
೧. ತಮಿಳುನಾಡಿನ ಜಾಗೃತ ತಿರುಪರಕುಂದ್ರಂಮ ಮುರುಗನ ದೇವಸ್ಥಾನ
‘ಸ್ಕಂದಪುರಾಣದ ಪ್ರಕಾರ, ತಿರುಪರಕುಂದ್ರಂಮ ಇದು ಇಲ್ಲಿನ ಮುರುಗನ್ ದೇವತೆಯ ಮೊದಲ ಸ್ಥಾನವಾಗಿದೆ. ಇಲ್ಲಿ ಮುರುಗನ್ ದೇವತೆಯ ಅಸ್ತಿತ್ವದ ಅನುಭವ ಬರುತ್ತದೆ. ಈ ದೇವಸ್ಥಾನವು ಮಧುರೈನಿಂದ ೯ ಕಿಲೋಮೀಟರ್ ದೂರದಲ್ಲಿದೆ ಮತ್ತು ಸಮುದ್ರಮಟ್ಟದಿಂದ ೧ ಸಾವಿರ ಅಡಿ ಎತ್ತರದ ಬೆಟ್ಟದ ಮೇಲಿದೆ. ಇತಿಹಾಸದ ಪ್ರಕಾರ, ಕ್ರಿ.ಪೂ. ೬ ನೇ ಶತಮಾನದಲ್ಲಿ ಪಾಂಡ್ಯ ರಾಜನು ಈ ದೇವಸ್ಥಾನವನ್ನು ಕಟ್ಟಿಸಿದನು. ಇಲ್ಲಿ ೬ ದೇವತೆಗಳ ದೇವಾಲಯಗಳಿವೆ. ಈ ಸ್ಥಳದಲ್ಲಿ ಭಗವಾನ್ ವಿಷ್ಣು ಮತ್ತು ಶಿವನ ಮೂರ್ತಿಗಳು ಎದುರು ಬದುರು ಇವೆ. ಇದಲ್ಲದೆ, ಗಣಪತಿ, ಮುರುಗನ್, ದುರ್ಗಾ, ವಿಷ್ಣು, ಭಗವಾನ್ ಶಂಕರರೂ ಇಲ್ಲಿ ನೆಲೆಸಿದ್ದಾರೆ. ಭಗವಾನ್ ಶಂಕರನು ಇಲ್ಲಿ ಗಿರಿ ಪ್ರದಕ್ಷಿಣೆ ಮಾಡುತ್ತಾನೆ. ಈ ಬೆಟ್ಟವನ್ನು ಅಥವಾ ಬೆಟ್ಟದ ಮೇಲೆ ಸಂಚರಿಸುತ್ತಾನೆ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ಭಾರತದಲ್ಲಿ ಮುರುಗನ್ ದೇವತೆಯ ೫ ದೇವಸ್ಥಾನಗಳಿವೆ. ಸ್ಕಂದಪುರಾಣದ ಕಥೆಯ ಪ್ರಕಾರ, ಸುರಪದ್ಮನ್ ಎಂಬ ಒಬ್ಬ ಅಸುರನಿದ್ದನು. ಅವನು ಭಗವಾನ ಶಂಕರನನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು ಮಾಡಿದನು. ಭಗವಾನ ಶಂಕರನು ಸಂತುಷ್ಟನಾದ ನಂತರ ಅವನು ವರವನ್ನು ಕೇಳಿ ಪಡೆದನು. ನಂತರ ಸುರಪದ್ಮನನು ಸೊಕ್ಕಿನಿಂದ ವರ್ತಿಸಲಾರಂಭಿಸಿದನು. ಅವನು ಇಂದ್ರನ ಮೇಲೆ ದಂಡೆತ್ತಿ ಹೋಗಿ ಅವನನ್ನು ಸೆರೆಹಿಡಿದನು. ಇಂದ್ರನು ಮುರುಗನಿಗೆ ಶರಣಾದನು. ಮುರುಗನು ಸುರಪದ್ಮನನೊಂದಿಗೆ ಯುದ್ಧ ಮಾಡಿದಾಗ, ಸುರಪದ್ಮನನು ಸಮುದ್ರದೊಳಗೆ ಹೋಗಿ ಕುಳಿತುಕೊಂಡನು. ಮುರುಗನು ಅವನನ್ನು ಹೊರಗೆಳೆದು ಸೋಲಿಸಿದನು. ಈ ಘಟನೆಯಿಂದ ಇಂದ್ರನು ಸಂತೋಷಗೊಂಡನು. ಅವನು ತನ್ನ ಮಗಳು ದೈವಯಾನಿ ಅಂದರೆ ದೇವಸೇನಾಳ ವಿವಾಹವನ್ನು ಮುರುಗನೊಂದಿಗೆ ಮಾಡಿದನು. ಈ ಸ್ಥಳದಲ್ಲಿ ಭಗವಾನ ಮುರುಗನಿಗೆ ಅಭಿಷೇಕ ಮಾಡುವ ಸಂಪ್ರದಾಯವಿದೆ. ಮುರುಗನನ್ನು ವಿಜಯದ ದೇವತೆ, ಹಾಗೆಯೇ ಕಲ್ಯಾಣದ ದೇವತೆ ಎಂದೂ ಕರೆಯುತ್ತಾರೆ. ಒಟ್ಟಾರೆ ೧೭೨ ಎಕರೆ ಬೆಟ್ಟದ ಈ ಪ್ರದೇಶವನ್ನು ತಿರುಪರಕುಂದ್ರಂಮ ಹೆಸರಿನಿಂದ ಕರೆಯಲಾಗುತ್ತದೆ. ಭಗವಾನ್ ಮುರುಗನ್ ಇಲ್ಲಿಯ ಮುಖ್ಯ ದೇವತೆಯಾಗಿದ್ದಾನೆ.

೨. ತಿರುಪರಕುಂದ್ರಂಮ ದೇವಸ್ಥಾನದ ಮೇಲೆ ಮತಾಂಧರ ಹಕ್ಕು
ಮತಾಂಧರ ಪ್ರಕಾರ ಇದು ಅವರ ಸಿಕಂದರ ದರ್ಗಾ ಆಗಿದೆ. ಈ ವಿವಾದವು ಜಿಲ್ಲಾ ನ್ಯಾಯಾಲಯದಿಂದ ಮದ್ರಾಸ ಉಚ್ಚ ನ್ಯಾಯಾಲಯದ ವರೆಗೆ ತಲುಪಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಪ್ರತಿಯೊಂದು ಧಾರ್ಮಿಕ ಸ್ಥಳದ ಮೇಲೆ ಮತಾಂಧರು ಹಕ್ಕು ಸಾಧಿಸುತ್ತಾರೆ. ಇಲ್ಲಿಯೂ ಅವರು ಹಕ್ಕು ಹೇಳದಿದ್ದರೆ ಆಶ್ಚರ್ಯವಾಗುತ್ತಿತ್ತು. ಅವರ ಪ್ರಕಾರ, ಅಲ್ಲಿ ಸಿಕಂದರ ಬಾದ್‌ಷಾ ದರ್ಗಾ ಇದೆ ಮತ್ತು ಅವರ ಸಂಪ್ರದಾಯದಂತೆ ಅವರು ಇಲ್ಲಿ ಪಶುಬಲಿ ನೀಡಲಿದ್ದಾರೆ. ಅವರ ಪ್ರಕಾರ ಇಲ್ಲಿ ಹಿಂದೂಗಳು ಸಹ ಪಶುಬಲಿ ನೀಡುತ್ತಾರೆ.
೩. ಸಿವಿಲ್ ನ್ಯಾಯಾಲಯದಿಂದ ಹಿಂದೂಗಳ ಪರ ತೀರ್ಪು
ಈ ವಿಷಯಕ್ಕೆ ಸಂಬಂಧಿಸಿದಂತೆ ಮುರುಗನ ದೇವಸ್ಥಾನದ ಕಡೆಯಿಂದ ಬಹಳ ಹಿಂದೆಯೇ ಒಡೆತನದ ಹಕ್ಕು ಮತ್ತು ಸ್ವಾಧೀನವನ್ನು ಘೋಷಿಸುವ ಬಗ್ಗೆ ಒಂದು ಸಿವಿಲ್ ದಾವೆ ದಾಖಲಿಸಲಾಗಿತ್ತು. ಅದರಲ್ಲಿ ಕಂದಾಯ ದಾಖಲೆಗಳು, ಪೌರಾಣಿಕ ಗ್ರಂಥಗಳು, ಐತಿಹಾಸಿಕ ಕಾಗದಪತ್ರಗಳ ಪುರಾವೆಗಳನ್ನು ನ್ಯಾಯಾಲಯದ ಮುಂದೆ ಮಂಡಿಸಲಾಯಿತು. ಈ ಸಮಯದಲ್ಲಿ ನ್ಯಾಯಾಲಯವು, ೧೭೨ ಎಕರೆ ಭೂಮಿಯಲ್ಲಿ ೩೩ ಸೆಂಟ್ (೦.೦೩ ಎಕರೆ) ಭಾಗವನ್ನು ಹೊರತುಪಡಿಸಿ ಇಡೀ ಪ್ರದೇಶವು ಭಗವಾನ ಮುರುಗನ್ ತಿರುಪ್ಪರಕುಂದ್ರಂಮ ದೇವಸ್ಥಾನಕ್ಕೆ ಸೇರಿದೆ. ಆದ್ದರಿಂದ ಇದು ಹಿಂದೂಗಳದ್ದಾಗಿದೆ ಎಂದು ಹೇಳಿತು. ಕ್ರಿ.ಪೂ. ೬ ನೇ ಶತಮಾನದಲ್ಲಿ ಪಾಂಡ್ಯ ರಾಜನ ಆಡಳಿತವಿತ್ತು. ಆ ಸಮಯದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ ಬಗ್ಗೆ ಪುರಾವೆಗಳಿವೆ. ಇದರಲ್ಲಿ ಕೇವಲ ೩೩ ಸೆಂಟ್ ಭೂಮಿ ಮತಾಂಧರ ಸುಪರ್ದಿಯಲ್ಲಿದೆ, ಅದನ್ನು ಅವರು ದರ್ಗಾ ಎಂದು ಕರೆಯುತ್ತಾರೆ. ಸಿವಿಲ್ ನ್ಯಾಯಾಲಯದ ತೀರ್ಪಿನ ಪ್ರಕಾರ ಅವರಿಗೆ ರಮಜಾನ್ ಮತ್ತು ಬಕ್ರೀದ್ ಹಬ್ಬಗಳ ದಿನಗಳಂದು ಮಾತ್ರ ಅಲ್ಲಿಗೆ ಬರುವ ಅಧಿಕಾರವಿದೆ. ವರ್ಷದ ೩೬೩ ದಿನಗಳು ಅವರಿಗೆ ಅಲ್ಲಿಗೆ ಪ್ರವೇಶಿಸಲು ನಿಷೇಧವಿದೆ ಎಂಬುದು ಅದರ ಅರ್ಥವಾಗುತ್ತದೆ.
೪. ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿಯೂ ಹಿಂದೂಗಳ ಪರವಾಗಿ ಮುದ್ರೆ

ಮತಾಂಧರ ಪ್ರಕಾರ, ಅವರಿಗೆ ಆ ಬಾದ್‌ಷಾ ದರ್ಗಾಕ್ಕೆ ಹೋಗಿ ಪಶುಬಲಿ ನೀಡಿ ಆ ಪ್ರಸಾದವನ್ನು ತಮ್ಮ ಜನರಿಗೆ ವಿತರಿಸಬೇಕಾಗಿದೆ. ಸಹಜವಾಗಿ, ಇದಕ್ಕೆ ಭಗವಾನ ಮುರುಗನ ಭಕ್ತರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಈ ಪಶುಹತ್ಯೆಯ ವಿರುದ್ಧ ಹಿಂದೂಗಳು ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದರು. ಈ ಅರ್ಜಿಗಳ ವಿಚಾರಣೆಯು ಆರಂಭದಲ್ಲಿ ದ್ವಿಸದಸ್ಯ ಪೀಠ ನ್ಯಾಯಮೂರ್ತಿ ನಿಶಾ ಬಾನು ಮತ್ತು ನ್ಯಾಯಮೂರ್ತಿ ಶ್ರೀಮಥಿ ಅವರ ಮುಂದೆ ನಡೆಯಿತು. ಅದರಲ್ಲಿ ನ್ಯಾಯಮೂರ್ತಿ ಬಾನು ಅವರು ಮತಾಂಧರ ವಾದ ಸರಿಯಾಗಿದೆ ಎಂದು ಹೇಳಿದರು. ನ್ಯಾಯಮೂರ್ತಿ ಶ್ರೀಮಥಿ ಅವರು, ‘ಸಿವಿಲ್ ನ್ಯಾಯಾಲಯವು ಹಿಂದೂಗಳ ಪರವಾಗಿ ತೀರ್ಪು ನೀಡಿದೆ ಮತ್ತು ಇದು ಭಗವಾನ್ ಮುರುಗನ ದೇವಾಲಯ ಎಂದು ಘೋಷಿಸಿದೆ. ಹಾಗಾಗಿ ಮತಾಂಧರಿಗೆ ಕೇವಲ ಬಕ್ರೀದ್ ಮತ್ತು ರಂಜಾನ್ ಈದ್ ದಿನಗಳಂದು ಅಲ್ಲಿ ಸೇರಲು ಅನುಮತಿ ಇದ್ದಾಗ, ಈ ರೀತಿ ಪಶುವಧೆಗೆ ಅವಕಾಶ ನೀಡುವುದು ಸರಿಯಲ್ಲ’ ಎಂದು ಹೇಳಿದರು. ನಂತರ ಅವರು ಮತಾಂಧರ ಅರ್ಜಿಗಳನ್ನು ತಿರಸ್ಕರಿಸಿದರು. ದ್ವಿಸದಸ್ಯ ಪೀಠದಲ್ಲಿ ಅಭಿಪ್ರಾಯ ಭೇದವಾದಾಗ, ಈ ಪ್ರಕರಣ ವನ್ನು ಇನ್ನೊಂದು ಏಕ ಸದಸ್ಯ ಪೀಠಕ್ಕೆ ಕಳುಹಿಸಲಾಗುತ್ತದೆ. ಅದರಂತೆ ಈ ಪ್ರಕರಣವು ನ್ಯಾಯಮೂರ್ತಿ ಆರ್. ವಿಜಯಕುಮಾರ್ ಅವರ ಮುಂದೆ ಹೋಯಿತು. ನ್ಯಾಯಮೂರ್ತಿ ವಿಜಯಕುಮಾರ್ ಅವರು ತಮ್ಮ ತೀರ್ಪಿನಲ್ಲಿ, ‘ಹಿಂದೂಗಳ ಪರವಾಗಿ ಒಡೆತನದ ಹಕ್ಕು ಘೋಷಣೆಯಾದಾಗ, ಪವಿತ್ರ ಮುರುಗನ್ ದೇವಾಲಯದ ಆವರಣದಲ್ಲಿ ಪಶುವಧೆಗೆ ಅವಕಾಶ ನೀಡುವುದು ಅಸಮಂಜಸ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತದೆ. ಆದ್ದರಿಂದ ಅವರು ನ್ಯಾಯಮೂರ್ತಿ ಶ್ರೀಮಥಿ ಅವರ ತೀರ್ಪಿಗೆ ಸಮ್ಮತಿಸಿದ್ದು, ನ್ಯಾಯಮೂರ್ತಿ ನಿಶಾ ಬಾನು ಅವರ ತೀರ್ಪಿಗೆ ಅಸಮ್ಮತಿ ಇದೆ’ ಎಂದು ಹೇಳಿದರು.
೫. ಮತಾಂಧರು ಮತ್ತು ತಮಿಳುನಾಡು ಸರಕಾರದಿಂದ ಉಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆ
ಉಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಒಂದು ಆಶ್ಚರ್ಯದ ವಿಷಯವನ್ನು ಉಲ್ಲೇಖಿಸಲಾಗಿದೆ, ಅಂದರೆ ೧೭೨ ಎಕರೆಯಲ್ಲಿ ಕೇವಲ ೩೩ ಸೆಂಟ್ ಭೂಮಿ ಮತಾಂಧರ ಸುಪರ್ದಿಯಲ್ಲಿರುವಾಗ, ಕಂದಾಯ ಇಲಾಖೆಯ ಸಿಬ್ಬಂದಿಯನ್ನು ಕರೆದು ಅಳತೆ ಮಾಡಿಸಿ ವಿಭಾಗಗಳನ್ನು ಗುರುತಿಸಬೇಕು ಎಂದು ಆದೇಶ ನೀಡಲಾಗಿತ್ತು; ಆದರೆ ಅವರು ವಿಭಜನೆ ಮಾಡಲು ಸಹಕರಿಸಲಿಲ್ಲ. ನನ್ನ ಪ್ರಕಾರ ಕಂದಾಯ ಇಲಾಖೆಯ ಸಿಬ್ಬಂದಿಗಳು ನಾಸ್ತಿಕರಾದ ಅಣ್ಣಾ ಡಿಎಂಕೆ ಮತ್ತು ಡಿಎಂಕೆ ಸಂಸ್ಕೃತಿಯಲ್ಲಿ ಬೆಳೆದವರಾಗಿರಬಹುದು. ಇನ್ನೊಂದು, ಸಿಬ್ಬಂದಿ ಭೂಮಿ ಅಳತೆ ಮಾಡಲು ಹೋದರೆ, ಅವರ ಮೇಲೆ ಮತಾಂಧರ ಆಕ್ರಮಣವಾಗಬಹುದು ಎಂಬ ಭಯ ಅವರಿಗೆ ಇರಬಹುದು. ಅದಕ್ಕಿಂತಲೂ ಆಘಾತಕಾರಿ ವಿಷಯವೆಂದರೆ, ಈ ಬೆಟ್ಟದ ಮೇಲೆ ಮತಾಂಧರು ಮಸೀದಿ ಕಟ್ಟುವ ಕೆಲಸ ಕೈಗೆತ್ತಿಕೊಂಡಿದ್ದಾರೆ ಎಂಬ ವರದಿಯಿದೆ. ಇದರ ವಿರುದ್ಧ ಹಿಂದೂಗಳ ಪರವಾಗಿ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಡಿಎಂಕೆ ರಾಜ್ಯ ಸರಕಾರದ ಮುಂದೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೊಘಲರು, ಬ್ರಿಟಿಷರು ಮತ್ತು ಡಿಎಂಕೆ ಅವರ ವಿಚಾರಧಾರೆಗಳಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ. ಹಾಗಾಗಿ ಈ ದೇವಸ್ಥಾನವನ್ನು ಉಳಿಸಲು ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡುವುದು ಅವಶ್ಯಕವಾಗಿದೆ.
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೪.೧೦.೨೦೨೫)
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !