ಭಾರತೀಯ ಸಂವಿಧಾನದ ‘ಸೆಕ್ಯುಲರ್’ನೀತಿಯ ಅತಿಯಾದ ಡೋಲು ಬಾರಿಸುವವರಿಗೆ ತೀಕ್ಷ್ಣ ಛಡಿಯೇಟು ನೀಡುವ ಹಿಂದಿ ಚಲನಚಿತ್ರವೆಂದರೆ ‘ಹಕ್’ ! ಈ ಚಲನಚಿತ್ರವು ಅತ್ಯಂತ ಮಾರ್ಮಿಕವಾಗಿ ಸೆಕ್ಯುಲರವಾದವನ್ನು ಹರಿದು ಚಿಂದಿ ಮಾಡುತ್ತಾ ಮತಾಂಧ ಮುಸಲ್ಮಾನರು ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಹೇಗೆ ಸೈದ್ಧಾಂತಿಕವಾಗಿ ಒಡೆಯುತ್ತಿದ್ದಾರೆ ಎಂಬುದನ್ನು ಸಹ ಎತ್ತಿ ತೋರಿಸಿದೆ. ಆದ್ದರಿಂದ, ಕೇವಲ ಮುಸಲ್ಮಾನರು ಮಾತ್ರವಲ್ಲ ಸೈದ್ಧಾಂತಿಕವಾಗಿ ಸುನ್ನತ್‌ಗೆ ಒಳಗಾದ ಜಾತ್ಯತೀತವಾದಿಗಳು ಸಹ ಈ ಚಿತ್ರವನ್ನು ನೋಡಿ ಸರಿಯಾದ ಪಾಠ ಕಲಿಯಬೇಕು.
ಜಗದ್ವಿಖ್ಯಾತ ಶಹಬಾನೋ ಅವರ ತ್ರಿವಳಿ ತಲಾಖ್ ಪದ್ಧತಿಯ ಕುರಿತು ಪ್ರಸಿದ್ಧವಾದ ನ್ಯಾಯಾಲಯದ ಪ್ರಕರಣದ ಆಧಾರದಲ್ಲಿ ತಯಾರಿಸಲಾದ ‘ಹಕ್’ ಹಿಂದಿ ಚಲನಚಿತ್ರವನ್ನು ಸುಪರ್ಣ ವರ್ಮಾ ಅವರು ನಿರ್ದೇಶಿಸಿದ್ದಾರೆ. ಇದು ೭ ನವೆಂಬರ್ ೨೦೨೫ ರಂದು ಬಿಡುಗಡೆಯಾಯಿತು. ಈ ಚಲನಚಿತ್ರಕ್ಕೆ ಜನರು ವೈಯಕ್ತಿಕವಾಗಿ ನೀಡಿರುವ ಆದ್ಯತೆಯ ಆಧಾರದ ಮೇಲೆ ‘ಇಂಟರ್ನೆಟ್ ಡೇಟಾಬೇಸ್ ಮೂವಿ (ಐ.ಎಮ್.ಡಿ.ಬಿ.) ರೇಟಿಂಗ್’ ೧೦ ಕ್ಕೆ ೮.೯ ರಷ್ಟಿದೆ. ಆದ್ದರಿಂದ, ಈ ಚಲನಚಿತ್ರದ ವಿಮರ್ಶೆಯನ್ನು ದೈನಿಕ ‘ಸನಾತನ ಪ್ರಭಾತ’ದ ಓದುಗರಿಗಾಗಿ ಕೃತಜ್ಞತಾಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.
ಸಂಕಲನಕಾರರು : ಶ್ರೀ. ಸಾಗರ ನಿಂಬಾಳ್ಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
೧. ಚಲನಚಿತ್ರದ ಕಥೆ
ಈ ಚಲನಚಿತ್ರದಲ್ಲಿ ೧೯೬೭ ರಿಂದ ೧೯೮೫ ರ ವರೆಗಿನ ಕಾಲಘಟ್ಟವನ್ನು ತೋರಿಸಲಾಗಿದೆ. ಶಾಜಿಯಾ ಬಾನೋ ಒಬ್ಬ ಮೌಲವಿಯ (ಇಸ್ಲಾಂ ಅಧ್ಯಯನ ಮಾಡಿದವನ) ಮಗಳು. ಅವಳು ಕುರಾನ್, ಹದೀಸ್ ಇತ್ಯಾದಿಗಳನ್ನು ಅಭ್ಯಾಸ ಮಾಡಿರುತ್ತಾಳೆ; ಆದರೆ ಅವಳ ಭಾರತೀಯ ಶಿಕ್ಷಣ ಕಡಿಮೆ ಇದೆ. ಅವಳು ವಕೀಲ ಅಬ್ಬಾಸ್ ಅವನೊಂದಿಗೆ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿರುತ್ತಾಳೆ; ಆದರೆ ೯ ವರ್ಷಗಳ ಸಂಸಾರದ ನಂತರ ಇದ್ದಕ್ಕಿದ್ದಂತೆ ಅಬ್ಬಾಸ್‌ನ ವರ್ತನೆ ಬದಲಾಗುತ್ತದೆ. ಬೇರೆ ಊರಿನಿಂದ ೩ ತಿಂಗಳ ನಂತರ ಹಿಂದಿರುಗುವಾಗ ಅವನು ಹೊಸ ಪತ್ನಿ ಸಾಯರಾಳನ್ನು ಕರೆತರುತ್ತಾನೆ. ಶಾಜಿಯಾಗೆ ಇದು ಸಹಿಸಲಾಗದಿದ್ದರೂ, ಮನಸ್ಸನ್ನು ನಿಯಂತ್ರಿಸಿಕೊಂಡು ಸಾಯರಾಳಿಗೂ ಆಶ್ರಯ ನೀಡುತ್ತಾಳೆ. ಮುಂದೆ ಎರಡನೇ ಪತ್ನಿ ಎಂಬ ಕೀಳರಿಮೆ ಸಾಯರಾಳಿಗೆ ಸಹಿಸಲಾಗುವುದಿಲ್ಲ. ಅವಳು ಅಬ್ಬಾಸನ ಎರಡನೇ ಮದುವೆಯ ನಿಜವಾದ ಕಾರಣವನ್ನು ಶಾಜಿಯಾಗೆ ಹೇಳುತ್ತಾಳೆ. ಇದರಿಂದ ಶಾಜಿಯಾ ತನ್ನ ಮಕ್ಕಳನ್ನು ಕರೆದುಕೊಂಡು ಅತ್ತೆ ಮನೆಯನ್ನು ತೊರೆದು ತವರು ಮನೆಗೆ ಹೋಗುತ್ತಾಳೆ. ಒಂದು ಸಣ್ಣ ಕಾರಣಕ್ಕೆ ಕೋಪಗೊಂಡ ಅಬ್ಬಾಸ್ ಶಾಜಿಯಾ ಅವಳಿಗೆ ಮಕ್ಕಳ ನಿರ್ವಹಣಾ ವೆಚ್ಚದ ಮೊತ್ತವನ್ನು ಕಳುಹಿಸುವುದನ್ನು ನಿಲ್ಲಿಸುತ್ತಾನೆ ಮತ್ತು ನಿಜವಾದ ಹೋರಾಟ ಪ್ರಾರಂಭವಾಗುತ್ತದೆ. ೨ ಗಂಟೆ ೧೮ ನಿಮಿಷಗಳ ಈ ಚಲನಚಿತ್ರದಲ್ಲಿ ನಾಲ್ಕು ಗೋಡೆಗಳೊಳಗಿನ ಹೋರಾಟವು ನಂತರ ದೇಶಮಟ್ಟದಲ್ಲಿ ‘ಸಮಸ್ತ ಮುಸಲ್ಮಾನ ಮಹಿಳೆಯರು ವಿರುದ್ಧ ಮುಸಲ್ಮಾನ ಪುರುಷರು’ ಎಂಬ ಹೋರಾಟವಾಗಿ ಮಾರ್ಪಟ್ಟಿದ್ದು ಕಂಡುಬರುತ್ತದೆ.

೨. ಚಲನಚಿತ್ರದಲ್ಲಿನ ಕೆಲವು ಪ್ರಮುಖ ಸನ್ನಿವೇಶಗಳು !
೧ ಅ. ಪ್ರಾರಂಭದಲ್ಲಿ ಸತ್ರ ನ್ಯಾಯಾಲಯದಲ್ಲಿ ನ್ಯಾಯಾಧೀಶರೇ ‘ಇದು ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ನ ವಿಷಯ’ ಎಂದು ಹೇಳಿ ಶಾಜಿಯಾಳ ದೂರು ಸ್ವೀಕರಿಸಲು ನಿರಾಕರಿಸುತ್ತಾರೆ. ಈ ‘ಬೋರ್ಡ್’ನ ಪ್ರಭಾವ ಅಷ್ಟಿರುತ್ತದೆ !
೨ ಆ. ಶಾಜಿಯಾ ‘ದಂಡ (ಕ್ರಿಮಿನಲ್) ಪ್ರಕ್ರಿಯೆ ಸಂಹಿತೆಯ ಕಲಂ ೧೨೫’ ರ ಪ್ರಕಾರ ‘ಅಬ್ಬಾಸ್ ಪ್ರತಿ ತಿಂಗಳು ೪೦೦ ರೂಪಾಯಿ ಜೀವನಾಂಶ ನೀಡಬೇಕು’ ಎಂದು ನ್ಯಾಯಾಲಯದಲ್ಲಿ ಬೇಡಿಕೆ ಇಡುತ್ತಾಳೆ. ವಾದ-ಪ್ರತಿವಾದದ ನಂತರ ಶಾಜಿಯಾ ಅವರ ವಾದ ನ್ಯಾಯಾಲಯಕ್ಕೆ ಮನವರಿಕೆಯಾಗುತ್ತದೆ; ಆದರೆ ನ್ಯಾಯಾಲಯ ಕೇವಲ ೨೨ ರೂಪಾಯಿ ಜೀವನಾಂಶ ನೀಡಲು ತೀರ್ಮಾನಿಸುತ್ತದೆ.
೨ ಇ. ಸತ್ರ ನ್ಯಾಯಾಲಯದಲ್ಲಿ ಅಬ್ಬಾಸ್ ‘ಈ ಪ್ರಕರಣವು ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ನ ವ್ಯಾಪ್ತಿಯಲ್ಲಿದೆ ಮತ್ತು ಇದು ಮುಸಲ್ಮಾನರ ಹಕ್ಕುಗಳ ಮೇಲೆ ದಾಳಿಯಾಗಿದೆ’ ಎಂದು ಹೇಳುತ್ತಾನೆ. ಇಸ್ಲಾಂ ಪ್ರಕಾರ ‘ನಿಕಾಹ್’ ಎಂದರೆ ಒಂದು ಒಪ್ಪಂದವಾಗಿರುತ್ತದೆ. ನಿಕಾಹ್ ರೂಪದ ಒಪ್ಪಂದದ ನಿಯಮಗಳಿಗೆ ಅನುಗುಣವಾಗಿ ವಿವಾಹದ ಸಮಯದಲ್ಲಿ ಮಹಿಳೆಯು ನೀಡಿದ ಹಣವನ್ನು ಹಿಂದಿರುಗಿಸಿ ೩ ಬಾರಿ ತಲಾಖ್ ಹೇಳಿದ ನಂತರ ಆ ಒಪ್ಪಂದ ಮುರಿದುಬೀಳುತ್ತದೆ.
೨ ಈ. ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ನಲ್ಲಿ ಕೇವಲ ಮುಸಲ್ಮಾನ ಪುರುಷರ ದಾದಾಗಿರಿ ಮಾತ್ರ ನಡೆಯುತ್ತದೆ. ಆಗ ಶಾಜಿಯಾ ಇವಳು ಕೋಪದಿಂದ ಕುರಾನ್, ಹದೀಸ್ ಇತ್ಯಾದಿಗಳ ಆಯತ್‌ಗಳ ಆಧಾರದ ಮೇಲೆ ತೀಕ್ಷ್ಣ ಪ್ರತಿವಾದ ಮಂಡಿಸುತ್ತಾಳೆ; ಆದರೆ ಅವಳ ವಾದ ಸತ್ಯವಾಗಿದ್ದರೂ ‘ಬೋರ್ಡ್’ ಏಕಪಕ್ಷೀಯ ನಿರ್ಧಾರ ನೀಡುತ್ತದೆ. ಈ ‘ಬೋರ್ಡ್’ ಶಾಜಿಯಾ ಅವಳ ಮೌಲವಿ ತಂದೆಗೂ ಮನ್ನಣೆ ನೀಡುವುದಿಲ್ಲ. ಮುಂದೆ ಶಾಜಿಯಾಳ ಮನೆಯ ಮೇಲೆ ಬಹಿಷ್ಕಾರ ಹಾಕಲಾಗುತ್ತದೆ. ಅವಳಿಗೆ ಯಾರೂ ತರಕಾರಿ ಸಹ ನೀಡಬಾರದು ಎಂಬ ಭಯೋತ್ಪಾದನೆಯನ್ನು ಸೃಷ್ಟಿಸಲಾಗುತ್ತದೆ.
೨ ಉ. ಈ ಮೊಕದ್ದಮೆಗೆ ಮೊದಲು ಇತರ ಇಬ್ಬರು ಮುಸಲ್ಮಾನ ಮಹಿಳೆಯರ ಮೊಕದ್ದಮೆಗಳಲ್ಲಿ ಸರ್ವೋಚ್ಚ ನ್ಯಾಯಾಲಯ ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ವಿರುದ್ಧ ನಿರ್ಧಾರಗಳನ್ನು ನೀಡಿರುತ್ತದೆ. ‘ಶಾಜಿಯಾಳ ಮೊಕದ್ದಮೆ ಸಹ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕು, ಇದರಿಂದ ಹಿಂದಿನ ಎರಡು ಮೊಕದ್ದಮೆಗಳ ಬಗ್ಗೆಯೂ ಮರುಪರಿಶೀಲನೆ ಮಾಡಿ ಆ ನಿರ್ಧಾರಗಳನ್ನು ಸಹ ಶಾಜಿಯಾಳ ತೀರ್ಪಿನ ಮೂಲಕ ರದ್ದು ಗೊಳಿಸಬೇಕು’ ಎಂಬ ಕಾರಣಕ್ಕಾಗಿ ಅಬ್ಬಾಸ್ ಉಚ್ಚ ನ್ಯಾಯಾಲಯದಲ್ಲಿನ ಮೊಕದ್ದಮೆಯನ್ನು ಉದ್ದೇಶಪೂರ್ವಕವಾಗಿ ಸೋಲುತ್ತಾನೆ.
೨ ಊ. ಸರ್ವೋಚ್ಚ ನ್ಯಾಯಾಲಯದಲ್ಲಿ ಅಬ್ಬಾಸ್ ಈ ಕೆಳಗಿನ ವಾದಗಳನ್ನು ಮಂಡಿಸುತ್ತಾನೆ.
೨ ಊ ೧. ಸ್ವಾತಂತ್ರ್ಯದ ನಂತರ ಭಾರತದ ಮುಸಲ್ಮಾನರಿಗೆ ‘ಶರಿಯತ್ ಬೇಕೇ ಅಥವಾ ಮೀಸಲಾತಿ ?’ ಎಂದು ಕೇಳಲಾಯಿತು. ಮುಸಲ್ಮಾನರು ಮೀಸಲಾತಿಯನ್ನು ತ್ಯಾಗ ಮಾಡಿ ಶರಿಯತ್ತನ್ನು ಆರಿಸಿದರು. ಆಗ ಸಂವಿಧಾನ ರಚನೆ ಮಾಡಿದವರು ಸಹ ‘ಶರಿಯತ್ ಭಾರತೀಯ ಮುಸಲ್ಮಾನರನ್ನು ದೇಶಕ್ಕೆ ಜೋಡಿಸುವ ಕೊಂಡಿಯಾಗಲಿದೆ’ ಎಂದು ವಚನ ನೀಡಿದ್ದರು.
೨ ಊ ೨. ಶಾಜಿಯಾಳಂತಹ ಅನೇಕ ನಿರಾಶ್ರಿತ ಮಹಿಳೆಯರನ್ನು ‘ವಕ್ಫ್’ ಬೋರ್ಡ್ ನೋಡಿಕೊಳ್ಳುತ್ತದೆ. ಶಾಜಿಯಾ ಅಲ್ಲಿ ಹೋಗಬಹುದಿತ್ತು; ಆದರೆ ಅವಳಿಗೆ ತಪ್ಪು ಸಲಹೆಯನ್ನು ಕೊಡಲಾಗಿದೆ ಎಂದು ಅಬ್ಬಾಸ್ ಹೇಳುತ್ತಾನೆ.
೨ ಊ ೩. ಭಾರತದ ಮುಸಲ್ಮಾನರ ಸಾಂಸ್ಕೃತಿಕ ಗುರುತಾಗಿರುವ ಏಕೈಕ ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಮತ್ತು ಶರಿಯತ್ ಇವುಗಳ ಸ್ವಾಯತ್ತತೆ ಮತ್ತು ಅಸ್ತಿತ್ವವನ್ನು ಕೊನೆಗೊಳಿಸಲು ಈ ಷಡ್ಯಂತ್ರವನ್ನು ರಚಿಸಲಾಗಿದೆ. ಇದು ಮುಸಲ್ಮಾನ ಸಮಾಜದ ಮೇಲಿನ ಆಕ್ರಮಣವಾಗಿದೆ.
೨ ಊ ೪. ಈ ಪ್ರಕರಣವು ‘ಬೋರ್ಡ್’ನ ವ್ಯಾಪ್ತಿಗೆ ಸೇರಿದ್ದಾಗಿದೆ; ಆದರೆ ಇದರ ಮೊದಲು ಇಬ್ಬರು ಮಹಿಳೆಯರ ಪ್ರಕರಣಗಳು ಮತ್ತು ಈ ಪ್ರಕರಣದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಿ ‘ವಾದಾಖಿಲಾಫಿ’ (ಪ್ರತಿವಾದಿ ಗೈರುಹಾಜರಾದ ಕಾರಣ ನ್ಯಾಯಾಲಯವು ಅವರ ವಿರುದ್ಧ ನಿರ್ಧಾರ ನೀಡುವುದು) ಮಾಡಿದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ, ಮತಾಂಧ ಮುಸಲ್ಮಾನರು ತಮ್ಮ ಬೇಡಿಕೆಗಳನ್ನು ಪೂರ್ಣಗೊಳಿಸಿಕೊಳ್ಳಲು ನ್ಯಾಯಾಲಯ ದಲ್ಲಿಯೇ ನ್ಯಾಯವ್ಯವಸ್ಥೆಯ ಮೇಲೆ ತೀಕ್ಷ್ಣ ಟೀಕೆ ಮಾಡುತ್ತಾರೆ; ನ್ಯಾಯಾಲಯದ ಹಸ್ತಕ್ಷೇಪ ಅವರಿಗೆ ಸಹಿಸಲಾಗುವುದಿಲ್ಲ ಮತ್ತು ಅದಕ್ಕಾಗಿ ಅವರು ತಾತ್ತ್ವ್ವಿಕ ಲೇಪನದ ಬಳಕೆಯನ್ನು ಮಾಡುತ್ತಾರೆ. ಈ ವಾದವು ಎಷ್ಟು ಪ್ರಭಾವಶಾಲಿಯಾಗುತ್ತದೆ ಎಂದರೆ, ಶಾಜಿಯಾಳ ನ್ಯಾಯವಾದಿ ಫರಾಜ್‌ಗೂ ಅದು ಸರಿಯೆನಿಸುತ್ತದೆ.
೨ ಎ. ಸರ್ವೋಚ್ಚ ನ್ಯಾಯಾಲಯದಲ್ಲಿ ಶಾಜಿಯಾ ಬಾನೋ ತಮ್ಮ ಈ ಕೆಳಗಿನ ವಾದವನ್ನು ಮಂಡಿಸುತ್ತಾ, ಮುಸಲ್ಮಾನರಲ್ಲಿನ ಪುರುಷ ಅಹಂಕಾರವನ್ನು ನುಚ್ಚುನೂರು ಮಾಡುತ್ತಾಳೆ.
೨ ಎ ೧. ‘ಮುಸಲ್ಮಾನ’ ಎಂದು ಹೇಳಿದ ನಂತರ ಅದರಲ್ಲಿ ಪುರುಷರೊಂದಿಗೆ ಮಹಿಳೆಯರ ಸಹಭಾಗವೂ ಇರುತ್ತದೆ, ಇದನ್ನು ಮುಸಲ್ಮಾನ ಪುರುಷರು ಮರೆತಿದ್ದಾರೆ. ಮುಸಲ್ಮಾನ ಪುರುಷರು ಕೇವಲ ಸ್ವಹಿತಾಸಕ್ತಿಗಾಗಿ ಹಪಹಪಿಸುತ್ತಾರೆ.
೨ ಎ ೨. ಒಬ್ಬ ನಿಜಾಮ್ ಶರಿಯತ್‌ನ ವಿರುದ್ಧ ಹೋಗಿ ತನ್ನ ಮೊಮ್ಮಗನಿಗೆ ಗದ್ದುಗೆಯ ಮೇಲೆ ಕೂರಿಸಿದ (ಅಧಿಕಾರವನ್ನು ನೀಡಿದ). ಇಲ್ಲಿಯವರೆಗೆ ನಿಜಾಮನಂತಹ ಶ್ರೀಮಂತರು ಮತ್ತು ದೊಡ್ಡ ಜನರು ಶರಿಯತ್‌ನ ವಿರುದ್ಧವಾಗಿ ಕೃತಿ ಮಾಡಿದ್ದಾರೆ. ಇದರಿಂದ ಶರಿಯತ್‌ನ ಅಸ್ತಿತ್ವ ಕೊನೆಗೊಂಡಿದೆಯೇ ? ಹಾಗಾದರೆ ಒಬ್ಬ ನಿರಾಶ್ರಿತ ಮಹಿಳೆಗೆ ಜೀವನಾಂಶ ನೀಡಬೇಕಾದ ಕಾರಣದಿಂದ ಶರಿಯತ್ ಹೇಗೆ ಅಪಾಯಕ್ಕೆ ಸಿಲುಕುತ್ತದೆ ?
೨ ಎ ೩. ‘ಮುಸ್ಲಿಂ ಪರ್ಸನಲ್ ಲಾ ಬೋರ್ಡ್’, ಶರಿಯತ್ ಇತ್ಯಾದಿಗಳ ದುರುಪಯೋಗ ಮಾಡಲಾಗುತ್ತಿದೆ. ಶರಿಯತ್‌ನಲ್ಲಿ ‘೩ ಬಾರಿ ತಲಾಖ್ ಹೇಳಿ ವಿಚ್ಛೇದನೆ ನೀಡುವ ಪುರುಷರಿಗೆ ಚಾಟಿ ಏಟು ನೀಡಬೇಕು’ ಎಂದು ಹೇಳಲಾಗಿದೆ. ಎಷ್ಟು ಮುಸಲ್ಮಾನ ಪುರುಷರಿಗೆ ಹೀಗೆ ಏಟು ನೀಡಲಾಗಿದೆ ?
೨ ಎ ೪. ಇಸ್ಲಾಂ ಪ್ರಕಾರ ‘ನಿಕಾಹ್’ ಎಂದರೆ ಒಂದು ಒಪ್ಪಂದವಾಗಿರುತ್ತದೆ; ಆದರೆ ಅದು ಪ್ರೀತಿಯ, ಸಂಬಂಧಗಳ ಜವಾಬ್ದಾರಿಯೂ ಆಗಿರುತ್ತದೆ. ನಿಕಾಹ್ ರೂಪದ ಒಪ್ಪಂದದ ಬಳಕೆಯನ್ನು ಸಂಬಂಧಗಳ ವಿಶ್ವಾಸಘಾತಕ್ಕಾಗಿ ಮಾಡಿದಾಗ, ನಿಜವಾದ ಅರ್ಥದಲ್ಲಿ ಶರಿಯತ್‌ಗೆ ಅವಮಾನವಾಗುತ್ತದೆ.

೩. ಚಲನಚಿತ್ರದ ಯಶಸ್ಸು ಯಾವುದರಲ್ಲಿದೆ ?
೩ ಅ. ಮತಾಂಧ ಮುಸಲ್ಮಾನರು ಸ್ವಾರ್ಥಕ್ಕಾಗಿ ಭಾರತೀಯ ಕಾನೂನನ್ನು ಲೆಕ್ಕಿಸುವುದಿಲ್ಲ. ಯಾವುದಾದರೂ ಪ್ರಕರಣಕ್ಕೆ ಅವಶ್ಯಕತೆ ಇದ್ದಾಗ ‘ವೈಯಕ್ತಿಕ’ ಎಂದು ಹೇಳುವುದು, ಆವಶ್ಯಕತೆ ಇದ್ದಾಗ ಅದನ್ನು ‘ದೇಶಕ್ಕೆ ಜೋಡಿಸುವುದು’, ಅವಶ್ಯಕತೆ ಇದ್ದಾಗ ಅದನ್ನು ‘ಕೌಮ್’ಗೆ (ಸಮಾಜಕ್ಕೆ) ಜೋಡಿಸುವುದು, ಅಗತ್ಯಕ್ಕೆ ಅನುಗುಣವಾಗಿ ‘ಸೆಕ್ಯುಲರಿಸಂ’ನ ಲಾಭ ಪಡೆಯುವುದು; ಬೇಡವಾದಾಗ ಸಂವಿಧಾನವನ್ನು ಸಹ ಒದ್ದುಬಿಡುವುದು, ಇಂತಹ ಮತಾಂಧ ಮುಸಲ್ಮಾನರ ಅವಕಾಶವಾದಿತನವು ಈ ಚಲನಚಿತ್ರದಲ್ಲಿ ಕಾಣುತ್ತದೆ.
೩ ಆ. ‘ಕಳೆದ ಅನೇಕ ದಶಕಗಳಿಂದ ಮುಸಲ್ಮಾನರಲ್ಲಿನ ಅನಕ್ಷರತೆಯ ಕಾರಣದಿಂದ ಅವರಲ್ಲಿನ ಕೆಟ್ಟ ಪದ್ಧತಿಗಳಿಗೆ ಪ್ರೋತ್ಸಾಹ ದೊರೆಯುತ್ತಿದೆ’ ಎಂದು ನಂಬಲಾಗಿತ್ತು. ಆ ತಪ್ಪು ತಿಳುವಳಿಕೆಯನ್ನು ದೂರ ಮಾಡುವಲ್ಲಿ ‘ಹಕ್’ ಚಲನಚಿತ್ರ ಯಶಸ್ವಿಯಾಗಿದೆ. ಅಬ್ಬಾಸ್ ಉನ್ನತ ಶಿಕ್ಷಣ ಪಡೆದ ಕುಟುಂಬದ ನ್ಯಾಯವಾದಿಯಾಗಿರುತ್ತಾನೆ. ಅವನು ಕುರಾನ್ ಅಥವಾ ಹದೀಸ್ ಓದುವುದಿಲ್ಲ. ನಮಾಜ್ ಪಠಣವನ್ನೂ ಮಾಡುವುದಿಲ್ಲ; ಆದರೆ ಮುಸಲ್ಮಾನನಾಗಿ ಮತಾಂಧತೆಯಲ್ಲಿ ಒಬ್ಬ ಅನಕ್ಷರಸ್ಥ ಮುಸಲ್ಮಾನನಿಗೂ ನಾಚಿಕೆ ಆಗುವಂತಹ ವರ್ತನೆ ಅವನಲ್ಲಿರುತ್ತದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆಧುನಿಕ ವೈದ್ಯರಾಗಿದ್ದ ೪ ಮತಾಂಧ ಮುಸಲ್ಮಾನರನ್ನು ಬಂಧಿಸ ಲಾಗಿತ್ತು. ಇದರಿಂದ ಉನ್ನತ ಶಿಕ್ಷಣ ಪಡೆದ ಮತಾಂಧರ ತೀವ್ರತೆಯು ಈಗ ಯಾವ ಮಟ್ಟಕ್ಕೆ ಹೋಗಿದೆ ಎಂಬುದು ಸ್ಪಷ್ಟವಾಗಿದೆ.
೩ ಇ. ಚಲನಚಿತ್ರದ ನಿರ್ವಹಣೆಯು ಅತ್ಯಂತ ಸೂಕ್ಷ್ಮತೆಯಿಂದ ಆಗಿದೆ. ಸಂಭಾಷಣೆಗಳು ಅತ್ಯುತ್ತಮವಾಗಿವೆ. ಕೇವಲ ಸಂಭಾಷಣೆ ಗಳ ಮೂಲಕವೇ ಮತಾಂಧ ಮುಸಲ್ಮಾನರ ಉಪದ್ರವಕಾರಿ ಮೌಲ್ಯಗಳ ಭಯವನ್ನು ನಿರ್ಮಾಣ ಮಾಡುವಲ್ಲಿ ಚಲನಚಿತ್ರ ಯಶಸ್ವಿಯಾಗಿದೆ. ಆದ್ದರಿಂದ, ಚಲನಚಿತ್ರದಲ್ಲಿ ಗಲಭೆಗಳ ದೃಶ್ಯಗಳಿಲ್ಲದಿದ್ದರೂ, ವೈಚಾರಿಕ ಮಟ್ಟದಲ್ಲಿ ಗಲಭೆಯನ್ನು ನಿರ್ಮಿಸುವಲ್ಲಿ ಅದು ಯಶಸ್ವಿಯಾಗಿದೆ.
೩ ಈ. ಶಾಜಿಯಾ ಬಾನೋ ಅವರ ನ್ಯಾಯಾಲಯದ ಹೋರಾಟವನ್ನು ಅತ್ಯಂತ ವಸ್ತುನಿಷ್ಠವಾಗಿ ಮತ್ತು ಸರಳ ಭಾಷೆಯಲ್ಲಿ ಹಾಗೂ ಕಡಿಮೆ ಸಮಯದಲ್ಲಿ ತೋರಿಸಲಾಗಿದೆ. ನ್ಯಾಯಾಲಯದ ಸನ್ನಿವೇಶಗಳು ಮೈಯಲ್ಲಿ ರೋಮಾಂಚನ ಉಂಟುಮಾಡುತ್ತವೆ. ಚಲನಚಿತ್ರದ ಸಂಕಲನ ಅತ್ಯುತ್ತಮವಾಗಿದೆ. ಚಲನಚಿತ್ರವು ಮೊದಲಿನಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಚಲನಚಿತ್ರದಲ್ಲಿ ಸಂಗೀತವನ್ನು ಅವಶ್ಯಕತೆಗನುಗುಣವಾಗಿ ಮಾತ್ರ ಬಳಸಲಾಗಿದೆ ಮತ್ತು ಈಗಿನ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸೀಮಿತ ವಿಷಯವನ್ನು ತಪ್ಪಿಸಿರುವುದರಿಂದ ಚಲನಚಿತ್ರದ ಗಾಂಭೀರ್ಯ ಕಡಿಮೆಯಾಗುವುದಿಲ್ಲ.
೩ ಉ. ಶಾಜಿಯಾ ಬಾನೋ ಅವರ ಪಾತ್ರವನ್ನು ಯಾಮಿ ಗೌತಮಧಾರ್ ಅವರು ಅತ್ಯಂತ ಸಮರ್ಪಣಾ ಭಾವದಿಂದ ಜೀವಂತ ಗೊಳಿಸಿದ್ದಾರೆ. ಅನೇಕ ಸನ್ನಿವೇಶಗಳಲ್ಲಿ ಯಾವುದೇ ಸಂಭಾಷಣೆ ಗಳಿಲ್ಲದಿದ್ದರೂ ಕೇವಲ ಕಣ್ಣುಗಳ ಮೂಲಕ ಶಾಜಿಯಾ ಅವರ ತಳಮಳ, ದುಃಖ, ಕೋಪ, ಅಸಹಾಯಕತೆ ಇತ್ಯಾದಿಗಳನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಯಾಮಿ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಅಭಿನಯವನ್ನು ನೀಡಿದ್ದಾರೆ. ಅಬ್ಬಾಸ್ ಹೊರತುಪಡಿಸಿ ಇತರ ಪಾತ್ರಗಳಿಗೆ ವಿಶೇಷ ಅವಕಾಶವಿಲ್ಲ; ಆದರೂ ಸಹ ಶಿಬಾ ಚಡ್ಡಾ, ಅಸೀಮ್ ಹಟ್ಟಂಗಡಿ ಇತ್ಯಾದಿ ಕಲಾವಿದರು ಉತ್ತಮ ಪಾತ್ರಗಳನ್ನು ಮಾಡಿದ್ದಾರೆ.
೪. ಚಲನಚಿತ್ರದಲ್ಲಿ ಯಾವ ಕೊರತೆಗಳು ಕಂಡುಬರುತ್ತವೆ ?
೪ ಅ. ನ್ಯಾಯವಾದಿ ಅಬ್ಬಾಸ್ ಅವರ ಪಾತ್ರವನ್ನು ಇಮ್ರಾನ್ ಹಶ್ಮಿ ಅವರು ಮಾಡಿದ್ದಾರೆ. ಈ ಪಾತ್ರವು ಖಳನಾಯಕನದ್ದಾಗಿದ್ದರೂ ಸಹ ಕೆಲವು ಸನ್ನಿವೇಶಗಳಲ್ಲಿ ಅವನನ್ನು ಅಕಾರಣವಾಗಿ ನಾಯಕನಂತೆ ತೋರಿಸಲು ಪ್ರಯತ್ನಿಸಲಾಗಿದೆ. ‘ತೀಕ್ಷ್ಣ ಮತಿಯ ಮತಾಂಧ ಮುಸಲ್ಮಾನ ನ್ಯಾಯವಾದಿ’ಯ ಪಾತ್ರವನ್ನು ಇಮ್ರಾನ್ ಯಶಸ್ವಿಯಾಗಿ ನಿರ್ವಹಿಸಿದ್ದರೂ, ಪಾತ್ರದ ನಿರ್ಮಾಣವೇ ಗೊಂದಲಮಯವಾಗಿರುವುದರಿಂದ ಆ ಪಾತ್ರದ ಬಗ್ಗೆ ವಿಶೇಷ ಕೋಪ ಬರುವುದಿಲ್ಲ.
೪ ಆ. ೧೯೮೫ ರಲ್ಲಿ ಶಹಬಾನೋ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆ ಗೆದ್ದರು. ವಿಚ್ಛೇದಿತ ಮುಸಲ್ಮಾನ ಮಹಿಳೆಯರಿಗೆ ಆಜೀವ ಜೀವನಾಂಶ ನೀಡುವ ಕಾನೂನು ಜಾರಿಗೆ ಬಂದರೂ ೧೯೮೬ ರಲ್ಲಿ ಆಗಿನ ಕಾಂಗ್ರೆಸ್ ಸರಕಾರವು ಈ ಕಾನೂನಿನ ವಿರುದ್ಧದ ನಿರ್ಣಯವನ್ನು ಸಂಸತ್ತಿನಲ್ಲಿ ಅಂಗೀಕರಿಸಿತು. ಆ ಸರಕಾರವು ಮುಸಲ್ಮಾನ ಮಹಿಳೆಯರ ಜೀವನಾಂಶದ ಹಕ್ಕನ್ನು ಕೇವಲ ೩ ತಿಂಗಳುಗಳಿಗೆ ಮಾತ್ರ ಸೀಮಿತಗೊಳಿಸಿತು. ಈ ಬೆಟ್ಟದ್ದಷ್ಟು ದೊಡ್ಡ ತಪ್ಪನ್ನು ಚಲನಚಿತ್ರದಲ್ಲಿ ಕೊನೆಯಲ್ಲಿ ಒಂದು ಕಪ್ಪು ಫಲಕದ ಮೇಲೆ ಲಿಖಿತ ರೂಪದಲ್ಲಿ ತೋರಿಸಲಾಗಿದೆ. ಇದರಿಂದ ಆಗಿನ ಕಾಂಗ್ರೆಸ್‌ನ ಕ್ರೌರ್ಯ ಜನರ ಗಮನಕ್ಕೆ ಬರುವುದಿಲ್ಲ. ಮುಸಲ್ಮಾನ ಮಹಿಳೆಯರ ಜಾಗೃತಿಗಾಗಿ ಈ ಎಲ್ಲ ವಿಷಯಗಳನ್ನು ಛಾಯಾಚಿತ್ರಗಳು, ಅಧಿಸೂಚನೆಗಳು ಇತ್ಯಾದಿಗಳ ಮೂಲಕ ಕೇವಲ ಒಂದು ನಿಮಿಷದಲ್ಲಿಯೂ ಪರಿಣಾಮಕಾರಿಯಾಗಿ ತೋರಿಸಬಹುದಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರಕಾರವು ೨೦೧೯ ರಲ್ಲಿ ‘ತ್ರಿವಳಿ ತಲಾಖ್’ನ ಮಾನ್ಯತೆಯನ್ನು ರದ್ದು ಗೊಳಿಸಿದ ನಿರ್ಣಯದ ಮಾಹಿತಿಯನ್ನು ಸಹ ಇದೇ ರೀತಿ ಲಿಖಿತ ರೂಪದಲ್ಲಿ ತೋರಿಸಲಾಗಿದೆ. ಇದರಿಂದ ಪ್ರೇಕ್ಷಕರಲ್ಲಿ ಕಾಂಗ್ರೆಸ್‌ನ ಓಲೈಕೆ ನೀತಿಯ ವಿರುದ್ಧ ಆಕ್ರೋಶ ಅಥವಾ ಮೋದಿ ಸರಕಾರದ ಸಾಮರ್ಥ್ಯದ ಬಗ್ಗೆ ಕೃತಜ್ಞತೆಯ ಭಾವನೆ ನಿರ್ಮಾಣವಾಗುವುದಿಲ್ಲ.
೫. ಚಲನಚಿತ್ರವು ಯಾವ ಸಂದೇಶ ನೀಡುತ್ತದೆ ?

೫ ಅ. ಇಂದು ಅನೇಕ ಮತಾಂಧ ಮುಸಲ್ಮಾನರು ಮುಸಲ್ಮಾನೇತರ ಯುವತಿಯರನ್ನು ‘ಲವ್ ಜಿಹಾದ್’ನ ಬಲೆಗೆ ಬೀಳಿಸುತ್ತಿದ್ದಾರೆ. ಅವರಲ್ಲಿ ‘ಮೇರಾ ಅಬ್ದುಲ್ ವೈಸಾ ನಹೀ ಹೈ’ (ನನ್ನ ಅಬ್ದುಲ್ ಹಾಗಿಲ್ಲ) ಎಂದು ಹೇಳುವ ಹುಡುಗಿಯರು ಈ ಚಲನಚಿತ್ರವನ್ನು ತಪ್ಪದೇ ನೋಡಬೇಕು. ಇದರಲ್ಲಿ ‘ಮತಾಂಧ ಮುಸಲ್ಮಾನರ ನಿಜರೂಪ, ಅವರು ಹೇಗೆ ಬದಲಾಗುತ್ತಾರೆ ?’ ಎಂಬುದನ್ನು ನೋಡಿ ಆ ಹುಡುಗಿಯರಲ್ಲಿ ಸ್ವಲ್ಪವಾದರೂ ಸ್ವಾಭಿಮಾನ ಉಳಿದಿದ್ದರೆ, ಅವರ ಪಿತ್ತ ನೆತ್ತಿಗೇರಬಹುದು. ಮತಾಂಧ ಮುಸಲ್ಮಾನರು ತಮ್ಮ ಮಹಿಳೆಯರೊಂದಿಗೇ ಇಷ್ಟು ಅನ್ಯಾಯದಿಂದ ವರ್ತಿಸುತ್ತಿದ್ದರೆ, ಮುಸಲ್ಮಾನೇತರ ಹುಡುಗಿಯರೊಂದಿಗೆ ಹೇಗೆ ವರ್ತಿಸಬಹುದು ಎಂಬುದನ್ನು ಊಹಿಸದಿರುವುದೇ ಉತ್ತಮ.
೫ ಆ. ಮಾರ್ಚ್ ೨೦೧೪ ರಲ್ಲಿ ಚಲನಚಿತ್ರ ನಟ ಆಮಿರ್ ಖಾನ್ ಅವರ ‘ಸತ್ಯಮೇವ ಜಯತೆ’ ಕಾರ್ಯಕ್ರಮ ದೂರದರ್ಶನದಲ್ಲಿ ಪ್ರಸಿದ್ಧವಾಯಿತು. ಆಗ ಹಿಂದೂ ಧರ್ಮದ ರೂಢಿ, ಸಂಪ್ರದಾಯಗಳ ಮೇಲೆ ಕೆಂಡಕಾರಲಾಯಿತು. ಅಲ್ಲಿ ‘ತ್ರಿವಳಿ ತಲಾಖ್’ ಅಥವಾ ‘ಹಲಾಲಾ’ದಂತಹ ವಿಷಯವನ್ನು ಏಕೆ ನಿರ್ವಹಿಸಲಿಲ್ಲ ?ಎಂಬ ವಿಚಾರ ಸೂಕ್ಷ್ಮ ಪ್ರೇಕ್ಷಕರಿಗೆ ಬಾರದಿರುವುದಿಲ್ಲ.
೫ ಇ. ೧೯೮೨ ರಲ್ಲಿ ಕೇಶ-ವಪನ ವಿರುದ್ಧ (ವಿಧವೆಯರಿಗೆ ತಲೆ ಬೋಳಿಸುವ ಪದ್ಧತಿ) ಪ್ರಬುದ್ಧತೆ ಮೂಡಿಸುವಂತಹ ‘ಪ್ರೇಮ ರೋಗ’ ಚಲನಚಿತ್ರವನ್ನು ರಾಜ್ ಕಪೂರ್ ಅವರು ಪ್ರಸಿದ್ಧ ಗೊಳಿಸಿದರು. ೧೯೮೫ ರಲ್ಲಿ ನ್ಯಾಯಾಲಯದ ನಿರ್ಧಾರ ವಾದ ನಂತರ ಅವರು ‘ತ್ರಿವಳಿ ತಲಾಖ್ ರೋಗ’ ಎಂಬ ಚಲನಚಿತ್ರವನ್ನು ಏಕೆ ಮಾಡಲಿಲ್ಲ ? ಹಿಂದಿ ಚಲನಚಿತ್ರೋದ್ಯಮದ ಒಬ್ಬರೂ ಪ್ರಸಿದ್ಧ ನಿರ್ದೇಶಕರು ಈ ವಿಷಯವನ್ನು ಇಲ್ಲಿಯವರೆಗೆ ಏಕೆ ನಿರ್ವಹಿಸಲಿಲ್ಲ ? ಅಂದರೆ ‘ದಿ ಕಾಶ್ಮೀರ ಫೈಲ್ಸ್’ ಚಲನಚಿತ್ರ ಬಿಡುಗಡೆಯಾಗುವವರೆಗೆ ಹಿಂದಿ ಚಲನಚಿತ್ರೋದ್ಯಮವು ಮತಾಂಧ ಮುಸಲ್ಮಾನರ ಗುಲಾಮವಾಗಿತ್ತು ಎಂದು ತಿಳಿಯಬೇಕೇ ? ಬಹುಶಃ ಅದಕ್ಕಾಗಿಯೇ ಈ ಚಲನಚಿತ್ರ ನಿರ್ಮಾಪಕರು ‘ದೇವಸ್ಥಾನದ ಅರ್ಚಕ ಕ್ರೌರ್ಯ ಮಾಡುವವನು, ಜನರನ್ನು ಲೂಟಿ ಮಾಡುವ ಹಿಂದೂ ವರ್ತಕ; ಆದರೆ ೪ ಪತ್ನಿಯರನ್ನು ಹೊಂದಿರುವ ದಯಾಘನ ಅಬ್ದುಲ್ ಚಾಚಾ’ ಎಂಬಂತಹ ಕಪೋಲಕಲ್ಪಿತ ಕಥೆಗಳನ್ನು ತೋರಿಸುವುದರಲ್ಲಿ ಅಥವಾ ‘ಶಿವಲಿಂಗಕ್ಕೆ ಹಾಲು ಅಭಿಷೇಕ ಮಾಡುವುದು ಬೇಡ’ ಎಂದು ‘ಕೃತ್ರಿಮ ಪ್ರಬುದ್ಧತೆ’ ಮೂಡಿಸುವುದರಲ್ಲಿ ಮಗ್ನರಾಗಿದ್ದರು.
೫ ಈ. ಚಾಣಾಕ್ಷ ಪ್ರೇಕ್ಷಕರಿಗೆ ಇದು ಸಹ ಗಮನಕ್ಕೆ ಬರುತ್ತದೆ ಅದೆಂದರೆ, ಇಲ್ಲಿ ಕೇವಲ ಒಬ್ಬ ಶಾಜಿಯಾ ಬಾನೋ ಅವರ ಕಥೆಯನ್ನು ತೋರಿಸಿದ್ದರೂ, ಇಲ್ಲಿಯವರೆಗೆ ಕೋಟ್ಯಂತರ ಮುಸಲ್ಮಾನ ಮಹಿಳೆಯರ ಮೇಲೆ ಅನ್ಯಾಯವಾಗಿದೆ. ಅದರ ಬಗ್ಗೆ ಯಾವುದೇ ಮಹಿಳಾ ಸಂಘಟನೆಗಳು ಅಥವಾ ಮಹಿಳಾ ಆಯೋಗವು ಇಲ್ಲಿಯವರೆಗೆ ಏಕೆ ಧ್ವನಿ ಎತ್ತಲಿಲ್ಲ ? ಇಲ್ಲಿನ ಅಂತಹ ಸಂಘಟನೆಗಳು, ಸರಕಾರಿ ಸಂಸ್ಥೆಗಳು ಕೇವಲ ‘ದೇವಸ್ಥಾನದ ಗರ್ಭಗುಡಿಯಲ್ಲಿ ಮಾಸಿಕ ಸರದಿಯದ ಸಮಯದಲ್ಲಿಯೂ ಮಹಿಳೆಯರಿಗೆ ಪ್ರವೇಶ ನೀಡಿ’ ಎಂಬಂತಹ ಆಮಿಷ ಪಡೆದು ಆಂದೋಲನ ಮಾಡುತ್ತವೆಯೇ ?
೬. ಚಲನಚಿತ್ರ ನಿರ್ಮಾಪಕರಿಗೆ ಹೃತ್ಪೂರ್ವಕ ಕರೆ !
ಈಗ ಒಬ್ಬ ಜವಾಬ್ದಾರಿಯುತ ಭಾರತೀಯ ಪ್ರಜೆಯಾಗಿ ಎಲ್ಲ ಚಲನಚಿತ್ರ ನಿರ್ಮಾಪಕರಿಗೆ ನನ್ನ ಒಂದೇ ಒಂದು ಕರೆಯಿದೆ, ಅದೆಂದರೆ, ಈ ದೇಶದ ಎರಡನೇ ಅತಿದೊಡ್ಡ ಜನಸಂಖ್ಯೆ ಮತ್ತು ಶಾಂತಿಯ ಉಪಾಸಕರಾಗಿರುವ ಇಸ್ಲಾಂ ಪಂಥದವರಲ್ಲಿ ಇತರ ಕೆಲವು ಅನ್ಯಾಯದ ಪದ್ಧತಿಗಳಿದ್ದರೆ, ಅವುಗಳ ಬಗ್ಗೆ ಸಹ ಚಲನಚಿತ್ರಗಳನ್ನು ಮಾಡಿರಿ. ಅದರ ಮೂಲಕ ದೇಶದ ಮೂಲೆಮೂಲೆಗಳಲ್ಲಿರುವ ಮುಸಲ್ಮಾನ ಸಹೋದರಿಯರು, ಮಕ್ಕಳು ಮುಂತಾದವರ ಮೇಲಿನ ದೌರ್ಜನ್ಯಗಳಿಗೆ ‘ಹಕ್’ ಈ ಚಲನಚಿತ್ರವು ಹೇಗೆ ಧ್ವನಿಯಾಗಿದೆಯೋ, ಆ ಪ್ರಬುದ್ಧತೆಯು ನಿರಂತರ ಮುಂದುವರಿಯುತ್ತಿರಬೇಕು. (೧೧.೧೧.೨೦೨೫)

‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !