‘ಭೃಗು ಜೀವನಾಡಿಪಟ್ಟಿ’ಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮದೇ ‘ಮಾನಸಪೂಜೆ’ಯನ್ನು ಮಾಡುವ ಉಲ್ಲೇಖವಿರುವುದು

ಒಮ್ಮೆ ‘ಭೃಗು ಜೀವನಾಡಿಪಟ್ಟಿ’ಯಲ್ಲಿ ಒಂದು ಆಧ್ಯಾತ್ಮಿಕ ಸ್ತರದ ಉಪಾಯವೆಂದು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಗೆ ತಮ್ಮದೇ ‘ಮಾನಸಪೂಜೆ’ಯನ್ನು ಮಾಡಲು ಉಲ್ಲೇಖಿಸಲಾಗಿತ್ತು. ಈ ಕುರಿತು ಪರಾತ್ಪರ ಗುರು ಡಾ. ಆಠವಲೆಯವರಿಗೆ ಕೇಳಿದಾಗ, ಅವರು, “ನಿಮ್ಮಿಬ್ಬರಲ್ಲಿಯೂ ಅಷ್ಟೊಂದು ಸಾಮರ್ಥ್ಯವಿದೆ; ಆದ್ದರಿಂದ ‘ಜೀವನಾಡಿಪಟ್ಟಿ’ಯಲ್ಲಿ ನಿಮಗಿಬ್ಬರಿಗೂ ನಿಮ್ಮದೇ ಮಾನಸಪೂಜೆಯನ್ನು ಮಾಡಲು ಉಲ್ಲೇಖಿಸಲಾಗಿದೆ,” ಎಂದು ಹೇಳಿದರು. (ಭೃಗು ಜೀವನಾಡಿಪಟ್ಟಿವಾಚಕರು ಶ್ರೀ. ಸೆಲ್ವಮ್‌ಗುರುಜಿಯವರು ಮಾಡಿದ ನಾಡಿವಾಚನ, ಚೆನ್ನೈ, ತಮಿಳುನಾಡು. ೨೦೧೯) – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

 

ಅಗ್ನಿದೇವತೆಯ ಮಹತ್ವ

‘ಮನುಷ್ಯನ ಜನ್ಮವು ಅಗ್ನಿತೇಜದಿಂದ (ತತ್ತ್ವದಿಂದ) ಆಗುತ್ತದೆ. ಅವನ ವಿವಾಹದ ಸಮಯದಲ್ಲಿಯೂ ಅಗ್ನಿ ಇರುತ್ತದೆ ಮತ್ತು ಮೃತ್ಯುವಿನ ಸಮಯದಲ್ಲಿಯೂ ಅಗ್ನಿ ಇರುತ್ತದೆ. ಅಗ್ನಿಯು ಮನುಷ್ಯನ ಜೊತೆಯಲ್ಲಿದ್ದು ಅವನೇ ಭೂತಲದ ಮೇಲಿನ ಸ್ನೇಹಿತ. ಅಗ್ನಿಯೇ ಮನುಷ್ಯನ ಪ್ರಾರ್ಥನೆಯನ್ನು ದೇವರ ವರೆಗೆ ತಲುಪಿಸುತ್ತದೆ.

– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ

‘ಸೇವೆಯನ್ನು ದೇವರೇ ಮಾಡಿಸಿಕೊಳ್ಳುವನು, ಎಂಬ ಭಾವವನ್ನಿಟ್ಟು ಸೇವೆ ಮಾಡಿದರೆ ಹಾಗೆ ಅನುಭೂತಿ ಬರುತ್ತದೆ, ಈ ಕುರಿತು  ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಹೇಳಿದ ಒಂದು ಪ್ರಸಂಗ !

‘ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಗ ತಾನೆ ಸಾಧನೆ ಮಾಡಲು ಆರಂಭಿಸಿದ್ದರು. ಒಮ್ಮೆ ಅವರು ಗೋವಾದಿಂದ ಅವರ ತವರುಮನೆಯಾದ ಸಾಂಗಲಿಗೆ ರೈಲಿನಲ್ಲಿ ಹೋಗಲಿದ್ದರು. ಆ ಸಮಯದಲ್ಲಿ ಅವರು ಒಬ್ಬರೇ ಇದ್ದರು ಮತ್ತು ಮೀರಜ ಆಶ್ರಮಕ್ಕಾಗಿ ಕೆಲವು ಮಹತ್ವದ ಸಾಮಗ್ರಿಗಳನ್ನು ಕಳುಹಿಸಲಿಕ್ಕಿತ್ತು. ಸಂಬಂಧಿಸಿದ ಸಾಧಕರು ಅವರಿಗೆ, “ನೀವು ಮೀರಜ ಆಶ್ರಮಕ್ಕಾಗಿ ಕೆಲವು ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಹುದಾ ?” ಎಂದು ಕೇಳಿದರು. ಆಗ ಅವರು ಆನಂದದಿಂದ ತಕ್ಷಣ ‘ಆಯಿತು’ ಎಂದು ಹೇಳಿದರು. ಆಗ ಸಾಮಗ್ರಿಗಳ ೨೨ ಪೆಟ್ಟಿಗೆಗಳನ್ನು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಬ್ಬರೇ ರೈಲಿನಲ್ಲಿ ಒಯ್ದಿದ್ದರು.

ಸಾಧಕರು ಆ ಪೆಟ್ಟಿಗೆಗಳನ್ನು ರೈಲಿನಲ್ಲಿ ಇಡುತ್ತಿದ್ದರು. ಆಗ ಅವರು, “ನೀವು ಕೇವಲ ಪೆಟ್ಟಿಗೆಗಳನ್ನು ರೈಲಿನ ಬೋಗಿಯ ಒಳಗೆ ಬಾಗಿಲಿನ ವರೆಗೆ ತಂದುಕೊಡಿ. ಮುಂದಿನ ಸೇವೆಯನ್ನು ನಾನು ಮಾಡುತ್ತೇನೆ,” ಎಂದು ಹೇಳಿದರು. ರೈಲಿನಲ್ಲಿ ಕುಳಿತಿದ್ದ ಇತರ ಕೆಲವು ಪ್ರಯಾಣಿಕರ ಸಹಾಯದಿಂದ ಆ ಎಲ್ಲ ಪೆಟ್ಟಿಗೆಗಳನ್ನು ಬೋಗಿಯಲ್ಲಿ ಸರಿಯಾಗಿ ಇರಿಸಿಕೊಂಡರು. ಆದ್ದರಿಂದ ಪ್ರಯಾಣಿಕರಿಂದಲೂ ಸೇವೆ ಆಯಿತು. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಅಲ್ಲಿ ಕುಳಿತಿರುವ ಪ್ರಯಾಣಿಕರಿಗೆ ಸೇವೆಯ ಮಹತ್ವವನ್ನು ಹೇಳಿದರು. ಆಗ ಪ್ರಯಾಣಿಕರು, “ನಮಗೆ ಈ ಪೆಟ್ಟಿಗೆಗಳನ್ನು ಎತ್ತುವಾಗ ತುಂಬಾ ಆನಂದವಾಯಿತು,” ಎಂದು ಹೇಳಿದರು. ಅದಕ್ಕೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, “ಇವು ಆಶ್ರಮದ ಪೆಟ್ಟಿಗೆಗಳಿವೆ. ಇವುಗಳಲ್ಲಿ ದೇವರ ಸೇವೆಯ ಸಾಹಿತ್ಯಗಳಿರುವುದರಿಂದ ಅವುಗಳನ್ನು ಎತ್ತುವಾಗ ನಿಮಗೆ ಆನಂದ ಸಿಕ್ಕಿತು. ವ್ಯವಹಾರದಲ್ಲಿನ ಇತರ ಸಾಮಾನುಗಳನ್ನು ಎತ್ತುವಾಗ ಮಾತ್ರ ಅದು ನಮಗೆ ಕಠಿಣವೆನಿಸುತ್ತದೆ ಮತ್ತು ದಣಿವೂ ಆಗುತ್ತದೆ; ಆದರೆ ಸಾಧನೆಯಲ್ಲಿ ಮಾತ್ರ ಹಾಗೆ ಆಗುವುದಿಲ್ಲ. ದೇವರ ಸೇವೆಯನ್ನು ಮಾಡುವಾಗ ಮಾಡುತ್ತಿರುವ ಕಠಿಣ ಸೇವೆಯೂ ಸಾಧಕನಿಗೆ ಹಗುರ ಮತ್ತು ಆನಂದದಾಯಕವೆನಿಸುತ್ತವೆ; ಏಕೆಂದರೆ ಅದರಲ್ಲಿ ದೈವೀ ಶಕ್ತಿ, ಅಂದರೆ ಚೈತನ್ಯವಿರುತ್ತದೆ ಮತ್ತು ಚೈತನ್ಯವು ಭಾರವಿರುವುದಿಲ್ಲ,” ಎಂದು ಹೇಳಿದರು. ಅನಂತರ ಈ ಪ್ರಸಂಗದ ಬಗ್ಗೆ ನಮಗೆ ಹೇಳುವಾಗ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು, “೨೨ ಪೆಟ್ಟಿಗೆಗಳನ್ನು ಒಯ್ಯುವ ಬಗ್ಗೆ ನನ್ನ ಮನಸ್ಸಿನಲ್ಲಿ, ನನಗೆ ಇಷ್ಟೊಂದು ಪೆಟ್ಟಿಗೆಗಳನ್ನು ಒಯ್ಯಲು ಸಾಧ್ಯವಾಗುತ್ತದೆಯೇ ? ಇಷ್ಟೊಂದು ಪೆಟ್ಟಿಗೆಗಳನ್ನು ರೈಲಿನಲ್ಲಿ ಸಮಯಕ್ಕೆ ಸರಿಯಾಗಿ ಇಡಲು ಸಾಧ್ಯವಾಗುವುದೇ ? ಇಡುವ ಮೊದಲೇ ರೈಲು ಹೊರಟುಬಿಟ್ಟರೆ, ಯಾವುದಾದರೊಂದು ಪೆಟ್ಟಿಗೆ ಪ್ಲಾಟ್‌ಫಾರ್ಮನಲ್ಲಿಯೇ ಉಳಿಯುವುದಿಲ್ಲವಲ್ಲ ? ಎಂಬ ವಿಚಾರಗಳೇ ಬರಲಿಲ್ಲ. ನನ್ನ ಮನಸ್ಸಿನಲ್ಲಿ ಕೇವಲ, ದೇವರು ಹೇಳಿದ್ದಾನೆಂದರೆ ಸೇವೆಯನ್ನೂ ಅವನೇ ಮಾಡಿಸಿಕೊಳ್ಳುವನು. ನಾವು ಕೇವಲ ಮಾಧ್ಯಮವಾಗಿದ್ದೇವೆ. ಹೀಗಿರುವಾಗ ಚಿಂತೆ ಏಕೆ ?

ಈ ಒಂದೇ ವಿಚಾರವಿತ್ತು. ಕೇವಲ ಆಜ್ಞಾಪಾಲನೆ ಮಾಡಿದರೆ, ಮುಂದಿನ ಎಲ್ಲವನ್ನು ದೇವರು ನೋಡಿಕೊಳ್ಳುವನು. ‘ನಾವು ಸೇವೆಯನ್ನು ಮಾಡಲು ‘ಆಯಿತು’ ಎಂದು ಹೇಳುತ್ತೇವಾ ಅಥವಾ ‘ಇಲ್ಲ’ ಎಂದು ಹೇಳುತ್ತೇವಾ ?’, ಎಂಬುದನ್ನು ಅವನು ನೋಡುತ್ತಿರುತ್ತಾನೆ. ಇದು ಅಧ್ಯಾತ್ಮದಲ್ಲಿನ ಒಂದು ಪರೀಕ್ಷೆಯೇ ಆಗಿರುತ್ತದೆ. ಒಮ್ಮೆ ಈ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ರೂಢಿಯಾದರೆ ಸಾಧನೆಯಲ್ಲಿ ಉನ್ನತಿ ಆಗತೊಡಗುತ್ತದೆ.

ಮನುಷ್ಯನು ತನ್ನ ಸ್ತರದ ವಿಚಾರಗಳ ಆಚೆಗೆ ಹೋಗಿ ದೇವರ ವಿಚಾರಗಳನ್ನು ಗ್ರಹಿಸಲು ಸಾಧ್ಯವಾದರೆ ಆ ವಿಚಾರಗಳಿಂದ ಪ್ರೇರಿತವಾಗಿ ಕೃತಿ ಮಾಡಲು ಬೇಕಾಗುವ ಶಕ್ತಿಯನ್ನು ದೇವರೇ ಕೊಡುತ್ತಾನೆ. ಯಾವ ಉದ್ದೇಶದಿಂದ ಸಾಧಕನು ನನಗೆ ಸೇವೆ ಕೇಳಿದ್ದಾನೆಯೋ, ಅದರ ಹಿಂದೆ ‘ಆ ಸೇವೆಯನ್ನು ದೇವರೇ ಮಾಡಿಸಿಕೊಳ್ಳುವನು’, ಎಂದು ನನ್ನ ಭಾವ ಇತ್ತು. ದೇವರು ರೈಲಿನಲ್ಲಿ ಅವನ ಸಾಮಾನುಗಳಿಗಾಗಿ ಮೊದಲೇ ಜಾಗವನ್ನು ಮಾಡಿ ಇಟ್ಟಿದ್ದನು. ನಾನು ಕೇವಲ ಅಲ್ಲಿ ಇತರರ ಸಹಾಯದಿಂದ ಸಾಮಾನುಗಳನ್ನು ಇರಿಸಿಕೊಂಡಿದ್ದೆನು. ನನಗೆ ಬೇಕಾಗುವ ಸಹಾಯಕನನ್ನೂ ದೇವರೇ ಕಳುಹಿಸಿದ್ದನು. ‘ಸೇವೆ ಮಾಡುವ ತಳಮಳವು ನಮಗಿಂತ ಹೆಚ್ಚು ಭಗವಂತನಿಗೇ ಇರುತ್ತದೆ ಮತ್ತು ನಮಗಿಂತ ಅವನೇ ಹೆಚ್ಚು ಸೇವೆ ಮಾಡುತ್ತಿರುತ್ತಾನೆ’, ಎಂಬುದು ನನಗೆ ಇದರಿಂದ ಕಲಿಯಲು ಸಿಕ್ಕಿತು.” – ಓರ್ವ ಸಾಧಕ