‘ಗಾಯನ, ವಾದನ, ನೃತ್ಯ ಮತ್ತು ನಾಟಕ ಈ ಕಲೆಗಳಿಂದ ಈಶ್ವರಪ್ರಾಪ್ತಿಗಾಗಿ ಸಾಧನೆ’, ಇದರ ಪ್ರಾಸ್ತಾವಿಕ ವಿವೇಚನೆ !

ಇಲ್ಲಿಯವರೆಗೆ ಮುದ್ರಿತವಾದ ಲೇಖನಮಾಲೆಯಲ್ಲಿ ನಾವು ‘ಗಾಯನ, ವಾದನ ನೃತ್ಯ ಮತ್ತು ನಾಟ್ಯ’ ಇದರ ಆಧ್ಯಾತ್ಮಿಕ ಇತಿಹಾಸವನ್ನು ನೋಡುತ್ತಿದ್ದೇವೆ. ಭಗವದ್ಭಕ್ತಿಯ ಮಾಧ್ಯಮವಾಗಿದ್ದ ಮತ್ತು ಮಂದಿರ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಈ ಕಲೆಗಳ ಪ್ರದರ್ಶನದ ಉದ್ದೇಶವು ಕಾಲದ ಪ್ರಭಾವದಿಂದ ಬದಲಾಗುತ್ತಿದೆ
(ಲೇಖನ ೧೫)
ಈ ಹಿಂದಿನ ಲೇಖನ ಸಂಖ್ಯೆ ೧೪ ಓದಲು ಇಲ್ಲಿ ಲಿಂಕ್‌ಮೇಲೆ ಕ್ಲಿಕ್‌ಮಾಡಿ :
https://sanatanprabhat.org/kannada/182857.html
ಇಲ್ಲಿಯವರೆಗೆ ನಾವು ‘ಕಲೆಯ ಇತಿಹಾಸ, ಕಲೆಗಳ ನಿರ್ಮಾಣದ ಮೂಲ ಉದ್ದೇಶ ಮತ್ತು ಪ್ರಸ್ತುತ ಕಲೆಯು ವಿಕೃತಿಯತ್ತ ಸಾಗುತ್ತಿರುವ ಪ್ರವಾಸದ’ ಬಗ್ಗೆ ತಿಳಿದುಕೊಂಡಿದ್ದೇವೆ. ಇಂದಿನ ಲೇಖನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲೆಯಿಂದ ಸಾಧನೆ ಆಗಲು ನೀಡಿದ ಮಾರ್ಗದರ್ಶಕ ಅಂಶಗಳು ಮತ್ತು ಅವುಗಳ ವಿಶ್ಲೇಷಣೆಯನ್ನು ತಿಳಿದುಕೊಳ್ಳುವವರಿದ್ದೇವೆ.

ಇಂದು ಮನುಷ್ಯನು ಕಲೆಯ ಮೂಲ ಉದ್ದೇಶವಾದ ‘ಕಲೆಯ ಮೂಲಕ ಈಶ್ವರಪ್ರಾಪ್ತಿ’ಯನ್ನು
ಮರೆತಿದ್ದಾನೆ. ಕಲಾ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ವಿಕೃತಿ ಹಾಗೂ ಕಲೆಯ ಮೇಲೆ ಹೆಚ್ಚುತ್ತಿರುವ ರಜ-ತಮ ಗುಣಗಳ ಪ್ರಭಾವವನ್ನು ಗಮನಿಸಿದರೆ, ಸಮಾಜವನ್ನು ಕಲೆಯ ಮೂಲ ಉದ್ದೇಶದ ಕಡೆಗೆ, ಅಂದರೆ ಈಶ್ವರಪ್ರಾಪ್ತಿಯತ್ತ ಕೊಂಡೊಯ್ಯುವ ಅವಶ್ಯಕತೆಯಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ‘ಸಮಾಜಕ್ಕೆ ೧೪ ವಿದ್ಯೆಗಳು ಮತ್ತು ೬೪ ಕಲೆಗಳ ಮಾಧ್ಯಮದಿಂದ ಸಾಧನೆಗಾಗಿ ಮಾರ್ಗದರ್ಶನ ಸಿಗಲಿ’ ಎಂಬ ಉದ್ದೇಶದಿಂದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದ್ದಾರೆ. ‘ಕಲೆ ಮತ್ತು ವಿದ್ಯೆಯನ್ನು ಈಶ್ವರಪ್ರಾಪ್ತಿಗಾಗಿ ಸಾಧನವನ್ನಾಗಿ ಮಾಡಿಕೊಂಡು ಮನುಷ್ಯನು ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ವೇಗವಾಗಿ ಸಾಗಿ ಈ ಜನ್ಮವನ್ನು ಸಾರ್ಥಕಪಡಿಸಿಕೊಳ್ಳ ಬಹುದು’ ಎಂಬ ಬಗ್ಗೆ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲೆಯ ಮೂಲಕ ಸಾಧನೆಯಾಗಲು ನೀಡಿದ ಮಾರ್ಗದರ್ಶಕ ಅಂಶಗಳು ಮತ್ತು ಅವುಗಳ ವಿಶ್ಲೇಷಣೆ !
‘ಕಲಾವಿದರು ಕೇವಲ ಕಲೆಯಲ್ಲಿಯೇ ಸಿಲುಕಿಕೊಳ್ಳದೆ ಕಲೆಯ ಮೂಲಕ ಈಶ್ವರಪ್ರಾಪ್ತಿಯನ್ನು ಮಾಡಿಕೊಂಡು ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವುದು ಅವಶ್ಯಕ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಿಶ್ಲೇಷಣೆ : ‘ಪ್ರಾರಬ್ಧಭೋಗಗಳನ್ನು ಭೋಗಿಸುವುದು ಮತ್ತು ಈಶ್ವರಪ್ರಾಪ್ತಿಗಾಗಿ ಪ್ರಯತ್ನಿಸುವುದು’, ಇದಕ್ಕಾಗಿ ನಮಗೆ ಮನುಷ್ಯಜನ್ಮ ಸಿಕ್ಕಿದೆ. ಆದ್ದರಿಂದ ‘ಇದೇ ಜನ್ಮದಲ್ಲಿ ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದು’ ಮನುಷ್ಯಜನ್ಮದ ಅಂತಿಮ ಧ್ಯೇಯವಾಗಿದೆ. ಕಲಾವಿದರಿಗೆ ಸಾಧನೆಗಾಗಿ ಕಲೆಯ ಮಾಧ್ಯಮವನ್ನು ಬಳಸುವುದು ಸುಲಭವಾಗುತ್ತದೆ. ಆದ್ದರಿಂದ ಕೇವಲ ಕಲೆಗಾಗಿ ಅಥವಾ ಜನರಿಗಾಗಿ ಕಲೆಯನ್ನು ಪ್ರದರ್ಶಿಸದೆ, ಕಲಾವಿದರು ‘ಕಲೆಯ ಮೂಲಕ ಸಾಧನೆ ಮಾಡುವುದು ಅಥವಾ ಕಲೆಗೆ ಸಾಧನೆಯನ್ನು ಜೋಡಿಸುವುದು’ ಮನುಷ್ಯ ಜನ್ಮದ ಸಾರ್ಥಕತೆಗೆ ಬಹಳ ಮುಖ್ಯವಾಗಿದೆ. ಕಲಾವಿದನಲ್ಲಿ ಸಾಧನೆ ಇಲ್ಲದಿದ್ದರೆ ಅವನು ಪುನಃ ಜನನ-ಮರಣಗಳ ಚಕ್ರದಲ್ಲಿ ಸಿಲುಕುತ್ತಾನೆ. ಕಲೆಯ ಮೂಲಕ ಸಾಧನೆಗೆ ಪ್ರಯತ್ನಿಸುವುದರಿಂದ ಕಲಾವಿದನ ಆಧ್ಯಾತ್ಮಿಕ ಉನ್ನತಿಯಾಗಿ ಅವನ ಪ್ರಯಾಣವು ಸತ್-ಚಿತ್-ಆನಂದದ ಕಡೆಗೆ ಆಗುತ್ತದೆ.
‘ಕಲೆಯ ಮೂಲಕ ಸಾಧನೆ ಮಾಡಲು ಮೊದಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಅಳವಡಿಸಿಕೊಂಡು ಸಾಧನೆಯ ಅಡಿಪಾಯವನ್ನು ಸಿದ್ಧಪಡಿಸಿಕೊಳ್ಳುವುದು ಆವಶ್ಯಕ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಿಶ್ಲೇಷಣೆ : ಇಂದು ಮನುಷ್ಯನ ಸ್ವಭಾವದೋಷಗಳು ಮತ್ತು ಅಹಂಕಾರವು ಅವನ ಮಾನಸಿಕ ಅಶಾಂತಿಗೆ ಕಾರಣವಾಗುತ್ತಿವೆ, ಹಾಗೆಯೇ ಅವನು ಕಲೆಯ ಮೂಲಕ ಮಾಡುವ ಸಾಧನೆಯಿಂದ ವಂಚಿತನಾಗುತ್ತಿದ್ದಾನೆ. ಇದರ ಪರಿಣಾಮವಾಗಿ, ಕಲೆಯು ಸಾಧನೆಯಾಗುವ ಬದಲು ಕೇವಲ ‘ಹವ್ಯಾಸ, ಮನೋರಂಜನೆ, ಹಣ ಮತ್ತು ಪ್ರಸಿದ್ಧಿಯನ್ನು ಪಡೆಯುವ’ ಮಾರ್ಗವಾಗಿ ಬದಲಾಗುತ್ತಿದೆ. ಆದ್ದರಿಂದ ಇಂದಿನ ಕಾಲದಲ್ಲಿ ಕಲೆಯ ಮೂಲಕ ಸಾಧನೆಯಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡುವುದು ಅತ್ಯಂತ ಮಹತ್ವದ್ದಾಗಿದೆ. ಒಮ್ಮೆ ಸ್ವಭಾವದೋಷ ಮತ್ತು ಅಹಂಕಾರ ಕಡಿಮೆಯಾಗಿ ಸಾಧನೆಯ ಅಡಿಪಾಯ ಸಿದ್ಧವಾದರೆ, ಕಲೆಯ ಮೂಲಕ ಸಾಧನೆಯ ಕಟ್ಟಡವನ್ನು ಉತ್ತಮವಾಗಿ ಕಟ್ಟಬಹುದು. ಶುದ್ಧ ಮತ್ತು ಸಾತ್ತ್ವಿಕ ಕಲಾವಿದನಿಂದ ಸಾತ್ತ್ವಿಕ ಕಲೆ ಪ್ರಸ್ತುತಗೊಳ್ಳುತ್ತದೆ ಮತ್ತು ಅದರಿಂದ ಆ ಕಲಾವಿದನ ಸಾಧನೆಯೂ ಆಗುತ್ತದೆ.
‘ಇಂದಿನ ಕಾಲ ಮಹಿಮೆಯಂತೆ ಕೇವಲ ಕಲೆಯನ್ನು ಮಾಡುವುದರಿಂದ ಸಾಧನೆಯಾಗುವುದಿಲ್ಲ. ಕಲೆಗೆ ಸಾಧನೆಯನ್ನು ಜೋಡಿಸುವುದು ಅವಶ್ಯಕವಾಗಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಿಶ್ಲೇಷಣೆ : ದಿನವಿಡೀ ನಾವು ಕಲೆಗಾಗಿ ಕೆಲವು ಗಂಟೆಗಳನ್ನು ಮೀಸಲಿಡುತ್ತೇವೆ. ಅಷ್ಟು ಸಮಯ ಮಾತ್ರ ನಾವು ಕಲೆಯ ವಿಚಾರಗಳಲ್ಲಿ ಇರುತ್ತೇವೆ; ಆದರೆ ಉಳಿದ ಸಮಯದ ಬಗ್ಗೆ ಏನು ? ‘ಸಾಧನೆ’ ಎಂದರೆ ಈಶ್ವರಪ್ರಾಪ್ತಿಗಾಗಿ ಪ್ರತಿದಿನ ಮತ್ತು ಉದ್ದೇಶಪೂರ್ವಕವಾಗಿ ಮಾಡುವ ಪ್ರಯತ್ನ ! ನಮ್ಮ ಮನಸ್ಸಿನಲ್ಲಿ ಅನೇಕ ವಿಚಾರಗಳಿರುತ್ತವೆ. ವ್ಯಕ್ತಿಯ ಸ್ವಭಾವದೋಷ ಮತ್ತು ಅಹಂಕಾರ ಕೇವಲ ಕೆಲವು ಗಂಟೆಗಳ ಕಲೆಯ ಅಭ್ಯಾಸದಿಂದ ದೂರವಾಗುವುದಿಲ್ಲ. ಕಲೆಯ ಪ್ರದರ್ಶನದ ಸಮಯದಲ್ಲಿ ಕಲಾವಿದನಿಗೆ ಲಭಿಸುವ ನಿರ್ವಿಚಾರ ಸ್ಥಿತಿ ಅಥವಾ ಭಾವಸ್ಥಿತಿಯು ದಿನದ ವಿವಿಧ ಪರಿಸ್ಥಿತಿಗಳಲ್ಲಿ ಉಳಿಯುವುದು ಕಷ್ಟವಾಗುತ್ತದೆ. ಇಂದಿನ ಕಲಾವಿದರು ಲೌಕಿಕ ಜೀವನದಲ್ಲಿ ಇರುವುದರಿಂದ ಅವರು ದೈನಂದಿನ ಜೀವನದ ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಸತ್ತ್ವಗುಣವನ್ನು ಹೆಚ್ಚಿಸಿಕೊಳ್ಳಲು ಕೇವಲ ಕಲೆಯು ಸಾಕಾಗುವುದಿಲ್ಲ, ‘ಕಲೆಗೆ ಸಾಧನೆಯನ್ನು ಜೋಡಿಸುವುದು’ ಅನಿವಾರ್ಯವಾಗಿದೆ.
‘ಪಂಚತತ್ತ್ವಗಳಲ್ಲಿ ಸಂಗೀತವು (ಗಾಯನ, ವಾದನ ಮತ್ತು ನೃತ್ಯ) ಆಕಾಶತತ್ತ್ವಕ್ಕೆ ಸಂಬಂಧಿಸಿರುವುದರಿಂದ ಅದರಿಂದ ಶ್ರೇಷ್ಠ ಅನುಭೂತಿಗಳು ಬರುತ್ತವೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಿಶ್ಲೇಷಣೆ : ಸೃಷ್ಟಿಯಲ್ಲಿನ ಪ್ರತಿಯೊಂದು ಘಟಕವು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚತತ್ತ್ವ್ವಗಳಿಗೆ ಸಂಬಂಧಿಸಿದೆ, ಆದ್ದರಿಂದ ವಿವಿಧ ಕಲೆಗಳು ವಿವಿಧ ತತ್ತ್ವಗಳಿಗೆ ಸಂಬಂಧಿಸಿವೆ. ಉದಾ. ಮೂರ್ತಿಕಲೆಯು ಪೃಥ್ವಿ ತತ್ತ್ವಕ್ಕೆ, ಚಿತ್ರಕಲೆಯು ತೇಜ ತತ್ತ್ವಕ್ಕೆ, ನೃತ್ಯಕಲೆಯು ವಾಯು ಮತ್ತು ಆಕಾಶ ತತ್ತ್ವಕ್ಕೆ ಸಂಬಂಧಿಸಿದ್ದು, ಗಾಯನ ಮತ್ತು ವಾದನ ಕಲೆಗಳು ಆಕಾಶ ತತ್ತ್ವ್ವಕ್ಕೆ ಸಂಬಂಧಿಸಿವೆ. ಪೃಥ್ವಿ ಮತ್ತು ತೇಜ ತತ್ತ್ವಗಳಿಂದ ಬರುವ ಅನುಭೂತಿಗಳು ಆಕಾಶ ತತ್ತ್ವಕ್ಕಿಂತ ಸೀಮಿತವಾಗಿರುತ್ತವೆ. ಆದ್ದರಿಂದ ಚಿತ್ರಕಲೆ ಮತ್ತು ಮೂರ್ತಿಕಲೆಯಿಂದ ಬರುವ ಅನುಭೂತಿಗಳು ಮಿತವಾಗಿರುತ್ತವೆ; ಆದರೆ ಗಾಯನ, ವಾದನ ಮತ್ತು ನೃತ್ಯ ಕಲೆಗಳು ಆಕಾಶ ತತ್ತ್ವ್ವಕ್ಕೆ ಸಂಬಂಧಿಸಿರುವುದರಿಂದ ಅವುಗಳ ಮೂಲಕ ಉನ್ನತ ಮಟ್ಟದ ಅನುಭೂತಿಗಳು ಬರುತ್ತವೆ.
‘ಕಲೆಯನ್ನು ಕೇವಲ ಸ್ಥೂಲದಲ್ಲಿ ಅನುಭವಿಸುವುದಕ್ಕಿಂತ, ಸೂಕ್ಷ್ಮದಲ್ಲಿ ಅನುಭವಿಸುವುದು ಹೆಚ್ಚು ಶ್ರೇಷ್ಠವಾಗಿದೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ವಿಶ್ಲೇಷಣೆ : ಇಂದು ಸಮಾಜದಲ್ಲಿನ ಲಕ್ಷಾಂತರ ಕಲಾವಿದರು ಅನೇಕ ವರ್ಷಗಳಿಂದ ಕಲೆಯನ್ನು ಕಲಿಯುತ್ತಿದ್ದಾರೆ ಮತ್ತು ಪ್ರಸ್ತುತಪಡಿಸುತ್ತಿದ್ದಾರೆ; ಆದರೆ ಅವರಿಗೆ ಕಲೆಯಲ್ಲಿನ ಯಾವುದೇ ಅನುಭೂತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಅವರ ಜೀವನವು ಕೇವಲ ಜನರಿಗಾಗಿ ಕಲೆಯನ್ನು ಪ್ರದರ್ಶಿಸುವುದರಲ್ಲಿಯೇ ಕಳೆದುಹೋಗಿದೆ.

ಭಾರತೀಯ ಕಲೆಗಳಿಗೆ ಆಧ್ಯಾತ್ಮಿಕ ಅಧಿಷ್ಠಾನವಿದೆ. ಆದ್ದರಿಂದ ಈ ಕಲೆಗಳು ನಮಗೆ ಮನಸ್ಸು ಮತ್ತು ಬುದ್ಧಿಯ ಆಚೆಗಿನ ಸೂಕ್ಷ್ಮ ಸ್ತರದ ವಿವಿಧ ಅನುಭೂತಿಗಳನ್ನು ನೀಡಬಲ್ಲವು. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ, ಅಂದರೆ ‘ಮಲ್ಹಾರ ರಾಗ’ ಹಾಡಿ ಮಳೆ ತರಿಸುವುದು, ‘ದೀಪಕ ರಾಗ’ ಹಾಡಿ ದೀಪಗಳನ್ನು ಬೆಳಗಿಸುವುದು, ಸಂಗೀತದ ಮೂಲಕ ಸಮಾಧಿ ಸ್ಥಿತಿಯನ್ನು ತಲುಪುವುದು, ನೃತ್ಯದ ಮೂಲಕ ಧ್ಯಾನಸ್ಥರಾಗುವುದು ಇತ್ಯಾದಿ. ಆದರೆ ಇಂದು ಕಲಾವಿದರ ಕಲೆಗೆ ಸಾಧನೆಯ ಅಡಿಪಾಯವಿಲ್ಲದ ಕಾರಣ, ಅಂತಹ ಉನ್ನತ ಅನುಭೂತಿಗಳಿಂದ ಕಲಾವಿದರು ವಂಚಿತರಾಗುತ್ತಿದ್ದಾರೆ. ಇದರಿಂದಾಗಿ ಜೀವನದುದ್ದಕ್ಕೂ ಅವರು ಕೇವಲ ಸ್ಥೂಲ ರೂಪದಲ್ಲಿ ಗಾಯನ, ವಾದನ, ನೃತ್ಯ ಮತ್ತು ನಾಟ್ಯ ಕಲೆಗಳ ಪ್ರದರ್ಶನವನ್ನಷ್ಟೇ ಮಾಡುತ್ತಿರುತ್ತಾರೆ. ಸಾಧನೆಯಿಂದಾಗಿ ಕಲಾವಿದರ ಸಾಧನೆ ಹೆಚ್ಚಾಗುತ್ತಾ ಹೋಗುತ್ತದೆ ಮತ್ತು ಅವರ ಸೂಕ್ಷ್ಮದಲ್ಲಿನ ಅರಿಯುವ ಸಾಮರ್ಥ್ಯವು ಹೆಚ್ಚಾಗುತ್ತದೆ. ಇದರಿಂದ ಅವರು ಕಲೆಗಳಲ್ಲಿನ ಸೂಕ್ಷ್ಮ ಅನುಭೂತಿಗಳನ್ನು ಅನುಭವಿಸಬಹುದು. ಕಲಾವಿದರು ಕೇವಲ ಸ್ಥೂಲ ಈ ಕಲೆಗಳಲ್ಲಿರುವ ದೇವತ್ವದ ಸೂಕ್ಷ್ಮ ಅನುಭೂತಿಯನ್ನು ಪಡೆಯಲು ಪ್ರಯತ್ನಿಸಬೇಕು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲೆಗೆ ಸಾಧನೆಯನ್ನು ಜೋಡಿಸಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಂಡ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸಿಕೊಟ್ಟಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಕಲೆಯ ಮೂಲಕ ಸಾಧನೆ ಮಾಡಬೇಕು’ ಎಂದು ಹೇಳಿ ಸುಮ್ಮನಾಗಲಿಲ್ಲ. ಬದಲಿಗೆ ಕಲೆಗೆ ಸಾಧನೆಯನ್ನು ಜೋಡಿಸಿ ಆಧ್ಯಾತ್ಮಿಕ ಪ್ರಗತಿ ಸಾಧಿಸಿದ ಕೆಲವು ಕಲಾವಿದರನ್ನು ಗುರುತಿಸಿ, ‘ಈ ರೀತಿಯಲ್ಲಿ ಸಾಧನೆ ಮಾಡಲು ಸಾಧ್ಯವಿದೆ’ ಎಂದು ತೋರಿಸಿಕೊಟ್ಟಿದ್ದಾರೆ. ಸಮಾಜದಲ್ಲಿ ಅನೇಕ ಕಲಾವಿದರು ಕೇವಲ ಕಲೆಗಾಗಿ ಕಲೆಯನ್ನು ಮಾಡುತ್ತಿಲ್ಲ, ಕಲೆಯೊಂದಿಗೆ ಅವರ ಸಾಧನೆಯೂ ಮುಂದುವರಿಯುತ್ತಿದೆ. ಆದ್ದರಿಂದ ಸಮಾಜದ ಕೆಲವು ಕಲಾವಿದರು ೬೦ ಕ್ಕಿಂತ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿ ಜನ್ಮ-ಮರಣಗಳ ಚಕ್ರಗಳಿಂದ ಮುಕ್ತರಾಗಿದ್ದಾರೆ, ಇನ್ನು ಕೆಲವರು ಸಂತ ಪದವಿಯನ್ನೂ ತಲುಪಿದ್ದಾರೆ. ಇಂತಹ ಕೆಲವು ಕಲಾವಿದರನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸಮಾಜಕ್ಕೆ ಪರಿಚಯಿಸಿದ್ದಾರೆ.
ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೀಗೆ ಹೇಳಿದ್ದಾನೆ,
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ |
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ||
ಅರ್ಥ : ಹೇ ಭಾರತನೇ (ಭರತವಂಶದ ಅರ್ಜುನನೇ), ಯಾವಾಗೆಲ್ಲ ಧರ್ಮಕ್ಕೆ ಹಾನಿಯುಂಟಾಗಿ ಅಧರ್ಮವು ಹೆಚ್ಚುತ್ತದೆಯೋ, ಆಗ ನಾನು ನನ್ನ ರೂಪವನ್ನು ಧರಿಸುತ್ತೇನೆ, ಅಂದರೆ ಅವತಾರ ತಾಳಿ ಜನರ ಮುಂದೆ ಪ್ರಕಟವಾಗುತ್ತೇನೆ.
– ಕು. ತೇಜಲ ಪಾತ್ರೀಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ಸಂಗೀತ ವಿಶಾರದ), ಸಂಗೀತ ಸಮನ್ವಯಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.
ಇತರ ವಿಶ್ವವಿದ್ಯಾಲಯಗಳಿಗಿಂತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರು ಸ್ಥಾಪಿಸಿದ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಭಿನ್ನತೆ !

‘ಇಂದು ಸಮಾಜದಲ್ಲಿ ಕಲೆ ಮತ್ತು ವಿದ್ಯೆಯನ್ನು ಕಲಿಸುವ ಅನೇಕ ವಿಶ್ವವಿದ್ಯಾಲಯಗಳು ಇವೆ. ಅಲ್ಲಿ ಹೊಟ್ಟೆಪಾಡಿಗೆ ಅಥವಾ ಕೆಲಸ ಪಡೆಯುವ ದೃಷ್ಟಿಯಿಂದ ಶಿಕ್ಷಣ ಸಿಗುತ್ತದೆ; ಆದರೆ ಶಿಕ್ಷಣದೊಂದಿಗೆ ವ್ಯಕ್ತಿಯ ಸರ್ವಾಂಗೀಣ ವಿಕಾಸವನ್ನು ಮಾಡುವ ಒಂದೂ ವಿಶ್ವವಿದ್ಯಾಲಯವಿಲ್ಲ. ಮನುಷ್ಯನ ಸರ್ವಾಂಗೀಣ ವಿಕಾಸವೆಂದರೆ ಅವನ ಲೌಕಿಕ ಅಭಿವೃದ್ಧಿಯೊಂದಿಗೆ ಪಾರಮಾರ್ಥಿಕ (ಆಧ್ಯಾತ್ಮಿಕ) ಅಭಿವೃದ್ಧಿಯೂ ಆಗುವುದು. ಇದನ್ನು ಸಾಧ್ಯವಾಗಿಸುವ ವಿಶ್ವವಿದ್ಯಾಲಯವಿರಬೇಕು ಎಂಬುದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ವಿಚಾರವಾಗಿತ್ತು. ಆ ದೃಷ್ಟಿಯಿಂದ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿಶ್ವವಿದ್ಯಾಲಯದ ವೈಶಿಷ್ಟ್ಯವನ್ನು ತಿಳಿಸುತ್ತಾ ಅವರು ಹೀಗೆ ಹೇಳಿದರು, ‘ಈ ವಿಶ್ವವಿದ್ಯಾಲಯದಲ್ಲಿ ಕಲಿತ ವ್ಯಕ್ತಿಗಳಿಗೆ ಕಾಗದದ ಪ್ರಮಾಣಪತ್ರದ ಅವಶ್ಯಕತೆ ಇರುವುದಿಲ್ಲ. ಅವರನ್ನು ನೋಡಿದ ತಕ್ಷಣವೇ ಸಮಾಜಕ್ಕೆ ಅವನ ಆಧ್ಯಾತ್ಮಿಕ ಉನ್ನತಿಯು ಕಂಡುಬರುತ್ತದೆ. ಅವರು ಸಂತರಾಗಿಯೇ ಹೊರಬರುತ್ತಾರೆ. ಅಂದರೆ ಕಲೆ ಮತ್ತು ವಿದ್ಯೆಗೆ ಸಾಧನೆಯನ್ನು ಜೋಡಿಸುವುದರಿಂದ, ವ್ಯಕ್ತಿಯ ಸಾಧನೆಯ ತೇಜಸ್ಸಿನಿಂದಲೇ ಅವನ ಉನ್ನತಿಯು ಸಮಾಜಕ್ಕೆ ತಿಳಿಯುತ್ತದೆ.”
– ಕು. ತೇಜಲ ಪಾತ್ರಿಕರ (ಆಧ್ಯಾತ್ಮಿಕ ಮಟ್ಟ ಶೇ. ೬೦, ಸಂಗೀತ ವಿಶಾರದ), ಸಂಗೀತ ಸಂಯೋಜಕರು, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೫.೨.೨೦೨೬)
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !