
೧. ಭಾರತೀಯ ಸೇನೆಯ ‘ಆಪರೇಷನ್ ಸಿಂದೂರ್’ನಿಂದ ಪಾಕ್ ಸೇನೆಯ ಮಿತಿಗಳು ಮತ್ತು ಶಕ್ತಿ, ಸಾಮರ್ಥ್ಯ ಬಯಲು
೨. ಪಾಕಿಸ್ತಾನವು ಅಮೆರಿಕಾ ಜೊತೆ ಒಪ್ಪಂದ ಮಾಡಿಕೊಳ್ಳಲು ಕಾರಣ
ಚೀನಾದ ‘ಕಾಲಾವಧಿ ಮುಗಿದ’ (ಔಟ ಡೇಟೆಡ್) ಶಸ್ತ್ರಾಸ್ತ್ರಗಳ ಮೇಲೆ ಅವಲಂಬಿತವಾಗದೆ, ಅಮೆರಿಕಾದೊಂದಿಗೆ ‘ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ’ಕ್ಕಾಗಿ, ಪಾಕಿಸ್ತಾನವು ಬಲೂಚಿಸ್ತಾನದಲ್ಲಿರುವ ‘ಅಪಾರ ಪ್ರಮಾಣದ ಖನಿಜಗಳನ್ನು (ಸ್ಟ್ರಾಟಜಿಕ್ ಮಿನರಲ್ಸ್)’ ಹೊರತೆಗೆಯಲು ಅಮೆರಿಕಾದೊಂದಿಗೆ ಒಪ್ಪಂದ ಮಾಡಿಕೊಂಡು ಎರಡು ಉದ್ದೇಶಗಳನ್ನು ಸಾಧಿಸಿದೆ.
ಅ. ಒಂದನೆಯದಾಗಿ, ಬಲೂಚಿಸ್ತಾನದಲ್ಲಿರುವ ‘ಬಲೂಚ್ ಲಿಬರೇಶನ್ ಆರ್ಮಿ’ಯನ್ನು ‘ಅಂತರರಾಷ್ಟ್ರೀಯ ಭಯೋತ್ಪಾದಕ ಸಂಘಟನೆ’ ಎಂದು ಘೋಷಿಸುವಲ್ಲಿ ಯಶಸ್ವಿಯಾಗಿದೆ. ಈ ದಂಗೆಯ ವಿರುದ್ಧ ಹೋರಾಡಲು ಅಮೆರಿಕದಿಂದ ನವೀಕೃತ ರಕ್ಷಣಾ ಒಪ್ಪಂದದ ಜೊತೆಗೆ, ಅಮೆರಿಕಾದ ಸಹಕಾರದೊಂದಿಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ಯೋಜನೆಗಳನ್ನು ಅನುಮೋದಿಸಿಕೊಂಡಿದೆ.
ಆ. ಇದರ ಜೊತೆಗೆ, ಇರಾನಿನ ಪರಮಾಣು ಕಾರ್ಯಕ್ರಮಕ್ಕೆ ಅಗತ್ಯವಾದ ತಾರ್ಕಿಕ ಸಮರ್ಥನೆಯನ್ನು ನೀಡಿದೆ. ಇರಾನಿನೊಂದಿಗೆ ಭದ್ರತಾ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮೂಲಕ ಭಾರತ ಮತ್ತು ಇಸ್ರೇಲ್ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳ ಹೊಸ ಒಕ್ಕೂಟವನ್ನು ರಚಿಸಲು ಪಾಕಿಸ್ತಾನವು ಪ್ರಾರಂಭಿಸಿದೆ
೩. ‘ಇಸ್ಲಾಮಿಕ್ ನ್ಯಾಟೋ’ ರಚನೆಗೆ ಪಾಕಿಸ್ತಾನದ ಮುಂದಾಳತ್ವ
೯ ಸೆಪ್ಟೆಂಬರ್ ೨೦೨೫ ರಂದು ಕತಾರ್‌ನ ರಾಜಧಾನಿ ದೋಹಾದಲ್ಲಿ ಇಸ್ರೇಲ್ ‘ಹಮಾಸ್’ ಭಯೋತ್ಪಾದಕ ಸಂಘಟನೆಯ ಉಳಿದಿರುವ ಕೆಲವು ನಾಯಕರ ಮೇಲೆ ಕ್ಷಿಪಣಿಗಳ ಮೂಲಕ ದಾಳಿ ನಡೆಸಿದ ನಂತರ, ಇಸ್ಲಾಮಿಕ್ ಜಗತ್ತಿನಲ್ಲಿ ಅಮೆರಿಕಾದ ವಿಶ್ವಾಸಾರ್ಹತೆ ಅನುಮಾನಾಸ್ಪದವಾಗಿದೆ. ಶೀತಲ ಸಮರದ (ಕೋಲ್ಡ ವಾರ್) ಕಾಲದಿಂದಲೂ ಗಲ್ಫ್ ರಾಷ್ಟ್ರಗಳಿಗೆ ಅಮೆರಿಕಾದ ಭದ್ರತಾ ಭರವಸೆಯು ಸಂಪೂರ್ಣವಾಗಿ ಭರವಸೆ ನೀಡುವಂತಿತ್ತು, ಆದರೆ ಈಗ ಹಾಗೆ ಉಳಿದಿಲ್ಲ. ಪಾಕಿಸ್ತಾನ ಮತ್ತು ಈಜಿಪ್ತ ಇದರ ಲಾಭ ಪಡೆದಿವೆ.
ಅಮೆರಿಕಾದಿಂದ ರಚಿಸಲ್ಪಟ್ಟ ‘ನ್ಯಾಟೋ’ (NATO) (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ) ದಂತಹ ಸಾಮೂಹಿಕ ಭದ್ರತೆಯ ರಕ್ಷಣೆಯನ್ನು ಹೊಂದಿರುವ ‘ಇಸ್ಲಾಮಿಕ್ ನ್ಯಾಟೋ’ ಮಾದರಿಯ ಸಂಘಟನೆಯನ್ನು ರಚಿಸಲು ಪಾಕಿಸ್ತಾನವು ಈಗ ‘ಸಂಘಟಿತ ಇಸ್ಲಾಮಿಕ್ ಜಗತ್ತನ್ನು’ (ಆರ್ಗನೈಸೇಷನ್ ಆಫ್ ಇಸ್ಲಾಮ್ ವರ್ಲ್ಡ್) ಒಂದೇ ಸೂರಿನಡಿ ತರುತ್ತಿದೆ. ಇಸ್ಲಾಮಿಕ್ ದೇಶಗಳಲ್ಲಿ ಕೇವಲ ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದರಿಂದ, ಪಾಕಿಸ್ತಾನವು ಇಸ್ರೇಲ್ ಮತ್ತು ಭಾರತದ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳನ್ನು ಒಗ್ಗೂಡಿಸುತ್ತಿದೆ ಮತ್ತು ಇರಾನ್ ಹಾಗೂ ಸೌದಿ ಅರೇಬಿಯಾಗಳಿಗೆ ತನ್ನ (ಇಸ್ಲಾಮಿಕ್ ಬಾಂಬ್) ಪರಮಾಣು ಶಸ್ತ್ರಾಸ್ತ್ರಗಳ ಮೂಲಕ ಭದ್ರತೆಯ ಭರವಸೆ ನೀಡುತ್ತಿದೆ.
೪. ಪಾಕ್ ಇಸ್ಲಾಮಿಕ್ ರಾಷ್ಟ್ರಗಳನ್ನು ಸಂಘಟಿಸಲು ಕಾರಣ
ಒಂದು ವೇಳೆ ‘ಇಸ್ಲಾಮಿಕ್ ನ್ಯಾಟೋ’ ಸ್ಥಾಪನೆಯಾದರೆ, ಭಾರತದ ವಿರುದ್ಧ ಇಸ್ಲಾಮಿಕ್ ರಾಷ್ಟ್ರಗಳ ಹೊಸ ಒಕ್ಕೂಟ ನಿರ್ಮಾಣ ಆಗಲಿದೆ. ಭವಿಷ್ಯದಲ್ಲಿ ಭಾರತವು ಪಾಕಿಸ್ತಾನದ ಮೇಲೆ ಯಾವುದೇ ಮಿಲಿಟರಿ ದಾಳಿ ನಡೆಸಿದರೆ, ಅದನ್ನು ಇಡೀ ಇಸ್ಲಾಮಿಕ್ ರಾಷ್ಟ್ರಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುವುದು. ಈ ಯೋಜನೆಯೊಂದಿಗೆ ಪಾಕಿಸ್ತಾನವು ಇಸ್ಲಾಮಿಕ್ ರಾಷ್ಟ್ರಗಳನ್ನು ಸಂಘಟಿಸುತ್ತಿದೆ.
೫. ಭಾರತದ ವಿರುದ್ಧ ನಿಲ್ಲಲು ಪಾಕಿಸ್ತಾನದಿಂದ ವಿವಿಧ ಸ್ತರಗಳಲ್ಲಿ ಪ್ರಯತ್ನ
೧೭ ಸೆಪ್ಟೆಂಬರ್ ೨೦೨೫ ರಂದು ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ಇವುಗಳ ನಡುವೆ ಆದ ‘ರಕ್ಷಣಾ ಸಂಬಂಧಿತ ಕಾರ್ಯತಂತ್ರದ ತಿಳುವಳಿಕೆ ಒಪ್ಪಂದ’ವು ಈ ‘ಇಸ್ಲಾಮಿಕ್ ನ್ಯಾಟೋ’ವಿನ ಮೊದಲ ಪ್ರಾರಂಭವಾಗಿದೆ. ಭಾರತದ ವಿರುದ್ಧ ನಿಲ್ಲಲು ಪಾಕಿಸ್ತಾನವು ಪ್ರಸ್ತುತ ‘ಬಹುಆಯಾಮದ ಕಾರ್ಯತಂತ್ರದ ವೇದಿಕೆಗಳನ್ನು’ (ಮಲ್ಟಿಪಲ್ ಸ್ಟ್ರಾಟಜಿಕ್ ಪ್ಲಾಟಫಾರ್ಮ) ರಚಿಸುತ್ತಿದೆ. ಬಾಂಗ್ಲಾದೇಶ ಮತ್ತು ಇತ್ತೀಚೆಗೆ ನೇಪಾಳದಲ್ಲಿ ನಡೆದ ರಾಜಕೀಯ ಪ್ರಕ್ಷುಬ್ಧತೆಯ ಲಾಭವನ್ನು ಭಾರತದ ವಿರುದ್ಧ ಪಡೆಯಲು ಪಾಕಿಸ್ತಾನವು ಪ್ರಯತ್ನಿಸಲಿದೆ.
೬. ಪ್ರಸ್ತುತ ಜಗತ್ತಿನಲ್ಲಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು, ಭಾರತವು ತನ್ನ ರಕ್ಷಣೆಯ ದೃಷ್ಟಿಕೋನದಿಂದ ಹೊಸ ರಾಷ್ಟ್ರೀಯ ಭದ್ರತಾ ನೀತಿಯನ್ನು ರಚಿಸುವುದು ಮಹತ್ವದ್ದಾಗಿದೆ. ಮುಂಬರುವ ದಿನಗಳಲ್ಲಿ ಭಾರತ ಮತ್ತು ಇಸ್ರೇಲ್, ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಮಾತುಕತೆಗಳು ಮಹತ್ವದ್ದಾಗಿದೆ. (೨೦.೯.೨೦೨೫)
– ಡಾ. ತುಷಾರ ಜಿ. ರಾಯಸಿಂಗ, ಸಹಾಯಕ ಪ್ರಾಧ್ಯಾಪಕರು, ಸಂರಕ್ಷಣೆ ಮತ್ತು ಯುದ್ಧ ಶಾಸ್ತ್ರದ ವಿಭಾಗ, ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯ, ಜಳಗಾಂವ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು