ಶ್ರೀ. ರಾಮ ಹೊನಪ ಇವರು ಕೇಳಿದ ಪ್ರಶ್ನೆಗಳಿಗೆ ಪ.ಪೂ. ದೇವಬಾಬಾರವರು ನೀಡಿದ ಉತ್ತರಗಳು !

೨೨ ಡಿಸೆಂಬರ್‌ ೨೦೨೫ ಕಿನ್ನಿಗೋಳಿಯ ಪ.ಪೂ. ದೇವಬಾಬಾರವರ ಜನ್ಮದಿನವಿದೆ ಆ ನಿಮಿತ್ತ ಅವರು ಚರಣಗಳಲ್ಲಿ ಕೋಟಿ ಕೋಟಿ ನಮನಗಳು !

ಪ.ಪೂ. ದೇವಬಾಬಾ

೧. ಮಣಿಪುರಚಕ್ರದಿಂದಾಗುವ ಜಪವು ರಜೋಗುಣಕ್ಕೆ ಮತ್ತು ಅನಾಹತಚಕ್ರದಿಂದಾಗುವ ಜಪವು ಸತ್ತ್ವಗುಣಕ್ಕೆ ಸಂಬಂಧಿಸಿದೆ !

ನಾನು : ಕೆಲವೊಮ್ಮೆ ನನ್ನ ನಾಭಿಯಿಂದ, ಅಂದರೆ ಮಣಿಪುರ ಚಕ್ರದಿಂದ, ಕೆಲವೊಮ್ಮೆ ಅಂತರ್ಮನಸ್ಸಿನಿಂದ, ಅಂದರೆ ಅನಾಹತಚಕ್ರದಿಂದ ನಾಮಜಪವಾಗುತ್ತದೆ. ಇವೆರಡರ ವ್ಯತ್ಯಾಸವೇನು ?

ಶ್ರೀ. ರಾಮ ಹೊನಪ

ಪ.ಪೂ. ದೇವಬಾಬಾ : ಮಣಿಪುರಚಕ್ರದಿಂದಾಗುವ ಜಪವು ರಜೋಗುಣಕ್ಕೆ ಸಂಬಂಧಿಸಿರುತ್ತದೆ. ಈ ನಾಮಜಪವು ಛತ್ರಪತಿ ಶಿವಾಜಿ ಮಹಾರಾಜರಂತಹ ಕ್ಷಾತ್ರವೃತ್ತಿ ಇರುವ ರಾಜರಿಗಾಗಿ ಉಪಯುಕ್ತವಾಗಿದೆ, ಅನಾಹತಚಕ್ರದಿಂದಾಗುವ ಜಪವು ಸತ್ತ್ವ ಗುಣಕ್ಕೆ ಸಂಬಂಧಿಸಿದೆ. ಮಣಿಪುರಚಕ್ರದ ತುಲನೆಯಲ್ಲಿ ಅನಾಹತ ಚಕ್ರದಿಂದಾಗುವ ಜಪವು ಹೆಚ್ಚು ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ಈ ಜಪವು ಸಾಧಕರಿಗೆ ಉಪಯುಕ್ತವಾಗಿದೆ.

೨. ‘ಸಾಧಕನಿಗೆ ಸೂಕ್ಷ್ಮದಿಂದ ಕಾಣಿಸುವ ಕಪ್ಪು ನಾಗರಹಾವು ಆತನ ಪ್ರಾರಬ್ಧಕ್ಕೆ ಸಂಬಂಧಿಸಿದೆ’, ಎಂದು ಪ.ಪೂ. ದೇವಬಾಬಾರವರು ಹೇಳುವುದು

ನಾನು : ಕಿನ್ನಿಗೋಳಿ ಆಶ್ರಮದ ಕೋಣೆಯ ಮಂಚದ ಮೇಲೆ ನಾನು ನಾಮಜಪಿಸಲು ಕುಳಿತುಕೊಂಡಾಗ ನೆಲದ ಮೇಲೆ ಸೂಕ್ಷ್ಮದಿಂದ ಒಂದು ಕಪ್ಪು ಹಾವು ಕಾಣಿಸುತ್ತದೆ. ಅದಕ್ಕೆ ಕಾರಣವೇನು ?

ಪ.ಪೂ. ದೇವಬಾಬಾ : ನಿಮ್ಮ ಮಣಿಪುರಚಕ್ರದ ಸ್ಥಳದಲ್ಲಿ ಅದು ನಿಮ್ಮ ಬಾಕಿ ಉಳಿದಿರುವ ಪ್ರಾರಬ್ಧದ ಪ್ರತೀಕವಾಗಿದೆ.

೩. ಸಾಧಕನಿಗೆ ದೇವತೆಯ ದರ್ಶನವಾಗುವ ಸೂಕ್ಷ್ಮದ ಪ್ರಕ್ರಿಯೆಯ ಬಗ್ಗೆ ಪ.ಪೂ. ದೇವಬಾಬಾರವರಿಂದಾದ ವಿಶ್ಲೇಷಣೆ !

ನಾನು : ನಾನು ‘ನಿರ್ಗುಣ’, ಜಪ ಮಾಡುತ್ತಿರುವಾಗ ‘ಶಿವ’, ಈ ಜಪವು ತನ್ನಿಂತಾನೇ ಪ್ರಾರಂಭವಾಯಿತು ಮತ್ತು ನನ್ನ ಆಜ್ಞಾಚಕ್ರದ ಸ್ಥಳದಲ್ಲಿ ನನ್ನ ಗಮನ ಕೇಂದ್ರೀಕೃತವಾಯಿತು. ಅನಂತರ ನನಗೆ ಅಲ್ಲಿ ಸೂಕ್ಷ್ಮದಿಂದ ಒಂದು ಕಣ್ಣು ಕಾಣಿಸಿತು. ಅದರಲ್ಲಿ ಭಗವಾನ ಶಿವನ ಬಿಳಿ ಬಣ್ಣದ ಸುಂದರ ವಿಗ್ರಹ ಕಾಣಿಸಿತು. ಈ ಪ್ರಕ್ರಿಯೆಯು ಸೂಕ್ಷ್ಮದಿಂದ ಹೇಗೆ ಘಟಿಸುತ್ತದೆ ?

ಪ.ಪೂ. ದೇವಬಾಬಾ : ಮೂಲಾಧಾರಚಕ್ರದ ಸ್ಥಳದಲ್ಲಿರುವ ಈಶ್ವರೀ ಶಕ್ತಿಯ ಸಂವೇದನೆಯು ಆಜ್ಞಾಚಕ್ರದ ಸ್ಥಳಕ್ಕೆ ತಲುಪುತ್ತದೆ. ಆ ಸಮಯದಲ್ಲಿ ಇಂತಹ ದೃಶ್ಯ ಕಾಣಿಸುತ್ತದೆ.

೪. ವ್ಯಕ್ತಿಯ ಶರೀರದಲ್ಲಿ ಸಂಚಿತ ಮತ್ತು ಪ್ರಾರಬ್ಧದ ಸ್ಥಾನ !

ನಾನು : ಮನುಷ್ಯದೇಹದಲ್ಲಿ ಸಂಚಿತ ಮತ್ತು ಪ್ರಾರಬ್ಧದ ಸ್ಥಾನ ಎಲ್ಲಿರುತ್ತದೆ ?

ಪ.ಪೂ. ದೇವಬಾಬಾ : ವ್ಯಕ್ತಿಯ ವಿಶುದ್ಧಚಕ್ರದಲ್ಲಿ ಅವನ ಸಂಚಿತ ವಿರುತ್ತದೆ ಮತ್ತು ಈ ಜನ್ಮದಲ್ಲಿ ಭೋಗಿಸುವ ಪ್ರಾರಬ್ಧವು ಅಂತರ್ಮನಸ್ಸಿನಲ್ಲಿ, ಅಂದರೆ ಅನಾಹತಚಕ್ರದ ಸ್ಥಳದಲ್ಲಿರುತ್ತದೆ.

೫. ಸಾಧಕನಿಗೆ ಅವನ ಆಜ್ಞಾಚಕ್ರದ ಸ್ಥಳದಲ್ಲಿ ಕತ್ತಲು ಕಾಣಿಸುವುದರ ಕಾರಣ !

ನಾನು : ನನಗೆ ನನ್ನ ಆಜ್ಞಾಚಕ್ರದ ಸ್ಥಳದಲ್ಲಿ ಕತ್ತಲು ಕಾಣಿಸುತ್ತದೆ. ಇದರ ಕಾರಣವೇನು ?

ಪ.ಪೂ. ದೇವಬಾಬಾ : ಪ್ರತಿಯೊಂದು ಕುಂಡಲಿನಿಚಕ್ರದ ಮೇಲೆ ವಿಶಿಷ್ಟ ಬಣ್ಣದ ಬೆಳಕು (ಪ್ರಕಾಶ) ಇರುತ್ತದೆ. ಎಲ್ಲಿ ಬೆಳಕು ಇರುವುದಿಲ್ಲವೋ, ಅಲ್ಲಿ ಕತ್ತಲು ಇರುತ್ತದೆ. ನಿಮ್ಮ ಆಜ್ಞಾಚಕ್ರವು ಜಾಗೃತವಾದಾಗ ನಿಮಗೆ ಅಲ್ಲಿನ ವಿಶಿಷ್ಟ ಬಣ್ಣ ಕಾಣಿಸುವುದು.

೬. ಪೃಥ್ವಿ ಮತ್ತು ಸೂಕ್ಷ್ಮ ಲೋಕದ ಭಿನ್ನ ಬಣ್ಣಗಳು !

ನಾನು : ಒಮ್ಮೆ ನನಗೆ ಸೂಕ್ಷ್ಮದಿಂದ ಸರಸ್ವತಿದೇವಿಯ ನವಿಲಿನ ರೆಕ್ಕೆಗಳ ಬಣ್ಣವು ಗುಲಾಬಿ ಕಾಣಿಸಿತು. ಪೃಥ್ವಿಯಲ್ಲಿ ನೀಲಿ ಬಣ್ಣದ ನವಿಲು ಇರುತ್ತವೆ. ಸೂಕ್ಷ್ಮ ಲೋಕದಲ್ಲಿ ನವಿಲಿನ ಬಣ್ಣವು ಭಿನ್ನವಾಗಿರುತ್ತದೆಯೇ ?

ಪ.ಪೂ. ದೇವಬಾಬಾ : ಹಾಗೆ ಇರಬಹುದು.

೭. ‘ಸೂಕ್ಷ್ಮದಿಂದ ಆಕಾಶದಲ್ಲಿ ಕಾಣಿಸುವ ಸ್ತ್ರೀ-ಪುರುಷರು ಯಕ್ಷ-ಯಕ್ಷಿಣಿ ಮತ್ತು ಗಂಧರ್ವರಾಗಿದ್ದಾರೆ’

ನಾನು : ಒಮ್ಮೆ ನನಗೆ ಸೂಕ್ಷ್ಮದಿಂದ ಆಕಾಶದಲ್ಲಿ ಗುಲಾಬಿ ಬಣ್ಣದ ಮಂಚ ಕಾಣಿಸಿತು. ಅದಕ್ಕೆ ಹಳದಿ ಕಂಬಗಳಿದ್ದವು. ಅಲ್ಲಿ ಕೆಲವು ಸ್ತ್ರೀ-ಪುರುಷರು ಕಾಣಿಸಿದರು. ಅವರು ಚಿನ್ನದ ಬಣ್ಣದ ಆಭರಣಗಳನ್ನು ಧರಿಸಿದ್ದರು. ಅವರು ಯಾರು ?

ಪ.ಪೂ. ದೇವಬಾಬಾ : ಯಕ್ಷ-ಯಕ್ಷಿಣಿ ಮತ್ತು ಗಂಧರ್ವರಾಗಿದ್ದಾರೆ.’

– ಶ್ರೀ. ರಾಮ ಹೊನಪ, ಸನಾತನ ಆಶ್ರಮ, ರಾಮನಾಥಿ, ಗೋವಾ.