
ಗುರುದೇವರು ‘ಸನಾತನ ಪ್ರಭಾತ’ದ ಸಂಸ್ಥಾಪಕ-ಸಂಪಾದಕರಾಗಿರುವುದು
ಸಂತರಿಗೆ ಕಾಲದ ಹೆಜ್ಜೆಗಳನ್ನು ನಿಖರವಾಗಿ ಗುರುತಿಸಲು ಬರುತ್ತದೆ. ಗುರುದೇವರು ದೂರ ದೃಷ್ಟಿಯಿಂದ ‘ಹಿಂದೂ ರಾಷ್ಟ್ರದ ಸ್ಥಾಪನೆ’ ಈ ಧ್ಯೇಯಕ್ಕಾಗಿ ಶ್ರಮಿಸುವ ‘ಸನಾತನ ಪ್ರಭಾತ’ಕ್ಕೆ ಅಡಿಪಾಯ ಹಾಕಿದರು. ಗುರುದೇವರು ೩೦ ಎಪ್ರಿಲ್ ೧೯೯೮ ರಂದು ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಆರಂಭಿಸಿದರು ಮತ್ತು ದೈನಿಕದ ಗೋವಾ-ಸಿಂಧುದುರ್ಗ ಆವೃತ್ತಿಯು ೪ ಎಪ್ರಿಲ್ ೧೯೯೯ ರಂದು ಆರಂಭವಾಯಿತು. ಸದ್ಯ ‘ಸನಾತನ ಪ್ರಭಾತ’ದ ‘ಮರಾಠಿ ದೈನಿಕದ ೪ ಆವೃತ್ತಿಗಳು (೧.’ಗೋವಾ-ಸಿಂಧುದುರ್ಗ’, ೨. ‘ಮುಂಬಯಿ, ಠಾಣೆ, ರಾಯಗಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭ’, ೩.’ಪಶ್ಚಿಮ ಮಹಾರಾಷ್ಟ್ರ ಮತ್ತು ಮರಾಠವಾಡಾ’ ಹಾಗೆಯೇ ೪.’ರತ್ನಾಗಿರಿ’ ಆವೃತ್ತಿ), ಮರಾಠಿ ಮತ್ತು ಕನ್ನಡ ಭಾಷೆಗಳ ಸಾಪ್ತಾಹಿಕ, ಹಾಗೆಯೇ ಹಿಂದಿ ಮತ್ತು ಆಂಗ್ಲ ಭಾಷೆಗಳ ಪಾಕ್ಷಿಕ’, ಈ ರೂಪಗಳಲ್ಲಿ ಪ್ರಕಾಶಿಸಲಾಗುತ್ತಿದೆ. ಗುರುದೇವರು ಸ್ವತಃ ಈ ನಿಯತಕಾಲಿಕೆಗಳ ಸಂಸ್ಥಾಪಕ-ಸಂಪಾದಕರಾಗಿದ್ದಾರೆ. ಅವರು ೧೯.೪.೨೦೦೦ ದ ವರೆಗೆ ‘ಸಂಸ್ಥಾಪಕ-ಸಂಪಾದಕ’ರೆಂದು ‘ಸನಾತನ ಪ್ರಭಾತ’ದ ಕಾರ್ಯವನ್ನು ನಿರ್ವಹಿಸಿದರು. ‘ಇಷ್ಟು ಉಚ್ಚ ಮಟ್ಟದ ಸಂತರು ಒಂದು ನಿಯತಕಾಲಿಕೆಯ ಸಂಸ್ಥಾಪಕ-ಸಂಪಾದಕರಾಗಿರುವುದು’, ಪತ್ರಿಕೋದ್ಯಮದ ಇತಿಹಾಸದಲ್ಲಿ ಏಕೈಕ ಘಟನೆಯಾಗಿರಬೇಕು !

‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸಾಧಕರು, ವಾಚಕರು ಮತ್ತು ಧರ್ಮಪ್ರೇಮಿಗಳನ್ನು ತಯಾರಿಸುವ ಗುರುದೇವರು !
ಗುರುದೇವರು ತಮ್ಮ ಕಾರ್ಯಕಾಲದಲ್ಲಿ ಸಂಪಾದಕೀಯ ಸೇವೆಯಲ್ಲಿ ನಿರತರಾದ ಸಾಧಕರಿಗೆ ರಾಷ್ಟ್ರನಿಷ್ಠ ಮತ್ತು ಧರ್ಮನಿಷ್ಠ ಪತ್ರಿಕೋದ್ಯಮವನ್ನು ಕಲಿಸಿದರು, ಹಾಗೆಯೇ ‘ಓದುಗರು ಪ್ರತಿಯೊಂದು ಘಟನೆಯನ್ನು ಸಮಾಜ, ರಾಷ್ಟ್ರ ಮತ್ತು ಧರ್ಮದ ಹಿತದ ದೃಷ್ಟಿಯಿಂದ ನೋಡಲು ಕಲಿಯಬೇಕು’, ಎಂಬ ವಿಚಾರವನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಿದರು. ‘ರಾಷ್ಟ್ರದ್ರೋಹಿಗಳು ಮತ್ತು ಧರ್ಮದ್ವೇಷಿಗಳ ಮೇಲೆ ಪ್ರಹಾರ, ಸಾಮಾಜಿಕ ದುಷ್ಪ್ರವೃತ್ತಿಗಳಿಗೆ ನಿರ್ಭೀತ ವಿರೋಧ ಮತ್ತು ತತ್ತ್ವನಿಷ್ಠೆ’ ಇವು ‘ಸನಾತನ ಪ್ರಭಾತ’ದ ಶಬ್ದಾಲಂಕಾರ ಮತ್ತು ಅರ್ಥಾಲಂಕಾರಗಳಾಗಿದ್ದು, ಇವುಗಳನ್ನು ಅವರೇ ತಯಾರಿಸಿದ್ದಾರೆ. ‘ಸನಾತನ ಪ್ರಭಾತ’ದ ವೈಶಿಷ್ಟ್ಯವೆಂದರೆ, ಲಕ್ಷಾಂತರ ಪ್ರಸಾರವಿರುವ ಇತರ ದಿನಪತ್ರಿಕೆಗಳ ಓದುಗರು ಮಾಡಲಾಗದ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕೆಲಸವನ್ನು ‘ಸನಾತನ ಪ್ರಭಾತ’ದ ಕೆಲವು ಸಾವಿರ ಓದುಗರು ಮಾಡುತ್ತಿದ್ದಾರೆ !
ಗುರುದೇವರ ಮಾರ್ಗದರ್ಶನದಿಂದಲೇ ಇಂದು ‘ಸನಾತನ ಪ್ರಭಾತ’ವು ಹಿಂದುತ್ವದ ಕಾರ್ಯವನ್ನು ಮಾಡುವವರಿಗೆ ದಿಶಾದರ್ಶಕವಾಗಿದೆ !
‘ಸನಾತನ ಪ್ರಭಾತ’ ಪತ್ರಿಕೋದ್ಯಮದ ಕೆಲವು ವೈಶಿಷ್ಟ್ಯಗಳು
‘ಸನಾತನ ಪ್ರಭಾತ’ ವನ್ನು ಪ್ರಕಟಿಸುವುದರ ಹಿಂದಿನ ಮುಖ್ಯ ಉದ್ದೇಶಗಳು
|
೧. ಆರ್ಥಿಕ ಹಾನಿ ಸಹಿಸಿಯೂ ಕಾರ್ಯನಿರತ : ಸಮಾಜಸಹಾಯ, ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಗಾಗಿ ಆರ್ಥಿಕ ನಷ್ಟವನ್ನು ಅನುಭವಿಸಿಯೂ ಕಾರ್ಯನಿರ್ವಹಿಸುವ ಏಕೈಕ ನಿಯತಕಾಲಿಕೆ ಎಂದರೆ ‘ಸನಾತನ ಪ್ರಭಾತ.
೨. ಹಿಂದುತ್ವನಿಷ್ಠರ ಆಂದೋಲನಗಳಿಗೆ ವೈಚಾರಿಕ ಬೆಂಬಲ ನೀಡುವುದು.
೩. ಹಿಂದೂಗಳ ಮೇಲಿನ ಆಘಾತಗಳನ್ನು ನಿರಂತರವಾಗಿ ಬಹಿರಂಗಪಡಿಸುವುದು : ಹಿಂದೂ ಧರ್ಮಶ್ರದ್ಧೆಗಳ ಭಂಜನ, ಹಾಗೆಯೇ ‘ಲವ್ ಜಿಹಾದ್’, ಚಿತ್ರಹಿಂಸೆ ನೀಡಿ-ಬಲಪೂರ್ವಕ-ಮೋಸದಿಂದ ಮಾಡಲಾಗುವ ಹಿಂದೂಗಳ ಮತಾಂತರ, ಹಿಂದುತ್ವನಿಷ್ಠರ ಹತ್ಯೆ ಇತ್ಯಾದಿ ಆಘಾತಗಳನ್ನು ‘ಸನಾತನ ಪ್ರಭಾತ’ ಜಗತ್ತಿನ ಮುಂದೆ ತೆರೆದಿಡುತ್ತದೆ.
೪. ಸುದ್ದಿಗಳಿಗೆ ದೃಷ್ಟಿಕೋನಾತ್ಮಕ ಸಂಪಾದಕೀಯ ಟಿಪ್ಪಣಿಗಳನ್ನು ನೀಡುವ ಅಭಿನವ ಪದ್ದತಿ : ‘ಸನಾತನ ಪ್ರಭಾತ’ದ ಸಂಪಾದಕರಾಗಿದ್ದಾಗ ಗುರುದೇವರು ಮುದ್ರಿತ ಸುದ್ದಿಗಳಿಗೆ (ವಾರ್ತೆಗಳಿಗೆ) ಸಮಾಜ, ರಾಷ್ಟ್ರ ಮತ್ತು ಧರ್ಮದ ಹಿತದೃಷ್ಟಿಯ ಸಂಪಾದಕೀಯ ಟಿಪ್ಪಣಿ ನೀಡುವ ಅಭಿನವ ಪದ್ದತಿಯನ್ನು ಮೊದಲ ಸಂಚಿಕೆಯಿಂದಲೇ ಪ್ರಾರಂಭಿಸಿದರು. ಅದರಿಂದಾಗಿ, ಸುದ್ದಿಗಳಿಗೆ ಸಂಪಾದಕೀಯ ದೃಷ್ಟಿಕೋನವನ್ನು ನೀಡುವ ‘ಸನಾತನ ಪ್ರಭಾತ’ ಜಗತ್ತಿನ ಏಕೈಕ ನಿಯತಕಾಲಿಕೆಯಾಗಿದೆ.
೫. ಓದುಗರನ್ನು ಕ್ರಿಯಾಶೀಲರನ್ನಾಗಿಸುವ ಲೇಖನಗಳು : ‘ಸನಾತನ ಪ್ರಭಾತ’ ದಲ್ಲಿ ಪ್ರಕಟಿಸಲಾಗುವ ಲೇಖನಗಳು ಮತ್ತು ಅಂಕಣಗಳು ‘ಓದುಗರ ಸಂಖ್ಯೆ ಹೆಚ್ಚಾಗಬೇಕು’ ಎಂಬ ಉದ್ದೇಶದಿಂದಲ್ಲ, ಬದಲಿಗೆ ‘ಓದುಗರ ವೈಯಕ್ತಿಕ ಮತ್ತು ಸಮಷ್ಟಿ ಸಾಧನೆ ಉತ್ತಮವಾಗಬೇಕು ಹಾಗೂ ಅವರಿಗೆ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯ ಮಾಡಲು ಮಾರ್ಗದರ್ಶನ ಸಿಗಬೇಕು? ಎಂಬ ಉದ್ದೇಶದಿಂದ ಇರುತ್ತವೆ.’ – ಪರಾತ್ಪರ ಗುರು ಡಾ. ಆಠವಲೆ (೪.೪.೨೦೧೭)
ಸಮಾಜ, ರಾಷ್ಟ್ರ ಮತ್ತು ಧರ್ಮಹಿತದ ದೃಷ್ಟಿಯನ್ನು ನೀಡುವ ಈ ನಿಯತಕಾಲಿಕೆಗಳಿಂದ ಪ್ರೇರಣೆ ಪಡೆದು ಅನೇಕರು ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯ ಹಾಗೂ ಸಾಧನೆಯನ್ನೂ ಮಾಡಲು ಪ್ರಾರಂಭಿಸಿದ್ದಾರೆ.
೬. ವ್ಯಂಗ್ಯಚಿತ್ರಗಳಲ್ಲ, ಬೋಧಚಿತ್ರಗಳು ! : ‘ಸನಾತನ ಪ್ರಭಾತ?ದಲ್ಲಿ ಪ್ರಕಟವಾಗುವ ಬೋಧಚಿತ್ರಗಳ ಮೂಲಕ ಗುರುದೇವರು ಮನೋರಂಜನಾತ್ಮಕ ವ್ಯಂಗ್ಯಚಿತ್ರಗಳಿಗಿಂತ ಸಮಾಜಕ್ಕೆ ರಾಷ್ಟ್ರ ಮತ್ತು ಧರ್ಮ ಹಿತದ ಬೋಧನೆ ನೀಡುವ ಚಿತ್ರಗಳ ಸಂಕಲ್ಪವನ್ನು ಪತ್ರಿಕೋದ್ಯಮದ ಜಗತ್ತಿನಲ್ಲಿ ಮೊದಲ ಬಾರಿಗೆ ಪರಿಚಯಿಸಿದರು.
೭. ಓದುಗರಿಗೆ ಸಾಧನೆಯನ್ನು ಮಾಡಲು ಪ್ರೇರೇಪಿಸುವ ಬರವಣಿಗೆಯ ಸಮಾವೇಶ : ‘ಸನಾತನ ಪ್ರಭಾತ?ದಲ್ಲಿನ ಶೇ. ೩೦ ರಷ್ಟು ಬರವಣಿಗೆಯು ಸಾಧನೆಗೆ ಸಂಬಂಧಿಸಿದ್ದಾಗಿರುವುದರಿಂದ, ಓದುಗರಿಗೆ ಅಧ್ಯಾತ್ಮದ ಪರಿಚಯವಾಗುತ್ತದೆ ಮತ್ತು ಕೆಲವರು ಸಾಧನೆ ಮಾಡಲು ಪ್ರಾರಂಭಿಸಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳುತ್ತಾರೆ.
೮. ನಿಷ್ಕಾಮ ಭಾವದಿಂದ ಸೇವೆ ಸಲ್ಲಿಸುವ ಸಾಧಕರು : ‘ಸನಾತನ ಪ್ರಭಾತ’ದ ವರದಿಗಾರರಿಂದ ಸಂಪಾದಕರ ವರೆಗೆ ಯಾರೂ ವೇತನ ಪಡೆಯುವುದಿಲ್ಲ. ‘ಹಿಂದುತ್ವನಿಷ್ಠ ವಿಚಾರಗಳ ನಿಯತಕಾಲಿಕೆಯನ್ನು ನಡೆಸುವುದು ಎಷ್ಟು ಕಠಿಣವಾಗಿದೆ !’ ಎಂಬುದನ್ನು ಯಾರಾದರೂ ಊಹಿಸಬಹುದು. ಗುರುದೇವರು ರೂಪಿಸಿದ ಸಾಧಕರಿಂದಾಗಿಯೇ ಕಳೆದ ೨೭ ವರ್ಷಗಳಿಂದ ಈ ನಿಯತಕಾಲಿಕೆಗಳು ನಡೆಯುತ್ತಿವೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ