
ಭಾರತೀಯರು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಭಾರತದ ಸ್ನೇಹಿತರು ಎಂದು ಭಾವಿಸಿದ್ದರು. ವಿಶೇಷವಾಗಿ ಪ್ರಧಾನಿ ಮೋದಿಯವರೊಂದಿಗಿನ ವೈಯಕ್ತಿಕ ಸ್ನೇಹದಿಂದ, ಅವರ ನೀತಿಗಳು ಭಾರತಕ್ಕೆ ಲಾಭದಾಯಕ ವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅವರ ಎರಡನೇ ಅಧಿಕಾರಾವಧಿಯ ಆರಂಭದಲ್ಲಿ ‘ವೋಕಿಝಮ್’ ವಿರುದ್ಧ (ಜಾಗತಿಕವಾಗಿ ಸ್ಥಾಪಿತವಾಗಿರುವ ಸಮಾಜ ವ್ಯವಸ್ಥೆ, ಸಂಸ್ಕೃತಿ ಮತ್ತು ಕುಟುಂಬ ವ್ಯವಸ್ಥೆಯನ್ನು ಹಾಳು ಮಾಡುವ ವಿಕೃತಿ !) ಅವರು ತೆಗೆದುಕೊಂಡ ಸಾರ್ವಜನಿಕ ನಿಲುವಿನಿಂದ, ಜೋ ಬೈಡೆನ್ ಅಧಿಕಾರದಲ್ಲಿದ್ದಾಗ ಅಮೆರಿಕದ ‘ವೋಕ್ ಲಾಬಿ’ ನಡೆಸಿದ ಭಾರತ-ವಿರೋಧಿ ಚಟುವಟಿಕೆಗಳಿಂದ ಟ್ರಂಪ್ ಅಧ್ಯಕ್ಷರಾದ ನಂತರ ಭಾರತಕ್ಕೆ ಮುಕ್ತಿ ಸಿಗುತ್ತದೆ ಎಂದು ಆಶಿಸಲಾಗಿತ್ತು. ಆದರೆ, ಕಳೆದ ೨೫ ವರ್ಷಗಳಲ್ಲಿ ಭಾರತ-ಅಮೇರಿಕಾ ಸ್ನೇಹದ ಏರುತ್ತಿದ್ದ ಮೆಟ್ಟಿಲುಗಳನ್ನು ನಾಶಪಡಿಸುವ ತೀವ್ರ ಭಾರತ-ವಿರೋಧಿ ನಿಲುವನ್ನು ಟ್ರಂಪ್ ಇದ್ದಕ್ಕಿದ್ದಂತೆ ತೆಗೆದುಕೊಂಡಿದ್ದಾರೆ. ಅವರು ಭಾರತದ ಮೇಲೆ ಅತ್ಯಧಿಕ ‘ಟ್ಯಾರಿಫ್’ ಹೇರಿದ್ದಲ್ಲದೆ, ಪಾಕಿಸ್ತಾನದೊಂದಿಗೆ ಅತಿಯಾದ ಸ್ನೇಹ ಬೆಳೆಸಲು ಪ್ರಯತ್ನಿಸಿ, ಭಾರತದ ಮೇಲೆ ಒತ್ತಡ ಹೇರಲು ಪ್ರಯತ್ನಿಸಿದರು. ಅಲ್ಲದೆ ‘ಭಾರತ ಮತ್ತು ರಷ್ಯಾದ ಮೃತ ಆರ್ಥಿಕತೆಗಳು ಪಾತಾಳಕ್ಕೆ ಹೋದರೂ ನನಗೆ ಏನೂ ಚಿಂತೆಯಿಲ್ಲ’ ಎಂದು ತಿರಸ್ಕಾರದ ಮಾತುಗಳಿಂದ ಭಾರತವನ್ನು ಅವಮಾನಿಸಿದರು. ಇವೆಲ್ಲ ವರ್ತನೆಗಳಿಂದ ಗೊಂದಲಕ್ಕೊಳಗಾದ ಅನೇಕ ಭಾರತೀಯರು ‘ಟ್ರಂಪ್ ಹೀಗೇಕೆ ವರ್ತಿಸುತ್ತಿದ್ದಾರೆ ?’ ಎಂದು ಕೇಳುತ್ತಿದ್ದಾರೆ. ಭೂರಾಜಕೀಯ ಸಂಬಂಧಗಳಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಬೆಳವಣಿಗೆಗಳು ಅಥವಾ ಏರುಪೇರುಗಳು ಸಂಭವಿಸಿದಾಗ ಅವುಗಳ ಅನೇಕ ಪದರುಗಳಿರುತ್ತವೆ. ಟ್ರಂಪ್ ಅವರ ವರ್ತನೆಗೂ ಇಂತಹ ಅನೇಕ ಪದರುಗಳಿವೆ. ಅವುಗಳ ತೊಡಕುಗಳನ್ನು ಬಿಡಿಸಿ ಅರ್ಥ ಮಾಡಿಕೊಳ್ಳದೆ ಟ್ರಂಪ್ ಅವರ ಬದಲಾದ ಭೂಮಿಕೆಯ ಕಾರಣಗಳನ್ನು ವಿವರಿಸಲು ಸಾಧ್ಯವಿಲ್ಲ. ಈ ಲೇಖನದಲ್ಲಿ ನಾವು ಟ್ರಂಪ್ ಅವರ ಬದಲಾಗುತ್ತಿರುವ ನಿಲುವಿನ ಕಾರಣಗಳನ್ನು ತಿಳಿದುಕೊಳ್ಳಲಿದ್ದೇವೆ.
೧. ಟ್ರಂಪ್ ಅವರ ವರ್ತನೆಯ ವಿವಿಧ ಭೂಮಿಕೆ

ಅ. ಭಾರತವನ್ನು, ವಿಶೇಷವಾಗಿ ಮೋದಿ ಅವರನ್ನು ಹೆಚ್ಚು ತೊಂದರೆಗೆ ಸಿಲುಕಿಸಲು ಪ್ರಯತ್ನಿಸುತ್ತಿರುವ ‘ಡೀಪ್ ಸ್ಟೇಟ್’ ! : ಇದರಲ್ಲಿ ಮೊದಲ ಪದರು ಅಮೆರಿಕದ ‘ಡೀಪ್ ಸ್ಟೇಟ್’ (ಸರಕಾರಿ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಸಂಸ್ಥೆ). ವಿಶ್ವ ಆರ್ಥಿಕತೆಯಲ್ಲಿ ಪ್ರಭುತ್ವ ಹೊಂದಿರುವ ಕೆಲವು ಅತಿ ಶ್ರೀಮಂತ ಕುಟುಂಬಗಳು… ಸರಕಾರಿ ಸ್ವಾಮ್ಯದಲ್ಲಿವೆ ಎಂದು ತೋರುವ, ಆದರೆ ವಾಸ್ತವದಲ್ಲಿ ಈ ಕುಟುಂಬಗಳ ಒಡೆತನದಲ್ಲಿರುವ ದೊಡ್ಡ ಬ್ಯಾಂಕುಗಳು… ವಿಶ್ವ ಬ್ಯಾಂಕ್, ಅಂತಾರಾಷ್ಟ್ರೀಯ ಹಣಕಾಸು ನಿಧಿ, ವರ್ಲ್ಡ್ ಇಕನಾಮಿಕ್ ಫೋರಮ್ ನಂತಹ ಆರ್ಥಿಕ ಸಂಸ್ಥೆಗಳು… ಅಮೆರಿಕಾ, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಂತಹ ೫ ಆಂಗ್ಲೋಫೈಲ್ ದೇಶಗಳ ಸರಕಾರಗಳು ಮತ್ತು ಅವುಗಳ ಗುಪ್ತಚರ ಸಂಸ್ಥೆಗಳು… ಜಾಗತಿಕ ‘ಸಾಫ್ಟ್ ಪಾವರ್’ ಮೇಲೆ ನಿಯಂತ್ರಣ ಇರುವ ಅಮೆರಿಕಾದ ‘ಥಿಂಕ್ ಟ್ಯಾಂಕ್ಸ್’… ಇವುಗಳ ಅಸೀಮ ಶಕ್ತಿ ‘ಡೀಪ್ ಸ್ಟೇಟ್’ನ ಕೈಯಲ್ಲಿರುತ್ತದೆ. ಅಮೆರಿಕಾದ ಆರ್ಥಿಕ, ಯುದ್ಧನೀತಿಯ, ಭೂರಾಜಕೀಯ ಪ್ರಭುತ್ವ ಮತ್ತು ಪ್ರಭಾವವನ್ನು ರಕ್ಷಿಸುವುದು ಇದರ ಉದ್ದೇಶ. ಇದಕ್ಕಾಗಿ ಇಡೀ ಜಗತ್ತು ಅಮೆರಿಕಾದ ಅನುಕೂಲಕ್ಕೆ ತಕ್ಕಂತೆ ನೀತಿಗಳನ್ನು ಜಾರಿಗೆ ತರಬೇಕು ಎಂಬುದು ಇದರ ಒತ್ತಾಯವಾಗಿರುತ್ತದೆ. ಅಮೆರಿಕಾದ ಶಕ್ತಿಯ ಮೂಲವಾಗಿರುವ ‘ಫಾರ್ಮಾ’ (ಔಷಧಿ ಉತ್ಪಾದನಾ ಕ್ಷೇತ್ರ), ‘ಆಯಿಲ್’ (ತೈಲ), ‘ಮಿಲಿಟರಿ ಇಂಡಸ್ಟ್ರಿಯಲ್ ಕಾಂಪ್ಲೆಕ್ಸ್’ (ಸೇನಾ ಔದ್ಯೋಗಿಕ ಕ್ಷೇತ್ರ), ‘ಬಿಗ್-ಟೆಕ್’ (ಮಾಹಿತಿ ತಂತ್ರಜ್ಞಾನ ಕ್ಷೇತ್ರ) ಈ ಉದ್ಯಮಗಳ ಹಿತಾಸಕ್ತಿಗಳನ್ನು ಕಾಪಾಡಲು ಈ ‘ಡೀಪ್ ಸ್ಟೇಟ್’ ಯಾವುದೇ ಹಂತಕ್ಕೆ ಹೋಗಬಲ್ಲದು.
ತಮ್ಮ ದೇಶದ ಹಿತಾಸಕ್ತಿಗಳಿಗೆ ಆದ್ಯತೆ ನೀಡಿ ಸ್ವತಂತ್ರ ನೀತಿಗಳನ್ನು ರೂಪಿಸುವ ಸರಕಾರಗಳು ‘ಡೀಪ್ ಸ್ಟೇಟ್’ನ ಕಣ್ಣುಗಳಿಗೆ ಮುಳ್ಳಿನಂತೆ ಚುಚ್ಚುತ್ತವೆ. ಮೋದಿಯವರು ಯಾವಾಗಲೂ ‘ಇಂಡಿಯಾ ಫಸ್ಟ್’ (ಭಾರತ ಮೊದಲು) ನೀತಿಯನ್ನು ಅನುಸರಿಸಿದ್ದರಿಂದ ಅವರು ಮತ್ತು ಭಾರತವು ಮೊದಲಿನಿಂದಲೂ ‘ಡೀಪ್ ಸ್ಟೇಟ್’ನ ರಡಾರ್ ನಲ್ಲಿದ್ದಾರೆ. ರಷ್ಯಾ-ಯುಕ್ರೇನ್ ಯುದ್ಧ ಪ್ರಾರಂಭವಾದ ನಂತರ ಅಮೇರಿಕ ರಷ್ಯಾದ ಮೇಲೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಹೇರಿತು. ಅದನ್ನು ಲೆಕ್ಕಿಸದೆ ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಖರೀದಿಸಿ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಾಧಿಸಿತು. ಈ ಕೋಪ ‘ಡೀಪ್ ಸ್ಟೇಟ್’ ಮನಸ್ಸಿನಲ್ಲಿ ಇನ್ನೂ ಕುದಿಯುತ್ತಿತ್ತು; ಆದರೆ ಚೀನಾವನ್ನು ಹತ್ತಿಕ್ಕಲು ಭಾರತ ಉಪಯುಕ್ತವಾಗುತ್ತದೆ ಎಂಬ ಆಲೋಚನೆಯಿಂದ ಅದು ಇದನ್ನು ಸಹಿಸಿಕೊಂಡಿತ್ತು.
‘ಆಪರೇಷನ್ ಸಿಂದೂರ’ದ ನಂತರ ‘ಡೀಪ್ ಸ್ಟೇಟ್’ನ ಸಹನೆಯ ಕಟ್ಟೆ ಒಡೆಯಿತು. ಇದಕ್ಕೆ ಮೊದಲ ಕಾರಣ, ಈ ಸಂಘರ್ಷದಲ್ಲಿ ಭಾರತೀಯ ಮಿಲಿಟರಿ ಉಪಕರಣಗಳ ಉನ್ನತ ಕಾರ್ಯಕ್ಷಮತೆ ಮತ್ತು ಉತ್ತಮ ಗುಣಮಟ್ಟವು ಜಗಜ್ಜಾಹೀರಾಯಿತು. ಇದರಿಂದ ‘ಶಸ್ತ್ರಾಸ್ತ್ರಗಳ ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ಅಮೇರಿಕಾಗೆ ದೊಡ್ಡ ಪ್ರತಿಸ್ಪರ್ಧಿಯಾಗಬಹುದು’ ಎಂಬ ಸಾಧ್ಯತೆ ಸೃಷ್ಟಿಯಾಯಿತು. ಶಸ್ತ್ರಾಸ್ತ್ರಗಳ ರಫ್ತು ಅಮೇರಿಕಾದ ಆರ್ಥಿಕತೆಯ ಪ್ರಮುಖ ಆಧಾರವಾಗಿದೆ. ಆದ್ದರಿಂದ ಈ ಸ್ಪರ್ಧೆಯನ್ನು ನಿಲ್ಲಿಸಬೇಕಾದರೆ, ಭಾರತದ ಪ್ರಗತಿಗೆ ತಡೆಯೊಡ್ಡುವುದು ಅವಶ್ಯಕ ವಾಗಿದೆ. ಭಾರತದ ಪ್ರಗತಿಯನ್ನು ತಡೆಯಲು ಇದಕ್ಕಿಂತಲೂ ಪ್ರಮುಖವಾದ ಎರಡನೇ ಕಾರಣವಿದೆ. ಜಾಗತೀಕರಣದ ಅಲೆಯಲ್ಲಿ ಅಮೇರಿಕಾ ಮತ್ತು ಯುರೋಪ್ ತಮ್ಮ ಉತ್ಪಾದನಾ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಚೀನಾಕ್ಕೆ ವರ್ಗಾಯಿಸಿದ್ದವು. ಇದರಿಂದ ಬರುವ ಸಮೃದ್ಧಿಯಿಂದ ಚೀನಾ ತನ್ನ ವಿಶಿಷ್ಟತೆಯನ್ನು ಬಿಟ್ಟು ಪಾಶ್ಚಿಮಾತ್ಯ ಉದಾರವಾದಿ ಪ್ರಜಾಪ್ರಭುತ್ವವನ್ನು (‘ಲಿಬರಲ್ ಡೆಮಾಕ್ರಸಿ’) ಸ್ವೀಕರಿಸುತ್ತದೆ ಎಂದು ಅವರು ನಿರೀಕ್ಷಿಸಿದ್ದರು; ಆದರೆ ಚೀನಾ ತನ್ನ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡು ಇಂದು ಎಷ್ಟು ಶಕ್ತಿಯನ್ನು ಪಡೆದಿದೆ ಎಂದರೆ ಅದು ಸರ್ವಶಕ್ತಿಶಾಲಿ ಅಮೇರಿಕಾಗೆ ದೊಡ್ಡ ಗಂಭೀರ ಸವಾಲನ್ನು ಒಡ್ಡಿದೆ. ಇದರಿಂದ ಬುದ್ಧಿವಂತರಾಗಿ, ವೇಗವಾಗಿ ಪ್ರಗತಿ ಸಾಧಿಸುತ್ತಿರುವ ಭಾರತಕ್ಕೆ ಈಗಲೇ ತಡೆಯದಿದ್ದರೆ, ಅಮೇರಿಕಾಗೆ ಮತ್ತೊಂದು ದೊಡ್ಡ ಪ್ರತಿಸ್ಪರ್ಧಿ ಎದ್ದು ನಿಲ್ಲುತ್ತದೆ ಎಂಬ ಅರಿವು ಅಮೆರಿಕಾಗೆ ‘ಆಪರೇಷನ್ ಸಿಂದೂರ’ದ ನಂತರ ಹೆಚ್ಚಾಯಿತು. ಇದಕ್ಕಾಗಿ ಭಾರತದ ಹಿತಾಸಕ್ತಿಗಳಿಗಾಗಿ ಸ್ವತಂತ್ರ ನೀತಿಗಳನ್ನು ಅನುಸರಿಸುವ ನರೇಂದ್ರ ಮೋದಿಯನ್ನು ಅಧಿಕಾರದಿಂದ ದೂರ ಮಾಡಲು ‘ಡೀಪ್ ಸ್ಟೇಟ್’ ನಿರ್ಧರಿಸಿದೆ ಎಂದು ಕಾಣುತ್ತದೆ. ಇದಕ್ಕಾಗಿ ಭಾರತಕ್ಕೆ ಹೆಚ್ಚು ತೊಂದರೆ ಕೊಡುವ ನೀತಿಗಳನ್ನು ಈಗ ಜಾರಿಗೆ ತರಲಾಗುತ್ತಿದೆ. ಟ್ರಂಪ್ ಅವರ ಇದ್ದಕ್ಕಿದ್ದಂತೆ ಬದಲಾದ ಧ್ವನಿ ಮತ್ತು ನಿಲುವಿನ ಹಿಂದೆ ಇದು ಪ್ರಮುಖ ಕಾರಣವಾಗಿದೆ.
ಹೀಗೆ ಹೇಳಬಹುದು, ‘ಟ್ಯಾರಿಫ್ ತೋ ಬಹಾನಾ ಹೈ, ಮೋದಿ ಅಸಲಿ ನಿಶಾನಾ ಹೈ’ (‘ಟ್ಯಾರಿಫ್’ ಒಂದು ನೆಪ, ‘ಮೋದಿ’ಯೇ ಅಸಲಿ ಗುರಿ.’)
ಈಗ ಸಂಘ ಮತ್ತು ಭಾಜಪ ಇವುಗಳ ನಡುವೆ ಬಿರುಕು ಸೃಷ್ಟಿಸುವ ಪ್ರಯತ್ನ ನಡೆಯಬಹುದು. ಭಾಜಪದಲ್ಲಿ ಆಂತರಿಕ ಬಿರುಕು ಸೃಷ್ಟಿಸಲು ಶ್ರಮಿಸಲಾಗುವುದು. ವಿರೋಧ ಪಕ್ಷಗಳನ್ನು ಬಳಸಿಕೊಂಡು ದೇಶದಲ್ಲಿ ಅರಾಜಕತೆಯನ್ನು ಹಬ್ಬಿಸುವ ಯೋಜನೆಗಳನ್ನು ಜಾರಿಗೆ ತರಬಹುದು. ಶೇಖ್ ಹಸೀನಾ ವಿರುದ್ಧ ಪ್ರಚಾರದ ಪ್ರಾರಂಭದಲ್ಲಿ ‘ಚುನಾವಣೆಯಲ್ಲಿ ಗೊಂದಲ ಉಂಟು ಮಾಡಿದ್ದಾರೆ’ ಎಂಬ ಆರೋಪದಿಂದಲೇ ಪ್ರಾರಂಭಿಸಲಾಗಿತ್ತು. ಅದರ ಪುನರಾವೃತ್ತಿ ಭಾರತದಲ್ಲಿ ನಡೆಯುತ್ತಿದೆಯೇ ಎಂದು ನಾವು ಅರ್ಥಮಾಡಿಕೊಳ್ಳಬೇಕು. ನಾವು ಒಂದು ಸ್ವತಂತ್ರ, ಸಮೃದ್ಧ, ಶಕ್ತಿಶಾಲಿ ರಾಷ್ಟ್ರವಾಗಿ ಗೌರವದಿಂದ ನಿಲ್ಲಬೇಕಾದರೆ, ಇಂದು ಇಡೀ ದೇಶವು ಪ್ರಧಾನಿ ಮೋದಿಯವರ ಹಿಂದೆ ದೃಢವಾಗಿ ನಿಲ್ಲಬೇಕು. ಮುಂದಿನ ೨ ವರ್ಷಗಳು ನಮಗೆ ಅತ್ಯಂತ ಸವಾಲಿನದ್ದಾಗಬಹುದು. ಅದರಿಂದ ನಾವು ಹೊರಬಂದರೆ, ಭಾರತದ ಪ್ರಗತಿಯನ್ನು ಯಾರೂ ತಡೆಯಲು ಸಾಧ್ಯವಿಲ್ಲ.
ಆ. ಟ್ರಂಪ್ ಅವರ ಚಂಚಲ ವ್ಯಕ್ತಿತ್ವ ! : ಟ್ರಂಪ್ ಅವರ ಅನಿರೀಕ್ಷಿತ ವರ್ತನೆಯ ಇನ್ನೊಂದು ಪದರು ಅವರ ವ್ಯಕ್ತಿತ್ವ ! ಅಂತರರಾಷ್ಟ್ರೀಯರಾಜತಾಂತ್ರಿಕತೆಯಲ್ಲಿ ಸರಿಯಾದ ನಡುವಳಿಕೆಯ ಸ್ಥಾಪಿತ ಮಾನದಂಡಗಳನ್ನು ಬದಿಗಿಟ್ಟು, ಅವರು ಮೊನಚಾದ ಭಾಷೆಯನ್ನು ನಿರ್ಭೀತಿಯಿಂದ ಬಳಸುತ್ತಾರೆ. ಒಂದು ಹಠಮಾರಿ ಮಗುವಿಗೆ ತನ್ನ ಮನಸ್ಸಿಗೆ ತಕ್ಕಂತೆ ಏನಾದರೂ ಆಗದಿದ್ದರೆ ಅದು ಹೇಗೆ ರೇಗುತ್ತದೆಯೋ, ಹಾಗೆಯೇ ಟ್ರಂಪ್ ಅನೇಕ ಬಾರಿ ವರ್ತಿಸುತ್ತಾರೆ.
‘ನಾನು ಅಧಿಕಾರಕ್ಕೆ ಬಂದ ನಂತರ ೩ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುತ್ತೇನೆ’ ಎಂದು ಅವರು ಬಡಾಯಿ ಕೊಚ್ಚಿ ಕೊಂಡಿದ್ದರು; ಆದರೆ ಹಾಗೆ ಏನೂ ಆಗಲಿಲ್ಲ. ಅದರ ಪರಿಹಾರವಾಗಿ ಭಾರತ-ಪಾಕ್ ಯುದ್ಧವನ್ನು ನಿಲ್ಲಿಸಿದ ಕೀರ್ತಿಯು ಅವರಿಗೆ ಹೇಗಾದರೂ ಬೇಕಿತ್ತು; ಆದರೆ ‘ನಾವು ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಮತ್ತು ಹಾಗೆ ಏನೂ ಆಗಿಲ್ಲ’ ಎಂಬ ದೃಢ ನಿಲುವನ್ನು ಭಾರತ ತೆಗೆದುಕೊಂಡಿತು. ಇದಕ್ಕೆ ವಿರುದ್ಧವಾಗಿ ಪಾಕಿಸ್ತಾನವು ತಕ್ಷಣವೇ ಟ್ರಂಪ್ ಅವರ ಹೇಳಿಕೆಯನ್ನು ಒಪ್ಪಿಕೊಂಡು ಅವರ ಹೆಸರನ್ನು ‘ನೋಬೆಲ್’ ಶಾಂತಿ ಪ್ರಶಸ್ತಿಗೆ ಸೂಚಿಸಿತು. ಟ್ರಂಪ್ ಅವರ ಭಾರತದ ಮೇಲಿನ ಕೋಪ ಮತ್ತು ಪಾಕಿಸ್ತಾನ ಪ್ರೀತಿಯಲ್ಲಿ ಇದಕ್ಕೂ ಒಂದು ಪಾಲು ಇದೆ.
ಇ. ಟ್ರಂಪ್ ಅವರ ಸ್ವಾರ್ಥ : ಮೂರನೇ ಪದರು, ಅವರ ವೈಯಕ್ತಿಕ ಮತ್ತು ಕುಟುಂಬದ ಸ್ವಾರ್ಥ. ಟ್ರಂಪ್ ಒಬ್ಬ ಉದ್ಯಮಿ. ‘ಕ್ರಿಪ್ಟೋಕರೆನ್ಸಿ’ಯಲ್ಲಿನ (ಭಾಸಮಾನÀ ಕರೆನ್ಸಿ) ಅವರ ಕುಟುಂಬ ವ್ಯವಹಾರಕ್ಕೆ ದೊಡ್ಡ ಲಾಭವಾಗುವಂತಹ ಒಂದು ಒಪ್ಪಂದವನ್ನು ಪಾಕಿಸ್ತಾನ ಅವರೊಂದಿಗೆ ಮಾಡಿಕೊಂಡಿದ್ದರಿಂದ ಅವರು ಪ್ರಸ್ತುತ ಪಾಕ್ ಮೇಲೆ ಸಂತುಷ್ಟರಾಗಿದ್ದಾರೆ.
ಈ. ಟ್ರಂಪ್ ಬೆಂಬಲಿಗರಿಗಾಗಿ ಭಾರತ-ವಿರೋಧಿ ನೀತಿಗಳು : ಟ್ರಂಪ್ ಅವರ ನಿಲುವಿನ ನಾಲ್ಕನೇ ಮತ್ತು ಪ್ರಮುಖ ಪದರು ಅವರ ಕಟ್ಟಾ ಬೆಂಬಲಿಗರ ಮನೋಭಾವ.
ಅಮೇರಿಕಾದ ಉತ್ಪಾದನಾ ಕ್ಷೇತ್ರ ಏಷ್ಯಾಕ್ಕೆ ಸ್ಥಳಾಂತರಗೊಂಡಿದ್ದರಿಂದ ತಮ್ಮ ಉದ್ಯೋಗ ಕಳೆದುಕೊಂಡ ‘ಬ್ಲೂ ಕಾಲರ್ ವರ್ಕರ್ಸ್’ (ಕುಶಲ ವೃತ್ತಿಪರ ಕೆಲಸ ಮಾಡುವ ವ್ಯಕ್ತಿಗಳು) ಮತ್ತು ಸಣ್ಣ ಉದ್ಯಮಿಗಳು ಟ್ರಂಪ್ ಅವರ ಪ್ರಮುಖ ಬೆಂಬಲಿಗರಾಗಿದ್ದಾರೆ. ‘ಆಮದಾಗುವ ಉತ್ಪನ್ನಗಳ ಮೇಲೆ ‘ಟ್ಯಾರಿಫ್’ ವಿಧಿಸಿ ಅವುಗಳ ಉತ್ಪಾದನೆಯನ್ನು ಅಮೆರಿಕಾದಲ್ಲಿ ಮಾಡುವುದು ಹೆಚ್ಚು ಲಾಭದಾಯಕವಾಗುವಂತಹ ನೀತಿಗಳನ್ನು ನಾನು ಜಾರಿಗೆ ತರುತ್ತೇನೆ, ಇದರಿಂದ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗುತ್ತವೆ’ ಎಂದು ಟ್ರಂಪ್ ತಮ್ಮ ಬೆಂಬಲಿಗರಿಗೆ ಭರವಸೆ ನೀಡಿದ್ದರು. ಅದನ್ನು ಅವರು ಪೂರೈಸುತ್ತಿದ್ದಾರೆ. ಅಮೆರಿಕಾದಲ್ಲಿ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಗಾಧ ಯಶಸ್ಸನ್ನು ಸಾಧಿಸುತ್ತಿದ್ದಾರೆ. ಅನೇಕ ದೊಡ್ಡ ಅಮೇರಿಕನ್ ಸಂಸ್ಥೆಗಳ ಮುಖ್ಯಸ್ಥರು ಭಾರತೀಯರಾಗಿದ್ದಾರೆ, ಇದು ನಮಗೆ ತಿಳಿದ ವಿಷಯ. ಇದರಿಂದ ಅಲ್ಲಿನ ಟ್ರಂಪ್ ಬೆಂಬಲಿಗರಲ್ಲಿ ಭಾರತೀಯರ ಬಗ್ಗೆ ಸ್ವಲ್ಪ ಅಸೂಯೆ ಇದೆ. ಟ್ರಂಪ್ ಅವರ ಭಾರತ-ವಿರೋಧಿ ನೀತಿಗಳು ಈ ಗುಂಪನ್ನು ಸಂತೋಷಪಡಿಸುವ ಪ್ರಯತ್ನವೂ ಆಗಿರಬಹುದು.
೨. ಭಾರತವು ಈ ಬಿಕ್ಕಟ್ಟನ್ನು ಒಂದು ಅವಕಾಶವೆಂದು ನೋಡಬೇಕು !
ಇವೆಲ್ಲಾ ಕಾರಣಗಳನ್ನು ಪರಿಗಣಿಸಿದರೆ, ಭಾರತದ ಪ್ರಗತಿಗೆ ತಡೆಯೊಡ್ಡುವ ಪ್ರಯತ್ನವು ಇನ್ನು ಮುಂದೆ ಹೆಚ್ಚು ತೀವ್ರವಾಗಿ ನಡೆಯಲಿದೆ ಎಂಬುದು ಸ್ಪಷ್ಟವಾಗಿದೆ. ಭಾರತದ ಒಂದು ವಿಶಿಷ್ಟತೆ ಇದೆ, ‘ನಮ್ಮ ಮೇಲೆ ಯಾರಾದರೂ ಒತ್ತಡ ಹೇರಲು ಪ್ರಯತ್ನಿಸಿದರೆ, ನಾವು ಛಲದಿಂದ ಎದ್ದು ನಿಲ್ಲುತ್ತೇವೆ ಮತ್ತು ಆ ಬಿಕ್ಕಟ್ಟನ್ನು ಜಯಿಸುತ್ತೇವೆ.’ ೧೯೯೮ ರಲ್ಲಿ ಭಾಜಪದ ಅಟಲ್ಜಿ ಸರಕಾರ ಅಣುಬಾಂಬ್ ಸ್ಫೋಟ ಮಾಡಿದಾಗ, ಅಮೇರಿಕಾ, ಯುರೋಪ್ ಮತ್ತು ಜಪಾನ ಭಾರತದ ಮೇಲೆ ಕಠಿಣ ನಿರ್ಬಂಧ ಗಳನ್ನು ಹೇರಿದ್ದವು. ಆ ಸಮಯದಲ್ಲಿ ನಾವು ಅವುಗಳನ್ನು ದೃಢವಾಗಿ ಎದುರಿಸಿ ನಮ್ಮ ಛಲ ಮತ್ತು ಹೋರಾಟದ ಮನೋಭಾವವನ್ನು ಪ್ರದರ್ಶಿಸಿದ್ದೇವೆ. ವಿದೇಶಿ ಕರೆನ್ಸಿ ಬಿಕ್ಕಟ್ಟು ಸೃಷ್ಟಿಯಾಗಬಾರದು ಎಂದು ಸರಕಾರ ಆಗ ಅನಿವಾಸಿ ಭಾರತೀಯರಿಗಾಗಿ ‘ರಿಸರ್ಜೆಂಟ್ ಇಂಡಿಯಾ ಬಾಂಡ್ಸ್’ (ಭಾರತದ ಪುನರುತ್ಥಾನಕ್ಕಾಗಿ ಬಾಂಡ್ ಗಳು) ಬಿಡುಗಡೆ ಮಾಡಿತ್ತು, ಅದರ ಮೂಲಕ ಜಗತ್ತಿನಾದ್ಯಂತದ ಭಾರತೀಯರು ೪.೧೮ ಬಿಲಿಯನ್ ಡಾಲರ್‌ಗಳನ್ನು ಜಮೆ ಮಾಡಿದರು, ಇದು ಆ ಕಾಲದಲ್ಲಿ ಒಂದು ದೊಡ್ಡ ಮೊತ್ತವಾಗಿತ್ತು. ಇಡೀ ಜಗತ್ತಿನಲ್ಲಿ ಭಾರತದ ಬಗ್ಗೆ ಮೊಟ್ಟಮೊದಲ ಬಾರಿಗೆ ಗೌರವ ಮೂಡಿದ್ದು ಇದಾದ ನಂತರವೇ. ಈ ಬಾರಿಯೂ ನಾವು ಬಿಕ್ಕಟ್ಟನ್ನು ಅವಕಾಶವೆಂದು ನೋಡಿ ಆರ್ಥಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವತ್ತ ಸಂಪೂರ್ಣ ಗಮನ ಹರಿಸಬೇಕು. ಆರ್ಥಿಕ ಸುಧಾರಣೆಗಳ ವೇಗವನ್ನು ಹೆಚ್ಚಿಸಿ ದೊಡ್ಡ ಪ್ರಗತಿ ಸಾಧಿಸಲು ಪ್ರತಿಯೊಬ್ಬ ಭಾರತೀಯನು ಸಜ್ಜಾಗಬೇಕು ಮತ್ತು ದಾರಿಯಲ್ಲಿರುವ ಅಡೆತಡೆಗಳನ್ನು ಒಂದೇ ಮನಸ್ಸಿನಿಂದ ಮತ್ತು ಛಲದಿಂದ ಜಯಿಸಿದರೆ, ಭಾರತೀಯರ ಸಾಮರ್ಥ್ಯವು ಈ ಅಗ್ನಿಪರೀಕ್ಷೆಯಿಂದ ಮತ್ತಷ್ಟು ಪ್ರಜ್ವಲಿಸಿ ಹೊರಬರುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.
– ಶ್ರೀ. ಅಭಿಜಿತ ಜೋಗ, ಪ್ರಸಿದ್ಧ ಲೇಖಕರು, ಪುಣೆ. (ಸೌಜನ್ಯ : ಸಾಪ್ತಾಹಿಕ ‘ವಿವೇಕ’, ಮರಾಠಿ)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ