
ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋದೇವಿ ದೇವಸ್ಥಾನವು ಸಂಪೂರ್ಣವಾಗಿ ಹಿಂದೂ ಭಕ್ತರ ದೇಣಿಗೆಗಳಿಂದ ನಡೆಯುತ್ತದೆ. ಅದರಿಂದಲೇ ೫೦೦ ಕೋಟಿ ರೂಪಾಯಿಗಳ ನಿಧಿಯಿಂದ ನಿರ್ಮಿಸಲಾದ ‘ಶ್ರೀ ಮಾತಾ ವೈಷ್ಣೋದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್’ ಎಂಬ ಕಾಲೇಜನ್ನು ಶ್ರದ್ಧಾಕೇಂದ್ರಿತ ಅಭಿವೃದ್ಧಿಯ ಒಂದು ಹೆಮ್ಮೆಯ ಉದಾಹರಣೆಯಾಗಿ ನೋಡಲಾಗುತ್ತಿತ್ತು; ಆದರೆ ವರ್ಷ ೨೦೨೫-೨೬ ರ ಪ್ರವೇಶಪಟ್ಟಿಯಿಂದಾಗಿ ವಿವಾದ ನಿರ್ಮಾಣವಾಗಿದೆ. ಪ್ರವೇಶಪಟ್ಟಿಗೆ ಆಯ್ಕೆಯಾದ ೫೦ ವಿದ್ಯಾರ್ಥಿಗಳ ಪೈಕಿ ೪೨ ಮುಸಲ್ಮಾನರು, ೭ ಹಿಂದೂಗಳು ಮತ್ತು ೧ ಸಿಕ್ಖ್ ಇದ್ದಾರೆ. ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್‌ಗೆ ಸಿಗುವ ನಿಧಿ ಸಂಪೂರ್ಣವಾಗಿ ಹಿಂದೂ ಭಕ್ತರದ್ದಾಗಿದೆ. ವಾಸ್ತವದಲ್ಲಿ ವೈಷ್ಣೋದೇವಿ ದೇವಸ್ಥಾನವು ಈ ನಿಧಿಯನ್ನು ದೇವಸ್ಥಾನಕ್ಕಾಗಿಯೇ ಬಳಸಬೇಕು. ಹೀಗಿರುವಾಗ ಹಿಂದೂ ದೇವಾಲಯದ ನಿಧಿಯಿಂದ ನಿರ್ಮಿಸಲಾದ ವೈದ್ಯಕೀಯ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಕೇವಲ ೭ ಸೀಟುಗಳು ಮತ್ತು ಮುಸಲ್ಮಾನ ವಿದ್ಯಾರ್ಥಿಗಳಿಗೆ ೪೨ ಸೀಟುಗಳನ್ನು ಯಾವ ಅಧಿಕಾರದಿಂದ ನೀಡಲಾಯಿತು ? ಈ ವಿಷಯವು ಕೇವಲ ಒಂದು ಘಟನೆಗೆ ಸೀಮಿತವಾಗಿಲ್ಲ, ಬದಲಾಗಿ ದೇವಾಲಯಗಳ ನಿಧಿಯ ಮೇಲೆ ಹೆಚ್ಚುತ್ತಿರುವ ಸರಕಾರದ ಹಿಡಿತ ಮತ್ತು ಹಿಂದೂಗಳ ದುರ್ಲಕ್ಷ್ಯದಿಂದಾಗಿ ಎಲ್ಲೆಡೆ ನಿರ್ಮಾಣವಾಗಿರುವ ಗಂಭೀರ ಪ್ರಶ್ನೆಯಾಗಿದೆ. ಇದಕ್ಕಾಗಿಯೇ ‘ತಿರುಪತಿ, ಸಿದ್ಧಿವಿನಾಯಕ ಅಥವಾ ಪಂಢರಪುರದ ದೇವಾಲಯಗಳ ನಿಧಿಯ ಮೇಲೂ ಇದೇ ರೀತಿಯ ‘ಜಾತ್ಯತೀತ ಹಂಚಿಕೆ’ ಆಗುತ್ತಿದೆಯೇ ?’, ಎಂಬ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ.
ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್ ಸ್ಥಾಪನೆಯ ಮುಖ್ಯ ಉದ್ದೇಶವೆಂದರೆ ‘ಮಾತಾ ವೈಷ್ಣೋದೇವಿಯ ಪವಿತ್ರ ಗುಹೆ ಮತ್ತು ಅದಕ್ಕೆ ಸಂಬಂಧಿಸಿದ ಸ್ಥಳಗಳ ಸರಿಯಾದ ನಿರ್ವಹಣೆ ಮಾಡುವುದು, ತೀರ್ಥಯಾತ್ರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮತ್ತು ಧಾರ್ಮಿಕ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು’ ಆಗಿತ್ತು. ಹಿಂದೆ ಈ ಪವಿತ್ರ ಧಾಮದ ನಿರ್ವಹಣೆಯನ್ನು ಸ್ಥಳೀಯ ಪೂಜಾರಿಗಳು ಮಾಡುತ್ತಿದ್ದರು; ಆದರೆ ಹೆಚ್ಚುತ್ತಿರುವ ಯಾತ್ರಿಕರ ಸಂಖ್ಯೆ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ, ಸರಕಾರವು ಈ ಸ್ಥಳದ ಆಡಳಿತಾತ್ಮಕ ನಿಯಂತ್ರಣವನ್ನು ಬೋರ್ಡ್‌ಗೆ ವಹಿಸಿತು. ಈ ಬೋರ್ಡ್‌ಗೆ ಜಮ್ಮು ಮತ್ತು ಕಾಶ್ಮೀರದ ಉಪರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ ಮತ್ತು ಇತರ ಸದಸ್ಯರ ನೇಮಕಾತಿಯನ್ನು ಸರಕಾರವು ಮಾಡುತ್ತದೆ.
ವಾಸ್ತವದಲ್ಲಿ ದೇವಸ್ಥಾನಗಳ ನಿಧಿಯು ಧರ್ಮ ಕಾರ್ಯ ಮತ್ತು ಹಿಂದೂಗಳಿಗೆ ಧರ್ಮಶಿಕ್ಷಣ ನೀಡಲು ಮಾತ್ರ ಉಪಯೋಗವಾಗಬೇಕೆಂದು ಅಪೇಕ್ಷಿತ ವಾಗಿದೆ; ಆದರೆ ಅಸಂಖ್ಯಾತ ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿ, ದೇವಸ್ಥಾನಗಳ ಸಂಪತ್ತನ್ನು ಅಭಿವೃದ್ಧಿ ಕಾರ್ಯಗಳು, ದೇಣಿಗೆಗಳು, ಅನ್ಯ ಪಂಥೀಯರಿಗೆ ಸಹಾಯ, ಇಂತಹ ಅಧಾರ್ಮಿಕ ವಿಷಯಗಳ ಮೇಲೆ ಮಿತಿಮೀರಿ ಖರ್ಚು ಮಾಡುತ್ತಿದೆ. ಅದರಿಂದ ದೇವಸ್ಥಾನಗಳ ಕೋಟ್ಯಂತರ ರೂಪಾಯಿ ನಿಧಿಯನ್ನು ಲೂಟಿ ಮಾಡಲಾಗುತ್ತಿದೆ. ಭಕ್ತರು ದೇವಸ್ಥಾನಕ್ಕೆ ದಾನ ಮಾಡುವಾಗ ಈಗ ವಿಚಾರ ಮಾಡಬೇಕಾಗಿದೆ ಏನೆಂದರೆ, ನಾವು ಅರ್ಪಿಸಿದ ಹಣ ಖಚಿತವಾಗಿ ಎಲ್ಲಿ ಬಳಕೆಯಾಗುತ್ತಿದೆ ?ಅದು ದೇವರ ಸೇವೆ, ಧರ್ಮಕಾರ್ಯ ಮತ್ತು ಸಂಸ್ಕೃತಿ ಸಂವರ್ಧನೆಗಾಗಿ ಬಳಕೆಯಾಗುತ್ತಿದೆಯೇ ? ಅಥವಾ ಸರಕಾರಿ ಯೋಜನೆಗಳಿಗಾಗಿ ಮತ್ತು ತಥಾಕಥಿತ ಜಾತ್ಯತೀತ ಸಂಸ್ಥೆಗಳ ಲಾಭಕ್ಕಾಗಿ ಬಳಕೆಯಾಗುತ್ತಿದೆಯೇ ?
ದೇವಸ್ಥಾನದ ಟ್ರಸ್ಟ್‌ಗಳು ಕೂಡ ಪ್ರತಿವರ್ಷ ನಿಧಿಯ ಲೆಕ್ಕಪತ್ರವನ್ನು ಸಾರ್ವಜನಿಕಗೊಳಿಸುವುದನ್ನು ಕಡ್ಡಾಯಗೊಳಿಸಬೇಕು. ‘ನನ್ನ ಅರ್ಪಣೆ ದೇವಕಾರ್ಯಕ್ಕಾಗಿಯೇ ಬಳಕೆಯಾಗಬೇಕು’, ಎಂಬ ಭಾವನೆ ಪ್ರತಿಯೊಬ್ಬ ಹಿಂದೂವಿನ ಮನಸ್ಸಿನಲ್ಲಿ ದೃಢವಾಗುವುದು ಮಹತ್ವದ್ದಾಗಿದೆ !
– ಸೌ. ಅಪರ್ಣಾ ಜಗತಾಪ, ಪುಣೆ, ಮಹಾರಾಷ್ಟ್ರ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು