ಸಾಧಕರೇ, ಸಾಧನೆಯ ಪಯಣವು ಸಂಘರ್ಷಮಯ ಅನಿಸಿದರೂ, ಗುರುಗಳು ಶಿಲೆಯಂತಹ ಜೀವದಿಂದ ದೇವತ್ವವಿರುವ ಸುಂದರ ಮೂರ್ತಿಯನ್ನು ಖಂಡಿತವಾಗಿಯೂ ಕೆತ್ತುವರು,’ ಎಂಬುದನ್ನು ಖಚಿತಪಡಿಸಿಕೊಳ್ಳಿ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗಿಳ

೧. ಶಿಲ್ಪಿಯ ಹೊಡೆತಗಳನ್ನು ಸಹಿಸದ ಕಲ್ಲು ದೇವಸ್ಥಾನದ ಹೊರಗೆ ಬಿಸಿಲಿನಲ್ಲಿ ಬಿದ್ದುಕೊಂಡಿರುವುದು ಮತ್ತು ಹೊಡೆತಗಳನ್ನು ಸಹಿಸುವ ಕಲ್ಲಿನಿಂದ ಶಿಲ್ಪಿಯು ಸುಂದರವಾದ ದೇವರ ಮೂರ್ತಿಯನ್ನು ಕೆತ್ತುವುದು

‘ಮೊನ್ನೆಯಷ್ಟೇ ಒಂದು ಚಿಕ್ಕ; ಆದರೆ ಬೋಧಕಥೆ ಓದಲು ಸಿಕ್ಕಿತು. ಆ ಕಥೆಯಲ್ಲಿ ಎರಡು ಶಿಲೆಗಳಿರುತ್ತವೆ. ಶಿಲ್ಪಿಯು ಎರಡೂ ಶಿಲೆಗಳಿಂದ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾನೆ. ಆಗ ಅವುಗಳಲ್ಲಿನ ಒಂದು ಶಿಲೆ, ‘ನನಗೆ ಈ ಹೊಡೆತಗಳನ್ನು ಸಹಿಸಲಾಗುವುದಿಲ್ಲ. ನನಗೆ ಇದರಿಂದ ತೊಂದರೆಯಾಗುತ್ತಿದೆ,’ ಎಂದು ಹೇಳುತ್ತದೆ. ಎರಡನೆಯ ಶಿಲೆ ಮಾತ್ರ ಶಿಲ್ಪಿಯ ಹೊಡೆತಗಳನ್ನು ಸಹಿಸುತ್ತದೆ ಮತ್ತು ಕೊನೆಗೆ ಆ ಶಿಲೆಯಿಂದ ದೇವರ ಒಂದು ಸುಂದರ ಮೂರ್ತಿ ತಯಾರಾಗುತ್ತದೆ. ಮೊದಲ ಶಿಲೆ ಮಾತ್ರ ಹೇಗಿದೆಯೋ ಹಾಗೆಯೇ ಉಳಿಯುತ್ತದೆ ಮತ್ತು ಅದಕ್ಕೆ ದೇವಸ್ಥಾನದ ಹೊರಗೆ ಬಿಸಿಲಿನಲ್ಲಿ ಬಿದ್ದುಕೊಂಡು ಇರಬೇಕಾಗುತ್ತದೆ. ತೊಂದರೆಯನ್ನು ಸಹಿಸಿದ ಶಿಲೆ ಮಾತ್ರ ದೇವಸ್ಥಾನದ ಗರ್ಭಗುಡಿಯಲ್ಲಿ ‘ದೇವರು’ ಎಂದು ಪೂಜಿಸಲ್ಪಡುತ್ತದೆ.

೨. ಸುಂದರ ಶಿಲ್ಪವನ್ನು ತಯಾರಿಸಲು ದೇವರು ಸನಾತನದ ಪ್ರತಿಯೊಬ್ಬ ಸಾಧಕನನ್ನು ಪರಾತ್ಪರ ಗುರುದೇವರ ಕೈಕೆಳಗೆ ತಂದಿದ್ದಾನೆ; ಆದರೆ ತಪ್ಪುಗಳ ಭಯದಿಂದ ಸಾಧಕರಿಂದ ಗುರುದೇವರಿಗೆ ಅಪೇಕ್ಷಿತವಿರುವ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತಿಲ್ಲ

ಸಾಧನೆಯ ಪಯಣವೂ ಸಂಘರ್ಷಮಯವಾಗಿದೆ. ಈ ಪಯಣದ ಆರಂಭದಲ್ಲಿ ನಾವು ಜೀವನದಲ್ಲಿನ ಎಲ್ಲ ರೀತಿಯ ಹೊಡೆತಗಳನ್ನು (ಕಷ್ಟ, ತೊಂದರೆಗಳು, ಅಡಚಣೆಗಳು ಇತ್ಯಾದಿ) ಸಹಿಸಿ ನಮ್ಮನ್ನು ನಾವೇ ಸಿದ್ಧಗೊಳಿಸಿಕೊಂಡಾಗ, ನಮ್ಮ ಮುಂದಿನ ಮಾರ್ಗ ಸುಲಭವಾಗುತ್ತದೆ. ಸಾಧನೆ ಅಥವಾ ಸೇವೆಯನ್ನು ಮಾಡುವಾಗ ತಪ್ಪುಗಳಾಗುವುದು ಸಹಜ; ಏಕೆಂದರೆ ಕೇವಲ ದೇವರು ಮಾತ್ರ ಪರಿಪೂರ್ಣನಾಗಿದ್ದಾನೆ. ‘ತಪ್ಪುಗಳಿಗೆ ಹೆದರುವುದು, ಅವುಗಳ ಬಗ್ಗೆ ಒತ್ತಡ ಮಾಡಿಕೊಳ್ಳುವುದು ಹಾಗೆಯೇ ತಪ್ಪುಗಳ ಭಯದಿಂದ ಮುಂದಾಳತ್ವ ವಹಿಸದೇ ಸಾಧ್ಯವಾದಷ್ಟೇ ಸೇವೆಯನ್ನು ಮಾಡುವುದು,’ ಇವುಗಳಿಂದ ಗುರುಗಳು ಅಪೇಕ್ಷಿಸಿದ ರೀತಿಯಲ್ಲಿ ಸಾಧಕರು ಸಿದ್ಧವಾಗುವುದಿಲ್ಲ. ‘ನಾವು ಶಿಲೆಯಾಗಿದ್ದೇವೆ ಮತ್ತು ನಮ್ಮ ಶಿಲ್ಪಿ ನಮ್ಮ ಗುರುದೇವರಾಗಿದ್ದಾರೆ. ಸುಂದರ ಮೂರ್ತಿಯಾಗಿ ತಯಾರಾಗಲು ದೇವರು ಸನಾತನದ ಪ್ರತಿಯೊಬ್ಬ ಸಾಧಕನನ್ನು ಪರಾತ್ಪರ ಗುರುದೇವರ ಆಶ್ರಯದಲ್ಲಿ ತಂದಿದ್ದಾನೆ,’ ಎಂದು ಪ್ರತಿಯೊಬ್ಬ ಸಾಧಕನಿಗೆ ಅನಿಸಬೇಕು.

೩. ಸಾಧಕರು ಉತ್ತಮ ಶಿಷ್ಯರ ಉದಾಹರಣೆಗಳಿಂದ ಕಲಿತು ಸಾಧನೆಗಾಗಿ ಅಪಾರ ಕಷ್ಟಪಡಬೇಕು !

ಸಾಧಕರು ತಪ್ಪುಗಳಿಂದ ಕಲಿತು ಆನಂದವನ್ನು ಅನುಭವಿಸಬೇಕು. ತಪ್ಪುಗಳ ಭಯದಿಂದ ಸಾಧಕರು ಸಾಧನೆ ಮಾಡದೇ ಇರುತ್ತಿದ್ದರೆ, ಇಂದು ನಮಗೆ ಅನೇಕ ಉತ್ತಮ ಶಿಷ್ಯರು ಮತ್ತು ಸಂತರು ನೋಡಲು ಸಿಗುತ್ತಿರಲಿಲ್ಲ. ಸ್ವಾಮಿ ಸಮರ್ಥ ರಾಮದಾಸಸ್ವಾಮಿಗಳ ಶಿಷ್ಯ ಕಲ್ಯಾಣಸ್ವಾಮಿ ಇವರು ಇದರ ಒಂದು ಉತ್ತಮ ಉದಾಹರಣೆಯಾಗಿದ್ದಾರೆ. ಗುರುಸೇವೆಯನ್ನು ಮಾಡುವಾಗ ಅವರು ಅಪಾರ ಕಷ್ಟಪಟ್ಟರು ಮತ್ತು ಮನಃಪೂರ್ವಕವಾಗಿ ಗುರುಸೇವೆ ಮಾಡಿದರು. ಸದ್ಯದ ಒಂದು ಉದಾಹರಣೆಯೆಂದರೆ ಶ್ರೀ ಅನಂತಾನಂದ ಸಾಯೀಶರ ಅತ್ಯುತ್ತಮ ಶಿಷ್ಯರಾದ ಪ.ಪೂ. ಭಕ್ತರಾಜ ಮಹಾರಾಜರು ! ಈ ಮಹಾನ ಸಂತರೂ ತಮ್ಮ ಜೀವನದಲ್ಲಿ ಅಪಾರÀ ಕಷ್ಟಗಳನ್ನು ಸಹಿಸಿದ್ದಾರೆ. ಅವರಿಗೆ ಸಮಷ್ಟಿಯಿಂದಾಗಿ ಮತ್ತು ಸಮಷ್ಟಿಗಾಗಿ ಎಲ್ಲ ಕಷ್ಟಗಳನ್ನು ಭೋಗಿಸಬೇಕಾಯಿತು.

೪. ಸಾಧಕರು ಸ್ವಭಾವದೋಷ ಮತ್ತು ಅಹಂಕಾರದ ವಿರುದ್ಧ ಹೋರಾಡಿ ಮತ್ತು ತಪ್ಪುಗಳಿಂದ ಕಲಿತು ‘ಉತ್ತಮ ಶಿಷ್ಯ’ರಾಗಲು ಪ್ರಯತ್ನಿಸಬೇಕು !

ಸಾಧಕರು ಕೇವಲ ತಮ್ಮ ಸ್ವಭಾವದೋಷ ಮತ್ತು ಅಹಂಕಾರ ದೊಂದಿಗೆ ಮಾತ್ರ ಹೋರಾಡಬೇಕಾಗಿದೆ. ಯಾವುದೇ ತಪ್ಪು ಘಟಿಸಿದರೆ ಅಥವಾ ಯಾರಾದರೂ ಏನಾದರೂ ಹೇಳಿದರೆ, ಕೆಲವು ಸಾಧಕರ ಮನಸ್ಸಿಗೆ ಎಷ್ಟು ನೋವಾಗುತ್ತದೆಯೆಂದರೆ, ಆ ವಿಚಾರಗಳಲ್ಲಿ ಅವರ ಕೆಲವು ಗಂಟೆಗಳು ಅಥವಾ ದಿನಗಳು ವ್ಯರ್ಥವಾಗುತ್ತವೆ. ನಮಗೆ ನಮ್ಮ ಪರೀಕ್ಷೆಯನ್ನು ಯಾವಾಗಲೂ ತೆಗೆದುಕೊಳ್ಳುವ ಗುರುಗಳು ಸಿಕ್ಕಿದ್ದರೆ, ಸಾಧಕರ ಸ್ಥಿತಿ ಏನಾಗ ಬಹುದಿತ್ತು ? ‘ಪರಾತ್ಪರ ಗುರು ಡಾಕ್ಟರರು ಸಾಧಕರನ್ನು ಹೂವಿನಂತೆ

ಕಾಪಾಡಿದ್ದಾರೆ,’ ಎಂಬುದರ ಅರಿವಿಟ್ಟುಕೊಂಡು ಸಾಧಕರು ಸಾಧನೆಯ ಪ್ರಯತ್ನಗಳನ್ನು ಹುರುಪಿನಿಂದ ಮಾಡಬೇಕು. ತಪ್ಪುಗಳಾದರೂ ಆಗಲಿ; ಆದರೆ ಭಗವಂತನಿಗಾಗಿ ಮುಂದಾಳತ್ವ ವಹಿಸಿ, ಶ್ರದ್ಧೆಯಿಂದ, ತಳಮಳದಿಂದ ಮತ್ತು ವಿಚಾರಿಸಿ ಮಾಡಿದ ಕಾರ್ಯವು ಸಾಧನೆಯಲ್ಲಿ ಮುಂದೆ ಕರೆದೊಯ್ಯುತ್ತದೆ. ಸಾಧಕರು ತಪ್ಪುಗಳಿಂದ ಕಲಿತು ‘ಉತ್ತಮ ಶಿಷ್ಯ’ರಾಗಲು ಪ್ರಯತ್ನಿಸಬೇಕು.

೫. ಸಾಧಕರು ತಮ್ಮ ತಪ್ಪುಗಳನ್ನು ಶುದ್ಧ ಮನಸ್ಸಿನಿಂದ ಹೇಳಿ, ಆ ತಪ್ಪುಗಳಿಂದ ಕಲಿಯುವ ಆನಂದವನ್ನು ಅನುಭವಿಸಬೇಕು !

ಸಾಧಕರು ತಮ್ಮಿಂದಾದ ಒಳ್ಳೆಯ ಪ್ರಯತ್ನಗಳನ್ನು ಹೇಳುತ್ತಾರೆ, ಭಾವಜಾಗೃತಿಗಾಗಿ ಮಾಡಿದ ಪ್ರಯತ್ನಗಳನ್ನು ಹೇಳುತ್ತಾರೆ, ಹಾಗೆಯೇ ಅವರು ತಮ್ಮ ತಪ್ಪುಗಳನ್ನೂ ಅಷ್ಟೇ ಶುದ್ಧ ಮನಸ್ಸಿನಿಂದ ಹೇಳಿ, ಆ ತಪ್ಪುಗಳಿಂದ ಕಲಿಯುವ ಆನಂದವನ್ನು ಅನುಭವಿಸಬೇಕು. ನಿಜವಾಗಿಯೂ, ಸಾಧಕರ ಮೊದಲ ಪ್ರಯತ್ನ ‘ಸೇವೆಯಲ್ಲಿ ತಪ್ಪುಗಳಾಗಬಾರದು’ ಎಂದೇ ಇರಬೇಕು; ಆದರೆ ಎಲ್ಲ ಕಾಳಜಿ ವಹಿಸಿದ ನಂತರವೂ ಸೇವೆಯಲ್ಲಿ ಏನಾದರೂ ತಪ್ಪಾದರೂ ಸಾಧಕರು ಧೈರ್ಯಗುಂದಬಾರದು. ‘ಪರಿಪೂರ್ಣ ಸೇವೆ ಮಾಡಲು ದೇವರು ಮತ್ತೊಂದು ಅವಕಾಶವನ್ನು ನೀಡಿದ್ದಾನೆ,’ ಎಂಬ ಭಾವವಿಟ್ಟುಕೊಂಡು ಅವರು ಮತ್ತಷ್ಟು ಪ್ರಯತ್ನಗಳನ್ನು ಮಾಡಬೇಕು.

ಈಗ ಸಾಧಕರೇ ನೀವೇ ನಿರ್ಧರಿಸಬೇಕು, ನೀವು ಸ್ವಲ್ಪ ಸಮಯದ ವರೆಗೆ ಕಷ್ಟಗಳನ್ನು ಸಹಿಸಿಕೊಂಡು, ನಂತರ ಮೂರ್ತಿಯಾಗುವ ಒಳ್ಳೆಯ ಶಿಲೆಯಾಗಬೇಕೋ ಅಥವಾ ಮೂರ್ತಿಯಾಗಿ ಸಿದ್ಧಗೊಳ್ಳಲು ಬೇಕಾದ ಸ್ವಲ್ಪ ಕಷ್ಟವನ್ನೂ ಸಹಿಸದೇ ಜೀವನದುದ್ದಕ್ಕೂ ಶಿಲೆಯಾಗಿ ಉರಿ ಬಿಸಿಲಿನಲ್ಲಿದ್ದು ಕಷ್ಟಗಳನ್ನು ಸಹಿಸುತ್ತಾ ಬಿದ್ದುಕೊಳ್ಳುವ ಶಿಲೆಯಾಗಬೇಕೋ !’

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಬಗ್ಗೆ ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ತೆಗೆದ ಉದ್ಗಾರ !

ಸದ್ಗುರು (ಡಾ.) ಚಾರುದತ್ತ ಪಿಂಗಳೆ

‘ನಾನು ಅನೇಕ ವರ್ಷಗಳ ಕಾಲ ಗೋವಾದ ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ವಾಸವಾಗಿದ್ದೆ; ಆದರೆ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಈ ಇಬ್ಬರು ಅವತಾರಿ ದೇವಿಯರನ್ನು ನನಗೆ ಗುರುತಿಸಲು ಆಗಲಿಲ್ಲ; ಆದರೆ ಆ ಸಮಯದಲ್ಲಿ ದೇವರು ನನ್ನಿಂದ ಅವರ ಸಂದರ್ಭದಲ್ಲಿ ‘ಸಖ್ಯಭಕ್ತಿ’ಯನ್ನು ಮಾಡಿಸಿಕೊಂಡನು.’

– ಸದ್ಗುರು ಡಾ. ಚಾರುದತ್ತ ಪಿಂಗಳೆ