
೧. ಸನಾತನದ ಓರ್ವ ಸಂತರು ಮತ್ತು ಸದ್ಗುರು ಡಾ. ಮುಕುಲ ಗಾಡಗೀಳ ಇವರಿಗೆ ಅರಿವಾದ ಸೂಕ್ಷ್ಮ ಜ್ಞಾನದ ಬಗೆಗಿನ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣ


ಕೋಷ್ಟಕದಲ್ಲಿ ಅಧೋರೇಖಿತ ಸ್ಪಂದನಗಳ ಪ್ರಮಾಣವು ಬೇರೆ ಬೇರೆ ಬರುವ ಕಾರಣ
ಸನಾತನದ ಕೆಲವು ಸದ್ಗುರುಗಳು, ಸಂತರು ಮತ್ತು ಸಾಧಕರು ಸೂಕ್ಷ್ಮದಲ್ಲಿನ ಜ್ಞಾನವನ್ನು ಪಡೆಯುತ್ತಾರೆ. ಸೂಕ್ಷ್ಮ ಜ್ಞಾನದ ಬಗೆಗಿನ ಚಿತ್ರದಲ್ಲಿನ ಸ್ಪಂದನಗಳ ಪ್ರಮಾಣವು ಸಾಧಕರ ಮಟ್ಟ, ಕಾಲ, ಸೂಕ್ಷ್ಮದಲ್ಲಿನ ಅರಿವಾಗುವ ಕ್ಷಮತೆ ಇತ್ಯಾದಿ ಘಟಕಗಳ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ಸಾಧಕರು, ಸಂತರು ಮತ್ತು ಸದ್ಗುರುಗಳು ಈ ಕ್ರಮದಲ್ಲಿ ಸೂಕ್ಷ್ಮದಿಂದ ಅರಿಯುವ ಅವರ ಕ್ಷಮತೆ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಸಾಧಕರು, ಸಂತರು ಮತ್ತು ಸದ್ಗುರುಗಳು ಶೋಧಿಸಿದ ಯಾವುದಾದರೊಂದು ಸೂಕ್ಷ್ಮದಲ್ಲಿನ ಸ್ಪಂದನಗಳ ಶೇಕಡಾ ವಾರಿನಲ್ಲಿ ವ್ಯತ್ಯಾಸ ಇರುತ್ತದೆ.

೧ ಅ. ಗುರುತತ್ತ್ವ
೧ ಅ ೧. ಗುರುತತ್ತ್ವದ ಕಣಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಕಡೆಗೆ ಪ್ರವಹಿಸುವುದು: ಇದಕ್ಕೆ ಕಾರಣವೇನೆಂದರೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಆಶೀರ್ವಾದವಿದೆ. ಆದ್ದರಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಸೂಕ್ಷ್ಮದಲ್ಲಿನ ಜ್ಞಾನ ಸಿಗುತ್ತದೆ.
೧ ಅ ೨. ಗುರುತತ್ತ್ವದ ಕಣರೂಪಿ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸಹಸ್ರಾರದ ಸ್ಥಳದಲ್ಲಿ ನಿರಂತರ ಕಾರ್ಯನಿರತವಾಗಿರುವುದು: **’ಈಶ್ವರೀ ರಾಜ್ಯದ ಸ್ಥಾಪನೆ’**ಯು ಪರಾತ್ಪರ ಗುರು ಡಾ. ಆಠವಲೆಯವರ ಧ್ಯೇಯವಾಗಿದ್ದು ಈ ಧ್ಯೇಯವನ್ನು ಸಾಧ್ಯಗೊಳಿಸಲು ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಆಶೀರ್ವಾದ ನೀಡಿದ್ದಾರೆ. ಆದ್ದರಿಂದ ಹೀಗಿದೆ.
೧ ಅ ೩. ಗುರುತತ್ತ್ವದ ಕಣರೂಪಿ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಆಜ್ಞಾಚಕ್ರದ ಸ್ಥಳದಲ್ಲಿ ಕಾರ್ಯನಿರತವಾಗಿರುವುದು: ಪರಾತ್ಪರ ಗುರು ಡಾ. ಆಠವಲೆಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ಸೂಕ್ಷ್ಮದಿಂದ ಜ್ಞಾನವನ್ನು ನೀಡುತ್ತಿರುವುದರಿಂದ ಹೀಗಿದೆ.
೧ ಆ. ದೇವಿತತ್ತ್ವ (ತಾರಕ)
೧ ಆ ೧. ದೇವಿತತ್ತ್ವದ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ದೇಹದ ಸುತ್ತಲು ಇರುವುದು: ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ದೇವಿತತ್ತ್ವವಿದ್ದು ಅವರು ಹೆಚ್ಚಾಗಿ ತಾರಕ ರೂಪದಲ್ಲಿರುತ್ತಾರೆ.
೧ ಇ. ತಾರಕ ಶಕ್ತಿ (ಈ ಮಾಧ್ಯಮದಿಂದ ದೊರಕುವ ಈಶ್ವರೀ ಜ್ಞಾನ)
೧ ಇ ೧. ತಾರಕ ಶಕ್ತಿಯ ವಲಯವು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಆಜ್ಞಾಚಕ್ರದ ಸ್ಥಳದಲ್ಲಿ ಕಾರ್ಯನಿರತವಾಗಿರುವುದು: ಇದರ ಕಾರಣವೇನೆಂದರೆ, ಶ್ರೀಚಿತ್‌ಶಕ್ತಿ (ಸೌ.) ಅಂಜಲಿಯವರಿಗೆ ಈಶ್ವರನಿಂದ ಜ್ಞಾನ ಸಿಗುತ್ತಿದ್ದು ಈ ಜ್ಞಾನವನ್ನು ಅವರು ಅಧ್ಯಾತ್ಮ ಪ್ರಸಾರ ಮಾಡಲು ಉಪಯೋಗಿಸುತ್ತಾರೆ.
೧ ಇ ೨. ತಾರಕ ಶಕ್ತಿಯ ಕಣಗಳು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ವಾತಾವರಣದಲ್ಲಿ ಮತ್ತು ಸಾಧಕರ ಕಡೆಗೆ ಪ್ರಕ್ಷೇಪಿಸುತ್ತಿರುವುದು: ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಾಧಕರಿಗೆ ಮಾರ್ಗದರ್ಶನ ಮಾಡುವಾಗ ಹೀಗಾಗುತ್ತದೆ.
೧ ಈ. ಸಮಷ್ಟಿ ಭಾವ
೧ ಈ ೧. ಸಮಷ್ಟಿ ಭಾವದ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅನಾಹತಚಕ್ರದ ಸ್ಥಳದಲ್ಲಿ ಕಾರ್ಯನಿರತವಾಗಿ ಅವರಿಂದ ವಾತಾವರಣದಲ್ಲಿ ಮತ್ತು ಸಾಧಕರ ಕಡೆಗೆ ಪ್ರಕ್ಷೇಪಿಸುತ್ತಿರುವುದು: ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಸಮಷ್ಟಿಯ ಬಗೆಗಿನ ಪ್ರೀತಿಯಿಂದ ಹೀಗಿದೆ.
೧ ಉ. ಪ್ರೀತಿ
೧ ಉ ೧. ಪ್ರೀತಿಯ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅನಾಹತಚಕ್ರದ ಸ್ಥಳದಲ್ಲಿ ಕಾರ್ಯನಿರತವಾಗಿರುವುದು: ಪ್ರೀತಿ (ನಿರಪೇಕ್ಷ ಪ್ರೇಮ)ಯು ಅವರ ಮೂಲ ಸ್ವಭಾವ ಆಗಿರುವುದರಿಂದ ಹೀಗಿದೆ.
೧ ಊ. ಚೈತನ್ಯ
೧ ಊ ೧. ಚೈತನ್ಯದ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಸುತ್ತಲು ಕಾರ್ಯನಿರತವಾಗಿರುವುದು.
೧ ಊ ೨. ಚೈತನ್ಯದ ವಲಯವು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಿಂದ ವ್ಯಾಪಕ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರುವುದು: ಅವರು ಎಲ್ಲಿ ಹೋಗುತ್ತಾರೆಯೋ, ಅಲ್ಲಿ ಅವರಲ್ಲಿನ ಚೈತನ್ಯವು ವಾತಾವರಣದಲ್ಲಿ ಪ್ರಕ್ಷೇಪಿಸುತ್ತದೆ.
೧ ಎ. ಆನಂದ
೧ ಎ ೧. ಆನಂದದ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಮುಖದ ಸುತ್ತಲು ಪ್ರಕಾಶಮಾನ ಸ್ವರೂಪದಲ್ಲಿ ಕಾರ್ಯನಿರತವಾಗಿದೆ.
೧ ಎ ೨. ಆನಂದದ ವಲಯವು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ವ್ಯಾಪಕ ಸ್ವರೂಪದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿಸುತ್ತಿರುವುದು: ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಉಚ್ಚ ಆಧ್ಯಾತ್ಮಿಕ ಮಟ್ಟದವರಾಗಿರುವುದರಿಂದ ಹೀಗಿದೆ. – ಸನಾತನದ ಓರ್ವ ಸಂತರು
೨. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆ ಅರಿವಾದ ಇತರ ಆಧ್ಯಾತ್ಮಿಕ ವೈಶಿಷ್ಟ್ಯಗಳು
ಅ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಅನೇಕ ಗುಣಗಳಿದ್ದು ಸಾಧನೆಯಲ್ಲಿನ ಪ್ರತಿಯೊಂದು ಹಂತದಲ್ಲೂ ಉತ್ತಮ ರೀತಿಯಲ್ಲಿ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಮಾಡುವ ಕ್ಷಮತೆಯಿದೆ. ಆದ್ದರಿಂದ ಸಾಧಕರಿಗೆ ಅವರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಬಗ್ಗೆ ಯೋಗ್ಯ ಮಾರ್ಗದರ್ಶನ ಮಾಡುತ್ತಾರೆ.
ಆ. ಹೆಚ್ಚಿನ ಸಮಯ ಅವರು ತಾರಕ ರೂಪದಲ್ಲಿರುತ್ತಾರೆ; ಆದರೆ ಕೆಲವೊಮ್ಮೆ ಈಶ್ವರೇಚ್ಛೆಯಿಂದ ಮತ್ತು ಸಾಧಕರ ಅವಶ್ಯಕತೆಗನುಸಾರ ಅವರು ಮಾರಕ ರೂಪದಲ್ಲಿಯೂ ಇರುತ್ತಾರೆ.
ಇ. ಅವರಲ್ಲಿ ಸಾಧನೆಯ ತೀವ್ರ ತಳಮಳವಿದೆ. ಅವರು ಪರಾತ್ಪರ ಗುರು ಡಾ. ಆಠವಲೆಯವರ ಆಜ್ಞಾಪಾಲನೆ ಮಾಡಿ ಅವರಿಗೆ ಅಪೇಕ್ಷಿತವಾಗಿರುವ ಸಾಧನೆಯನ್ನು ಮಾಡುತ್ತಾರೆ.
ಈ. ‘ಎಲ್ಲವನ್ನೂ ಪರಾತ್ಪರ ಗುರು ಡಾಕ್ಟರರೇ ಮಾಡಿಸಿಕೊಳ್ಳುತ್ತಾರೆ’, ಎಂಬ ಭಾವ ಅವರಲ್ಲಿದೆ. ಅವರಲ್ಲಿನ ಈ ಭಾವದಿಂದ ಅವರು ನಿರಂತರ ಆನಂದಾವಸ್ಥೆಯಲ್ಲಿ ಇರುತ್ತಾರೆ.
ಉ. ಅವರು ನಿರಂತರ ಈಶ್ವರ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಅನುಸಂಧಾನದಲ್ಲಿ ಇರುತ್ತಾರೆ. ‘ಈಶ್ವರೀ ರಾಜ್ಯದ ಸ್ಥಾಪನೆ’ಯು ಪರಾತ್ಪರ ಗುರು ಡಾ. ಆಠವಲೆಯವರ ಧ್ಯೇಯವಾಗಿದೆ. ಈ ಧ್ಯೇಯದ ಪೂರ್ತಿಗಾಗಿ ಆವಶ್ಯಕವಿರುವ ಸೂಕ್ಷ್ಮಜ್ಞಾನವು ಅವರಿಗೆ ಈಶ್ವರನಿಂದ ಮತ್ತು ಪರಾತ್ಪರ ಗುರು ಡಾ. ಆಠವಲೆಯವರಿಂದ ದೊರೆಯುತ್ತದೆ. ‘ಈಶ್ವರೀ ರಾಜ್ಯದ ಸ್ಥಾಪನೆ’ಯ ಅಂತರ್ಗತ ಅಗತ್ಯವಿರುವ ಸೂಕ್ಷ್ಮದಲ್ಲಿನ ಅಂಶಗಳ ಅಧ್ಯಯನವನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಜವಾಬ್ದಾರಿಯಿಂದ ನೋಡುತ್ತಾರೆ.
ಊ. ಅವರು ಮಾಡುವ ಪ್ರತಿಯೊಂದು ಸೇವೆ ಅಥವಾ ಸಾಧನೆಯಿಂದ ಅವರಿಗೆ ಈಶ್ವರೀ ಜ್ಞಾನವೇ ದೊರಕುತ್ತದೆ. ಈ ಜ್ಞಾನವು ಸಾಧಕರಿಗೆ ಅವರ ಸಾಧನೆಗಾಗಿ ಮಾರ್ಗದರ್ಶಕವಾಗಿರುತ್ತದೆ.
ಎ. ಅವರಲ್ಲಿ ಸಾಕ್ಷೀಭಾವವಿದ್ದು ಅವರು ಯಾವಾಗಲೂ ಸ್ಥಿರವಾಗಿರುತ್ತಾರೆ. ಅವರು ಎಂದಿಗೂ ಭಾವನಾಶೀಲರಾಗುವುದಿಲ್ಲ.
ಐ. ಅವರಲ್ಲಿ ಅತ್ಯಲ್ಪ ಅಹಂ ಇರುವುದರಿಂದ ಅವರು ಅತ್ಯಂತ ನಮ್ರವಾಗಿದ್ದಾರೆ, ಹಾಗೆಯೇ ಪರಾತ್ಪರ ಗುರು ಡಾ. ಆಠವಲೆಯವರಿಗೆ ಅಪೇಕ್ಷಿತವಾಗಿರುವ ಸಮಷ್ಟಿ ಸಾಧನೆಯಾಗಲು ಅವರು ತಳಮಳದಿಂದ ಪ್ರಯತ್ನಿಸುತ್ತಾರೆ.
ಓ. ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ನಗುವಾಗ ಅವರ ಕಣ್ಣುಗಳಲ್ಲಿ ಪ್ರೀತಿ ಕಾಣಿಸುತ್ತದೆ, ಹಾಗೆಯೇ ಅವರ ನಗುವನ್ನು ನೋಡಿ ಸಾಧಕರಿಗೂ ಆನಂದ ಸಿಗುತ್ತದೆ.
ಔ. ಅವರಲ್ಲಿ ಕಲಿಯುವ ವೃತ್ತಿ ಉತ್ತಮವಾಗಿದ್ದು ಅವರಲ್ಲಿನ ಶರಣಾಗತಭಾವ ಮತ್ತು ತಳಮಳದಿಂದ ಅವರು ತಮ್ಮಲ್ಲಿ ಶೀಘ್ರಗತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.
ಅಂ. ಅವರಿಗೆ ಪ್ರತಿಯೊಂದು ವಿಷಯದ ಬಗ್ಗೆ ತುಂಬಾ ಕೃತಜ್ಞತೆ ಅನಿಸುತ್ತದೆ.
ಕ. ಸಾಧಕರಿಂದ ಸಾಧನೆಯ ಒಳ್ಳೆಯ ಪ್ರಯತ್ನಗಳಾದರೆ ಅಥವಾ ಸಾಧಕರು ಯಾವುದಾದರೊಂದು ಸೇವೆಯ ಬಗ್ಗೆ ಒಳ್ಳೆಯ ಅಧ್ಯಯನ ಮಾಡಿ ಮಂಡಿಸಿದರೆ ಅವರಿಗೆ ತುಂಬಾ ಆನಂದವಾಗುತ್ತದೆ. ಅವರು ಸಾಧಕರೊಂದಿಗೆ, ಹಾಗೆಯೇ ಸಮಾಜದ ಪ್ರತಿಯೊಂದು ವ್ಯಕ್ತಿಯೊಂದಿಗೆ ಸಹಿಷ್ಣುತೆಯಿಂದ ಮತ್ತು ಮನಮುಕ್ತತೆಯಿಂದ ಮಾತನಾಡುತ್ತಾರೆ. ಅವರ ಈ ಗುಣಗಳು ಸಾಧಕರು, ಹಾಗೆಯೇ ಸಮಾಜದ ಜನರಿಗೂ ಗಮನಕ್ಕೆ ಬರುತ್ತವೆ.’ – ಸನಾತನದ ಓರ್ವ ಸಂತರು (೨೧.೫.೨೦೨೪)
ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಪ್ರಾಪ್ತವಾಗುವ ವರೆಗಿನ ದಿವ್ಯ ಪ್ರಯಾಣ !
ಯಜ್ಞಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !
ಯಜ್ಞಸಂಸ್ಕೃತಿಯ ಸಂವರ್ಧನೆ ಬಗ್ಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೃಷ್ಟಿಕೋನ !
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿಯೇ ಯಜ್ಞಸಮಾರಂಭ ಮತ್ತು ಸಮಷ್ಟಿ ಧರ್ಮಪ್ರಸಾರ !
೧೨ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವಾಗಿರುವ ಮೂಲ ಸೋಮನಾಥ ಜ್ಯೋತಿರ್ಲಿಂಗದ ದಿವ್ಯ ಅಂಶಗಳು ಸನಾತನ ಸಂಸ್ಥೆಗೆ ಸಮರ್ಪಣೆ !
ಯಜ್ಞಗಳನ್ನು ಆಯೋಜಿಸುವಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ವ್ಯಾಪಕ ಉದ್ದೇಶ !