ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕ !
೨೭/೬ ರಿಂದ ಮುದ್ರಿತವಾಗುತ್ತಿರುವ ಲೇಖನಮಾಲೆಯಲ್ಲಿನ ಮುಂದಿನ ಕೆಲವು ಭಾಗದಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ, ಈ ಲೇಖನದಲ್ಲಿ ಭಾರತೀಯ ಕಲೆಗಳ ನಿರ್ಮಿತಿಯ ಬಗ್ಗೆ ತಿಳಿದುಕೊಳ್ಳೋಣ’ (ಲೇಖನ ೬)
ಭಾರತೀಯ ಕಲೆಗಳ ಇತಿಹಾಸ ಮತ್ತು ಅವುಗಳ ಆಧ್ಯಾತ್ಮಿಕ ಸ್ವರೂಪ !
ಕಲೆಗಳ ಆಧ್ಯಾತ್ಮಿಕ ಇತಿಹಾಸದ ಪ್ರಾಸ್ತಾವಿಕದಲ್ಲಿನ ೨೭/೧೩ ನೆಯ ಸಂಚಿಕೆಯಲ್ಲಿನ ಲೇಖನದಲ್ಲಿ ನಾವು ‘ವೇದಗಳ ಮಾಧ್ಯಮದಿಂದ ಕಲೆಗಳ ನಿರ್ಮಿತಿಯ ಇತಿಹಾಸ ಮತ್ತು ಭಾರತದಲ್ಲಿನ ಪ್ರಾಚೀನ ಕಲಾಪ್ರವಾಹ’ದ ಬಗ್ಗೆ ತಿಳಿದುಕೊಂಡೆವು. ಈ ಭಾಗದಲ್ಲಿ ನಾವು ‘ಕಾಲಕ್ಕನುಸಾರ ಬದಲಾಗುತ್ತಾ ಹೋಗಿರುವ ಭಾರತೀಯ ಕಲೆಗಳ ಪ್ರೇರಣೆ ಮತ್ತು ಯುಗಗಳಿಗನುಸಾರ ಕಲೆಯಲ್ಲಿನ ಮನೋರಂಜನೆಯ ಬದಲಾಗುತ್ತಾ ಹೋಗಿರುವ ಸ್ವರೂಪ’ಗಳ ಕುರಿತು ತಿಳಿದುಕೊಳ್ಳಲಿದ್ದೇವೆ. (ಭಾಗ ೨)

೩. ಕಾಲಕ್ಕನುಸಾರ ಬದಲಾಗುತ್ತಾ ಹೋದ ಕಲೆಗಳ ಪ್ರಸ್ತುತಿಯ ಪ್ರೇರಣೆ
ಕಲೆಗಳ ಇತಿಹಾಸವನ್ನು ನೋಡಿದರೆ, ಕಲೆಗಳ ಪ್ರಸ್ತುತಿಯ ಹಿಂದಿನ ಪ್ರೇರಣೆಯು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗಿರುವುದು ಕಾಣಿಸುತ್ತದೆ. ಈ ಪ್ರೇರಣೆ ಮತ್ತು ಅವುಗಳ ಕ್ರಮವು ಮುಂದಿನಂತಿವೆ:
೩ ಅ. ವಿಧ್ಯಾತ್ಮಕತೆ : ‘ವಿಧ್ಯಾತ್ಮಕತೆ’ ಎಂದರೆ ವಿಧಿಯೊಂದಿಗೆ ಮಾಡಿದ ಈಶ್ವರನ ಆರಾಧನೆ. ಇದರಲ್ಲಿ ‘ಈಶ್ವರನ ಆರಾಧನೆಗಾಗಿ ಕೆಲವು ವಿಧಿಗಳನ್ನು ಮಾಡುವುದು’ ಇದು ಪ್ರಧಾನ ಭಾಗವಾಗಿತ್ತು ಮತ್ತು ಅವುಗಳನ್ನು ಮಾಡುವಾಗ ಸಹಜವಾಗಿ ಕಲೆಗಳ ನಿರ್ಮಿತಿ ಆಯಿತು. ಆದ್ದರಿಂದ, ಕಲೆಗಳ ಅಭಿವ್ಯಕ್ತಿಯು ಗೌಣ (ದ್ವಿತೀಯ) ಮತ್ತು ಅನುಷಂಗಿಕ (ಆರಾಧನೆಯ ಪರಿಣಾಮವಾಗಿ ತಾನಾಗಿಯೇ ನಡೆಯುವ) ಆಗಿತ್ತು. ವಿಧಿಗಳ ಸಮಯದಲ್ಲಿ ಕಲೆಗಳ ಮೂಲಕ ‘ಈಶ್ವರನ ಸ್ತುತಿ ಮಾಡುವುದು’ ಇದರಲ್ಲಿ ಸೇರಿತ್ತು. ಪ್ರಾಚೀನ ಭಾರತದಲ್ಲಿ ಕಲೆಯ ನಿರ್ಮಿತಿ ಮತ್ತು ಪ್ರಸ್ತುತಿಯ ಹಿಂದೆ ವಿಧ್ಯಾತ್ಮಕತೆಯೇ ಮೂಲ ಪ್ರೇರಣೆಯಾಗಿತ್ತು, ಉದಾ. ಯಜ್ಞದ ಸಮಯದಲ್ಲಿ ಸಾಮಗಾಯನ ಮಾಡುವುದು, ಹಾಗೆಯೇ ನೃತ್ಯ ಮತ್ತು ನಾಟಕವನ್ನು ಪ್ರಸ್ತುತಪಡಿಸುವುದು.
೩ ಆ. ಆಧ್ಯಾತ್ಮಿಕ ಸಮಾರಾಧನೆ : ಸಾಧನೆಗಾಗಿ ಮಾಡಿದ ಉದ್ಬೋಧನೆ ಅಥವಾ ಮಾರ್ಗದರ್ಶನವೆಂದರೆ ‘ಆಧ್ಯಾತ್ಮಿಕ ಸಮಾರಾಧನೆ’. ಕಾಲದ ಪ್ರವಾಹದಲ್ಲಿ, ‘ಈಶ್ವರನ ಆರಾಧನೆಗಾಗಿ ಕಲೆ’ ಎಂಬ ಮೂಲ ಉದ್ದೇಶವು ಹಿಂದೆಬಿದ್ದು, ಕಲೆಯ ಅಭಿವ್ಯಕ್ತಿಯು ವಿಚಲಿತವಾಗಿ ಮತ್ತು ಕಲಕಿ ಹೋದಾಗ, ಕಲೆಗಳನ್ನು ಆಧ್ಯಾತ್ಮಿಕ ಸಮಾರಾಧನೆಗಾಗಿ, ಅಂದರೆ ಸಾಧನೆಯ ಉದ್ಬೋಧನೆಗಾಗಿ ಬಳಸಲಾಯಿತು, ಉದಾ. ತ್ರೇತಾಯುಗದಲ್ಲಾದ ನಾಟ್ಯಶಾಸ್ತ್ರದ ಸೃಷ್ಟಿ, ಕಲಿಯುಗದಲ್ಲಿ ಅನೇಕ ಸಂತರು ಅಭಂಗ, ಭಾರೂಡ (ಟಿಪ್ಪಣಿ ೧), ದ್ವಿಪದಿಗಳು (ಟಿಪ್ಪಣಿ ೨) ಇತ್ಯಾದಿಗಳ ಆಧಾರದಲ್ಲಿ ಸಮಾಜಕ್ಕೆ ಮಾಡಿದ ಆಧ್ಯಾತ್ಮಿಕ ಉದ್ಬೋಧನೆ.
ಟಿಪ್ಪಣಿ ೧ ಭಾರೂಡ : ಇದು ಮಹಾರಾಷ್ಟ್ರದ ಒಂದು ಪಾರಂಪರಿಕ ಕಲೆಯಾಗಿದ್ದು ಸಂಗೀತ, ನೃತ್ಯ ಮತ್ತು ನಾಟಕಗಳ ಸಂಗಮವಾಗಿದೆ.
ಟಿಪ್ಪಣಿ ೨ ದೋಹಾ (ದ್ವಿಪದಿ) : ಹಿಂದಿ ಭಾಷೆಯ ಎರಡು ಸಾಲುಗಳ ಕಾವ್ಯ ಪ್ರಕಾರ.
೩ ಇ. ಜನಪ್ರಭೋಧನೆ : ಕಲೆಯನ್ನು ಜನಪ್ರಬೋಧನೆಗಾಗಿ ಬಳಸಲಾಗುತ್ತಿತ್ತು. ಭಾರತೀಯ ಸಂಸ್ಕೃತಿಯಲ್ಲಿನ ನೀತಿಮೌಲ್ಯಗಳು, ಆಧ್ಯಾತ್ಮಿಕ ತತ್ತ್ವಗಳು, ಆಚಾರ-ವಿಚಾರಗಳು, ಇವೆಲ್ಲವನ್ನೂ ಜನರಿಗೆ ತಲುಪಿಸಲು ಕಲೆಯ ಮಾಧ್ಯಮವನ್ನು ಆಯ್ಕೆ ಮಾಡಲಾಗಿದೆ. ‘ಜನಪ್ರಬೋಧನೆಯ ಉದ್ದೇಶದಿಂದ ಕಲಾ ಪ್ರಸ್ತುತಿ ಆಗಬೇಕು’ ಎಂಬ ಉಲ್ಲೇಖವು ನಾಟ್ಯಶಾಸ್ತ್ರದ ಮೊದಲ ಅಧ್ಯಾಯದಲ್ಲಿ ಬರುತ್ತದೆ. ಸಂಸ್ಕೃತ ನಾಟಕಗಳಲ್ಲಿಯೂ ಆರಂಭದಲ್ಲಿ ಸೂತ್ರಧಾರ ಮತ್ತು ನಟಿ ಜನಜಾಗೃತಿಯ ಮಾತುಕತೆ ನಡೆಸುತ್ತಿದ್ದರು ಮತ್ತು ಅದಕ್ಕೆ ಜೋಡಣೆಯಾಗಿ ಮುಂದೆ ನಾಟಕ ಪ್ರದರ್ಶನ ನಡೆಯುತ್ತಿತ್ತು. ಸಂತರು ಕೂಡ ಭಜನೆ ಮತ್ತು ಕೀರ್ತನೆಗಳ ಮೂಲಕ ಅತಿ ಹೆಚ್ಚು ಜನಜಾಗೃತಿ ಮಾಡಿದರು ಮತ್ತು ಸಮಾಜಕ್ಕೆ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಕಲಿಸಿದರು.
೩ ಈ. ಕೇವಲ ಮನೋರಂಜನೆ (ನೈಜ ಆನಂದ) : ಕಲಾವಿದನು ಸೃಜನಶೀಲತೆಯನ್ನು (ಟಿಪ್ಪಣಿ ೩) ಪ್ರದರ್ಶಿಸುವಾಗ, ಅವನು ಪರಮಾರ್ಥಿಕ ಅಂತರಾಳದಿಂದ ತತ್ತ್ವಕ್ಕೆ ಜೋಡಿಸಲ್ಪಡುತ್ತಾನೆ. ಆ ಸಮಯದಲ್ಲಿ ಅವನು ಯಾವ ಸತ್-ಚಿತ್-ಆನಂದಮಯ ಸ್ಥಿತಿಯನ್ನು ಪಡೆಯುತ್ತಾನೆಯೋ, ಅದಕ್ಕೆ ‘ಶುದ್ಧ ರಂಜನೆ’ ಎಂದು ಹೇಳುತ್ತಾರೆ. ‘ಕಲಾವಿದರು ಮತ್ತು ಪ್ರೇಕ್ಷಕರು ಇವರಿಬ್ಬರೂ ಶುದ್ಧ ರಂಜನೆಯ ಅನುಭೂತಿಯನ್ನು ಪಡೆಯಬೇಕು’ ಎಂಬುದು ಪ್ರಾಚೀನ ಭಾರತದಲ್ಲಿ ಕಲೆಯ ಪ್ರಸ್ತುತಿಯ ಹಿಂದಿನ ಒಂದು ಪ್ರಮುಖ ಪ್ರೇರಣೆಯಾಗಿತ್ತು.
ಟಿಪ್ಪಣಿ ೩ – ಸೃಜನ ಮಾಡುವುದು : ಕಲಾವಿದನು ತನ್ನ ಕೌಶಲ್ಯ, ಕಲ್ಪಕತೆ ಮತ್ತು ಕಲಾಪ್ರಸ್ತುತಿಯ ಶೈಲಿಯಿಂದ ಕಲೆಯ ನಿರ್ಮಿತಿಯನ್ನು ಮಾಡುವುದು.
೪. ‘ಕಲೆಗಳಿಂದ ರಂಜನೆ ಆಗುವುದು’, ಇದರ ಯುಗಾನುಸಾರ ಬದಲಾದ ಅರ್ಥ
ಹೆಚ್ಚಿನ ಬಾರಿ ಸಂಗೀತ, ನೃತ್ಯ ಮತ್ತು ನಾಟಕ ಈ ಕಲೆಗಳನ್ನು ‘ಮನೋರಂಜನೆ ಮಾಡುವುದು’ ಎಂದು ಉಲ್ಲೇಖಿಸಲಾಗುತ್ತದೆ. ಆದುದರಿಂದ ಅನೇಕರಿಗೆ ಕಲೆಯು ಕೇವಲ ಮನೋರಂಜನೆಯ ಮಾಧ್ಯಮವಾಗಿದೆ ಎಂದು ಅನಿಸುತ್ತದೆ. ‘ರಂಜನೆಯ’ (ಮನೋರಂಜನೆಯ) ಕಾಲಕ್ಕನುಸಾರ, ಅಂದರೆ ಯುಗಕ್ಕನುಸಾರ ಬದಲಾಗುತ್ತಾ ಹೋದ ಅರ್ಥವು ಈ ಕೆಳಗಿನಂತಿದೆ.
೪ ಅ. ಸತ್ಯಯುಗ : ಸತ್ಯಯುಗದಲ್ಲಿ ಎಲ್ಲರಲ್ಲಿಯೂ ಸೋಹಂ ಭಾವ (ಟಿಪ್ಪಣಿ ೪) ಇತ್ತು, ಅಂದರೆ ಅವರು ಆಂತರಿಕ ಆಧ್ಯಾತ್ಮಿಕ ಆನಂದಾವಸ್ಥೆಯನ್ನು ಅನುಭವಿಸುತ್ತಿದ್ದರು. ಆ ಸಮಯದಲ್ಲಿ ‘ಕಲೆಯಿಂದ ಆತ್ಮರಂಜನೆಯನ್ನು (ಆಧ್ಯಾತ್ಮಿಕ ಆನಂದಾವಸ್ಥೆ) ಸಾಧಿಸುವುದು’ ಪ್ರಮುಖ ಭಾಗವಾಗಿತ್ತು. ‘ಕಲೆಯಿಂದ ಈಶ್ವರಪ್ರಾಪ್ತಿಯು’ ಕಲೆಗಳ ಮೂಲ ಉದ್ದೇಶವಾಗಿತ್ತು, ಉದಾ. ಗಂಧರ್ವರ ಗಾಯನ, ಅಪ್ಸರೆಯರ ನೃತ್ಯ.
ಟಿಪ್ಪಣಿ ೪ – ಸೋಹಂಭಾವ : ಸಃ + ಅಹಂ, ಅಂದರೆ ‘ನಾನೇ ಈಶ್ವರ ಆಗಿದ್ದೇನೆ’ ಎಂಬ ಭಾವ.
೪ ಆ. ತ್ರೇತಾಯುಗ ಮತ್ತು ದ್ವಾಪರಯುಗ : ಕಾಲಚಕ್ರವು ಮುಂದೆ ಸಾಗಿದಂತೆ, ತ್ರೇತಾಯುಗ ಮತ್ತು ದ್ವಾಪರಯುಗಗಳಲ್ಲಿ ಸಮಾಜದ ಸಾತ್ತ್ವಿಕತೆ ಕಡಿಮೆಯಾಗಿ ರಜ-ತಮದ ಪ್ರಮಾಣವು ಹೆಚ್ಚಾಯಿತು. ಆದುದರಿಂದ ಕಲೆಯಿಂದ ಆತ್ಮರಂಜನೆಯ ಜೊತೆಗೆ ಬಾಹ್ಯರಂಜನೆ, ಅಂದರೆ ಮನೋರಂಜನೆ (ಮಾನಸಿಕ ಸ್ತರದ ರಂಜನೆ) ಆರಂಭವಾಯಿತು. ಈ ಕಾಲದಲ್ಲಿ ಆತ್ಮರಂಜನೆ ಕಡಿಮೆಯಾದ ಕಾರಣ ಪೂರ್ಣ ರಂಜನೆಯು ಬಾಹ್ಯರಂಜನೆಯ ಸ್ವರೂಪವನ್ನು ಪಡೆಯಿತು, ಅಂದರೆ ಪೂರ್ಣ ರಂಜನೆ ಎಂಬ ಪ್ರೇರಣೆ ಮನೋರಂಜನೆಯ ದಿಕ್ಕಿನಲ್ಲಿ ಸಾಗಲು ಆರಂಭವಾಯಿತು.
೪ ಇ. ಕಲಿಯುಗ : ಕಾಲಚಕ್ರದಲ್ಲಿನ ಕೊನೆಯ ಯುಗವಾದ ಕಲಿಯುಗದಲ್ಲಿ ಸಮಾಜದಲ್ಲಿ ಸತ್ತ್ವಗುಣವು ಮೂಲತಃ ಅತಿ ಕಡಿಮೆ ಇದೆ. ಆದುದರಿಂದ ಮನುಷ್ಯನು ‘ಕಲೆಗಳು ಆತ್ಮರಂಜನೆ ಮಾಡಲು (ಅಂತರಾಳದ ಆಧ್ಯಾತ್ಮಿಕ ಆನಂದವನ್ನು ಅನುಭವಿಸಲು) ಮತ್ತು ಈಶ್ವರಪ್ರಾಪ್ತಿಗಾಗಿ ಇವೆ’ ಎಂಬುದನ್ನು ಮರೆಯತೊಡಗಿದನು. ಮನುಷ್ಯನು ರಜ-ತಮದ ಹೆಚ್ಚುತ್ತಿರುವ ಪ್ರಭಾವಕ್ಕೆ ಒಳಗಾದ ಕಾರಣ ಅವನು ಕಲೆಯನ್ನು ಕೇವಲ ಮನೋರಂಜನೆಯ ದೃಷ್ಟಿಯಿಂದಲೇ ನೋಡತೊಡಗಿದನು. ಇಂದು ನಾವು, ಗಾಯನ, ವಾದನ, ನೃತ್ಯ ಮತ್ತು ನಾಟಕದಂತಹ ಪ್ರಾಯೋಗಿಕ ಕಲೆಗಳಲ್ಲಿ ಮಾತ್ರವಲ್ಲದೆ, ಸಂಪೂರ್ಣ ಕಲಾಕ್ಷೇತ್ರದಲ್ಲಿ ಮನೋರಂಜನೆಗೇ ಹೆಚ್ಚಿನ ಮಹತ್ವ ದೊರೆತಿದೆ’, ಎಂಬುದನ್ನು ನೋಡುತ್ತಿದ್ದೇವೆ.
೪ ಈ. ಈಗಿನ ಕಲಿಯುಗಾಂತರ್ಗತ ಕಲಿಯುಗ : ಪ್ರಸ್ತುತ ಕಲಿಯುಗದೊಳಗಿನ ಕಲಿಯುಗದಲ್ಲಿ ಮನುಷ್ಯನು ಕಲೆಯ ಮೂಲಕ ತನ್ನ ಆತ್ಮರಂಜನೆಯನ್ನು (ಶುದ್ಧ ಆನಂದ) ಸಂಪೂರ್ಣವಾಗಿ ಮರೆತಿದ್ದಾನೆ ಮತ್ತು ಕಲೆಯ ಮೂಲಕ ಕೇವಲ ಮನೋರಂಜನೆಯತ್ತ ಆಕರ್ಷಿತನಾಗಿದ್ದಾನೆ. ಈಗಿನ ಕಾಲದಲ್ಲಿ ‘ಕಲೆ’ಯು ಮನೋರಂಜನೆಯಿಂದ ಕ್ರಮೇಣ ಕೆಳಗಿನ, ಅಂದರೆ ವಿಕೃತಿಯ ಸ್ತರಕ್ಕೆ ಸಾಗುತ್ತಿದೆ. ಆದುದರಿಂದ ಕಲೆಯ ಹೆಸರಿನಲ್ಲಿ ಅಸಹ್ಯ, ಅಶ್ಲೀಲತೆ, ಅಸಭ್ಯತೆ ಇತ್ಯಾದಿಗಳು ಹೆಚ್ಚಾಗಿವೆ.
ಮೇಲಿನಂತೆ ಕಾಲ ಮತ್ತು ಕಲೆಗಳ ಅಧ್ಯಯನ ಮಾಡಿದಾಗ ತಿಳಿದುಬರುವ ಅಂಶವೆಂದರೆ, ಹಿಂದೆ ಮನುಷ್ಯನಿಗೆ ತನ್ನಲ್ಲಿನ ಸಾತ್ತ್ವಿಕತೆಯಿಂದಾಗಿ ಕಲೆಯಲ್ಲಿನ ಆನಂದವನ್ನು ಆಧ್ಯಾತ್ಮಿಕ ಸ್ತರದ ಆನಂದವೃದ್ಧಿಗಾಗಿ ಪಡೆಯಲು ಸಾಧ್ಯವಾಗುತ್ತಿತ್ತು. ಆದುದರಿಂದ ಅವನಿಗೆ ಕಲೆಯಿಂದ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಹೋಗಲು ಸಾಧ್ಯವಾಗುತ್ತಿತ್ತು; ಆದರೆ ಮುಂದೆ ಕಾಲಕ್ಕನುಸಾರ ಸಾತ್ತ್ವಿಕತೆ ಕಡಿಮೆಯಾಗುತ್ತಾ ಹೋದ ಕಾರಣ ಈಗಿನ ಕಲಿಯುಗದಲ್ಲಿ ಕಲೆಯಲ್ಲಿನ ಯಾವ ಬಾಹ್ಯ ಆನಂದವನ್ನು ನಾವು ‘ಆನಂದ’ ಎಂದು ಕರೆಯುತ್ತೇವೆಯೋ, ಅದು ಶಾಶ್ವತ ಆನಂದವಾಗಿರದೇ ಅದು ಮಾನಸಿಕ ಸ್ತರದ ಕ್ಷಣಿಕ ಸುಖವಾಗಿದೆ. ಈಗ ಕಲಾವಿದರು ಮತ್ತು ಪ್ರೇಕ್ಷಕರು ಇವರಿಬ್ಬರೂ ಈ ಕ್ಷಣಿಕ ಸುಖಕ್ಕೆ ಮರುಳಾಗಿರುವುದರಿಂದ ‘ಕಲೆಯ ಮೂಲಕ ಈಶ್ವರಪ್ರಾಪ್ತಿ’ ಎಂಬ ಮೂಲ ಉದ್ದೇಶವೇ ಕಳೆದುಹೋಗಿರುವುದು ಕಂಡುಬರುತ್ತಿದೆ.
ಆದುದರಿಂದ ಅವನಿಗೆ ಕಲೆಯಿಂದ ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಹೋಗಲು ಸಾಧ್ಯವಾಗುತ್ತಿತ್ತು; ಆದರೆ ಮುಂದೆ ಕಾಲಕ್ಕನುಸಾರ ಸಾತ್ತ್ವಿಕತೆ ಕಡಿಮೆಯಾಗುತ್ತಾ ಹೋದ ಕಾರಣ ಈಗಿನ ಕಲಿಯುಗದಲ್ಲಿ ಕಲೆಯಲ್ಲಿನ ಯಾವ ಬಾಹ್ಯ ಆನಂದವನ್ನು ನಾವು ‘ಆನಂದ’ ಎಂದು ಕರೆಯುತ್ತೇವೆಯೋ, ಅದು ಶಾಶ್ವತ ಆನಂದವಾಗಿರದೇ ಅದು ಮಾನಸಿಕ ಸ್ತರದ ಕ್ಷಣಿಕ ಸುಖವಾಗಿದೆ. ಈಗ ಕಲಾವಿದರು ಮತ್ತು ಪ್ರೇಕ್ಷಕರು ಇವರಿಬ್ಬರೂ ಈ ಕ್ಷಣಿಕ ಸುಖಕ್ಕೆ ಮರುಳಾಗಿರುವುದರಿಂದ ‘ಕಲೆಯ ಮೂಲಕ ಈಶ್ವರಪ್ರಾಪ್ತಿ’ ಎಂಬ ಮೂಲ ಉದ್ದೇಶವೇ ಕಳೆದುಹೋಗಿರುವುದು ಕಂಡುಬರುತ್ತಿದೆ.
೫. ಸಾರಾಂಶ
ಕಲೆಯ ಇತಿಹಾಸದಿಂದ ನಮಗೇನು ಕಲಿಯಲು ಸಿಗುತ್ತದೆ ಯೆಂದರೆ, ‘ಓಂ’ಕಾರದಿಂದ ನಿರ್ಮಾಣ ವಾಗಿರುವ ಭಾರತೀಯ ಕಲೆಗಳು ಶ್ರೇಷ್ಠತಮ ಆಗಿವೆ, ಹಾಗೆಯೇ ಅವು ಚಿರಂತನ ಮತ್ತು ಆಧ್ಯಾತ್ಮಿಕ ಮಟ್ಟದ ಆನಂದವನ್ನು ನೀಡುವಂತಹವುಗಳು ಆಗಿವೆ. ಈ ಆನಂದವನ್ನು ಅನುಭವಿಸಲು ಕಲೆಗೆ ಸಾಧನೆಯ ಬೆಂಬಲವನ್ನು ನೀಡುವುದು ಅವಶ್ಯಕ ಮತ್ತು ಅನಿವಾರ್ಯವಾಗಿದೆ. ಕಲೆಯಿಂದ ಶಾಶ್ವತ ಆನಂದದ ಕಡೆಗೆ ಸಾಗುವ ಪಯಣವೇ, ಕಲೆಯಿಂದ ಈಶ್ವರ ಪ್ರಾಪ್ತಿಗಾಗಿ ಸಾಧನೆ ಮಾಡುವುದು ಆಗಿದೆ.
(ಮುಕ್ತಾಯ)
(ಮುಂದಿನ ಲೇಖನದಲ್ಲಿ ನಾವು ಗಾಯನಕಲೆಯ ಆಧ್ಯಾತ್ಮಿಕ ಇತಿಹಾಸದ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.)
– ಸೌ. ಶುಭಾಂಗಿ ಶೆಳಕೆ (ಎಮ್.ಎ. ನಾಟ್ಯಶಾಸ್ತ್ರ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೯.೨೦೨೫)
ಸಾಧಕರಿಗೆ ಸೂಚನೆ ಮತ್ತು ಹಿತಚಿಂತಕರಲ್ಲಿ ವಿನಂತಿಈ ಲೇಖನದ ಬಗ್ಗೆ ಸಂದೇಹ ಅಥವಾ ಪ್ರಶ್ನೆಗಳಿದ್ದರೆ ಮುಂದಿನ ಕ್ರಮಾಂಕದಲ್ಲಿ ಸಂಪರ್ಕಿಸಿ. ಸಂಗೀತ ವಿಭಾಗ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. |

|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು