
‘ಒಮ್ಮೆ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಸತ್ಸಂಗ ಲಭಿಸಿತು. ಆಗ ಅವರು ನೀಡಿದ ಮಾರ್ಗದರ್ಶನವನ್ನು ಮುಂದೆ ನೀಡಲಾಗಿದೆ.
೧. ಮಕ್ಕಳ ಆಧ್ಯಾತ್ಮಿಕ ಮಟ್ಟ ಉತ್ತಮವಾಗಿದ್ದರೂ, ಪೋಷಕರು ಅವರಿಗೆ ವ್ಯಾವಹಾರಿಕ ವಿಷಯಗಳನ್ನು ಕಲಿಸುವುದು ಆವಶ್ಯಕ !
ಸೌ. ಋತುಜಾ ನಾಟೆ : ‘ನನ್ನ ಮಗಳ ಆಧ್ಯಾತ್ಮಿಕ ಮಟ್ಟ ಉತ್ತಮವಾಗಿದೆ; ಆದರೆ ಕೆಲವೊಮ್ಮೆ ಅವಳಲ್ಲಿ ಗಾಂಭೀರ್ಯ ಇರುವುದಿಲ್ಲ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಗಳ ಆಧ್ಯಾತ್ಮಿಕ ಮಟ್ಟ ಎಷ್ಟಿದೆ ?
ಸೌ. ಋತುಜಾ ನಾಟೆ : ಆಧ್ಯಾತ್ಮಿಕ ಮಟ್ಟ ಶೇ. ೬೫ ರಷ್ಟಿದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಮಟ್ಟ ಶೇ. ೬೫ ರಷ್ಟಿದೆ ! ತುಂಬಾ ಒಳ್ಳೆಯದು.

ಸೌ. ಋತುಜಾ ನಾಟೆ : ಮಗಳಿಗೆ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬರುತ್ತವೆ. ಅದು ಅವಳ ಮೇಲೆ ಪರಿಣಾಮ ಬೀರುವುದಿಲ್ಲ. ಅವಳಿಗೆ ಅಧ್ಯಯನದ ಗಾಂಭೀರ್ಯವಿಲ್ಲ. ಮಗಳ ಆಧ್ಯಾತ್ಮಿಕ ಮಟ್ಟ ಉತ್ತಮವಾಗಿರುವಾಗ, ನಾನು ಅವಳಿಗೆ ಇದನ್ನು ಹೇಗೆ ಹೇಳಲಿ ?, ಎಂದು ನನಗೆ ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ : ಒಂದು ವಿಷಯ ಗಮನದಲ್ಲಿಡಿ. ‘ಮಗಳ ಆಧ್ಯಾತ್ಮಿಕ ಮಟ್ಟ ಹೆಚ್ಚಿರುವಾಗ ನಾವು ಅವಳಿಗೆ ಹೇಗೆ ಹೇಳಲಿ ? ಎಂದು ತಂದೆ-ತಾಯಿ ಯೋಚಿಸಬಾರದು. ಪೋಷಕರಿಗೆ ವ್ಯಾವಹಾರಿಕ ವಿಷಯಗಳ ಅನುಭವ ಇರುತ್ತದೆ. ಈ ಚಿಕ್ಕ ಮಕ್ಕಳಿಗೆ ವ್ಯಾವಹಾರಿಕ ಅನುಭವ ಇರುವುದಿಲ್ಲ ? ನೀವು ಮಗಳೊಂದಿಗೆ ಮಾತನಾಡಬೇಕು ಮತ್ತು ಅವಳಿಗೆ ವ್ಯಾವಹಾರಿಕ ವಿಷಯಗಳನ್ನು ಕಲಿಸಬೇಕು. ಉದಾಹರಣೆಗೆ, ಶಾಲಾ ಅಧ್ಯಯನ, ಸಮವಯಸ್ಸಿನ ಸ್ನೇಹಿತ- ಸ್ನೇಹಿತೆಯರೊಂದಿಗೆ ಹೇಗೆ ವರ್ತಿಸಬೇಕು ? ಹೇಗೆ ಆಟವಾಡಬೇಕು ಎಂಬುದನ್ನು ಹೇಳಿಕೊಡಿ.
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !