ಕಮಲದ ದಂಟುಗಳಿಂದ ಕಾಗದ ತಯಾರಿಸುವ ಕಾರ್ಖಾನೆ ಸ್ಥಾಪಿಸಿದ್ದ ಭೋಜರಾಜ !

ಭೋಜರಾಜ

ಪ್ರಾಚೀನ ಈಜಿಪ್ಟ್ ದೇಶದಲ್ಲಿ ‘ಪಪೈರಸ್’ ಎಂಬ ಗಿಡದಿಂದ ಕಾಗದ ತಯಾರಿಸುತ್ತಿದ್ದರು ಎಂಬುದನ್ನು ಶಾಲೆಯಲ್ಲಿ ತಪ್ಪದೇ ಕಲಿಸುತ್ತಾರೆ; ಆದರೆ ಕಾಗದ ತಯಾರಿಕೆಯ ನಿಜವಾದ ಇತಿಹಾಸ ಬೇರೆಯೇ ಇದೆ. ಮಾಳವಾ ಅಂದರೆ ಪ್ರಾಚೀನ ಭಾರತದ ‘ಮಾಲವ’ ಪ್ರಾಂತ್ಯ. ಅದರ ರಾಜಧಾನಿಯೇ ಧಾರ ಅಥವಾ ಧಾರಾನಗರಿ. ಕ್ರಿ.ಶ. ೧೦೧೦ ರಲ್ಲಿ ಅಲ್ಲಿ ಭೋಜರಾಜನು ರಾಜ್ಯವಾಳುತ್ತಿದ್ದನು. ಅವನು ಅತ್ಯಂತ ವಿದ್ವಾಂಸನಾಗಿದ್ದು, ಒಟ್ಟು ೮೪ ಗ್ರಂಥಗಳನ್ನು ಬರೆದನು. ಅವುಗಳಲ್ಲಿ ಕೆಲವು ಇಂದಿಗೂ ಲಭ್ಯವಿವೆ. ಭೋಜರಾಜನು ಕಮಲನಾಳದಿಂದ, ಅಂದರೆ ಕಮಲದ ದಂಟುಗಳಿಂದ ಕಾಗದ ತಯಾರಿಸುವ ಕಾರ್ಖಾನೆಗಳನ್ನು ಸ್ಥಾಪಿಸಿದ್ದನು. ಆದರೆ ಈ ವಿಷಯವನ್ನು ನಮ್ಮಿಂದ ಉದ್ದೇಶಪೂರ್ವಕವಾಗಿ ಮರೆಮಾಚಲಾಗುತ್ತದೆ. ಧಾರದಿಂದ ಮಾಂಡೂಗೆ ಹೋಗುವ ರಸ್ತೆಯಲ್ಲಿ ‘ನಾಲ್ಚಾ’ ಎಂಬ ಗ್ರಾಮವಿದೆ. ಅದರ ಮೂಲ ಹೆಸರು ‘ನಾಲಕಕ್ಷಫರ್‌’. ಭೋಜರಾಜನು ಇಲ್ಲಿ ದೊಡ್ಡ ಸರೋವರವನ್ನು ಕಟ್ಟಿಸಿ, ಅದರಲ್ಲಿ ಕಮಲದ ಕೃಷಿ ಮಾಡಿದ್ದನು.

ನಾಲ್ಚಾ ಹತ್ತಿರ ‘ಕಾಗಜೀಪುರ’ ಎಂಬ ಇನ್ನೊಂದು ಗ್ರಾಮವಿದೆ. ನಾಲಕಕ್ಷಫರ್‌ನಲ್ಲಿರುವ ಸರೋವರದ ಕಮಲದ ದಂಟುಗಳನ್ನು ಅಲ್ಲಿಗೆ ತಂದು ತಿರುಳು (ನೀರಿನಲ್ಲಿ ನೆನೆಸಿ ಇಟ್ಟು ಮಾಡಿದ ಕಾಗದದ ಮುದ್ದೆ) ತಯಾರಿಸಲಾಗುತ್ತಿತ್ತು. ಅದಕ್ಕಾಗಿ ಅಲ್ಲಿ ದೊಡ್ಡ ತೊಟ್ಟಿಗಳನ್ನು (ಟ್ಯಾಂಕ್‌ಗಳನ್ನು) ನಿರ್ಮಿಸಲಾಗಿತ್ತು. ಇಂದು ಮೂಲ ೧೫೨ ತೊಟ್ಟಿಗಳಲ್ಲಿ ಕೇವಲ ೩ ತೊಟ್ಟಿಗಳು ಮಾತ್ರ ಉಳಿದಿವೆ. ಅನಂತರ ಕಮಲದ ದಂಟಿನ ತಿರುಳಿನಿಂದ ಉತ್ತಮ ಗುಣಮಟ್ಟದ ಕಾಗದವನ್ನು ತಯಾರಿಸಲಾಗುತ್ತಿತ್ತು.

ಭೋಜರಾಜನ ಕಾಗದದ ಕಾರ್ಖಾನೆಯಲ್ಲಿ ತಯಾರಿಸಿದ ಉತ್ತಮ ಕಾಗದದ ಮೇಲೆ ಬರೆದ ‘ಮಿಸ್ತ್‌-ಉಲ್‌-ಫಜಲ್’ ಮತ್ತು ‘ನಿಯಾಮತ್ನಾಮ’ ಎಂಬ ಎರಡು ಪಾರ್ಸಿ ಗ್ರಂಥಗಳು ಇಂದು ಎಲ್ಲಿದೆ ? ಭೋಜಶಾಲೆಯಲ್ಲಿದ್ದ ಆ ಕಾಲದ ಸುಂದರ ಸರಸ್ವತಿಯ ವಿಗ್ರಹವು ಯಾವ ಲಂಡನ್‌ನ ಸಂಗ್ರಹಾಲಯದಲ್ಲಿದೆಯೋ, ಅಲ್ಲಿ !

ಈ ರೀತಿ ಮರ ಕಡಿಯದೆ ಕಾಗದ ತಯಾರಿಸಿದ ಪರಿಸರಪ್ರೇಮಿ ಭೋಜರಾಜರು ಪ್ರಾತಃಸ್ಮರಣಿಯರಾಗಿದ್ದಾರೆ.

(ಆಧಾರ : ಜಾಲತಾಣ)