ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಸಮರ್ಪಣೆಯ ಅವಶ್ಯಕತೆ !

ಶ್ರೀ. ನಿತ್ಯಾನಂದ ದಾಸರ ಪರಿಚಯ

ಶ್ರೀ. ನಿತ್ಯಾನಂದ ದಾಸರು ಗಾಯತ್ರಿ ಪರಿವಾರದ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುತ್ತಿದ್ದು ಒಡಿಶಾದಲ್ಲಿ ಕಾರ್ಯನಿರತರಾಗಿದ್ದಾರೆ.ಹಿಂದೂ ರಾಷ್ಟ್ರ ಅಧಿವೇಶನದ ವಿಷಯದಲ್ಲಿ ಶ್ರೀ. ನಿತ್ಯಾನಂದ ದಾಸರಲ್ಲಿರುವ ಭಾವ ‘ನಾನು ಒಡಿಶಾ (ಉತ್ಕಲ) ಪ್ರಾಂತದಿಂದ, ಅಂದರೆ ಜಗನ್ನಾಥಪುರಿ ಧಾಮದಿಂದ ಬಂದಿದ್ದೇನೆ. ಸದ್ಯ ಜಗನ್ನಾಥಪುರಿಯಲ್ಲಿ ಜಗನ್ನಾಥನ ರಥಯಾತ್ರೆ ನಡೆಯುತ್ತಿದೆ. ‘ನಾವು ಹಿಂದೂ ರಾಷ್ಟ್ರ ಅಧಿವೇಶನದ ಸ್ಥಳಕ್ಕೆ ತಲುಪಿದಾಗ ಎಲ್ಲರ ಮುಖದಲ್ಲಿನ ಹರ್ಷ ಮತ್ತು ಸಂತೋಷವನ್ನು ನೋಡಿ ನಾವು ಸುಧರ್ಮಾ ಸಭೆಗೆ ತಲಪಿದ್ದೇವೆ’, ಎಂಬ ದಿವ್ಯ ಭಾವ ನಮ್ಮ ಮನಸ್ಸನ್ನು ಉತ್ತೇಜಿಸುತ್ತಿತ್ತು ಹಾಗೂ ಕೊನೆಯ ತನಕ ಅದೇ ಭಾವಾವಸ್ಥೆಯಲ್ಲಿ ಲೀನವಾಗಿದ್ದೆವು.’

ಶ್ರೀ. ನಿತ್ಯಾನಂದ ದಾಸ

೧. ರಾಷ್ಟ್ರಭಕ್ತರ ನಿರ್ಮಾಣ ಕಾರ್ಯ ಯಶಸ್ವಿಯಾಗಲು ದೇಶದ ಪ್ರತಿ ಮಂದಿರದಿಂದ ಧರ್ಮಶಿಕ್ಷಣದ ಕಾರ್ಯ ಆಗಬೇಕಾಗಿದೆ !

ನಾನು ಅನೇಕ ವರ್ಷಗಳಿಂದ ಗಾಯತ್ರಿ ಪರಿವಾರದ ಮೂಲಕ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕಾರ್ಯ ಮಾಡುತ್ತಿದ್ದೇನೆ. ರೂರಕೆಲಾ (ಓಡಿಶಾ) ದಲ್ಲಿ ನನಗೆ ಹಿಂದೂ ಜನಜಾಗೃತಿಯ ಶ್ರೀ. ಪ್ರಕಾಶ ಮಾಲೋಂಡಕರ ಇವರು ಭೇಟಿಯಾದರು. ಇವರಿಂದ ನನಗೆ ಒಂದು ಹೊಸ ದೃಷ್ಟಿಕೋನ ಸಿಕ್ಕಿತು ಹಾಗೂ ಹಿಂದೂ ಧರ್ಮದ ಸ್ಥಿತಿಯ ಅರಿವಾಯಿತು. ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳ ಎಲ್ಲ ಕ್ಷೇತ್ರಗಳನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ಹಿಂದೂಗಳು ಮಾತ್ರ ಚಿಕ್ಕಪುಟ್ಟ ವಿಷಯಗಳಲ್ಲಿಯೆ ಸಿಲುಕಿದ್ದಾರೆ. ಮುಸಲ್ಮಾನರು ಮತ್ತು ಕ್ರೈಸ್ತರು ಎಷ್ಟು ಆಯೋಜನಬದ್ಧವಾಗಿ ಕಾರ್ಯ ಮಾಡುತ್ತಿದ್ದಾರೆಂದರೆ, ‘ಮುಂದೆ ನಾವು ಗಾಯತ್ರಿಯಜ್ಞ ಎಲ್ಲಿ ಮಾಡುವುದು ?’, ಎನ್ನುವ ಪ್ರಶ್ನೆ ಉದ್ಭವಿಸುವ ಸಾಧ್ಯತೆಯಿದೆ. ಅವರ ಕಾರ್ಯ ದಿನೇದಿನೇ ಹೆಚ್ಚುತ್ತಾ ಇದೆ. ಆದ್ದರಿಂದ ಕಾಲಕ್ರಮೇಣ ಹಿಂದೂಗಳ ಎಲ್ಲ ಕಾರ್ಯಗಳು ಸ್ತಬ್ಧವಾಗುತ್ತಿವೆ. ಈ ಪರಿಸ್ಥಿತಿ ನನಗೆ ಅರಿವಾದ ನಂತರ ನಾನು ನನ್ನ ಉಳಿದ ಸಂಪೂರ್ಣ ಜೀವನವನ್ನು ಹಿಂದೂ ರಾಷ್ಟ್ರಸ್ಥಾಪನೆಗಾಗಿ ಮುಡಿಪಾಗಿಡಲು ನಿರ್ಧರಿಸಿದ್ದೇನೆ. ಸಮರ್ಥ ರಾಮದಾಸಸ್ವಾಮಿಗಳು ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಊರಿಂದೂರಿಗೆ ಸಂಚರಿಸಿ ಹನುಮಾನ ಮಂದಿರಗಳನ್ನು ಸ್ಥಾಪಿಸಿದರು. ಅದರ ಮೂಲಕ ಅವರು ಯುವಕರನ್ನು ಸಂಘಟಿಸಿ ಬಲಿಷ್ಠ ಸೈನ್ಯವನ್ನು ಸಿದ್ಧಪಡಿಸಿದರು. ಆದ್ದರಿಂದ ಭಾರತದಲ್ಲಿನ ಪ್ರತಿಯೊಂದು ಊರಿನಲ್ಲಿ ಒಂದು ದೇವಸ್ಥಾನವಾದರೂ ಇದೆ. ಈ ಪ್ರತಿಯೊಂದು ದೇವಸ್ಥಾನದಲ್ಲಿ ಧರ್ಮಶಿಕ್ಷಣದ ಕಾರ್ಯವನ್ನು ಆರಂಭಿಸಿದರೆ ರಾಷ್ಟ್ರಭಕ್ತರ ನಿರ್ಮಾಣ ಕಾರ್ಯ ಶೀಘ್ರದಲ್ಲಿಯೆ ಯಶಸ್ವಿಯಾಗುವುದು.

೨. ಅಸ್ತಿತ್ವವನ್ನು ಉಳಿಸಿಕೊಳ್ಳಲು ಹಿಂದೂಗಳು ಸಂಘಟಿತರಾಗಿ ಪ್ರಯತ್ನಿಸಬೇಕಾಗಿದೆ !

೧೯೪೭ ರಿಂದ ಮತಾಂಧರು ಮತ್ತು ಕ್ರೈಸ್ತರ ಕಾರ್ಯ ಶಿಸ್ತುಬದ್ಧವಾಗಿ ನಡೆಯುತ್ತಿದೆ. ಈಗ ಆ ಸಂಕಟ ನಮ್ಮ ಬಾಗಿಲಿಗೆ ಬಂದು ತಲುಪಿದೆ. ಅದು ಯಾವಾಗ ನಮ್ಮ ಮನೆಯೊಳಗೆ ನುಗ್ಗುವುದು ಎಂದು ಹೇಳಲು ಸಾಧ್ಯವಿಲ್ಲ. ಒಮ್ಮೆ ಅದು ನಮ್ಮ ಮನೆಗೆ ನುಗ್ಗಿದರೆ ನಾವು ಏನೂ ಮಾಡುವ ಹಾಗಿಲ್ಲ. ಆದ್ದರಿಂದ ಈ ಭಯಂಕರ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ಧರಾಗಿರಬೇಕು. ಮಂದಿರಗಳ ಮೂಲಕ ನಮಗೆ ಈ ಸೌಲಭ್ಯ ಲಭಿಸಬಹುದು. ಒಂದು ಆಂತರಿಕ ವ್ಯವಸ್ಥೆಯೊಂದಿಗೆ ಎಲ್ಲರನ್ನೂ ಜೋಡಿಸಿಡಬೇಕು. ಉಪಲಬ್ಧ ಮಾಹಿತಿಗನುಸಾರ ನಾವು ಒಬ್ಬ ಮುಸಲ್ಮಾನನ ಕೆನ್ನೆಗೆ ಹೊಡೆದರೂ ಅದರ ವಾರ್ತೆ ಜುಮ್ಮಾ ಮಸೀದಿಗೆ ಹೋಗಿ ತಲುಪುತ್ತದೆ. ಜುಮ್ಮಾ ಮಸೀದಿಯ ಪರಿಸರದಲ್ಲಿನ ಎಲ್ಲ ಮತಾಂಧರಿಗೆ ಸಂದೇಶ ಹೋದ ತಕ್ಷಣ ೧೦ ನಿಮಿಷಗಳಲ್ಲಿ ೫ ಸಾವಿರ ಜನರು ಅಲ್ಲಿ ಸೇರುತ್ತಾರೆ. ತದ್ವಿರುದ್ಧ ನಮ್ಮ ಒಬ್ಬ ಹಿಂದೂ ಬಾಂಧವನಿಗೆ ಯಾರಾದರೂ ರಸ್ತೆಯಲ್ಲಿ ಹೊಡೆಯುತ್ತಿದ್ದರೆ, ನಮ್ಮ ಹಿಂದೂಗಳು ಪಕ್ಕದಲ್ಲಿ ನಿಂತು ಆ ಘಟನೆಯ ಚಿತ್ರಸುರುಳಿಯನ್ನು ತಯಾರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವರು; ಆದರೆ ಆ ಹಿಂದೂ ಬಾಂಧವನ ಸಹಾಯಕ್ಕೆ ಯಾರೂ ಮುಂದೆ ಬರುವುದಿಲ್ಲ. ಆದ್ದರಿಂದ ಇಂತಹ ಎಲ್ಲ ಹಿಂದೂಗಳನ್ನು ಜಾಗೃತಗೊಳಿಸಲು ಪ್ರತಿಯೊಂದು ಊರಿನಲ್ಲಿ ಸಂಘಟನೆಗಳನ್ನು ನಿರ್ಮಾಣ ಮಾಡಬೇಕು. ನಾವು ಸಂಪರ್ಕ ವ್ಯವಸ್ಥೆಯ ಜಾಲವನ್ನು ನಿರ್ಮಿಸಬೇಕಾಗಿದೆ. ಹಿಂದೂಗಳ ಶತ್ರುಗಳು ಬಹಳಷ್ಟು ಮುಂದೆ ಹೋಗಿದ್ದಾರೆ. ಆದ್ದರಿಂದ ಎಲ್ಲ ಹಿಂದುತ್ವ ನಿಷ್ಠರು ಒಗ್ಗಟ್ಟಾಗಿ ಕಾರ್ಯ ಮಾಡುತ್ತಿದ್ದರೆ ಹಿಂದೂ ರಾಷ್ಟ್ರಕಾರ್ಯದಲ್ಲಿ ಖಂಡಿತ ಯಶಸ್ವಿಯಾಗಬಹುದು.’

– ಶ್ರೀ. ನಿತ್ಯಾನಂದ ದಾಸ, ಉಪವಿಭಾಗೀಯ ಸಮನ್ವಯಕ, ಗಾಯತ್ರಿ ಪರಿವಾರ, ಸುಂದರಗಡ, ಒಡಿಶಾ.