
ಮಂಡ್ಯ – ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ ಉಲ್ಲೇಖಿಸಿದಂತೆ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ೨೧ ಅಕ್ಟೋಬರ್ ರಂದು ಲಕ್ಷ್ಮೀಪೂಜೆಯ ನಿಮಿತ್ತ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿರುವ ಶ್ರೀ ಚೆಲುವನಾರಾಯಣ ಸ್ವಾಮಿಯ ದರ್ಶನವನ್ನು ಪಡೆದರು. ಆ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ‘ಭಾರತ ಸಹಿತ ಇಡೀ ವಿಶ್ವದಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯು ಶೀಘ್ರಗತಿಯಲ್ಲಿ ಆಗಲಿ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ದೊರಕಲಿ ಮತ್ತು ಎಲ್ಲ ಕಡೆಯ ಸಾಧಕರ ರಕ್ಷಣೆಯಾಗಿ ಅವರಿಗೂ ಉತ್ತಮ ಆರೋಗ್ಯ ಲಭಿಸಲಿ’, ಎಂದು ಪ್ರಾರ್ಥನೆ ಮಾಡಿದರು. ಈ ಕುರಿತು ಸಪ್ತರ್ಷಿ ಜೀವನಾಡಿಪಟ್ಟಿಯಲ್ಲಿ, ‘೨೦೨೫ ರ ಲಕ್ಷ್ಮೀಪೂಜೆಯು ಮಂಗಳವಾರದಂದು ಇರಲಿದೆ. ಮಂಗಳವಾರವು ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಜನ್ಮವಾರವಾಗಿದೆ. ಈ ದಿನ ಮೇಲುಕೋಟೆಯ ಶ್ರೀಚೆಲುವನಾರಾಯಣ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರು ಪ್ರಾರ್ಥನೆ ಮಾಡಬೇಕು’ ಎಂದು ಉಲ್ಲೇಖಿಸಲಾಗಿತ್ತು.

ಈ ಸಮಯದಲ್ಲಿ ದೇವಸ್ಥಾನದ ಮುಖ್ಯಾರ್ಚಕರಲ್ಲಿ ಒಬ್ಬರಾದ ನರಸಿಂಹನ್ ರಂಗನ್ ಗುರುಜಿಯವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ದೇವರದರ್ಶನ ಮಾಡಿಸಿದರು ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಅವರಿಂದ ವಿಶೇಷ ಪೂಜೆಯನ್ನು ಮಾಡಿಸಿಕೊಂಡರು. ಹತ್ತಿರದ ಬೆಟ್ಟದ ಮೇಲಿರುವ ಪ್ರಹ್ಲಾದ ಪೂಜಿತ ಸ್ವಯಂಭೂ ಶ್ರೀಯೋಗನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿಯೂ ವಿಶೇಷ ಪೂಜೆಯನ್ನು ಮಾಡಲಾಯಿತು. ಈ ಸಮಯದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ೩೫೦ ಮೆಟ್ಟಲುಗಳನ್ನು ಹತ್ತಿ ಶ್ರೀಯೋಗನರಸಿಂಹನ ದರ್ಶನ ಪಡೆದರು. ವಿಶೇಷವೆಂದರೆ ದರ್ಶನ ಪಡೆದು ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ನರಸಿಂಹನ್ ಅರ್ಚಕರ ಮನೆಗೆ ಬಂದ ಕೂಡಲೇ ಭಾರಿ ಮಳೆ ಸುರಿಯಿತು, ಶ್ರೀಮನ್ನಾರಾಯಣನು ಮಳೆಯ ರೂಪದಲ್ಲಿ ಆಶೀರ್ವಾದ ಮಾಡಿದಂತಾಗಿತ್ತು.

ವೈಕುಂಠದ ಶ್ರೀವಿಷ್ಣುವಿನ ವಜ್ರಗಳ ಕಿರೀಟವು ಮೇಲುಕೋಟೆಯಲ್ಲಿದೆ !ಸತ್ಯಯುಗದಲ್ಲಿ ಪ್ರಹ್ಲಾದ ಪುತ್ರ ವಿರೋಚನ ಎಂಬ ಅಸುರನು ವೈಕುಂಠದಲ್ಲಿ ಕ್ಷೀರಸಾಗರದಲ್ಲಿ ಶೇಷಶಯನದ ಮೇಲೆ ಮಲಗಿರುವ ಶ್ರೀವಿಷ್ಣುವಿನ ತಲೆಯ ಮೇಲಿನ ವಜ್ರಗಳ ಕಿರೀಟ (ವಜ್ರಮುಕುಟ)ವನ್ನು ಅಪಹರಿಸಿದನು. ಗರುಡನು ಅವನನ್ನು ಹಿಂಬಾಲಿಸಿ ಪೃಥ್ವಿಯಲ್ಲಿ ವಿರೋಚನನೊಂದಿಗೆ ಯುದ್ಧ ಮಾಡಿದನು ಮತ್ತು ಅವನನ್ನು ಸೋಲಿಸಿದನು. ಮುಂದೆ ಗರುಡನು ಮೇಲುಕೋಟೆಯಲ್ಲಿರುವ ಶ್ರೀಮನ್ನಾರಾಯಣನ ಶ್ರೀಚೆಲುವನಾರಾಯಣ ಮೂರ್ತಿಗೆ ಆ ಕಿರೀಟವನ್ನು ತೊಡಿಸಿದನು. ವಿರೋಚನನೊಂದಿಗೆ ಯುದ್ಧವನ್ನು ಮಾಡುವಾಗ ಆ ಕಿರೀಟದಲ್ಲಿನ ಒಂದು ನೀಲರತ್ನವು ಕೆಳಗೆ ಒಂದು ನದಿಯಲ್ಲಿ ಬಿದ್ದಿತು ಮತ್ತು ಆ ನದಿಯು ನೀಲಿ ಬಣ್ಣದ್ದಾಯಿತು, ಎಂಬ ಕಥೆ ಇದೆ. ಪ್ರಸ್ತುತ ಈ ಮುಕುಟವು ಕರ್ನಾಟಕ ರಾಜ್ಯ ಸರಕಾರದ ವಿಶೇಷ ರಕ್ಷಣೆಯಲ್ಲಿದೆ. ವರ್ಷಕ್ಕೊಮ್ಮೆ ಈ ಮುಕುಟವನ್ನು ಮೇಲುಕೋಟೆಗೆ ತರುತ್ತಾರೆ. ಆ ಸಮಯದಲ್ಲಿ ೧೩ ದಿನಗಳ ‘ವೈರಮುಡಿ ಉತ್ಸವ’ವನ್ನು ಆಚರಿಸಲಾಗುತ್ತದೆ. |
ಭಾರತವು ಹಿಂದೂ ರಾಷ್ಟ್ರವೇ ಆಗಿದೆ! : Union Minister Pralhad Joshi
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !