‘ಹಿಂದೂ ಧರ್ಮವೇ ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವುದು’, ಎಂದು ಹೇಳಲಾಗುತ್ತದೆ, ಅದು ಯಾವ ಆಧಾರದಿಂದ ?

ಧರ್ಮದ ವಿಷಯದಲ್ಲಿ ಪ.ಪೂ.ಸ್ವಾಮಿ ವರದಾನಂದ ಭಾರತಿಯವರ ಅಮೂಲ್ಯ ಮಾರ್ಗದರ್ಶನ !

ಈ ಪ್ರಶ್ನೆಗೆ ಸಂಕ್ಷಿಪ್ತದಲ್ಲಿ ಸುಲಭ ಉತ್ತರವೆಂದರೆ, ಹಿಂದೂ ಧರ್ಮವು ಅಂಗೀಕರಿಸಿದ ಸದ್ಗುಣಗಳಿಂದ, ವೈಚಾರಿಕ ಘನತೆಯಿಂದ ಅದು ಜಗತ್ತಿಗೆ ಮಾರ್ಗದರ್ಶನ ಮಾಡಲು ಸಾಧ್ಯವಿದೆ. ಆದರೂ ಸಾಮಾನ್ಯ ನಿಲುವನ್ನು ತಿಳಿದುಕೊಳ್ಳಲು ಕೆಲವು ವಿಚಾರ ಮಾಡಬೇಕು. ಹಿಂದೆ ನಮ್ಮ ಧರ್ಮಕ್ಕೆ ಯಾವುದೇ ವಿಶೇಷನಾಮ ಇರಲಿಲ್ಲ. ನಂತರ ಸುಸಂಸ್ಕೃತ, ಅಂದರೆ ಆರ್ಯರ ಧರ್ಮವೆಂದು ಅದರ ಹೆಸರು ‘ಆರ್ಯ ಧರ್ಮ’ ಎಂದಾಗಿತ್ತು. ‘ವೇದೋಖಿಲೋ ಧರ್ಮಮೂಲಮ್‌ |’ (ಮನುಸ್ಮೃತಿ, ಅಧ್ಯಾಯ ೨, ಶ್ಲೋಕ ೬), ಅಂದರೆ ‘ವೇದವು ಧರ್ಮದ ಮೂಲವಾಗಿದೆ.’ ಈ ವಚನದಿಂದ ಮುಂದೆ ಅದಕ್ಕೆ ‘ವೈದಿಕ ಧರ್ಮ’ಎಂದು ಹೇಳಲು ಆರಂಭವಾಯಿತು. ಈ ಧರ್ಮದ ಸ್ವರೂಪ ದೇಶ-ಕಾಲ-ಪರಿಸ್ಥಿತಿ ನಿರಪೇಕ್ಷ ಹಾಗೂ ನಿತ್ಯನೂತನ ಆಗಿರುವುದರಿಂದ ಅದಕ್ಕೆ ‘ಸನಾತನ ಧರ್ಮ’ ಎಂದು ಹೇಳಲು ಆರಂಭವಾಯಿತು. ತುಲನಾತ್ಮಕ ದೃಷ್ಟಿಯಲ್ಲಿ ಹಿಂದೂ ಈ ಸಂಬೋಧನೆ ಇತ್ತೀಚೆಗಿನದ್ದಾಗಿದೆ.

ಪ.ಪೂ. ಸ್ವಾಮಿ ವರದಾನಂದ ಭಾರತಿ

೧. ಹಿಂದೂ ಧರ್ಮದ ವ್ಯಾಪ್ತಿಯು ಅಖಿಲ ಮನುಕುಲಕ್ಕಾಗಿ !

ಹಿಂದೂ ಧರ್ಮದ ವ್ಯಾಪ್ತಿಯು ಅಖಿಲ ಮನುಕುಲಕ್ಕಾಗಿ ಇದೆ. ಅದರಲ್ಲಿ ವ್ಯಕ್ತಿ ಜೀವನದಲ್ಲಿನ ಎಲ್ಲ ವಿಷಯಗಳ ಬಗ್ಗೆ ಆಳವಾದ ವಿಚಾರ ಮಾಡಿ ಉತ್ತಮ, ಆದರ್ಶ ಘಟಕಗಳ ಪ್ರಾಪ್ತಿಗಾಗಿ ಏನು ಮಾಡಬೇಕು ?, ಎಂಬುದರ ವಿಧಿನಿಷೇಧಗಳನ್ನು ನಿರ್ಧರಿಸಲಾಯಿತು. ಇದರಲ್ಲಿ ಸಮಾಜ ಅಥವಾ ರಾಷ್ಟ್ರ ಮಟ್ಟದಲ್ಲಿನ ವಿಕಾಸಕ್ಕಾಗಿ ವ್ಯಕ್ತಿಯ, ವ್ಯಕ್ತಿಸ್ವಾತಂತ್ರ್ಯದ ನಿಜವಾದ ಮಿತಿಯನ್ನು ನಿರ್ಧರಿಸಲಾಗಿದೆ. ಯಾವುದೇ ಮಟ್ಟದಲ್ಲಿ, ಯಾವುದೇ ಪ್ರಕಾರದ ದುರಾಗ್ರಹವಿಲ್ಲ. ಸಮನ್ವಯ ಹಾಗೂ ಸಾಮಾನ್ಯ ಜನರ ಸಾಮಾನ್ಯ ಕ್ಷಮತೆಯ ಸೂಕ್ಷ್ಮದ ಅರಿವನ್ನು ಇಟ್ಟಿರುವುದು ಕಾಣಿಸುತ್ತದೆ. ಯಾವ ಘಟಕಗಳಿಗೆ ವಿಶೇಷ ಅಧಿಕಾರ ಕೊಡಲಾಗಿದೆಯೊ, ಅವರಿಗೆ ವಿಶೇಷ ಕರ್ತವ್ಯವನ್ನೂ ಹೇಳಲಾಗಿದೆ. ಇದರ ಸಿದ್ಧಾಂತವನ್ನು ಒಪ್ಪದಿರುವವರ ಬಗ್ಗೆ ಎಲ್ಲಿಯೂ ದ್ವೇಷದ ಅಥವಾ ಶತ್ರುತ್ವದ ಭಾವನೆ ಸ್ವಲ್ಪವೂ ಕಾಣಿಸುವುದಿಲ್ಲ.

೨. ಹಿಂದೂ ಧರ್ಮದಲ್ಲಿ ಜಗತ್ತಿಗೆ ಮಾರ್ಗದರ್ಶನ ಮಾಡುವಂತಹ ಅನೇಕ ಸಿದ್ಧಾಂತ ಹಾಗೂ ಸದ್ಗುಣಗಳು

ನ್ಯಾಯ, ಸಮಾನತೆ ಹಾಗೂ ಬಂಧುತ್ವ ಈ ಸಂಕಲ್ಪನೆಯನ್ನು ನಿಜವಾಗಿ ಜೋಪಾನ ಮಾಡುವ ಸಿದ್ಧಾಂತವನ್ನು ಸ್ವೀಕರಿಸಲಾಗಿದೆ. ಇಂತಹ ಅನೇಕ ವಿಷಯಗಳನ್ನು ಪ್ರಮಾಣಸಹಿತ ತೋರಿಸಬಹುದು. ಯಾರು ಅಪರಾಧ ಮಾಡಿಲ್ಲವೋ, ಅವನಿಗೆ ದಂಡ ವಿಧಿಸಬಾರದು ಹಾಗೂ ಯಾರು ಅಪರಾಧ ಮಾಡಿರುವನೋ, ಅವನಿಗೆ ದಂಡ ವಿಧಿಸಲೇ ಬೇಕು. ಯಾವುದೇ ಒಂದು ಅಪರಾಧವಾಗುತ್ತದೆ ಹಾಗೂ ಅಪರಾಧಿ ಸಿಗುವುದಿಲ್ಲವೋ, ಇದು ಆಡಳಿತದ ವೈಫಲ್ಯವೆಂದು ಪರಿಗಣಿಸಲಾಗುತ್ತಿತ್ತು. ಹೊಟ್ಟೆಗೆ ಅನ್ನವಿಲ್ಲದ ಯಾರಾದರೂ ಅನ್ನವನ್ನು ಕಳ್ಳತನ ಮಾಡಿದರೆ, ಅವನನ್ನು ಪಾಪಿ ಎನ್ನದೆ ರಾಜನನ್ನು ಪಾಪಿಯೆಂದು ಹೇಳಲಾಗಿದೆ; ಏಕೆಂದರೆ ರಾಜ್ಯದಲ್ಲಿ ಯಾರಾದರೂ ಉಪವಾಸವಿದ್ದರೆ ಅದಕ್ಕೆ ಅಲ್ಲಿನ ರಾಜನೇ ಹೊಣೆಯಾಗುತ್ತಾನೆ. ಈ ರೀತಿಯ ಅನೇಕ ಸಿದ್ಧಾಂತಗಳನ್ನು ಹೇಳಬಹುದು. ಈ ಸದ್ಗುಣಗಳಿಂದಾಗಿ ಹಿಂದೂ ಧರ್ಮ ಜಗತ್ತಿಗೆ ಮಾರ್ಗದರ್ಶನ ಮಾಡಬಹುದು.

– ಪ.ಪೂ. ಸ್ವಾಮಿ ವರದಾನಂದ ಭಾರತಿ

(ಆಧಾರ: ‘ಜಿಜ್ಞಾಸಾ’ ಗ್ರಂಥ, ಶ್ರೀವರದಾನಂದ ಪ್ರತಿಷ್ಠಾನ, ಶ್ರೀ ಕ್ಷೇತ್ರ ಪಂಢರಪುರ, ೧೯೯೮)