
ಯಾರ ನಂಬಿಕೆಯ ಮೇಲೆ ಆಘಾತ ಮಾಡಬೇಡಿ ಮತ್ತು ಹಿಂದೂಗಳನ್ನು ಅವಮಾನಿಸಬೇಡಿ !
ಸರ್ವೋಚ್ಚ ನ್ಯಾಯಾಲಯಕ್ಕೆ ಬಹಿರಂಗ ಪತ್ರ !
ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು,
ಸರ್ವೋಚ್ಚ ನ್ಯಾಯಾಲಯ.
ನಮಸ್ಕಾರ,
ಮಹೋದಯರೇ,
ಸರ್ವೋಚ್ಚ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ಬಾಕಿ ಇರುವಾಗ, ನಿಮ್ಮ ದೃಷ್ಟಿಯಲ್ಲಿ ಅನಾವಶ್ಯಕವಾದ ಒಂದು ಅರ್ಜಿಯನ್ನು ತಂದ ಅರ್ಜಿ ದಾರನಿಗೆ ನೀವು ಎಚ್ಚರಿಕೆ ನೀಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಪ್ರಸ್ತುತ ಜನರಿಗೆ ಸರ್ವೋಚ್ಚ ನ್ಯಾಯಾಲಯದ ಸಮಯವನ್ನು ಎಲ್ಲಿ ಬಳಸಬೇಕು ಎಂದು ತಿಳಿಯುವುದೇ ಇಲ್ಲರೀ ! ಯಾರಾದರೂ ಸುಮ್ಮನೆ ಬರುತ್ತಾರೆ ಮತ್ತು ತಮ್ಮೆದುರು ನ್ಯಾಯ ಬೇಡುತ್ತಾರೆ. ಆದ್ದರಿಂದ ತಾವು ಅರ್ಜಿದಾರರ ಮೇಲೆ ಕೋಪಗೊಳ್ಳುವುದು ಅತ್ಯಂತ ಸ್ವಾಭಾವಿಕವಾಗಿದೆ; ಆದರೆ ಖಂಡಿತವಾಗಿಯೂ ಅದರ ಸಂಪೂರ್ಣ ದೋಷವನ್ನು ಅವರಿಗೆ ನೀಡಲು ಬರುವುದಿಲ್ಲ; ಏಕೆಂದರೆ ದೇಶದ ಮೂಲದಲ್ಲಿರುವ ಭಯೋತ್ಪಾದಕರ ಪ್ರಕರಣಗಳಲ್ಲಿಯೂ ಸರ್ವೋಚ್ಚ ನ್ಯಾಯಾಲಯವು ರಾತ್ರಿ ೨ ಗಂಟೆಗೆ ಎದ್ದು ಅವರ ಹೇಳಿಕೆಗಳನ್ನು ಆಲಿಸುತ್ತದೆ, ಬೀದಿ ನಾಯಿಗಳಿಗೆ ನ್ಯಾಯ ದೊರಕಿಸಿಕೊಡಲು ಜನರಿಗೆ ಮಾರ್ಗದರ್ಶನ ನೀಡುತ್ತದೆ. ಬೀದಿ ನಾಯಿಗಳ ಬಗ್ಗೆಯೇ ಇಷ್ಟೊಂದು ಮಾನವೀಯತೆಯಿಂದ ವಿಚಾರ ಮಾಡುವ ಸರ್ವೋಚ್ಚ ನ್ಯಾಯಾಲಯವು, ನಮ್ಮ ಬಗ್ಗೆಯೂ ಖಂಡಿತವಾಗಿಯೂ ವಿಚಾರ ಮಾಡುತ್ತದೆ ಎಂಬ ಆಸೆಯಿಂದ ಸಾಮಾನ್ಯ ನಾಗರಿಕನಿಗೆ ನ್ಯಾಯಾಲಯವು ಆಧಾರವೆನಿಸದಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ ! ಆದ್ದರಿಂದಲೇ ಈ ಅರ್ಜಿ ನಿಮ್ಮ ಬಳಿ ಬಂದಿರಬಹುದು ಎಂದು ಅನಿಸುತ್ತದೆ. ಏನು ಮಾಡುವುದು ಸಾಹೇಬರೇ, ಎಲ್ಲ ಕಡೆಗೆ ಕೈಕಾಲುಗಳನ್ನು ಬಡಿದುಕೊಂಡರೂ ಎಲ್ಲಿಯೂ ನ್ಯಾಯ ಸಿಗುವುದಿಲ್ಲ. ಹಾಗಾಗಿ, ಸಾಮಾನ್ಯ ಮನುಷ್ಯರ ಗೋಳನ್ನು ನೀವಾದರೂ ಆಲಿಸುವಿರಿ ಎಂದು ಅನಿಸುತ್ತದೆ. ಹೋಗಲಿ ಬಿಡಿ ! ನೀವು ಅವರಿಗೆ ದೇವರ ಸಹಾಯ ಪಡೆಯಲು ಹೇಳಿದ್ದು ಒಳ್ಳೆಯದೇ ಆಯಿತು. ಕನಿಷ್ಠಪಕ್ಷ ಹಿಂದೂಗಳಿಗೆ ದೇವರ ಹೊರತು ಬೇರೆ ಯಾರೂ ಸಂರಕ್ಷಕರಿಲ್ಲ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !
ಆದರೆ ನಿಜ ಹೇಳಲೇನು ಸಾಹೇಬರೇ ? ಹಿಂದೂ ಧರ್ಮದಲ್ಲಿ ನಿಮ್ಮ ಈ ನ್ಯಾಯದ ಆಸನವನ್ನು (ಬೆಂಚ್) ದೇವರಿಗೆ ಸಮಾನವೆಂದೇ ನಂಬಲಾಗುತ್ತದೆ. ನಾವು ಹಿಂದೂಗಳು ‘ನ್ಯಾಯಾಲಯ’ ಎಂಬ ಪದವನ್ನು ಬಳಸುತ್ತೇವೆ, ಅಂದರೆ ‘ನ್ಯಾಯದ ಮಂದಿರ’ ಎಂಬ ಅರ್ಥದಲ್ಲಿ ‘ನಿಮ್ಮ ಬಳಿ ಬಂದ ಮನುಷ್ಯನು ದೇವರ ಬಳಿಯೇ ಸಹಾಯ ಬೇಡುತ್ತಿದ್ದಾನೆ’ ಎಂಬ ವಿಚಾರದಿಂದಲೇ ಬರುತ್ತಾನೆ, ಅಲ್ಲವೇ ?

ಸಂವಿಧಾನದ ವೈಫಲ್ಯವಲ್ಲವೇ ?
ನೀವು ಅರ್ಜಿದಾರರಿಗೆ ‘ನಿಮ್ಮ ದೇವರಿಗೇ ಏನಾದರೂ ಮಾಡಲು ಹೇಳಿ’ ಎಂದು ಹೇಳಿದ್ದು ಸರಿ ಇದೆ; ಆದರೆ ಸಾಹೇಬರೇ, ದೇವರಿಗೆ ಯಾವ ಕೆಲಸಗಳನ್ನು ಹೇಳಬೇಕು ಮತ್ತು ಯಾವುದನ್ನು ಹೇಳಬಾರದು ಎಂಬುದನ್ನೂ ಹಿಂದೂ ಧರ್ಮದಲ್ಲಿ ಚೆನ್ನಾಗಿ ಹೇಳಲಾಗಿದೆ ! ‘ಮೊದಲು ನಿಮ್ಮ ಸ್ವಂತ ಕರ್ಮಗಳನ್ನು ಪರಿಪೂರ್ಣವಾಗಿ ಮಾಡಿ ಮತ್ತು ಪೂರ್ಣ ಪ್ರಯತ್ನ ಹಾಕಿ ಅದರ ಜೊತೆಗೆ ದೇವರ ಸಹಾಯವನ್ನು ಪಡೆಯಿರಿ’, ಎಂದು ಹಿಂದೂ ಧರ್ಮವು ಹೇಳುತ್ತದೆ. ಎಲ್ಲ ವಿಷಯಗಳನ್ನೂ ದೇವರಿಗೇ ಮಾಡಲು ಹೇಳಿದರೆ, ಮನುಷ್ಯನ ಕರ್ತವ್ಯವೇನು ? ಅದಕ್ಕಾಗಿಯೇ ಭಗವಂತನು ‘ಕರ್ಮಯೋಗ’ವನ್ನು ಹೇಳಿದ್ದಾನೆ. ನಿಮ್ಮ ಬಳಿಗೆ ಬಂದಿರುವ ಅರ್ಜಿದಾರನು ಆ ದೇವಸ್ಥಾನದಲ್ಲಿ ಅನೇಕ ಅನುಷ್ಠಾನಗಳನ್ನು ಮಾಡಿದ್ದಾನೆ ಮತ್ತು ಅನಂತರವೇ ಆ ಭಗವಂತನು ಅವನಿಗೆ ನಿಮ್ಮ ಬಳಿಗೆ ಬರುವ ಬುದ್ಧಿಯನ್ನು ನೀಡಿದ್ದಾನೆ; ಆದರೆ ನೀವು ಅವನನ್ನು ತಿರಸ್ಕರಿಸಿದಾಗ, ಅವನ ಶ್ರದ್ಧೆಗೆ ಆಘಾತವಾಗಲಿಲ್ಲವೇ ಸಾಹೇಬರೇ ? ಇದು ಸಂವಿಧಾನದ ವೈಫಲ್ಯವಲ್ಲವೇ ?
…ಹಾಗಿದ್ದರೆ ನೀವು ಇದೇ ಹೇಳಿಕೆ ನೀಡುತ್ತಿದ್ದೀರಾ ?
ಒಬ್ಬ ಸಾಮಾನ್ಯ ಮನುಷ್ಯನಾಗಿ ನನ್ನ ಮನಸ್ಸಿನಲ್ಲಿ ಪ್ರಶ್ನೆ ಬಂದಿತು, ಅದನ್ನು ಮುಕ್ತವಾಗಿ ಕೇಳುತ್ತೇನೆ. ಕೋಪಿಸಿಕೊಳ್ಳಬೇಡಿ. ಇದೇ ಪ್ರಕರಣವು ಒಂದು ವೇಳೆ ಡಾ. ಬಾಬಾಸಾಹೇಬ್ ಆಂಬೇಡಕರ್ ಅವರ ಪ್ರತಿಮೆಗೆ ಸಂಬಂಧಿಸಿದ್ದರೆ ಅಥವಾ ಯಾವುದಾದರೂ ಮಸೀದಿ ಅಥವಾ ದರ್ಗಾಕ್ಕೆ ಸಂಬಂಧಿಸಿದ್ದರೆ, ಆಗಲೂ ನೀವು ಇದೇ ರೀತಿಯ ಹೇಳಿಕೆ ನೀಡುತ್ತಿದ್ದೀರಾ ಹೇಗೆ ?
ಇರಲಿ ಬಿಡಿ. ನಿಮ್ಮ ಬಗ್ಗೆ ನಾನು ದೂರುವುದಿಲ್ಲ; ಏಕೆಂದರೆ ನೀವು ದೊಡ್ಡವರು, ನಾವು ಸಾಮಾನ್ಯ ಮನುಷ್ಯರು ! ನೀವು ನೀಡಿದ್ದೇ ನ್ಯಾಯ ಎಂದು ಒಪ್ಪಿಕೊಳ್ಳುವ ಅಭ್ಯಾಸ ನಮಗಾಗಿದೆ, ಒಂದು ವೇಳೆ ಅದು ಅನ್ಯಾಯವೇ ಆಗಿದ್ದರೂ ಪರವಾಗಿಲ್ಲ !
ನ್ಯಾಯಾಲಯದ ಬಗ್ಗೆ ಏನನ್ನೂ ಮಾತನಾಡುವ ಅಧಿಕಾರ ನಮಗಿಲ್ಲ; ಆದರೆ ಇಷ್ಟನ್ನು ಮಾತ್ರ ಹೇಳುತ್ತೇನೆ, ‘ದಯವಿಟ್ಟು ಯಾರ ನಂಬಿಕೆಯ ಮೇಲೆಯೂ ಆಘಾತ ಮಾಡಬೇಡಿ. ಹಿಂದೂಗಳು ಮೂರ್ತಿಯಲ್ಲಿ ದೇವರನ್ನು ನೋಡುತ್ತಾರೆ, ಅದು ಅವರ ಸಗುಣ ಉಪಾಸನೆಯಾಗಿದೆ. ಹಾಗಾಗಿ, ಮೂರ್ತಿಯೊಂದಿಗೆ ಅವರ ಭಾವನೆಗಳು ಜೋಡಿಸಲ್ಪಟ್ಟಿರುತ್ತವೆ. ನೀವು ‘ಧ್ಯಾನ ಮಾಡಿ’ ಎಂದು ಹೇಳುವುದು ನಿರ್ಗುಣ ಉಪಾಸನೆಯಾಗಿದೆ, ಅದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದ್ದರಿಂದ ದೊಡ್ಡ ಮನಸ್ಸಿನಿಂದ ಜನರನ್ನು ಅರ್ಥಮಾಡಿಕೊಳ್ಳಿ. ಹಿಂದೂ ಎಂದು ನಿರ್ಲಕ್ಷಿಸಬೇಡಿ. ಎಲ್ಲಾ ಸರಕಾರಿ ನೌಕರರ ಸಂಬಳವು ಬಹುತಾಂಶ ಹಿಂದೂಗಳು ನೀಡಿದ ತೆರಿಗೆಯಿಂದಲೇ ಬರುತ್ತದೆ. ಆದ್ದರಿಂದ, ದಯವಿಟ್ಟು ನೀವು ಸಹ ಹಿಂದೂಗಳನ್ನು ಅವಮಾನಿಸಬೇಡಿ’, ಎಂಬುದನ್ನು ಹೇಳಲು ಈ ಪತ್ರವನ್ನು ಬರೆದಿದ್ದೇನೆ !
– ಶ್ರೀ. ಯೋಗೇಶ ಜಲತಾರೆ, ಸಮೂಹ ಸಂಪಾದಕರು, ‘ಸನಾತನ ಪ್ರಭಾತ’ ಪ್ರಸಾರ ಮಾಧ್ಯಮ. (೧೯.೯.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಸುಪ್ರೀಂ ಕೋರ್ಟ್ಗೆ 5 ಹೊಸ ನ್ಯಾಯಾಧೀಶರ ಸೇರ್ಪಡೆ; ಒಂದು ಹುದ್ದೆ ಮಾತ್ರ ಖಾಲಿ!
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !