೧. ೧೪ ವಿದ್ಯೆಗಳು ಮತ್ತು ೬೪ ಕಲೆಗಳ ಮೂಲಕ ಎಲ್ಲರನ್ನೂ ಮುಂದೆ ಕರೆದೊಯ್ಯಬೇಕಾಗಿದೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ‘ನಮ್ಮಲ್ಲಿ ೧೪ ವಿದ್ಯೆಗಳು ಮತ್ತು ೬೪ ಕಲೆಗಳಷ್ಟು ಸಾಧನಾಮಾರ್ಗಗಳನ್ನು ಹೇಳಲಾಗಿದೆ. ಅವರವರ ಆಸಕ್ತಿಗನುಸಾರ ಮಾರ್ಗದಿಂದ ನಾವು ಅವರನ್ನು ಮುಂದೆ ಕರೆದೊಯ್ಯಬೇಕಾಗಿದೆ. ‘ಸಂಗೀತದಿಂದ ‘ಈಶ್ವರಪ್ರಾಪ್ತಿ’ ಹೇಗೆ ಮಾಡಿಕೊಳ್ಳಬೇಕು ? ಮತ್ತು ವ್ಯಷ್ಟಿ ಸಾಧನೆ, ವ್ಯಷ್ಟಿ ಜೀವನ ಹಾಗೂ ಸಮಷ್ಟಿ ಸಾಧನೆ ಎಂದರೆ ಏನು ?’ ಇವುಗಳ ಕುರಿತು ನಾವು ಜನರಿಗೆ ಕಲಿಸಬಹುದು. ಎಲ್ಲರನ್ನೂ ಜೊತೆಗೊಡಿಕೊಂಡು ಮುಂದೆ ಹೋಗಬೇಕಾಗಿದೆ. ಇವರೆಲ್ಲರೂ ನಮ್ಮವರೇ ಆಗಿದ್ದಾರೆ.’
೨. ದಿನ ಹೇಗಿದ್ದರೂ, ಅದರಿಂದ ಕಲಿಯುವುದು
ಕು. ಶರ್ವರಿ ಕಾನಸ್ಕರ (ಆಧ್ಯಾತ್ಮಿಕ ಮಟ್ಟ ಶೇಕಡಾ ೬೦, ವಯಸ್ಸು ೧೯ ವರ್ಷ) : ಗುರುದೇವ, ಸಾಮಾನ್ಯವಾಗಿ ”ಇವತ್ತಿನ ದಿನ ಒಳ್ಳೆಯದಾಗಿಲ್ಲ”, ಎನ್ನುತ್ತಾರೆ. ಹಾಗೆ ಹೇಳಬಾರದು; ಏಕೆಂದರೆ ‘ಪ್ರತಿಯೊಂದು ದಿನವನ್ನು ಈಶ್ವರನೇ ನೀಡಿದ್ದಾನೆ. ನಮ್ಮ ಪ್ರಾರಬ್ಧಕ್ಕನುಸಾರ ಅದರತ್ತ ತತ್ತ್ವನಿಷ್ಠೆಯಿಂದ ನೋಡಬೇಕು. ಕಹಿ ಪ್ರಸಂಗವನ್ನು ಎದುರಿಸಬೇಕಾಗಿ ಬಂದರೂ, ಅದರಿಂದಲೂ ಕಲಿಯಲು ಬರಬೇಕು. ಆ ಪ್ರಸಂಗದ ಕುರಿತು ಕೃತಜ್ಞತೆ ಅನಿಸಿ ಆ ದಿನದ ಬಗ್ಗೆ ಕೃತಜ್ಞತೆ ಎನಿಸಬೇಕು’, ಎಂದು ಕಲಿಯಲು ಸಿಕ್ಕಿತು.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಹೌದು ! ಎಷ್ಟು ಸುಂದರ ವಿಚಾರಗಳಲ್ಲವೇ ! ದಿನವು ಕೆಟ್ಟದಾಗಿ ಕಳೆದರೂ ಕಲಿಯಲು ಸಿಗುತ್ತದೆ ಮತ್ತು ದಿನವು ಒಳ್ಳೆಯದಾಗಿ ಕಳೆದರೂ ಕಲಿಯಲು ಸಿಕ್ಕಿತು. ತುಂಬಾ ಚೆನ್ನಾಗಿದೆ !
೩. ಮಡಕೆ ಒಡೆಯುವಿಕೆ : ಸಾಧಕನ ಅಸ್ತಿತ್ವ ನಾಶದ ಸಂಕೇತ
ಕು. ಶರ್ವರಿ ಕಾನಸ್ಕರ : ನಾನು ಭಾವ ಜಾಗೃತಿಯ ಒಂದು ಪ್ರಯೋಗ ಮಾಡಿದೆ, ‘ಕೃಷ್ಣನು ತನ್ನ ಇಷ್ಟದ ಬೆಣ್ಣೆ ಮಡಕೆಯು ತುಂಬಾ ಎತ್ತರದಲ್ಲಿ ಕಟ್ಟಿರುವುದು ಕಾಣಿಸಿತು. ಕೃಷ್ಣನು ಆ ಮಡಕೆಯನ್ನು ಒಡೆದು ಬೆಣ್ಣೆಯನ್ನು ತಿಂದನು. ಆ ಮಡಕೆ ಎಂದರೆ ನಾನೇ ಆಗಿದ್ದೇನೆ. ಯಶೋದಾಮಾತೆಯು ಮೇಲಕ್ಕೆ ನೇತು ಹಾಕಿದ ಮಡಕೆಯನ್ನು ಕೃಷ್ಣನು ಹುಡುಕುತ್ತಾ ಬರುತ್ತಾನೆ. ನನ್ನ ಸ್ಥಿತಿ ಹೇಗಿತ್ತು ಎಂದರೆ, ‘ದೇವರು ನನ್ನತ್ತ ಯಾವಾಗ ದೃಷ್ಟಿ ಹರಿಸುವನು ?’ ನಂತರ ಕೃಷ್ಣನು ಮಡಕೆಯನ್ನು ನೋಡಿ ಅದನ್ನು ಒಡೆದನು. ಆ ಮಡಕೆ ಒಡೆಯಿತು ಎಂದರೆ ನನ್ನ ಅಸ್ತಿತ್ವವು ನಾಶವಾಯಿತು. ಕೃಷ್ಣನು ಬೆಣ್ಣೆಯನ್ನು ತಿಂದನು ಎಂದರೆ ನನ್ನ ಅಸ್ತಿತ್ವವು ನಾಶವಾಯಿತು ಮತ್ತು ನನ್ನಿಂದ ಯಾವ ಸೇವೆ ನಡೆದಿದೆಯೋ, ಅದು ಗುರುಚರಣಗಳಿಗೆ ಅರ್ಪಿತವಾಯಿತು.’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಚೆನ್ನಾಗಿದೆ !
೪. ವ್ಯಾಪಕ ರೂಪದ ಶ್ರೀಕೃಷ್ಣನು ಎಲ್ಲರ ಜೊತೆಯಲ್ಲಿರುತ್ತಾನೆ !
ಕು. ಶರ್ವರಿ ಕಾನಸ್ಕರ : ‘ಕೃಷ್ಣನು ನಮ್ಮ ಜೊತೆಯಲ್ಲಿದ್ದಾನೆ ಎಂಬ ಭಾವವನ್ನಿಡುತ್ತೇವೆ ಅವನು ಜಗತ್ತಿನ ಭಾರವನ್ನು ಸಂಭಾಳಿಸುತ್ತಾನೆ. ಅವನು ಎಲ್ಲರ ಜೊತೆಯಲ್ಲಿದ್ದಾನೆ.’ ಶ್ರೀಕೃಷ್ಣನು, ‘ಯಾರ ಜೊತೆ ಹೋಗಲಿ ಎಂದು ವಿಚಾರ ಮಾಡುವುದಿಲ್ಲ. ಅವನು ಎಲ್ಲರ ಜೊತೆಯಲ್ಲಿರುತ್ತಾನೆ. ಅವನ ವಿಚಾರ ವ್ಯಾಪಕವಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ತುಂಬಾ ಚೆನ್ನಾಗಿದೆ !
೫. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ರೂಪವು ಎಲ್ಲೆಡೆ ಕಾಣಿಸುವುದು

ಕು. ಅಪಾಲಾ ಔಂಧಕರ : ಪರಮ ಪೂಜ್ಯ, ಈಗ ನಮ್ಮ ಸೇವೆಯ ಸ್ಥಳವು ಬದಲಾದಾಗ ನನಗೆ ಅದನ್ನು ಮನಸ್ಸಿನಿಂದ ಸ್ವೀಕರಿಸಲು ಆಗಿರಲಿಲ್ಲ. ನಂತರ ನಾನು ವಿಚಾರ ಮಾಡಿದೆ, ‘ನಾವು ಇದರಲ್ಲಿ ಸಿಲುಕಬಾರದು. ದೇವರು ಕಣಕಣಗಳÀಲ್ಲಿ ಮತ್ತು ಚರಾಚರಗಳಲ್ಲಿದ್ದಾನೆ, ಅವನು ಅಲ್ಲಿಯೂ ಇದ್ದೇ ಇದ್ದಾನೆ.’ ನಾನು ಸಹಸಾಧಕಿಗೆ ಹೇಳಿದೆ, ”ಇಲ್ಲಿ ಪರಮ ಪೂಜ್ಯರೇ ಕಾಣಿಸುತ್ತಿದ್ದಾರೆ. ನಮಗೆ ಬೇರೆ ಎಂದು ಏನೂ ಅನಿಸುತ್ತಿಲ್ಲ.’’ ‘ನಾವು ದೇವರ ಹತ್ತಿರವೇ ಇದ್ದೇವೆ’, ಎಂದು ಅನಿಸುತ್ತದೆ.’’
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ತುಂಬಾ ಚೆನ್ನಾಗಿದೆ !
ದೇವರು ಅನಂತ ಕೋಟಿ ಬ್ರಹ್ಮಾಂಡಗಳ ಕಾರ್ಯವನ್ನು ನೋಡುತ್ತಾನಲ್ಲವೇ !’

ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
ಗುರುಪೂರ್ಣಿಮೆ ನಿಮಿತ್ತ ಗುರುಕಾರ್ಯಕ್ಕಾಗಿ ಅಂದರೆ ಧರ್ಮಕಾರ್ಯಕ್ಕಾಗಿ ಧನ ಅರ್ಪಿಸಿ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು