ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !

ಒಂದು ಕಂಪನಿಯ ತೂಕ ಇಳಿಸುವ ‘ಇಂಜೆಕ್ಟೇಬಲ್’ (ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುವ) ಔಷಧವು ಭಾರತವನ್ನು ಹೊರತುಪಡಿಸಿ ಇತರ ದೇಶಗಳ ಮಾರುಕಟ್ಟೆಯಲ್ಲಿ ಈಗಾಗಲೇ ಲಭ್ಯವಿತ್ತು. ಇದು ಭಾರತಕ್ಕೆ ಬರುವ ಹಾದಿಯಲ್ಲಿದ್ದು, ಸೆಪ್ಟೆಂಬರ್‌ ೨೦೨೫ ರಲ್ಲಿ ಇಲ್ಲಿ ಬಿಡುಗಡೆಯಾಯಿತು. ಪ್ರಸ್ತುತ ಬೊಜ್ಜು ಅಥವಾ ತೂಕ ಹೆಚ್ಚಳ ಮತ್ತು ಅದಕ್ಕೆ ಸಂಬಂಧಿಸಿದ ‘ಸಾಂಕ್ರಾಮಿಕವಲ್ಲದ ರೋಗಗಳು’ (ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ ಇತ್ಯಾದಿ) ಇವುಗಳು ಬಹಳ ಚಿಂತೆಯ ವಿಷಯವಾಗಿದೆ. ಆದ್ದರಿಂದ, ಇವುಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಯಾವಾಗಲೂ ಬೇಡಿಕೆ ಇರುತ್ತದೆ ಮತ್ತು ‘ಬೇಡಿಕೆಗೆ ತಕ್ಕ ಪೂರೈಕೆ’ ಎಂಬ ಮಾತಿನಂತೆ ಅವು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ.

ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ

 

ಈ ರೀತಿಯ ಔಷಧಿಗಳ ಮಾರುಕಟ್ಟೆಯ ಪಾಲು ೨೦೨೧ ರಿಂದ ೨೦೨೫ ರವರೆಗೆ ೧ ಕೋಟಿ ೬ ಲಕ್ಷದಿಂದ ೧೦ ಕೋಟಿಗಳಷ್ಟು ಹೆಚ್ಚಾಗಿದೆ. ಈ ಔಷಧಿಯಿಂದ ಶೇಕಡಾ ೪೦ ರಷ್ಟು ಜನರಲ್ಲಿ ಹೊಟ್ಟೆಯ ಸಮಸ್ಯೆಗಳು, ‘ಪ್ಯಾಂಕ್ರಿಯಾಸ್’ ಹಾಗೂ ಕಿಡ್ನಿ ಮೇಲಾಗುವ ಪರಿಣಾಮಗಳಿಂದ ಹಿಡಿದು, ಥೈರಾಯ್ಡ್ ಕ್ಯಾನ್ಸರ್‌ ಬರುವ ಸಾಧ್ಯತೆಯವರೆಗೂ ಏನಾದರೂ ಸಣ್ಣ-ಪುಟ್ಟ ಅಥವಾ ದೊಡ್ಡ ಹಾನಿಗಳು ಕಂಡುಬಂದಿವೆ. ಇದರ ಬಗ್ಗೆ ಅಭಿಪ್ರಾಯವೇನೆಂದರೆ, ತಮ್ಮ ದೇಹಕ್ಕಾಗಿ ಏನು ಮಾಡಬೇಕು ಎಂಬುದು ಆಯಾ ವ್ಯಕ್ತಿಗೆ ಸೇರಿದ ವಿಷಯವಾಗಿದೆ. ಅವರು ಅದರಿಂದಾಗುವ ಹಾನಿಗಳನ್ನು ತಿಳಿದುಕೊಂಡು ‘ಮಾಹಿತಿಯುಕ್ತ ನಿರ್ಧಾರ’ (Informed Decision) ತೆಗೆದುಕೊಳ್ಳಬೇಕು. ಒಟ್ಟಾರೆಯಾಗಿ ನಾವು ಇದರಿಂದ ಕಲಿಯಬೇಕಾದ ಅಂಶವೆಂದರೆ ನಮ್ಮ ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ನಾವು ವಿವೇಚನೆಯಿಂದ ತೆಗೆದುಕೊಳ್ಳಬೇಕು ಮತ್ತು ಮುಂದಿನ ಪೀಳಿಗೆಗೂ ಈ ವಿವೇಚನೆಯನ್ನು ಕಲಿಸಬೇಕು; ಏಕೆಂದರೆ ಇಂತಹ ಜಾಹೀರಾತುಗಳು ನಮಗಿಂತ ಹೆಚ್ಚಾಗಿ ಇಂದಿನ ಪೀಳಿಗೆಯಲ್ಲಿ ಬಾಲ್ಯದಿಂದಲೇ ಹೆಚ್ಚು ಪರಿಣಾಮ ಬೀರಿವೆ.

ತೂಕ ಹೆಚ್ಚಳವನ್ನು ತಡೆಯಲು ಆಹಾರದ ನಿಗ್ರಹ ಮತ್ತು ವ್ಯಾಯಾಮವೇ ಯೋಗ್ಯ ಪರಿಹಾರಗಳು !

ಸುಮಾರು ಶೇಕಡಾ ೩೫ ರಷ್ಟು ಜನಸಂಖ್ಯೆ ಸ್ಥೂಲಕಾಯದ (ಬೊಜ್ಜಿನ) ವರ್ಗಕ್ಕೆ ಸೇರುತ್ತದೆ ಮತ್ತು ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಲು ಯಾವುದೇ ‘ತ್ವರಿತ ಮಾತ್ರೆ’ (Quick pill) ಇಲ್ಲ. ಇಂತಹ ಉತ್ಪನ್ನಗಳಿಂದ ಜೀರ್ಣಕ್ರಿಯೆಯ ತೊಂದರೆಗಳು, ಉಷ್ಣತೆ, ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ, ಉರಿ ಮುಂತಾದ ಲಕ್ಷಣಗಳು ಹೆಚ್ಚಾಗುತ್ತವೆ ಮತ್ತು ಆ ಉತ್ಪನ್ನದ ಬಳಕೆಯನ್ನು ನಿಲ್ಲಿಸಿದ ನಂತರವೂ ತೊಂದರೆ ಮುಂದುವರಿಯುವುದು ಕಂಡುಬರುತ್ತದೆ. ಅನಿವಾರ್ಯವಾದ ಕೆಲವು ಅನಾರೋಗ್ಯಕರ ಪರಿಸ್ಥಿತಿಗಳನ್ನು ಹೊರತುಪಡಿಸಿ, ಮೇಲ್ನೋಟಕ್ಕೆ ಸುಲಭವಾಗಿ ಕಾಣುವ ಮಾರ್ಗವೆಂದು ಸುಮ್ಮನೆ ಈ ದಾರಿ ಹಿಡಿಯುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ತೂಕ ಹೆಚ್ಚಾಗುವಂತಹ ದೇಹ ಪ್ರಕೃತಿ ಇದ್ದರೆ, ಉದ್ದೇಶಪೂರ್ವಕವಾಗಿ ಬಾಲ್ಯದಿಂದಲೇ ಈ ಪ್ರಯತ್ನಗಳನ್ನು ಮಾಡುತ್ತಿರಬೇಕು. ಪೋಷಕರಾಗಿ ನಾವು ಮಕ್ಕಳಿಗೆ ಈ ವಿಷಯವನ್ನು ಹೇಳುತ್ತಿರಬೇಕು, ಅಂತಹ ಆಹಾರ ಪದ್ಧತಿಯನ್ನು ರೂಢಿಸಬೇಕು. ಇದಕ್ಕೆ ಮಕ್ಕಳು ಅಳಬಹುದು, ಸಿಟ್ಟು ಮಾಡಿಕೊಳ್ಳಬಹುದು, ಮಾಡಲಿ ಬಿಡಿ; ಒಂದು ದೊಡ್ಡ ಗುರಿಗಾಗಿ ಅವರು ಸ್ವಲ್ಪ ಅತ್ತರೂ ಪರವಾಗಿಲ್ಲ, ನಡೆಯುತ್ತದೆ.

ತೂಕವು ಹೆಚ್ಚಾದಂತೆ ಅನೇಕ ಗಂಭೀರ ಕಾಯಿಲೆಗಳು ನಿಧಾನವಾಗಿ ಸೇರಿಕೊಳ್ಳುತ್ತವೆ. ವಯಸ್ಸಾದಂತೆ ಈ ತೊಂದರೆಯು ಇನ್ನೂ ಅಂಟಿ ಕೊಳ್ಳುತ್ತವೆ. ‘ಸಲಾಡ್’ (ಹಸಿ ತರಕಾರಿಗಳ ಕೋಸಂಬರಿ) ಮತ್ತು ಹಸಿ ತರಕಾರಿಗಳನ್ನು ತಿಂದು ತೂಕವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು, ಇದರಿಂದ ದೀರ್ಘಕಾಲದ ವರೆಗೆ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೊಟ್ಟೆಯ ಮತ್ತು ಪೋಷಣೆಯ ದೃಷ್ಟಿಯಿಂದ ಅವು ಪರಿಪೂರ್ಣವಲ್ಲ, ತೊಂದರೆದಾಯಕವೇ ಆಗಿದೆ. ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು, ಇದು ಮೊದಲ ಮೆಟ್ಟಿಲಾಗಿದೆ ಮತ್ತು ಹೆಚ್ಚಾದರೆ ಶಾಶ್ವತವಾಗಿರುವ ದೀರ್ಘಕಾಲದ ವರೆಗೆ ಆರೋಗ್ಯಕರ ದೃಷ್ಟಿಕೋನವನ್ನಿಟ್ಟು ತೂಕವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು (Sustainable weight ), ಅಂದರೇ ಆಹಾರದ ನಿಗ್ರಹ ಮತ್ತು ವ್ಯಾಯಾಮವೇ ಇದಕ್ಕೆ ಉಪಾಯವಾಗಿದೆ; ಮನಸ್ಸನ್ನು ಸ್ಪಲ್ಪ ಮಟ್ಟಿಗೆ ಬಗ್ಗುಬಡಿಯಲೇ ಬೇಕಾಗುತ್ತದೆ, ಸ್ವಲ್ಪ ಸಮಯವನ್ನು ಕೊಡಬೇಕಾಗುತ್ತದೆ, ಬೇರೆ ಯಾವ ಪರಿಹಾರವಿಲ್ಲ.

ಕೆಲವು ಸಾಮಾನ್ಯ ಮಾರ್ಗದರ್ಶಕ ಸೂಚನೆಗಳು

೧. ಚಳಿಗಾಲವನ್ನು ಹೊರತುಪಡಿಸಿ ಇತರ ಋತುಗಳಲ್ಲಿ ತಿಂಡಿಯನ್ನು ತಿನ್ನುವುದು ತಡೆಯಬೇಕು.

೨. ಹಗಲು ಸುಮಾರು ಮಧ್ಯಾಹ್ನ ೧ ಗಂಟೆಯ ಒಳಗೆ ಮತ್ತು ರಾತ್ರಿಯ ೮ ಗಂಟೆಯ ಒಳಗೆ ಊಟವನ್ನು ಮಾಡಬೇಕು.

೩. ಹುರುಳಿ, ಹೆಸರುಕಾಳು, ಜವೆಗೋದಿ, ಸಜ್ಜೆ, ಜೋಳ, ಮಿಲೆಟ್ಸ್ ಇಂತಹ ಚಿಕ್ಕ ಆಕಾರದ ಧಾನ್ಯಗಳನ್ನು ಉಪಯೋಗಿಸಬೇಕು. ಅನ್ನಕ್ಕಾಗಿ ಸಣ್ಣ ಕಾಳಿನಂತಿರುವ ಅಕ್ಕಿಯನ್ನೇ ಬಳಸಿ. ಗಂಜಿಯನ್ನು ಬಸಿದ ಅನ್ನವನ್ನು ಸೇವಿಸಬೇಕು.

೪. ಆಹಾರದ ಪ್ರಮಾಣವನ್ನು ಮಿತಿಯಲ್ಲಿಡುವುದು. ಸರ್ವಗ್ರಹ, ಅಂದರೆ ಎಲ್ಲ ಪದಾರ್ಥಗಳನ್ನು ಸೇರಿಸಿ ಆಹಾರದ ಪ್ರಮಾಣವನ್ನು ಕಡಿಮೆ ಮಾಡುವುದು.

೫. ಚಳಿಗಾಲ ಅಥವಾ ಮಳೆಗಾಲದಲ್ಲಿ ಸಲಹೆ ಪಡೆದು ಬಿಸಿ / ಉಗುರುಬೆಚ್ಚಗಿರುವ / ಔಷಧಯುಕ್ತ ಸಿದ್ಧಪಡಿಸಿದ ನೀರನ್ನು ಕುಡಿಯುವುದು.

೬. ರಾತ್ರಿಯ ಊಟವನ್ನು ಅರ್ಧದಷ್ಟು ಮಾಡುವುದು ಅಥವಾ ತೆಳುವಾದ ಸೂಪ್‌ / ಹಗುರÀ ಮತ್ತು ಸುಲಭವಾಗಿ ಜೀರ್ಣವಾಗುವ ದ್ರವರೂಪದ ಕಷಾಯ

೭. ನಿದ್ರೆ ನಿಯಮಿತವಾಗಿರಬೇಕು. ತಪ್ಪದೇ ವ್ಯಾಯಾಮವನ್ನು ಮಾಡುತ್ತಿರುವುದು.

೮. ‘ರೆಸಿಪಿ’ (ಅಡುಗೆ ವಿಧಾನಗಳು) : ಥಾಲಿಪಿಟ್ಟು, ತರಕಾರಿ ಖಿಚಡಿ, ತರಕಾರಿ ಪಲ್ಯಗಳು, ರೊಟ್ಟಿ, ಕಟ್ಲೇಟ್, ಸೂಪ್, ವಿವಿಧ ಧಾನ್ಯಗಳ ದೋಸೆ, ಹೆಸರುಬೇಳೆ ಸಾರು-ಅನ್ನ, ಹುರುಳಿಯ ಝುಣಕಾ-ಅನ್ನ, ಧಪಾಟೆ (ಥಾಲಿಪಿಟ್ಟು) ತುಪ್ಪ, ಮಜ್ಜಿಗೆಯಲ್ಲಿನ ಸೊಪ್ಪು ಪಲ್ಯಗಳು – ರೊಟ್ಟಿ.

೯. ಪ್ರತಿದಿನ ಮೈಗೆ ಎಳ್ಳೆಣ್ಣೆ ಮತ್ತು ಕೊಬ್ಬು ಸಂಗ್ರಹವಾಗುವಲ್ಲಿ ಸಾಸಿವೆ ಎಣ್ಣೆಯಿಂದ ಅಭ್ಯಂಗ ಸ್ನಾನ ಮಾಡುವುದು, ತ್ರಿಫಲ, ಮೆಂತೆ ಇತ್ಯಾದಿಗಳ ಕೊಬ್ಬು ಕರಗಿಸುವ ಪದಾರ್ಥಗಳ ಉಟಣೆಯನ್ನು ಬಳಸುವುದು.

೧೦. ಬಹಳಷ್ಟು ಎಳನೀರು, ಹಣ್ಣುಗಳು, ಹಣ್ಣಿನ ರಸ, ಬೇಯಿಸದÀ ತರಕಾರಿಗಳನ್ನು ತಿಂದು ಹೊಟ್ಟೆಯಲ್ಲಿ ಗ್ಯಾಸ್‌ ಆಗಿ(ವಾಯು), ಹೊಟ್ಟೆ ಉಬ್ಬಿದ್ದರೆ ಅದರಿಂದಲೂ ತೂಕ ಹೆಚ್ಚಾಗಿರುವುದು ಕಂಡುಬರುತ್ತದೆ.

೧೧. ತೂಕ ಹೆಚ್ಚಳಕ್ಕೆ ಮೂಲ ಕಾರಣಗಳಾದ ಥೈರಾಯ್ಡ್‌, ಮುಟ್ಟಿನ ಸಮಸ್ಯೆಗಳು, ಮಧುಮೇಹ, ಅರ್ಬುದರೋಗ ಇವುಗಳಿಗೆ ಆಯುರ್ವೇದಾನುಸಾರ ಔಷಧಗಳನ್ನು ತೆಗೆದುಕೊಳ್ಳುವುದು.

೧೨. ಹೊಟ್ಟೆಯ ಸಮಸ್ಯೆಗಳಿಗೆ ವೈದ್ಯರಿಂದ ಔಷಧಗಳು, ಪಂಚ ಕರ್ಮ ಮತ್ತು ಆಹಾರದ ಬಗ್ಗೆ ಮಾರ್ಗದರ್ಶನ ಪಡೆಯಬೇಕು.

ಈ ಎಲ್ಲಾ ಪರಿಹಾರಗಳು ನಮಗೆ ತಿಳಿದಿರುತ್ತವೆ, ಅವು ನಮ್ಮ ಕೈಗೆಟುಕುವಂತೆಯೇ ಇರುತ್ತವೆ; ಆದರೆ ಎಲ್ಲದರಲ್ಲೂ ಮುಖ್ಯವಾದ ವಿಷಯವೆಂದರೆ, ಆ ವ್ಯಕ್ತಿಗೆ ಇದೆಲ್ಲವನ್ನೂ ಪಾಲಿಸುವ ಸ್ವಂತ ಇಚ್ಛೆ ಇರಬೇಕು. ಕುದುರೆಯನ್ನು ನೀರಿನ ವರೆಗೆ ಕರೆದುಕೊಂಡು ಹೋಗಬಹುದು; ಆದರೆ ನೀರನ್ನು ಅದೇ ಕುಡಿಯಬೇಕು, ಇದು ಖಂಡಿತ ! (೧೦.೧೧.೨೦೨೫)

– ವೈದ್ಯೆ (ಸೌ.) ಸ್ವರಾಲಿ ಶೇಂಡ್ಯೆ, ಯಶಪ್ರಭಾ ಆಯುರ್ವೇದ, ಪುಣೆ.