
ಸ್ತ್ರೀಯರಿಗೆ ಪೌರಾಣಿಕ ಕಾಲದಿಂದಲೂ ಕಾನೂನು ಬಹಳಷ್ಟು ರಕ್ಷಣೆಯನ್ನು ನೀಡಿದೆ. ನಮ್ಮ ಭಾರತೀಯ ಸಮಾಜವು ಮಿತಾಕ್ಷರ (ಜನ್ಮದಿಂದಾಗಿ ದೊರಕುವ ಮಾಲೀಕತ್ವ) ಮತ್ತು ದಯಾಭಾಗ (ಇತರರ ಮೃತ್ಯುವಿನಿಂದ ದೊರಕುವ ಮಾಲೀಕತ್ವ) ಈ ಎರಡು ಕುಟುಂಬ ವ್ಯವಸ್ಥೆಯಲ್ಲಿ ಅಡಗಿವೆ. ಹಿಂದಿನ ಕಾಲದಿಂದ ಇದುವರೆಗೆ ಮಹಿಳೆಯರು ‘ಅಡುಗೆ ಮಾಡುವುದು, ಎಂಜಲು ತಟ್ಟೆಗಳನ್ನು ತೆಗೆಯುವುದು, ಮಕ್ಕಳನ್ನು ಬೆಳೆಸುವುದು ಮತ್ತು ಮನೆಯಲ್ಲಿನ ಸೇವೆ ಇದರಲ್ಲಿಯೇ ಇದ್ದಾರೆ. ಭಾರತೀಯ ಸಮಾಜದಲ್ಲಿ ಸ್ತ್ರೀಯರಿಗೆ ಸಿಗಬೇಕಾದ ನಿಜವಾದ ಸ್ಥಾನಮಾನ ದುರ್ದೈವದಿಂದ ಇಂದಿಗೂ ಸರಿಯಾಗಿ ಸಿಕ್ಕಿಲ್ಲ. ಸಂವಿಧಾನದಲ್ಲಿಯೂ ಸ್ತ್ರೀಯರಿಗೆ ವಿಶೇಷ ರಕ್ಷಣೆಯನ್ನು ನೀಡಲಾಗಿದೆ; ಆದರೆ ಪುರುಷಪ್ರಧಾನ ಸಂಸ್ಕೃತಿಯಲ್ಲಿ ಇಂತಹ ಅನೇಕ ದುರದೃಷ್ಟ ಬಡ ಸ್ತ್ರೀಯರನ್ನು ಇಂದಿಗೂ ಅವರ ಮೂಲಭೂತ ಆವಶ್ಯಕತೆಗಳಿಂದಲೂ ವಂಚಿತ ಇಡಲಾಗಿದೆ. (ಇದು ಕೆಲವೆಡೆ ಅನ್ವಯಿಸಲಿಕಿಲ್ಲ (ಅಪವಾದ)).

೧. ಸ್ತ್ರೀಧನ ಅಂದರೆ ಏನು ?
‘ಸ್ತ್ರೀಧನ ಎಂಬಂತಹ ಒಂದು ಅಧಿಕಾರವನ್ನು ಕಾನೂನು ಸ್ತ್ರೀಯರಿಗೆ ನೀಡಿದೆ. ಕೆಲವು ವರ್ಷಗಳ ಹಿಂದಿನವರೆಗೂ ಭಾರತೀಯ ಮಹಿಳೆಯರು ನೌಕರಿ ಮತ್ತು ಉದ್ಯೋಗದಲ್ಲಿ ಅಲ್ಪ ಪ್ರಮಾಣದಲ್ಲಿದ್ದರು. ಆದ್ದರಿಂದ ಅವರ ಆರ್ಥಿಕ ಪೋಷಣೆ ಮನೆಯಲ್ಲಿನ ಸಂಪಾದನೆ ಮಾಡುವ ಪುರುಷನಿಂದಲೇ ಆಗುತ್ತಿತ್ತು. ಆದ್ದರಿಂದ ಆರ್ಥಿಕದೃಷ್ಟಿಯಲ್ಲಿ ಅವರು ಸಂಪೂರ್ಣ ಸಂಪಾದನೆ ಮಾಡುವ ಪುರುಷನನ್ನೇ ಅವಲಂಬಿಸಿರುತ್ತಿದ್ದರು. ಆದ್ದರಿಂದಲೇ ನಮ್ಮ ಕಾನೂನಿನ ನಿಬಂಧನೆಗಳ ಪ್ರಕಾರ (ವ್ಯವಸ್ಥೆಗನುಸಾರ) ಮಹಿಳೆಯರಿಗೆ ಸ್ತ್ರೀಧನದ ಹಕ್ಕನ್ನು ನೀಡಲಾಗಿದೆ. ಹೆಸರಿನಂತೆಯೇ ಸ್ತ್ರೀಧನ, ಎಂದರೆ ಮಹಿಳೆಯರ ಬಳಿ ಇರುವ ಹಣ. ಸ್ತ್ರೀಧನ ಅಂದರೆ ಕೇವಲ ಹಣ ಮಾತ್ರವಲ್ಲ; ಆಭರಣ, ವಸ್ತುಗಳೂ ಇದರಲ್ಲಿ ಬರುತ್ತವೆ. ಅರ್ಥಾತ ಪ್ರತಿಯೊಂದು ವಸ್ತು ಸ್ತ್ರೀಧನವೇ ಆಗುತ್ತದೆ, ಎಂದೇನಿಲ್ಲ. ಆ ಸಂಪತ್ತು ಅವಳಿಗೆ ಎಲ್ಲಿಂದ ದೊರಕಿತು ? ಆ ಸಂಪತ್ತನ್ನು ಸ್ವಾಧೀನಪಡಿಸಿಕೊಳ್ಳುವ ಸಮಯದಲ್ಲಿ ಅವಳ ಸ್ಥಾನಮಾನ ಏನಿತ್ತು ? ಅವಿವಾಹಿತೆ, ವಿವಾಹಿತೆ, ವಿವಾಹ ವಿಚ್ಛೇದಿತೆ, ವಿಧವೆ, ಚಿಕ್ಕ ಹೆಣ್ಣು ಮಗು ಇವುಗಳಲ್ಲಿ ಯಾವ ಸ್ಥಿತಿಯಲ್ಲಿದ್ದಳು ? ಅವಳು ಯಾವ ಕುಟುಂಬಕ್ಕೆ ಸೇರಿದ್ದಾಳೆ ? ಮಿತಾಕ್ಷರವೋ ಅಥವಾ ದಯಾಭಾಗ ? ಈ ಎಲ್ಲ ವಿಷಯಗಳ ಆಧಾರದಿಂದಲೇ ಆ ಸಂಪತ್ತು (ಆಸ್ತಿ) ಸ್ತ್ರೀಧನವಾಗಿದೆಯೋ ಅಥವಾ ಇಲ್ಲವೋ ? ಎಂಬುದನ್ನು ನಿರ್ಧರಿಸಬೇಕಾಗುತ್ತದೆ.
೨. ಸ್ತ್ರೀಧನದಲ್ಲಿ ಯಾವ ವಿಷಯಗಳು ಬರುತ್ತವೆ ?
ಸ್ತ್ರೀಧನ ಈ ವ್ಯಾಖ್ಯೆಯಲ್ಲಿ ಕೆಳಗಿನ ಕೆಲವು ವಿಷಯಗಳು ಸೇರಿವೆ.
ಅ. ಅವಳ ಸಂಬಂಧಿಕರಿಂದ ಅವಳಿಗೆ ದೊರಕಿದ ಉಡುಗೊರೆಗಳು
ಆ. ಅವಿವಾಹಿತೆ ಇರುವಾಗ ಯಾವುದೇ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಂದ ದೊರಕಿದ ವಸ್ತುಗಳು, ಹಣ, ಉಡುಗೊರೆ ಅಥವಾ ಯಾವುದೇ ಸಂಪತ್ತು
ಇ. ಕಾನೂನಿನ ಮೂಲಕ ನಿರ್ವಹಣೆ ಮಾಡಲು ನೀಡಿದ ಆಸ್ತಿ
ಈ. ಅವಳಿಗೆ ವಿಭಜನೆಯಲ್ಲಿ ಪಾಲು ದೊರಕಿದ್ದರೆ
ಉ. ಅವಳು ಕಷ್ಟಪಟ್ಟು ಗಳಿಸಿದ ಹಣದಿಂದ ಪಡೆದಿರುವ ಸಂಪತ್ತು (ಆಸ್ತಿ)
ಊ. ಹೊಂದಾಣಿಕೆಯಿಂದ (ಒಪ್ಪಂದದಿಂದ) ದೊರಕಿದ ಸಂಪತ್ತು (ಆಸ್ತಿ)
ಎ. ಮದುವೆಗೆ ಮೊದಲು, ಮದುವೆಯಲ್ಲಿ, ಮದುವೆಯಾದ ನಂತರ ಗಂಡನ ಮನೆ ಮತ್ತು ತವರು ಮನೆಯವರು ಹಾಕಿದ ಎಲ್ಲ ಆಭರಣಗಳು ಸ್ತ್ರೀಧನದ ವ್ಯಾಖ್ಯೆಯಲ್ಲಿ ಬರುತ್ತವೆ.
೩. ಸ್ತ್ರೀಧನದ ವಿಧಗಳಿಗೆ ನೀಡಿದ ಹೆಸರುಗಳು
ಅ. ಅಧ್ಯಾಗ್ನಿ : ಮದುವೆಯ ಸಮಯದಲ್ಲಿ ನೀಡಿದ ಆಭರಣಗಳು
ಆ. ಅಧ್ಯವಹಾರಿಕಾ : ಮದುಮಗಳು ಗಂಡನ ಮನೆಗೆ ಹೋಗುವಾಗ ಅವಳಿಗೆ ನೀಡಿದ ಎಲ್ಲ ವಸ್ತುಗಳು
ಇ. ಪ್ರೀತಿದತ್ತಾ : ಪ್ರೀತಿಯಿಂದ ಸೊಸೆಗೆ ಅತ್ತೆ ಮತ್ತು ಮಾವ ನೀಡಿದ ಆಭರಣಗಳು, ವಸ್ತುಗಳು ಮತ್ತು ಅಲಂಕಾರಗಳು
ಈ. ಪತಿದತ್ತಾ : ಪತಿಯು ಅವಳಿಗೆ ನೀಡಿದ ಎಲ್ಲ ವಸ್ತುಗಳು ಮತ್ತು ಅಲಂಕಾರಗಳು
ಉ. ಪದನ್ವದಾವಿಕಾ : ಹಿರಿಯರಿಗೆ ನಮಸ್ಕಾರ ಮಾಡಿದಾಗ ದೊರಕಿದ ಉಡುಗೊರೆಗಳು
ಊ. ಆಧಿವೇದನಿಕಾ : ಎರಡನೇಯ ಹೆಂಡತಿಯನ್ನು ಮಾಡಿಕೊಂಡ ನಂತರ ಮೊದಲನೇ ಹೆಂಡತಿಗೆ ನೀಡಿದ ಎಲ್ಲ ಆಭರಣಗಳು, ವಸ್ತುಗಳು ಮತ್ತು ಅಲಂಕಾರಗಳು
ಎ. ಶುಲ್ಕ : ಮದುವೆಯಲ್ಲಿ ದೊರಕಿದ ಹಣ
ಐ. ಬಂಧುದತ್ತ : ತಾಯಿ-ತಂದೆ ಮತ್ತು ಸಹೋದರರಿಂದ ದೊರಕಿದ ಆಭರಣಗಳು, ವಸ್ತುಗಳು ಮತ್ತು ಅಲಂಕಾರಗಳು ಈ ರೀತಿ ಸ್ತ್ರೀಧನದ ಸಂಪೂರ್ಣ ಅಧಿಕಾರವನ್ನು ಸ್ತ್ರೀಯರಿಗೆ ನೀಡಲಾಗಿದೆ.
೪. ಸಂವಿಧಾನಿಕ ಮತ್ತು ಕಾನೂನುಗಳ ಮೂಲಕ ಮಹಿಳೆಯರಿಗೆ ನೀಡಿದ ರಕ್ಷಣೆ
ಸ್ತ್ರೀಯರು ತಮ್ಮ ಆಸ್ತಿಯನ್ನು ತಮ್ಮ ಇಚ್ಛೆಯಂತೆ ಯಾವ ಆಯೋಜನೆಯನ್ನೂ ಮಾಡಬಹುದು, ವಿಲೇವಾರಿ ಮಾಡಬಹುದು ಅಥವಾ ಯಾರಿಗಾದರೂ ಸ್ವೇಚ್ಛೆಯಿಂದ ಅದನ್ನು ದಾನ ಮಾಡಬಹುದು. ವಿವಾಹ ವಿಚ್ಛೇದನೆ ಆದ ನಂತರ ಗಂಡನ ಮನೆಯವರು ಹಾಕಿದ ಎಲ್ಲ ಆಭರಣಗಳು ಆ ವಿವಾಹ ವಿಚ್ಛೇದಿತ ಸ್ತ್ರೀಯರಿಗೇ ಹೋಗುತ್ತವೆ. ಯಾವುದಾದರೊಬ್ಬ ಪೀಡಿತ ಮಹಿಳೆಗೆ ಅವಳ ಸ್ತ್ರೀಧನವನ್ನು ಗಂಡನ ಮನೆಯ ಜನರು ದೋಚಿದರೆ, ಇಂತಹ ಅಬಲೆ ಸ್ತ್ರೀಯರಿಗಾಗಿ ಮಹಿಳಾ ಆಧಾರಕೇಂದ್ರ, ಮಹಿಳಾ ಆಯೋಗ ಇಂತಹ ಸಂಸ್ಥೆಗಳು ಅವಳ ಸ್ತ್ರೀಧನವನ್ನು ದೊರಕಿಸಿಕೊಡಲು ಯಾವಾಗಲೂ ಸಹಾಯ ಮಾಡುತ್ತವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಮಹಿಳೆಯರಿಗೆ ಸಂವಿಧಾನ ಮತ್ತು ಕಾನೂನಿನಿಂದ ಸಾಕಷ್ಟು ರಕ್ಷಣೆ ನೀಡಲಾಗಿದೆ; ಆದರೆ ಪೀಡಿತ ಮಹಿಳೆಯರಿಗೆ ಮಾತ್ರ ನ್ಯಾಯವನ್ನು ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸುಳ್ಳು ದೂರುಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿವೆ. ಆದ್ದರಿಂದ ‘ಎಲ್ಲ ಕಾನೂನುಗಳು ಮಹಿಳೆಯರ ಪರವಾಗಿವೆ, ಎಂಬ ಸಾರ್ವತ್ರಿಕ ಪ್ರತಿಪಾದನೆಯನ್ನು ಹಬ್ಬಿಸಲಾಗಿದೆ, ಇದು ಸಂಪೂರ್ಣ ತಪ್ಪಾಗಿದೆ. ಕಾನೂನುಗಳನ್ನು ಹೆಚ್ಚು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಮತ್ತು ನಿಜವಾದ ಪೀಡಿತ ಮಹಿಳೆಗೆ ಯಾವ ನ್ಯಾಯ ಬೇಕೋ, ಅದು ಸಿಗುವುದಿಲ್ಲ. ಅದರಿಂದ ಅವಳು ಶಾಶ್ವತವಾಗಿ ವಂಚಿತಳಾಗುತ್ತಾಳೆ.
– ನ್ಯಾಯವಾದಿ ಶೈಲೇಶ ಕುಲಕರ್ಣಿ, ಕುರ್ಟಿ, ಫೋಂಡಾ, ಗೋವಾ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ಮಾಲೆಗಾಂವ್ ನಲ್ಲಿ ಬಕ್ರೀದ್ ಸಂದರ್ಭದಲ್ಲಿ 906 ಗೋವುಗಳಿಗೆ ಜೀವದಾನ : 257 ಗೋಕಳ್ಳಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲು !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !