
೧. ಶ್ರೀಕೃಷ್ಣ ಜನ್ಮಾಷ್ಟಮಿಯ ದಿನ ‘ಫೇಸ್‌ಬುಕ್’ನಲ್ಲಿ ಶ್ರೀಕೃಷ್ಣನ ಬಗ್ಗೆ ಟೀಕೆ
‘ಆಗಸ್ಟ್ ೨೦೨೨ ರಲ್ಲಿ, ತಮಿಳುನಾಡಿನ ಸತೀಶ ಕುಮಾರ ಎಂಬ ವ್ಯಕ್ತಿಯು ಶ್ರೀಕೃಷ್ಣಜನ್ಮಾಷ್ಟಮಿಯ ದಿನ ತನ್ನ ಫೇಸ್‌ಬುಕ್ ಖಾತೆಯಲ್ಲಿ “ಕೊಳದಲ್ಲಿ ಸ್ನಾನ ಮಾಡುತ್ತಿರುವ, ಮಹಿಳೆಯರ ಬಟ್ಟೆಗಳನ್ನು ಕದಿಯುವವನ ಜನ್ಮದಿನ ಇದೆ, ಅವನಿಗೆ ಶುಭಾಶಯಗಳನ್ನು ಕೊಡುವಿರೇ ?’, ಎಂದು ಬರೆದು ಪ್ರಸಾರ ಮಾಡಿ ಶ್ರೀಕೃಷ್ಣನನ್ನು ಅವಮಾನಿಸಿದ್ದನು. ಈ ಅವಮಾನದ ವಿರುದ್ಧ ಹಿಂದೂ ಧರ್ಮಾಭಿಮಾನಿಯೊಬ್ಬರು ಪೊಲೀಸರಲ್ಲಿ ದೂರು ನೀಡಿದ್ದರು.
ಈ ದೂರಿನಲ್ಲಿ ಫೇಸ್‌ಬುಕ್‌ನಲ್ಲಿನ ಬರಹ, ಆ ವ್ಯಕ್ತಿಯ ಛಾಯಾಚಿತ್ರ, ದೂರವಾಣಿ ಸಂಖ್ಯೆ ಮತ್ತು ಈ-ಮೆಲ್ ವಿಳಾಸದ ಸಂಪೂರ್ಣ ಮಾಹಿತಿಯನ್ನು ನೀಡಿದ್ದರು. ಆರೋಪಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವಾಗಲೂ, ಪೊಲೀಸರು ಅಜ್ಞಾತ ವ್ಯಕ್ತಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದರು ಮತ್ತು ಮೇಲ್ನೋಟಕ್ಕೆ ತನಿಖೆ ನಡೆಸಿದರು. ಅವರು ಅಮೇರಿಕದಲ್ಲಿರುವ “ಮ್ಯೂಚುವಲ್ ಲೀಗಲ್ ಅಸಿಸ್ಟನ್ಸ್ ಟ್ರೀಟಿ (ಮೆಟಾ)” ಎಂಬ ಫೇಸ್‌ಬುಕ್‌ನ ಸಂಸ್ಥೆಗೆ ಒಂದು ಪತ್ರ ಕಳುಹಿಸಿ ಆರೋಪಿಯ ಬಗ್ಗೆ ವಿಚಾರಿಸಿದರು. ವಾಸ್ತವದಲ್ಲಿ, ಆರೋಪಿಯ ಬಗ್ಗೆ ಸಂಪೂರ್ಣ ಮಾಹಿತಿ ಇರುವಾಗ ಪೊಲೀಸರು ‘ಮೆಟಾ’ ಸಂಸ್ಥೆಯ ಸಹಾಯ ಕೇಳುವ ಅವಶ್ಯಕತೆಯೇ ಇರಲಿಲ್ಲ; ಆದರೆ, ಹಿಂದೂಗಳ ಭಾವನೆಗಳ ವಿಷಯ ಬಂದಾಗ, ಈ ರೀತಿ ಕಳಪೆ ತನಿಖೆ ನಡೆಸಲಾಗುತ್ತದೆ. ಒಂದು ವೇಳೆ ಮತಾಂಧರ ಬಗ್ಗೆ ಇಂತಹ ಬರಹ ಪ್ರಕಟವಾಗಿದ್ದರೆ, ಅವರು ಪೊಲೀಸ್ ಠಾಣೆಯನ್ನು ಸುಸ್ಥಿತಿಯಲ್ಲಿ ಇರಲು ಬಿಡುತ್ತಿದ್ದರೇ ?

೨. ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮ್ಯಾಜಿಸ್ಟ್ರೇಟ್‌ರ ಆದೇಶ
ಪೊಲೀಸರು ‘ಮೆಟಾ’ದಿಂದ ಬಂದ ಪತ್ರವನ್ನು ತೆಗೆದುಕೊಂಡು, ತಾಲೂಕಿನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ರಿಗೆ ದಂಡ ಪ್ರಕ್ರಿಯೆ ಸಂಹಿತೆಯ (ಕ್ರಿಮಿನಲ್) ಕಲಮ್ ೧೭೩(೮)ರ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ, “ತನಿಖೆಯ ನಂತರ ಇದರಲ್ಲಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದ್ದರಿಂದ ಈ ಕ್ರಿಮಿನಲ್ ಪ್ರಕರಣವನ್ನು ಮುಕ್ತಾಯಗೊಳಿಸಬೇಕು”, ಎಂದು ತಿಳಿಸಿದರು. ಮ್ಯಾಜಿಸ್ಟ್ರೇಟ್‌ರು ಸಹ ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸಿ, ಒಬ್ಬ ಗುಮಾಸ್ತನಂತೆ ಆದೇಶ ನೀಡಿದರು. ಅವರು ಹಿಂದುತ್ವನಿಷ್ಠ ದೂರುದಾರರಿಗೆ ನೋಟಿಸ್ ಕಳುಹಿಸಿದರು. ನಂತರ ದೂರುದಾರರು ಅಧಿಕೃತ ನ್ಯಾಯವಾದಿಗಳ ಮೂಲಕ ತಮ್ಮ ಲಿಖಿತ ಆಕ್ಷೇಪಣೆಯನ್ನು ದಾಖಲಿಸಿದರು. ಪ್ರಕರಣ ವಿಚಾರಣೆಗೆ ಬಂದ ದಿನ, ಮ್ಯಾಜಿಸ್ಟ್ರೇಟ್‌ರು, “ಅರ್ಜಿದಾರರು ಗೈರುಹಾಜರಾಗಿದ್ದಾರೆ,” ನ್ಯಾಯವಾದಿಗಳು ಹಾಜರಿದ್ದಾರೆ ಮತ್ತು ಪೊಲೀಸರ ಅಂತಿಮ ವರದಿ (ಕ್ಲೋಸರ್ ರಿಪೋರ್ಟ್)ಯನ್ನು ಪರಿಗಣಿಸಿ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಿದರು. ಆದರೆ, ಈ ಬಾರಿ ನ್ಯಾಯಾಲಯವು ದೂರುದಾರರಿಗೆ ಖಾಸಗಿ ದೂರು, ಅಂದರೆ ಖಾಸಗಿ ಕ್ರಿಮಿನಲ್ ಅರ್ಜಿಯನ್ನು ಸಲ್ಲಿಸಲು ಅನುಮತಿ ನೀಡಿತು.
ಯಾವುದೇ ಪಕ್ಷಕಾರ, ಅರ್ಜಿದಾರ ಅಥವಾ ಅರ್ಜಿದಾರರು ನ್ಯಾಯವಾದಿಯನ್ನು ನೇಮಿಸಿ ತಮ್ಮ ಹೇಳಿಕೆಯನ್ನು ಲಿಖಿತ ರೂಪದಲ್ಲಿ ಅವರ ಪ್ರಕರಣವನ್ನು ಮಂಡಿಸಿದಾಗ, ಆಕ್ಷೇಪಾರ್ಹ ಬರಹಗಳು, ಹಿಂದೂಗಳ ಮನಸ್ಸಿಗೆ ನೋವುಂಟು ಮಾಡಿದ ಭಾವನೆಗಳು ಮತ್ತು ಪೊಲೀಸರ ತನಿಖೆಯನ್ನು ಪರಿಶೀಲಿಸುವುದು ಮ್ಯಾಜಿಸ್ಟ್ರೇಟ್‌ರ ಜವಾಬ್ದಾರಿಯಾಗಿರುತ್ತದೆ. ಇಲ್ಲಿ ಅವರು ಪೊಲೀಸರಿಂದ ಬಂದ ಅಂತಿಮ ವರದಿಯ ಆಧಾರದಲ್ಲಿ ಕ್ರಿಮಿನಲ್ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಇದನ್ನು ‘ನ್ಯಾಯ’ ಎಂದು ಕರೆಯಬಹುದೇ ?
೩. ಪ್ರಕರಣವನ್ನು ತಪ್ಪಾಗಿ ಮುಕ್ತಾಯಗೊಳಿಸಿದ ಮ್ಯಾಜಿಸ್ಟ್ರೇಟ್‌ರಿಗೆ ತಮಿಳುನಾಡು ಉಚ್ಚ ನ್ಯಾಯಾಲಯದ ಎಚ್ಚರಿಕೆ
ಈ ಪ್ರಕರಣದಲ್ಲಿ ಹಿಂದೂ ಧರ್ಮಾಭಿಮಾನಿಯು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಕಲಮ್ ೩೯೭ ಮತ್ತು ೪೦೧ ರ ಅಡಿಯಲ್ಲಿ ತಮಿಳುನಾಡು ಉಚ್ಚ ನ್ಯಾಯಾಲಯದಲ್ಲಿ ರಿವಿಜನ್ ಅರ್ಜಿಯನ್ನು ಸಲ್ಲಿಸಿದರು. ಈ ಸಮಯದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು, “ಶ್ರೀಕೃಷ್ಣನು ದೇವತೆಯಾಗಿದ್ದು ಅವನನ್ನು ವ್ಯಾಪಕವಾಗಿ ಪೂಜಿಸಲಾಗುತ್ತದೆ. ಹಿಂದೂ ಪೌರಾಣಿಕ ಕಥೆಗನುಸಾರ, ಅದು ಗೋಪಿಯರನ್ನು ಮಾಯೆಯಿಂದ ಹೊರತರಲು ಶ್ರೀಕೃಷ್ಣನು ರಚಿಸಿದ ಲೀಲೆಯಾಗಿತ್ತು. ಇದು ಹೆಚ್ಚಿನ ಹಿಂದೂಗಳ ನಂಬಿಕೆಯಾಗಿದೆ. ಹಾಗಾಗಿ, ಶ್ರೀಕೃಷ್ಣನನ್ನು ಟೀಕಿಸಿ ಮಹಿಳೆಯರನ್ನು ಗುರಿಯಾಗಿಸುವುದು ಸರಿಯಲ್ಲ. ಇದರೊಂದಿಗೆ, ಇದು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನವಾಗಿದೆ. ಆದ್ದರಿಂದ, ಇಷ್ಟು ಸುಲಭವಾಗಿ ತೀರ್ಪು ನೀಡುವುದು ತಪ್ಪು. ಎರಡನೆಯದಾಗಿ, ಪ್ರತಿಯೊಬ್ಬರೂ ಸಂವಿಧಾನವು ನೀಡಿರುವ ಭಾಷಾ ಸ್ವಾತಂತ್ರ್ಯದ ಮಿತಿಯನ್ನು ಅರಿತುಕೊಳ್ಳಬೇಕು. ಸಂತರು, ದೇವತೆಗಳು ಮತ್ತು ಮಹಾಪುರುಷರನ್ನು ಟೀಕಿಸಿ ಇತರರ ಧಾರ್ಮಿಕ ಭಾವನೆಗಳನ್ನು ನೋಯಿಸುವುದು ಮತ್ತು ಅದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗೆ ಕಾರಣವಾಗುವುದನ್ನು ಸಹಿಸಲಾಗುವುದಿಲ್ಲ”, ಎಂದು ಹೇಳಿದರು. ಈ ರೀತಿ ಉಚ್ಚ ನ್ಯಾಯಾಲಯವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಪುನಃ ಹೊಸದಾಗಿ ತನಿಖೆ ನಡೆಸುವಂತೆ ಆದೇಶ ನೀಡಿತು. ಇದರೊಂದಿಗೆ, “ಮ್ಯಾಜಿಸ್ಟ್ರೇಟ್‌ರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು” ಎಂದೂ ಸ್ಪಷ್ಟವಾಗಿ ಹೇಳಿತು.
೪. ಹಿಂದೂಗಳು ತಮ್ಮ ಧಾರ್ಮಿಕಶ್ರದ್ಧೆಯನ್ನು ರಕ್ಷಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದವರೆಗೂ ಹೋಗಬೇಕು !
ಹಿಂದೂ ಸಹೋದರರು ಸಂವಿಧಾನವು ನೀಡಿರುವ ಹಕ್ಕು ಗಳನ್ನು ಪೂರ್ಣ ಬಳಸಿಕೊಂಡು, ಹಿಂದೂ ವಿರೋಧಿಗಳಿಗೆ ಮತ್ತು ಪೊಲೀಸರಿಗೆ ಪ್ರಜಾಪ್ರಭುತ್ವದ ಮಾರ್ಗದಿಂದ ಪಾಠ ಕಲಿಸಬೇಕು. ಹಿಂದೂ ಧರ್ಮ, ಸಂತರು, ದೇವತೆಗಳು ಮತ್ತು ಮಹಾಪುರುಷರ ಗೌರವದ ಬಗ್ಗೆ ಹಿಂದೂಗಳು ಜಾಗೃತರಾಗಿ ಇರಬೇಕು. ಅನೇಕ ಪ್ರಕರಣಗಳಲ್ಲಿ ನ್ಯಾಯವ್ಯವಸ್ಥೆಯು ಹಿಂದೂಗಳ ಭಾವನೆಗಳನ್ನು ಗೌರವಿಸಿದೆ. ಆದ್ದರಿಂದ, ಪ್ರತಿಯೊಬ್ಬ ಹಿಂದೂ ತನ್ನ ಧರ್ಮ, ದೇವತೆಗಳು, ಸಂತರು ಮತ್ತು ಮಹಾಪುರುಷರ ಅಗೌರವವನ್ನು ಸಹಿಸದೆ, ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ತನ್ನನ್ನು ಅವಮಾನಿಸುವವರ ವಿರುದ್ಧ ಕ್ರಿಮಿನಲ್ ದೂರುಗಳನ್ನು ದಾಖಲಿಸಬೇಕು ಮತ್ತು ಅವರನ್ನು ಸರ್ವೋಚ್ಚ ನ್ಯಾಯಾಲಯದವರೆಗೆ ಬೆಂಬತ್ತಬೇಕು. ಇಲ್ಲವಾದರೆ, ಸಣ್ಣ ಅನಾಹುತವನ್ನು ಸಹಿಸಿಕೊಳ್ಳಬಹುದು, ಆದರೆ ಅದನ್ನು ಗಮನಿಸದೇ ಬಿಟ್ಟರೆ ಅದು ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ತಪ್ಪುಗಳನ್ನು ಮೊದಲೇ ತಡೆಯುವುದು ಮುಖ್ಯ.
ಶ್ರೀಕೃಷ್ಣಾರ್ಪಣಮಸ್ತು
– (ಪೂ.) ನ್ಯಾಯವಾದಿ ಸುರೇಶ ಕುಲಕರ್ಣಿ, ಮುಂಬಯಿ ಉಚ್ಚ ನ್ಯಾಯಾಲಯ (೨೫.೮.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು