SRSmahotsav Delhi 2025 : ಸಂಪಾದಕೀಯ: ‘ಸನಾತನ ರಾಷ್ಟ್ರ’ದ ಶಂಖನಾದ ಏತಕ್ಕಾಗಿ?

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ದೆಹಲಿ 2025

ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದಾಗಿನಿಂದ, ಅಲ್ಪ ಪ್ರಮಾಣದಲ್ಲಿಯೇ ಆದರೂ, ಶತ್ರುಗಳ ಅರಿವಿನಿಂದ ಧರ್ಮ ಮತ್ತು ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ನಡೆಯುತ್ತಿವೆ; ದೇಶದಲ್ಲಿ ಗೌರವಾನ್ವಿತ ಸನಾತನ ಪರಂಪರೆಯ ಪುನರುತ್ಥಾನವಾಗುತ್ತಿದೆ; ಇತಿಹಾಸ, ಶಿಕ್ಷಣ, ಕಾನೂನು, ನ್ಯಾಯ, ಆರ್ಥಿಕತೆ, ಭದ್ರತೆ ಮುಂತಾದ ಎಲ್ಲ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡಲು ಪ್ರಯತ್ನಗಳು ನಡೆಯುತ್ತಿವೆ. ಹೀಗಿರುವಾಗ, ‘ಸನಾತನ ರಾಷ್ಟ್ರ ಏಕೆ ಬೇಕು?’ ಎಂಬ ಪ್ರಶ್ನೆ ಯಾರಿಗಾದರೂ ಮೂಡಬಹುದು. ಕಾಂಗ್ರೆಸ್ಸಿನ ಕರಾಳ ಆಡಳಿತದಿಂದ ದೇಶವು ಒಂದು ಸರ್ವೋಚ್ಚ ಸ್ಥಾನದ ಕಡೆಗೆ ಸಾಗುತ್ತಿರುವ ಧ್ರುವೀಕರಣದ ಪ್ರಕ್ರಿಯೆಯಲ್ಲಿ ಇದು ಪರಿವರ್ತನೆಯ ಸಮಯವಾಗಿದೆ ಮತ್ತು ಅದಕ್ಕಾಗಿಯೇ ಈ ಮಂಥನವು ಅತ್ಯಂತ ಸೂಕ್ಷ್ಮವಾಗಿದೆ. ರಾಷ್ಟ್ರದ ಎಲ್ಲ ಸ್ತರಗಳಲ್ಲಿ ಈ ಪರಿವರ್ತನೆಯಾಗುತ್ತಿರುವಾಗ, ಅದಕ್ಕೆ ಹೆಚ್ಚು ಸೂಕ್ತವಾದ ದಿಕ್ಕನ್ನು ನೀಡುವುದು ಆವಶ್ಯಕವಾಗಿದೆ.

‘ಇದು ಹಿಂದೂ ರಾಷ್ಟ್ರವೇ ಆಗಿದೆ; ಹಾಗಾದರೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿದೆಯೇ?’ ಎಂಬ ಪ್ರಶ್ನೆ ಕೇಳಲಾಗುತ್ತದೆ. ಇದು ಹಿಂದೂ ರಾಷ್ಟ್ರವಾಗಿದ್ದರೆ, ಲವ್ ಜಿಹಾದಿಗಳು ಮತ್ತು ಗೋಹಂತಕರನ್ನು ಬಹಿರಂಗವಾಗಿ ಶಿಕ್ಷಿಸಲಾಗುತ್ತಿತ್ತು, ಸರಕಾರೀಕರಣಗೊಂಡ ದೇವಸ್ಥಾನಗಳಲ್ಲಿ ಹಣದ ಭಾರಿ ಭ್ರಷ್ಟಾಚಾರ ನಡೆಯುತ್ತಿರಲಿಲ್ಲ, ಹಿಂದೂ ದ್ವೇಷವನ್ನು ಕಲಿಸುವ ಮದರಸಾಗಳಿಗೆ ಅನುದಾನಗಳು ಸಿಗುತ್ತಿರಲಿಲ್ಲ, ಒಂದು ಇಂಚು ಭೂಮಿಯನ್ನು ಅತಿಕ್ರಮಿಸುವ ಧೈರ್ಯ ಮತಾಂಧರಿಗೆ ಬರುತ್ತಿರಲಿಲ್ಲ ಮತ್ತು ಹಿಂದೂಗಳಿಗೆ ತಿಳಿಯದ ಹಲಾಲ್ ಕಡ್ಡಾಯವು ಹಿಂದೂಗಳ ಮೇಲೆ ಹೇರಲ್ಪಡುತ್ತಿರಲಿಲ್ಲ. ಆದ್ದರಿಂದ, ಕೇವಲ ರಾಜಕೀಯ ವೇದಿಕೆಯ ಮೇಲೆ ಮಾತ್ರವಲ್ಲದೆ, ಸನಾತನ ಸಂಸ್ಕೃತಿಯ ಆಧ್ಯಾತ್ಮಿಕ ಅಡಿಪಾಯವನ್ನು ಹೊಂದಿರುವ ಆದರ್ಶ ವ್ಯವಸ್ಥೆಯನ್ನು ನಿರ್ಮಿಸುವ; ಹಿಂದೂಗಳಿಗೆ ಎಲ್ಲ ಸ್ತರಗಳಲ್ಲಿ ಕೇವಲ ಭದ್ರತೆಯನ್ನು ಮಾತ್ರವಲ್ಲದೆ, ಮುಂದೆ ಜೀವನದಲ್ಲಿ ಆನಂದವನ್ನು ತಂದುಕೊಡುವಂತಹ ರಾಷ್ಟ್ರ ನಿರ್ಮಾಣವು ಈಗ ನಿರೀಕ್ಷಿತವಾಗಿದೆ.

ಅದಕ್ಕಾಗಿ, ದೇಶದ ರಾಜಧಾನಿಯಲ್ಲಿ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವನ್ನು ಆಯೋಜಿಸಲಾಗುತ್ತಿದೆ. ಅದರ ಧ್ವನಿಯಿಂದ ಅಧರ್ಮರೂಪಿ ಶತ್ರುವಿನ ಮೋಡವು ದೂರವಾಗಿ, ಸನಾತನ ಸಂಸ್ಕೃತಿ ಮತ್ತು ಹಿಂದೂಗಳ ಭದ್ರತೆಗಾಗಿ ನಡೆಯುತ್ತಿರುವ ಸರಕಾರಿ ಮತ್ತು ಹಿಂದುತ್ವನಿಷ್ಠ ಈ ಇಬ್ಬರ ಪ್ರಯತ್ನಗಳಿಗೆ ಸರಿಯಾದ ದಿಕ್ಕು ಮತ್ತು ದೊಡ್ಡ ಗತಿ ದೊರೆಯಲಿದೆ! ‘ಭಾರತ ಸರಕಾರವು ಸನಾತನ ಧರ್ಮಹಿತದ ಕಾರ್ಯವನ್ನು ಮಾಡಬೇಕು’ ಎಂಬ ಬೇಡಿಕೆಗಾಗಿ ಈ ಮಹೋತ್ಸವವಿದೆ.

ಸನಾತನ ರಾಷ್ಟ್ರದ ಪುನರ್ಜಾಗರಣೆ!

‘ಸನಾತನ ರಾಷ್ಟ್ರದ ಪರಿಕಲ್ಪನೆ’ಯ ವೈಚಾರಿಕ ಅಡಿಪಾಯವನ್ನು ಅತ್ಯಂತ ಸುಸ್ಪಷ್ಟ ಮತ್ತು ದೃಢಗೊಳಿಸಲು ಈ ಮಹೋತ್ಸವವಿದೆ. ಯಾವುದೇ ಸಮಾಜದಲ್ಲಿ ಪರಿವರ್ತನೆಯಾಗುವಾಗ, ಅದು ಬೌದ್ಧಿಕ, ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಆಗುವುದು ಅವಶ್ಯಕವಾಗಿದೆ. ಹಿಂದೂಗಳು ತಮ್ಮ ಸಂಸ್ಕೃತಿಯನ್ನು ಮರೆತು, ಪಾಶ್ಚಾತ್ಯ ವಿಕೃತಿಯನ್ನು ಸ್ವೀಕರಿಸಿದ್ದರಿಂದ, ಅವರ ಬೌದ್ಧಿಕ ಮತ್ತು ಮಾನಸಿಕ ಪರಿವರ್ತನೆಗಾಗಿ ಈ ಶಂಖನಾದ ಮಹೋತ್ಸವವಿದೆ.

ಇದರೊಂದಿಗೆ, ದೈಹಿಕ ಸ್ತರದಲ್ಲಿ ಮಾಡಬೇಕಾದ ಕೃತಿಗಳ ಮಾನಸಿಕ ಸಿದ್ಧತೆಗಾಗಿ ಈ ಶಂಖನಾದ ಮಹೋತ್ಸವವಿದೆ. ಇಷ್ಟೇ ಅಲ್ಲದೆ, ಸನಾತನ ರಾಷ್ಟ್ರದ ಪುನರ್ನಿರ್ಮಾಣವು ಆಧ್ಯಾತ್ಮಿಕ ಅಡಿಪಾಯವಿಲ್ಲದೆ ಅಸಾಧ್ಯವಾದ್ದರಿಂದ, ‘ಪ್ರತಿಯೊಬ್ಬರೂ ತಮ್ಮ ಆಧ್ಯಾತ್ಮಿಕ ಬಲವನ್ನು ಹೆಚ್ಚಿಸಬೇಕು’ ಎಂದು ಹೇಳಲು ಈ ಮಹೋತ್ಸವವಿದೆ. ಕ್ಷಾತ್ರತೇಜ ಮತ್ತು ಬ್ರಹ್ಮತೇಜ, ಅಂದರೆ ಶಕ್ತಿ ಮತ್ತು ಭಕ್ತಿ; ಅಂದರೆ ಶ್ರದ್ಧೆ ಮತ್ತು ಶೌರ್ಯದ ಸಂಗಮವೇ ಸನಾತನ ಹಿಂದೂ ರಾಷ್ಟ್ರದ ಅಡಿಪಾಯವಾಗಿದೆ. ಈ ಎರಡೂ ವಿಷಯಗಳ ಪೋಷಣೆಯನ್ನು ಈ ಸಮಸ್ತ ಭಾರತವರ್ಷದಲ್ಲಿ ನಿರ್ಮಿಸಲು ಈ ಮಹೋತ್ಸವವಿದೆ. ಆದ್ದರಿಂದ, ಈ ಮಹೋತ್ಸವದ ಸ್ಥಳವು ಹಿಂದೂಸ್ಥಾನದ ರಾಜಧಾನಿ ದೆಹಲಿ, ಅಂದರೆ ಪಾಂಡವರ ರಾಜಧಾನಿ ಇಂದ್ರಪ್ರಸ್ಥವಾಗಿದೆ. ಗೋವಾದಲ್ಲಿ ನಡೆದ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವವು ನೆಟ್ಟ ಬೀಜವು ವಟವೃಕ್ಷವಾಗಲು ಈ ಮಹೋತ್ಸವವು ನಿಜವಾದ ಅರ್ಥದಲ್ಲಿ ಸಹಾಯಕವಾಗಲಿದೆ ಎಂಬುದು ಮುಂಬರುವ ದಿನಗಳಲ್ಲಿ ಗಮನಕ್ಕೆ ಬರಲಿದೆ!

ಶತ್ರುವಿನ ಅರಿವನ್ನು ಮೂಡಿಸಲು…

‘ಬದುಕಲು ಮತ್ತು ತನ್ನ ಅಸ್ತಿತ್ವಕ್ಕಾಗಿ ಶತ್ರುವಿನ ನಾಶವು ಆವಶ್ಯಕವಾಗಿದೆ. ಅಧರ್ಮರೂಪಿ ಶತ್ರು ಬೆಳೆದಾಗ, ಅವನನ್ನು ಸಾಕ್ಷಾತ್ ಭಗವಂತನ ಅವತಾರವೇ ನಾಶಮಾಡಬಲ್ಲ. ಹಾಗೆ ಮಾಡಿ ಧರ್ಮವನ್ನು ಪುನಃ ಸ್ಥಾಪಿಸಲು ಭಗವಂತನು ಯುಗಯುಗಾಂತರಗಳಿಂದ ಬರುತ್ತಾನೆ. ಭಗವಂತನನ್ನು ಆರಾಧಿಸಿಯೇ ರಾಜ ಮತ್ತು ಪ್ರಜೆ ಶತ್ರುವಿನ ಮೇಲೆ ವಿಜಯ ಸಾಧಿಸಬಹುದು. ಆ ಸಮಯ ಈಗ ಮತ್ತೆ ಬಂದಿದೆ’ ಎಂಬ ಸಂದೇಶ ನೀಡಲು ಈ ಮಹೋತ್ಸವವಿದೆ; ಆದರೆ ಶತ್ರು ತಿಳಿದರೆ ಮಾತ್ರ ಅವನನ್ನು ನಾಶಮಾಡಲು ಸಾಧ್ಯ. ಜನತೆಗೆ ಶತ್ರುವಿನ ಅರಿವನ್ನು ಮೂಡಿಸಲು ಮಹೋತ್ಸವವು ಮಹತ್ವದ ಪಾತ್ರವನ್ನು ನಿರ್ವಹಿಸಲಿದೆ. ಛತ್ರಪತಿ ಶಿವಾಜಿ ಮಹಾರಾಜರು ಕಲಿಯುಗದಲ್ಲಿ ಶತ್ರುವಿನ ಅರಿವನ್ನು ಮಾಡಿಕೊಳ್ಳುವಲ್ಲಿ ಮತ್ತು ಅವರನ್ನು ನಾಶಮಾಡುವಲ್ಲಿ ಭಾರತದ ಸರ್ವೋಚ್ಚ ಉದಾಹರಣೆಯಾಗಿದ್ದರು. ಮಹೋತ್ಸವದಲ್ಲಿನ ಶಿವಾಜಿ ಕಾಲದ ಶಸ್ತ್ರಾಸ್ತ್ರಗಳನ್ನು ನೋಡಿ, ಹಿಂದೂಗಳಲ್ಲಿ ಹೋರಾಟದ ಮನೋಭಾವವು ಜಾಗೃತಗೊಳ್ಳಲಿದೆ. ಗಡಿಯಾಚೆಗಿನ ಶತ್ರುವಿಗಾಗಿ ಭಾರತದ ಪ್ರಧಾನಮಂತ್ರಿ ಮೋದಿ ಅವರು ಎಲ್ಲ ದೃಷ್ಟಿಗಳಿಂದ ಸೇನೆಯನ್ನು ಸಶಕ್ತಗೊಳಿಸುತ್ತಿದ್ದಾರೆ. ದೇಶದೊಳಗಿನ ಶತ್ರುವಿನ ಆರ್ಥಿಕ ಮೂಲಗಳನ್ನು ಅವರು ತಡೆಯುತ್ತಿದ್ದಾರೆ, ಆದರೂ ಆಕ್ರಮಣಗಳು ನಿಂತಿಲ್ಲ. ‘ಸ್ಲೀಪರ್ ಸೆಲ್’ರೂಪಿ ರಾಷ್ಟ್ರದೊಳಗಿನ ಶತ್ರುವನ್ನು ಎದುರಿಸಲು ಹಿಂದೂಗಳು ಸಂಘಟಿತರಾಗಿ ಮತ್ತು ಸಶಕ್ತರಾಗಬೇಕು. ಎಲ್ಲ ರೀತಿಯ ಜಿಹಾದ್ ಮತ್ತು ಮತಾಂತರಗಳನ್ನು ಹಿಂದೂಗಳ ಸಂಘಟನೆ ಮತ್ತು ಹಿಂದೂಗಳ ಹೋರಾಟದ ಮನೋಭಾವವು ನಿಲ್ಲಿಸಬಲ್ಲದು’ ಎಂಬುದನ್ನು ಮಹೋತ್ಸವದ ಮೂಲಕ ಮನದಟ್ಟು ಮಾಡಲಾಗುವುದು. ಹಿಂದೂಗಳ ಸ್ವಂತ, ಕುಟುಂಬ, ಸಮಾಜ ಮತ್ತು ರಾಷ್ಟ್ರದ ರಕ್ಷಣೆಗಾಗಿ ಮಹೋತ್ಸವದ ಮಹತ್ವವು ಅನನ್ಯಸಾಧಾರಣವಾಗಿದೆ. ಮೊಹಮ್ಮದ್ ಜಿನ್ನಾ ಅವರ ಕುತಂತ್ರ ಮತ್ತು ಕಾಂಗ್ರೆಸ್ ಸರಕಾರದ ತುಷ್ಟೀಕರಣದಿಂದಾಗಿ ಹಿಂದೂಗಳು ಅನುಭವಿಸಿದ ಮತ್ತು ಅನುಭವಿಸುತ್ತಿರುವ ಭಾರಿ ದೈಹಿಕ, ಮಾನಸಿಕ ಮತ್ತು ಆರ್ಥಿಕ ಆಘಾತಗಳ ಮೇಲೆ ‘ಬುಲ್ಡೋಜರ್’ ಮತ್ತು ‘ಡಿಟೆನ್ಶನ್ ಸೆಂಟರ್’ಗಳಂತಹ ಕ್ರಮಗಳು ಬೇಕೇ ಬೇಕು; ಆದರೆ ಅದಕ್ಕೂ ಮುಂದೆ ಹೋಗಿ ಸರಕಾರವು ಹಿಂದೂಗಳ ರಕ್ಷಣೆಗಾಗಿ ನಕ್ಸಲ್ವಾದದಂತೆಯೇ ಭಯೋತ್ಪಾದನೆಯನ್ನು ಸಮೂಲವಾಗಿ ನಿರ್ಮೂಲನೆ ಮಾಡಬೇಕು. ಬಂಡವಾಳಶಾಹಿ ವ್ಯವಸ್ಥೆಯಿಂದ ನಿರ್ಮಾಣವಾದ ‘ಡೀಪ್ ಸ್ಟೇಟ್’, ಅದರ ಮೂಲಕ ‘ಜೆನ್ ಝೀ’ಗಳನ್ನು ಬಳಸಿಕೊಂಡು ಮಾಡಲಾಗುವ ಅಧಿಕಾರ ಬದಲಾವಣೆ; ಕಳೆದ ೧೦೦ ವರ್ಷಗಳಿಂದ ಮತಾಂಧ ಮತ್ತು ಸಾಮ್ಯವಾದಿಗಳ ಅಪವಿತ್ರ ಮೈತ್ರಿಯಿಂದ ‘ಸರ್ವಧರ್ಮ ಸಮಭಾವ’, ‘ಮಾನವತಾವಾದ’, ‘ನಿಧರ್ಮಿತ್ವ’, ‘ಪಾಶ್ಚಾತ್ಯ ಆಧುನಿಕತೆ’, ‘ಪ್ರಗತಿಪರತ್ವ’, ‘ಸುಳ್ಳು ಕಥೆಗಳು’, ‘ಟೂಲ್‌ಕಿಟ್’ಗಳ ಮೂಲಕ ಹಿಂದೂಗಳ ಮೇಲೆ ಮಾಡಲಾದ ವೈಚಾರಿಕ ಬುದ್ಧಿಭ್ರಮಣೆ ಇವೆಲ್ಲವೂ ಹಿಂದೂಗಳ ಇಂದಿನ ಶತ್ರುಗಳಾಗಿವೆ. ಅವುಗಳ ವೈಚಾರಿಕ ನಾಶವನ್ನು ಹೇಗೆ ಮಾಡುವುದು? ಎಂಬುದನ್ನು ಮಹೋತ್ಸವದಿಂದ ಕಲಿಯಲು ಸಾಧ್ಯವಾಗಲಿದೆ. ರಾಷ್ಟ್ರ ಎಂದರೆ ರಾಷ್ಟ್ರದ ಜನತೆ. ಅದು ರಾಷ್ಟ್ರವನ್ನು ರಕ್ಷಿಸುತ್ತದೆ ಮತ್ತು ರಾಷ್ಟ್ರವು ಅದನ್ನು ರಕ್ಷಿಸುತ್ತದೆ. ಇಬ್ಬರ ರಕ್ಷಣೆಯನ್ನು (ಸನಾತನ) ಧರ್ಮ ಮಾಡುತ್ತದೆ. ಇಂದು ಧರ್ಮದ ಆಚರಣೆಯು ಕನಿಷ್ಠವಾಗಿದೆ ಮತ್ತು ಆ ಆಚರಣೆಯನ್ನು ಮಾಡುವ ಹಿಂದೂಗಳು ಕೂಡ ಕಡಿಮೆಯಾಗುತ್ತಿದ್ದಾರೆ. ಧರ್ಮಾಚರಣೆಯ ಅರಿವು ಮಹೋತ್ಸವದ ಮೂಲಕ ಹಿಂದೂಗಳ ಮನಸ್ಸಿನಲ್ಲಿ ಬೇರೂರಲಿದೆ.

ಹೀಗೆ ಬರಲಿದೆ ಸನಾತನ ರಾಷ್ಟ್ರ!

‘ಸನಾತನ ರಾಷ್ಟ್ರದ ಶಂಖನಾದವು ಆಗುತ್ತಿದೆ; ಆದರೆ ಅದು ಹೇಗೆ ಬರಲಿದೆ?’ ಎಂಬ ಪ್ರಶ್ನೆ ಯಾರಿಗಾದರೂ ಮೂಡಬಹುದು. ‘ಕೇಳಿದರೆ ಸಿಗುತ್ತದೆ’ ಎಂಬುದು ಒಂದು ಸರಳ ನಿಯಮವಾಗಿದೆ. ಕೋಟ್ಯಂತರ ಹಿಂದೂಗಳಿಗೆ ಸನಾತನ ರಾಷ್ಟ್ರದ ಮಹತ್ವ ತಿಳಿದರೆ, ಅವರು ಅದನ್ನು ಬೇಡುತ್ತಾರೆ. ಅವರಿಗೆ ಸನಾತನ ರಾಷ್ಟ್ರದ ಮಹತ್ವ ತಿಳಿಯಲು ಮಹೋತ್ಸವವು ಮಾಧ್ಯಮವಾಗಲಿದೆ. ‘ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೂಲಕವೇ ಈ ಸನಾತನ ರಾಷ್ಟ್ರವು ಬರಬಹುದು’ ಎಂಬುದನ್ನು ಪ್ರತಿಬಿಂಬಿಸಲು ಮಹೋತ್ಸವದ ಭಾಗವಹಿಸುವಿಕೆ ಗಮನಾರ್ಹವಾಗಿರಲಿದೆ. ಸ್ವದೇಶಿಯ ಜಾಗೃತಿಯನ್ನು ಮಾಡಿ ರಾಷ್ಟ್ರದ ಆರ್ಥಿಕ ಅಭಿವೃದ್ಧಿಗಾಗಿ ಸರಕಾರವು ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಿದೆ; ಆದರೆ ರಾಷ್ಟ್ರದ ಆಧ್ಯಾತ್ಮಿಕ ಅಭಿವೃದ್ಧಿಯಾದಾಗಲೇ ಅದು ನಿಜವಾದ ಅರ್ಥದಲ್ಲಿ ಮಹಾಶಕ್ತಿಯಾಗಲಿದೆ ಎಂಬುದನ್ನು ಮಹೋತ್ಸವದ ಮೂಲಕ ಸಾಮಾನ್ಯ ಜನರಿಗೆ ಒತ್ತಿಹೇಳಲಾಗುವುದು. ದೇಶಕ್ಕೆ ಸನಾತನ ಧರ್ಮದ ಸಂಪೂರ್ಣ ಅಧೀಷ್ಠಾನ ನೀಡಿ ಮತ್ತು ಸಂವಿಧಾನದಲ್ಲಿ ಬದಲಾವಣೆ ಮಾಡಿದರೆ, ‘ಸನಾತನ ರಾಷ್ಟ್ರ’ವು ಶೀಘ್ರದಲ್ಲೇ ಬರಲಿದೆ!