗೆ ತುಂಬಾ ಹತ್ತಿರದವರಾಗಿದ್ದಾರೆ’, ಎಂಬ ವಿಚಾರ ಬಂದು ತುಂಬಾ ಆನಂದವಾಯಿತು. ‘ಸನಾತನ ಪ್ರಭಾತ” ದಲ್ಲಿ ಇದುವರೆಗೆ ಪ್ರಕಟಿಸಲಾದ ಅವರ ಆಶೀರ್ವಾದ, ಪ್ರತಿಕ್ರಿಯೆ, ಸಮಾಚಾರ ಇತ್ಯಾದಿಗಳೆಲ್ಲವೂ ಒಂದೇ ಕ್ಷಣದಲ್ಲಿ ಕಣ್ಣುಮುಂದೆ ಹಾದು ಹೋದವು ಮತ್ತು ಅವರ ಬಗ್ಗೆ ತುಂಬಾ ಕೃತಜ್ಞತೆ ಮತ್ತು ಆತ್ಮೀಯತೆ ಅನಿಸಿತು. ಪ.ಪೂ. ಈಶ್ವರಬುವಾ ರಾಮದಾಸಿ ಇವರೊಂದಿಗೆ ಅವರ ಕೆಲವು ಭಕ್ತರೂ ಇದ್ದರು. ಅನಂತರ ನಾವು ಅವರ ಅಭಿಪ್ರಾಯಗಳನ್ನು ತೆಗೆದುಕೊಂಡೆವು. ಆ ಸಮಯದಲ್ಲಿ ಅವರು ಮಾಡಿದ ಪ್ರತ್ಯಕ್ಷ ಕಾರಸೇವೆಯ ಅನುಭವವನ್ನು ಹೇಳುವಾಗ ಅವರ ಕಣ್ಣುಗಳಲ್ಲಿ ಭಾವಾಶ್ರುಗಳು ಬಂದವು ಮತ್ತು ಮನಸ್ಸಿನಲ್ಲಿ ಶ್ರೀರಾಮಮಂದಿರದ ಕನಸು ಪೂರ್ಣಗೊಂಡಿರುವುದರಿಂದ ಕೃತಜ್ಞತೆಯ ಭಾವ ಇತ್ತು !

ಶ್ರೀ. ನಿಲೇಶ ಕುಲಕರ್ಣಿ

೧ ಆ. ಅಯೋಧ್ಯೆಯಲ್ಲಿನ ತಪಸ್ವಿ ಛಾವಣಿಯ ಪೀಠಾಧೀಶ್ವರರಾದ ಜಗದ್ಗುರು ಮಹಂತ ಪರಮಹಂಸಾಚಾರ್ಯಜಿ ಮಹಾರಾಜರು ‘ಸನಾತನ ಪ್ರಭಾತ’ದ ಮೈಕ್ನ್ನು ನೋಡಿ ಸಂತೋಷದಿಂದ ಪ್ರತಿಕ್ರಿಯೆ ನೀಡುವುದು : ಒಮ್ಮೆ ಅಯೋಧ್ಯೆಯಲ್ಲಿನ ‘ರಾಮ ಕಿ ಪೈಡಿ’ ಎಂಬ ಪರಿಸರದಲ್ಲಿ ವರದಿ ಮಾಡುವಾಗ ಅಯೋಧ್ಯೆಯ ತಪಸ್ವಿ ಛಾವಣಿಯ ಮಹಂತ ಪೀಠಾಧೀಶ್ವರ ಜಗದ್ಗುರು ಮಹಂತ ಪರಮಹಂಸಾಚಾರ್ಯಜಿ ಮಹಾರಾಜರೊಂದಿಗೆ ಭೇಟಿ ಆಯಿತು. ಆಗ ನನ್ನ ಕೈಯಲ್ಲಿನ ‘ಸನಾತನ ಪ್ರಭಾತ’ ‘ಮೈಕ್‌ನ್ನು ನೋಡಿದ ಕೂಡಲೇ ಅವರು ಸಂತೊಷದಿಂದ ‘ಸನಾತನ ಪ್ರಭಾತ !    ನಾನು ನಿಮ್ಮನ್ನು (‘ಸನಾತನ ಪ್ರಭಾತ’ವನ್ನು) ಚೆನ್ನಾಗಿ ಬಲ್ಲೆ’, ಎಂದು ಹೇಳಿದರು. ಇದರೊಂದಿಗೆ ಅವರು ಕೆಲವು ಸಾಧಕರ ಪರಿಚಯವನ್ನು ಹೇಳಿದರು. ಆ ಸಮಯದಲ್ಲಿ ಇತರ ಕೆಲವು ವರದಿಗಾರರ ಪ್ರತಿನಿಧಿಗಳು ಅವರ ಅಭಿಪ್ರಾಯಗಳನ್ನು ತೆಗೆದುಕೊಳ್ಳಲು ನಿಂತಿದ್ದರು. ನಾವು ಕೂಡ ಅವರ ಅಭಿಪ್ರಾಯಗಳನ್ನು ತೆಗೆದುಕೊಂಡೆವು. ಅನಂತರ ಅವರು ತಾವಾಗಿ ‘ನನಗೆ ಕೇವಲ ‘ಸನಾತನ ಪ್ರಭಾತ’ಕ್ಕಾಗಿ ವಿಶೇಷ ಅಭಿಪ್ರಾಯಗಳನ್ನು ಕೊಡಲಿಕ್ಕಿದೆ?, ಎಂದು ಹೇಳಿ ಕೊಟ್ಟರು. ಅನಂತರ ಅವರು ಪುನಃ ‘ನನಗೆ ಜನತೆಗಾಗಿ ಇನ್ನೊಂದು ಕರೆ ನೀಡಬೇಕಿದೆ?, ಎಂದು ಹೇಳಿ ‘ಕ್ಯಾಮೆರಾ ಆನ್‌ ಮಾಡಲು ಹೇಳಿದರು. ಆ ಸಮಯದಲ್ಲಿ ಅವರು ‘ಎಲ್ಲರೂ ‘ಸನಾತನ ಪ್ರಭಾತ’ದ ‘ಯುಟ್ಯೂಟ್‌ ಚಾನಲ್‌ನ್ನು ಆವಶ್ಯವಾಗಿ ನೋಡಬೇಕು’, ಎಂದು ಕರೆ ನೀಡಿದರು.

೨. ಓರ್ವ ಅರ್ಚಕರೂ ‘ಸನಾತನ ಪ್ರಭಾತ’ದ ‘ಮೈಕ್‌ನ್ನು ನೋಡಿ ತಾವಾಗಿಯೇ ಉತ್ಸಾಹದಿಂದ ಮಹತ್ವದ ಸುದ್ದಿಯನ್ನು ನೀಡುವುದು

೨೨ ಜನವರಿಯಂದು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವು ಮುಗಿದ ನಂತರ ಅದೇ ದಿನ ಸಾಯಂಕಾಲ ಎಲ್ಲ ಪತ್ರಕರ್ತರಿಗಾಗಿ ದೇವಸ್ಥಾನದಲ್ಲಿ ದರ್ಶನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಗ ಓರ್ವ ಅರ್ಚಕರು ‘ಸನಾತನ ಪ್ರಭಾತ’ದ ‘ಮೈಕ್‌ನ್ನು ನೋಡಿ ಅಷ್ಟೊಂದು ಜನಸಂದಣಿಯಿದ್ದರೂ ತಾವಾಗಿಯೇ ನಮ್ಮ ಬಳಿ ಬಂದು ‘ಅವರು ನನಗೆ ‘ಸನಾತನ ಪ್ರಭಾ”ವು ಗೊತ್ತಿದೆ?, ಎಂದು ಹೇಳಿದರು. ಅನಂತರ ನಾವು ಅವರ ಪರಿಚಯ ಮಾಡಿಕೊಂಡೆವು, ಆಗ ಅವರು ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ಹಿಂದಿನ ದಿನದ ವಿಧಿಯಲ್ಲಿ ಪಾಲ್ಗೊಂಡಿರುವ ಬಗ್ಗೆ ಹೇಳಿದರು. ಆ ವಿಧಿಗಳ ಸಮಯದಲ್ಲಿ ಏನೇನು ನಡೆಯಿತು ? ಅದು ಹೇಗೆ ನೆರವೇರಿತು ’? ಎಂಬುದರ ಬಗ್ಗೆ ನಮಗಾಗಿ ಸುದ್ದಿ ಇತ್ತು. ಆಗ ನಾವು ದೇವಸ್ಥಾನದಲ್ಲಿಯೇ ಅವರ ವಿಶೇಷ ಅಭಿಪ್ರಾಯವನ್ನು ತೆಗೆದುಕೊಂಡೆವು.

‘ಸನಾತನ ಪ್ರಭಾ’ದ ‘ಯು ಟ್ಯೂಬ್‌’ ಚಾನಲ್‌ ಬಗ್ಗೆ ನಾಶಿಕದ ಶ್ರೀ ಕಾಳಾರಾಮ ದೇವಸ್ಥಾನದ ಮಹಂತ ಸುಧೀರದಾಸಜಿ ಮಹಾರಾಜರಿಂದ ಮೆಚ್ಚುಗೆ

ಜಗದ್ಗುರು ಮಹಂತ ಸುಧೀರದಾಸಜಿ ಮಹಾರಾಜರು

ನಾಶಿಕದ ಪ್ರಸಿದ್ಧವಾದ ಶ್ರೀ ಕಾಳಾರಾಮ ದೇವಸ್ಥಾನದ ಮಹಂತ ಸುಧೀರದಾಸಜಿ ಮಹಾರಾಜರು ಕೂಡ ನಮಗೆ ಶ್ರೀರಾಮಮಂದಿರದ ಪ್ರವೇಶದ್ವಾರದಲ್ಲಿಯೇ ಭೇಟಿ ಯಾದರು. ಅವರಿಗೆ ನಾವು ಅವರ ಅಭಿಪ್ರಾಯಯನ್ನು ತೆಗೆದುಕೊಳ್ಳುವ ಬಗ್ಗೆ ಕೇಳಿದಾಗ, ಅವರು ‘ಸನಾತನ ಪ್ರಭಾತ’ದ ‘ಯು ಟ್ಯೂಬ್‌’ ಚಾನೆಲ್‌ ಅನ್ನು ಪ್ರಶಂಸಿಸಿದರು.

೩. ‘ಸನಾತನ ಪ್ರಭಾತ’ದ ಬಗ್ಗೆ ನ್ಯಾಯವಾದಿ ಮದನ ಮೋಹನ ಯಾದವ ಅವರಲ್ಲಿರುವ ವಿಲಕ್ಷಣ ಭಾವ !

ನ್ಯಾಯವಾದಿ ಮದನ ಮೋಹನ ಯಾದವ

ನಾವು ಅಯೋಧ್ಯೆಯಿಂದ ವಾರಾಣಸಿಗೆ (ಕಾಶಿಗೆ) ಬಂದೆವು. ಆಗ ವಾರಾಣಸಿಯ ನ್ಯಾಯಾಲಯದಲ್ಲಿ ಜ್ಞಾನವಾಪಿ ಪ್ರಕರಣದ ವಿಚಾರಣೆ ನಡೆದಿತ್ತು. ಆ ವಿಚಾರಣೆಯಲ್ಲಿ ಜ್ಞಾನವಾಪಿಯ ಗರ್ಭಗೃಹದಲ್ಲಿ ಹಿಂದೂಗಳಿಗೆ ಪೂಜೆಯ ಅಧಿಕಾರ ನೀಡುವ ಐತಿಹಾಸಿಕ ತೀರ್ಪು ಬಂತು. ನಾವು ಅಲ್ಲಿ ಹೋಗಿ ವರದಿ ಮಾಡಲು ನಿರ್ಧರಿಸಿದೆವು; ಆದರೆ ಬೇರೆ ಪ್ರದೇಶ, ಯಾರು ಪರಿಚಯದವರಿಲ್ಲ, ಯಾವ ನ್ಯಾಯವಾದಿಗಳು ಎಲ್ಲಿ ಕುಳಿತುಕೊಳ್ಳುತ್ತಾರೆ ? ಎಂಬುದು ಗೊತ್ತಿರಲಿಲ್ಲ. ಓರ್ವ ಸಾಧಕನು ನಮಗೆ ‘ನ್ಯಾಯವಾದಿ ಮದನ ಮೋಹನ ಯಾದವ ಇವರನ್ನು ಭೇಟಿ ಮಾಡಬಹುದು’, ಎಂದು ಹೇಳಿದನು. ಅವರ ಭೇಟಿಗಾಗಿ ನಾವು ನ್ಯಾಯಾಲಯಕ್ಕೆ ತಲುಪಿದೆವು. ‘ಅಷ್ಟೊಂದು ಜನಸಂದಣಿಯಲ್ಲಿ ಅವರನ್ನು ಹೇಗೆ ಗುರುತಿಸುವುದು’?, ಎಂಬ ಪ್ರಶ್ನೆಯಾಗಿತ್ತು. ಅವರು ‘ಎಲ್ಲ ನ್ಯಾಯವಾದಿಗಳಲ್ಲಿ ಯಾರು ಕಪ್ಪು ಕೋಟು ತಲೆಯ ಮೇಲೆ ವಾರಕರಿಗಳಂತೆ ಬಿಳಿ ಟೊಪ್ಪಿಗೆಯನ್ನು ಹಾಕಿದ್ದಾರೆಯೋ, ಅವನೇ ನಾನು?, ಎಂದು ತಮ್ಮ ಪರಿಚಯವನ್ನು ಮಾಡಿಕೊಟ್ಟರು ಮತ್ತು ನಮಗೆ ಅವರನ್ನು ತಕ್ಷಣ ಗುರುತಿಸಲು ಸಾಧ್ಯವಾಯಿತು.

ಅವರು ‘ನಾನು ಸಂತ ಜ್ಞಾನೇಶ್ವರರ ಭಕ್ತನಾಗಿರುವುದರಿಂದ ಬಿಳಿ ಟೊಪ್ಪಿಯನ್ನು ಹಾಕುತ್ತೇನೆ’, ಎಂದು ಹೇಳಿದರು. ಆದ್ದರಿಂದ ನಮಗೆ ಅವರ ಬಗ್ಗೆ ಇನ್ನೂ ಆತ್ಮೀಯತೆ ಅನಿಸಿತು. ಅವರಿಗೆ ‘ಸನಾತನ ಪ್ರಭಾ”ದ ಬಗ್ಗೆ ಮೊದಲೇ ತಿಳಿದಿತ್ತು. ಅದರಲ್ಲಿ ಅವರು ‘ಸನಾತನ ಪ್ರಭಾತ’ದ ಯು ಟ್ಯೂಬ್‌ ಚಾನಲ್‌ ಇದೆ. ನಾವು ಈ ವಿಚಾರಣೆಯ ವರದಿಗಾಗಿ ಇಷ್ಟೊಂದು ದೂರ ಬಂದಿದ್ದೇವೆ’, ಎಂಬುದರ ಬಗ್ಗೆ ತುಂಬಾ ಮೆಚ್ಚುಗೆ ಉಂಟಾಯಿತು. ಅವರ ಮುಖದ ಮೇಲೆ ‘ಸನಾತ’ದ ಬಗ್ಗೆ ವಿಲಕ್ಷಣ ಭಾವ ಕಾಣುತ್ತಿತ್ತು. ಇದರಿಂದ ನಮ್ಮ ನಡುವೆ ತಕ್ಷಣವೇ ಒಂದು ವಿಶಿಷ್ಟವಾದ ಸಂಬಂಧ ಬೆಳೆಯಿತು. ಇದರಲ್ಲಿ ವರಿಷ್ಠ ನ್ಯಾಯವಾದಿಗಳ ಪರಿಚಯ ಮಾಡಿಸಿಕೊಡುವುದು, ವಿವಿಧ ಸ್ಥಳೀಯ ಪತ್ರಕರ್ತರ ಪರಿಚಯ ಮಾಡಿಸಿಕೊಡುವುದು, ಹಿಂದುತ್ವನಿಷ್ಠರ ಭೇಟಿಯನ್ನು ಮಾಡಿಸುವುದು, ಅಷ್ಟೇ ಅಲ್ಲದೇ, ಸುದ್ದಿಯಲ್ಲಿನ ಸೂಕ್ಷ್ಮ ಅಂಶಗಳನ್ನು ಹೇಳುವುದು, ಇವೆಲ್ಲವನ್ನು ಅವರು ಆನಂದದಿಂದ ಮಾಡಿದರು. ವಾಸ್ತವದಲ್ಲಿ ನ್ಯಾಯವಾದಿ ಮದನ ಮೋಹನ ಯಾದವ ಇವರು ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂಗಳ ಪಕ್ಷವನ್ನು ತಳಮಳದಿಂದ ಮಂಡಿಸುವ ಹಿರಿಯ ನ್ಯಾಯವಾದಿಗಳಾಗಿದ್ದಾರೆ, ಆದರೂ ಅವರು ಆ ಮಹತ್ವದ ದಿನದಂದು ಪೂರ್ತಿ ಸಮಯ ನಮ್ಮೊಂದಿಗೆ ಇದ್ದು ನಮಗೆ ಸುದ್ದಿಗಾಗಿ ಎಲ್ಲ ರೀತಿಯಲ್ಲಿ ಸಹಾಯ ಮಾಡಿದರು. ಆದ್ದರಿಂದ ಹಿಂದೂಗಳ ವಿಜಯದ ಸುದ್ದಿಯನ್ನು ನಮಗೆ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಲು ಸಾಧ್ಯವಾಯಿತು !

ವಿವಿಧ ಪ್ರಸಾರಮಾಧ್ಯಮಗಳ ಪ್ರತಿನಿಧಿಗಳು ‘ಸನಾತನ ಪ್ರಭಾತ’ದ ಬಗ್ಗೆ ಪ್ರೀತಿ ತೋರಿಸುವುದು

ದೇಶದ ನಾನಾ ಭಾಗಗಳಿಂದ ವಿವಿಧ ಪತ್ರಕರ್ತರು, ಛಾಯಾಚಿತ್ರಕಾರರು, ಸುದ್ದಿವಾಹಿನಿಗಳ ಪ್ರತಿನಿಧಿಗಳು, ಕ್ಯಾಮೆರಾಮೆನ್‌ಗಳು ಮುಂತಾದವರು ಅಯೋಧ್ಯೆಗೆ ಆಗಮಿಸಿದ್ದರು. ಅಲ್ಲಿನ ‘ಮಿಡಿಯಾ ಸೆಂಟರ್‌’ನಲ್ಲಿ ಅನೇಕ ಪತ್ರಕರ್ತರು, ಛಾಯಾಚಿತ್ರಕಾರರು, ಸುದ್ದಿವಾಹಿನಿಗಳ ಪ್ರತಿನಿಧಿಗಳು ಮುಂತಾದವರೊಂದಿಗೆ ನಮ್ಮ ಪರಿಚಯವಾಯಿತು. ಅವರಲ್ಲಿ ಅನೇಕ ಜನರು ‘ನಮಗೆ ‘ಸನಾತನ ಪ್ರಭಾತ’ವು ಗೊತ್ತಿದೆ’, ಎಂದು ಹೇಳಿದರು, ಇನ್ನು ಕೆಲವರು ಜಿಜ್ಞಾಸೆಯಿಂದ ‘ಸನಾತನ ಪ್ರಭಾತ’ದ ಬಗ್ಗೆ ನಮ್ಮಿಂದ ತಿಳಿದುಕೊಂಡರು. ಮಹಾರಾಷ್ಟ್ರ ರಾಜ್ಯದಲ್ಲಿನ ಕೆಲವು ಮರಾಠಿ ಪತ್ರಿಕೆಗಳು ಮತ್ತು ಸುದ್ದಿವಾಹಿನಿಗಳ ಪತ್ರಕರ್ತರು ‘ಸನಾತನ ಪ್ರಭಾತ’ದ ಮೈಕ್ನ್ನು ನೋಡಿದ ಕೂಡಲೇ ‘ಸನಾತನ ಪ್ರಭಾತ’ ಅಯೋಧ್ಯೆಗೂ ತಲುಪಿತು. ಒಳ್ಳೆಯದಿದೆ. ‘ಯು ಟ್ಯೂಬ್‌’ಚಾನಲ್‌ನ್ನು ಪ್ರಾರಂಭಿಸುವುದು ಕಾಲಕ್ಕೆ ಆವಶ್ಯಕವಾಗಿದೆ’, ಎಂದು ಸಂತೋಷದಿಂದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅವರ ಈ ಅರ್ಥಪೂರ್ಣ ಪ್ರತಿಕ್ರಿಯೆಯು ಒಂದು ಆಶ್ಚರ್ಯಕರ ಮತ್ತು ಸಂತೋಷಕರ ವಿಷಯವಾಗಿತ್ತು. ಅನೇಕ ಪತ್ರಕರ್ತರು ಸನಾತನದ ಅನೇಕ ಸಾಧಕರ ಹೆಸರುಗಳನ್ನು ಹೇಳಿ ಅವರು ಆ ಸಾಧಕರ ಪರಿಚಯಸ್ಥರು ಎಂದೂ ಹೇಳಿದರು. ಅವರೆಲ್ಲರಲ್ಲಿ ‘ಸನಾತನ ಪ್ರಭಾತ’ದ ಬಗ್ಗೆ ಆತ್ಮೀಯತೆ ಮತ್ತು ಪ್ರೀತಿ ಇರುವುದು ಕಂಡುಬಂದಿತು.
‘ಮಿಡಿಯಾ ಸೆಂಟರ್‌’ನಲ್ಲಿ ನಾವು ಸುದ್ದಿಗಳನ್ನು ಬೆರಳಚ್ಚು ಮಾಡುತ್ತಿದ್ದಾಗ, ಉತ್ತರಪ್ರದೇಶದ ರಾಜ್ಯದ ಓರ್ವ ಪತ್ರಕರ್ತರು ನಮ್ಮ ಬಳಿ ಬಂದರು ಮತ್ತು ತಾವಾಗಿಯೇ ನಮ್ಮ ಪರಿಚಯವನ್ನು ಮಾಡಿಸಿಕೊಂಡರು. ಆಗ ಅವರು, ”ನಾನು ದೂರದಿಂದ ನೋಡುತ್ತಿದ್ದೇನೆ. ನಿಮ್ಮನ್ನು ನೋಡಿದಾಗ ಮತ್ತು ನಿಮ್ಮ ಉಡುಪುಗಳನ್ನು ನೋಡಿದಾಗ ‘ನೀವು ಇತರರಿಗಿಂತ ಭಿನ್ನರಾಗಿದ್ದೀರಿ’, ಎಂದು ನನಗೆ ಅರಿವಾಯಿತು. ಆದ್ದರಿಂದ ನಾನು ನಿಮ್ಮೊಂದಿಗೆ ಮಾತನಾಡಲು ಬಂದೆನು,’’

೪. ಕೃತಜ್ಞತೆ

‘ಸನಾತನ ಪ್ರಭಾತ’ದ ಹೆಸರನ್ನು ಕೇಳಿ ಅಥವಾ ‘ಮೈಕ್‌ನ್ನು ನೋಡಿ ಮೇಲಿನ ಎಲ್ಲರಿಗೂ ಆನಂದವಾಗಿರುವುದನ್ನು ನೋಡಿ ‘ಸನಾತನ ಪ್ರಭಾತ’ದ ಹೆಸರಿನಲ್ಲಿಯೇ ಸಾಮಥ್ಯರ್ವಿದೆ ಎಂದು ಅರಿವಾಯಿತು ಮತ್ತು ‘ನಾವು ಏನು ಮಾಡಲು ಸಾಧ್ಯವಿಲ್ಲ, ಎಲ್ಲವೂ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಕೃಪಾಶೀರ್ವಾದದಿಂದಲೇ ನಡೆಯುತ್ತಿದೆ’, ಎಂಬುದು ಅರಿವಾಯಿತು. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರೇ ನಮಗೆ ಈ ಮರೆಯಲಾರದಂತಹ ಸೇವೆಯ ಅವಕಾಶವನ್ನು ನೀಡಿದರು ಮತ್ತು ಅವರೇ ಅದನ್ನು ಮಾಡಿಸಿಕೊಂಡರು, ಅದಕ್ಕಾಗಿ ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !