‘ಸದ್ಯ ಕಳೆದ ಕೆಲವು ದಿನಗಳಿಂದ ನನಗೆ ಬಹಳ ನಿದ್ರೆ ಬರುತ್ತಿದೆ. ಇದರಿಂದಾಗಿ ನನ್ನ ಗ್ರಂಥ ಬರವಣಿಗೆಯ ಕಾರ್ಯವು ಬಹಳ ಕಡಿಮೆ ಯಾಗಿದೆ.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧.೩.೨೦೨೬)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ನಿದ್ರೆ ಹೆಚ್ಚಾದ ಬಗೆಗಿನ ವಿಶ್ಲೇಷಣೆ

‘ಆಧ್ಯಾತ್ಮಿಕ ಉನ್ನತರ ನಿದ್ರೆಯು ಸರ್ವಸಾಮಾನ್ಯ ವ್ಯಕ್ತಿಯಂತಿರದೆ, ಅದು ಅವರ ಸೂಕ್ಷ್ಮಸ್ತರದ ಕಾರ್ಯದ ಸ್ಥಿತಿಯಾಗಿರುತ್ತದೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ಹೆಚ್ಚಿನ ನಿದ್ರೆ ಬರಿಸುವ ಹಿಂದಿನ ದೇವರ ಕಾರ್ಯಕಾರಣಭಾವದ ಒಂದು ಮಗ್ಗಲು ಎಂದರೆ ಅವರನ್ನು ಸ್ಥೂಲ ಕಾರ್ಯದಿಂದ ಸೂಕ್ಷ್ಮ ಕಾರ್ಯದತ್ತ ಒಯ್ಯುವುದು ! ಬರವಣಿಗೆ, ಅದರ ಚೌಕಟ್ಟುಗಳನ್ನು ಮಾಡುವುದು, ಲೇಖನಗಳನ್ನು ಬರೆಯುವುದು ಇವೆಲ್ಲವೂ ಸ್ಥೂಲರೂಪದ ಕಾರ್ಯಗಳಾಗಿವೆ. ಇದಕ್ಕೆ ವಿರುದ್ಧವಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರಿಗೆ ನಿದ್ರೆಯನ್ನು ತಂದು ಅವರ ಮನಸ್ಸಿನಲ್ಲಿ ವಿಚಾರಗಳೇ ಬರದಂತೆ ಮಾಡುವುದು, ಅಂದರೆ ಅವರನ್ನು ನಿರ್ವಿಚಾರ ಸ್ಥಿತಿಯಲ್ಲಿರಿಸಿ ಅವರಿಂದ ಹೆಚ್ಚು ಸೂಕ್ಷ್ಮಸ್ತರದ ಕಾರ್ಯವನ್ನು, ಅಂದರೆ ನಿರ್ಗುಣದ ಕಾರ್ಯವನ್ನು ದೇವರು ಅವರಿಂದ ಮಾಡಿಸಿಕೊಳ್ಳುತ್ತಿರಬಹುದು.
ಹಾಗೆಯೇ ‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸಮಯವು ಸ್ಥೂಲ ಕಾರ್ಯದಲ್ಲಿ ವ್ಯಯವಾಗದೆ ಅವರಿಗೆ ಸೂಕ್ಷ್ಮಕಾರ್ಯಕ್ಕಾಗಿ ಹೆಚ್ಚಿನ ಸಮಯ ಸಿಗಲಿ’, ಎಂಬುದು ಕೂಡ ದೇವರ ಉದ್ದೇಶವಿರಬಹುದು. ಸ್ಥೂಲಕ್ಕಿಂತ ಸೂಕ್ಷ್ಮ ಮತ್ತು ಸಗುಣಕ್ಕಿಂತ ನಿರ್ಗುಣ ಕಾರ್ಯವು ಶ್ರೇಷ್ಠ ಹಾಗೂ ವ್ಯಾಪಕವಾಗಿರುತ್ತದೆ. ಕಾಲಕ್ಕನುಗುಣವಾಗಿ ಈಗ ನಿರ್ಗುಣ ಕಾರ್ಯದ ಅವಶ್ಯಕತೆ ಹೆಚ್ಚಿರಬಹುದು. ಕೊನೆಗೆ ‘ಸ್ಥೂಲ ದೇಹಕ್ಕೆ ಸ್ಥಳ ಮತ್ತು ಕಾಲದ ಮಿತಿ ಇರುತ್ತದೆ’ ಎಂದು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರೇ ಹೇಳಿದ್ದಾರೆ ! ‘ರಾಮ ರಾಜ್ಯವು’ ಬೇಗನೆ ಬರಲಿಕ್ಕಾಗಿಯೇ ದೇವರು ಇದೆಲ್ಲವನ್ನು ಮಾಡಿಸಿಕೊಳ್ಳುತ್ತಿದ್ದಾನೆ. ದೇವರ ಲೀಲೆ ಅಗಾಧವಾಗಿದೆ !
– (ಸದ್ಗುರು) ಡಾ. ಮುಕುಲ ಗಾಡಗೀಳ (ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ., ಮುಂಬೈ ವಿದ್ಯಾಪೀಠ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೮.೩.೨೦೨೬)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !
ಭಾರತೀಯ ಚಲನಚಿತ್ರ ಮತ್ತು ಅದರ ಪ್ರಭಾವದ ಜವಾಬ್ದಾರಿ !
ಸಾಮಾಜಿಕ ಚೇತನದಲ್ಲಾಗುತ್ತಿರುವ ಪರಿವರ್ತನೆ ಮತ್ತು ಅದರಿಂದ ಉದ್ಭವಿಸಲಿರುವ ಮುಂಬರುವ ಆಪತ್ಕಾಲದ ಬಗ್ಗೆ ಜ್ಯೋತಿಷ್ಯಶಾಸ್ತ್ರದ ವಿಶ್ಲೇಷಣೆ
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !