
ಪಾಶ್ಚಿಮಾತ್ಯ ದೇಶಗಳಲ್ಲಿ ಯಾವ ವಿಷಯಗಳನ್ನು ನಿಷೇಧಿಸಲಾಗಿದೆಯೋ, ಆ ವಿಷಯಗಳನ್ನೇ ಜಗತ್ತಿನ ಇತರ ದೇಶಗಳಲ್ಲಿ ಜಾರಿಗೆ ತರಲು ಅವರು ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಇದರ ಹಿಂದೆ ಅವರಿಗೆ ತಮ್ಮದೇ ಆದ ಲಾಭವಿದೆ. ಇದರ ಉತ್ತಮ ಉದಾಹರಣೆಯೆಂದರೆ ಕೃಷಿ ಕಾನೂನು. ಪರಿಸರವಾದಿ ಗ್ರೇಟಾ ಥನ್ಬರ್ಗ್, ರಿಹಾನಾ ಮತ್ತು ಮಿಯಾ ಖಲೀಫಾ ಇವರಂತಹ ಜನರು ಕೃಷಿ ಕಾನೂನುಗಳನ್ನು ಬಲವಾಗಿ ವಿರೋಧಿಸಿದರು ಮತ್ತು ಅನೇಕ ವಿಷಯಗಳನ್ನು ಟ್ವೀಟ್ ಮಾಡಿದರು; ಆದರೆ ತಮಾಷೆಯೆಂದರೆ ಅವರ ದೇಶಗಳಲ್ಲಿ ಮಾರುಕಟ್ಟೆ ಸಮಿತಿ ಇಲ್ಲ. ಅಮೇರಿಕದಲ್ಲಿ ಕೃಷಿ ಕಾನೂನುಗಳಲ್ಲಿ ಯಾವ ವಿಷಯಗಳು ಇದ್ದವೋ ಅದೇ ವಿಷಯಗಳು ಇಲ್ಲಿಯೂ ಇದ್ದವು. ಗ್ರೇಟಾ ಥನ್ಬರ್ಗ್ನರ ಸ್ವೀಡನ್‌ನಲ್ಲೂ ಹಾಗೆಯೇ ಇದೆ. ಅಲ್ಲಿ ರೈತರು ದೊಡ್ಡ ಸಂಸ್ಥೆಗಳೊಂದಿಗೆ ನೇರವಾಗಿ ಒಪ್ಪಂದ ಮಾಡಿಕೊಂಡು ಕೃಷಿ ಮಾಡುತ್ತಾರೆ. ಯಾವುದೇ ದಲ್ಲಾಳಿಗಳು, ಮಧ್ಯವರ್ತಿಗಳು ಅಥವಾ ಮಾರುಕಟ್ಟೆ ಸಮಿತಿಗಳ ತೊಂದರೆ ಇಲ್ಲ. ರೈತರು ತಮ್ಮ ಸರಕುಗಳನ್ನು ದೇಶದಲ್ಲಿ ಎಲ್ಲಿ ಬೇಕಾದರೂ ತೆಗೆದುಕೊಂಡು ಹೋಗಿ ಮಾರಾಟ ಮಾಡಬಹುದು.
ಹೀಗಿದ್ದರೂ, ಪಾಶ್ಚಿಮಾತ್ಯ ದೇಶಗಳು ಹೊಸ ಕೃಷಿ ಕಾನೂನುಗಳನ್ನು ಭಾರತದಲ್ಲಿ ಜಾರಿಗೆ ತರದಂತೆ, ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದವು. ಇದಕ್ಕಾಗಿ, ಅನೇಕ ‘ಟೂಲ್‌ಕಿಟ್‌ಗಳು’ (ಯಾವುದಾದರೊಂದು ಪಿತೂರಿಯನ್ನು ಮುನ್ನಡೆಸಲು ವಿವಿಧ ಹಂತಗಳಲ್ಲಿ ಯೋಜಿಸಲಾದ ತಂತ್ರಗಳು) ಬೆಳಕಿಗೆ ಬಂದವು, ಇದರಲ್ಲಿ ಪ್ರತಿಭಟನೆಗಳನ್ನು, ಹಿಂಸಾಚಾರವನ್ನು ಹೇಗೆ ಮಾಡಬೇಕು ಎಂಬುದರ ಮಾಹಿತಿ ಇತ್ತು. ಗ್ರೇಟಾ ಥನ್ಬರ್ಗ್ ಇವರು ತಪ್ಪಿ ಈ ‘ಟೂಲ್‌ಕಿಟ್’ನ್ನೇ ಟ್ವೀಟ್ ಮಾಡಿದ್ದರು.
೧. ಭಾರತದಲ್ಲಿನ ಬೀದಿ ನಾಯಿಗಳು ಮತ್ತು ವಿದೇಶಗಳಲ್ಲಿನ ಸಂಸ್ಥೆಗಳು !
ನೀವು ವಿದೇಶಗಳಲ್ಲಿ ಎಲ್ಲಿಯೂ ಬೀದಿ ನಾಯಿಗಳನ್ನು ನೋಡಲು ಸಾಧ್ಯವಿಲ್ಲ; ಏಕೆಂದರೆ ಅಲ್ಲಿ ನಾಯಿಗಳಿಗೆ ‘ಶೆಲ್ಟರ್ ಹೋಮ್’ಗಳು (ಆಶ್ರಯ ಮನೆ) ಇರುತ್ತವೆ. ಯಾವುದೇ ಬೀದಿನಾಯಿ ಕಂಡು ಬಂದರೆ, ಸರಕಾರ ಅದನ್ನು ಹಿಡಿದು ‘ಶೆಲ್ಟರ್ ಹೋಮ್’ಗಳಲ್ಲಿ ಇಡುತ್ತದೆ. ಅಲ್ಲಿ, ಎಲ್ಲಾ ನಾಯಿಗಳ ವೆಸಕ್ಟಮಿ (ಸಂತಾನಹರಣ) ಮಾಡಲಾಗುತ್ತದೆ ಮತ್ತು ಅವುಗಳಿಗೆ ಲಸಿಕೆಯನ್ನು ಹಾಕಲಾಗುತ್ತದೆ, ಇದರಿಂದ ಅವುಗಳ ಸಂಖ್ಯೆ ಹೆಚ್ಚಾಗುವುದಿಲ್ಲ ಮತ್ತು ಕ್ರಮೇಣ ಆ ಸಂಖ್ಯೆ ಕಡಿಮೆಯಾಗುತ್ತದೆ; ಆದರೆ ಮತ್ತೊಂದೆಡೆ, ಪಾಶ್ಚಿಮಾತ್ಯ ದೇಶಗಳ ಸಂಸ್ಥೆ ‘ಪೆಟಾ ಇಂಟರ್‌ನ್ಯಾಶನಲ್’ ಭಾರತದಲ್ಲಿ ಇದರ ವಿರುದ್ಧ ಕೆಲಸ ಮಾಡಿತು. ಅವರು ಕಾಂಗ್ರೆಸ್ ನಾಯಕರಾದ ಅಭಿಷೇಕ ಮನು ಸಿಂಘವಿ ಮತ್ತು ಕಪಿಲ್ ಸಿಬ್ಬಲ್ ಇವರಂತಹ ವಕೀಲರಿಗೆ ೮ ಕೋಟಿ ರೂಪಾಯಿಗಳನ್ನು ಕೊಡುವ ಮೂಲಕ ಭಾರತದ ಬೀದಿಗಳಲ್ಲಿನ ಬೀದಿ ನಾಯಿಗಳನ್ನು ತೆಗೆಯಬಾರದು ಮತ್ತು ಅವುಗಳಿಗೆ ‘ಶೆಲ್ಟರ್ ಹೋಮ್’ಗಳನ್ನು ಮಾಡಬಾರದು ಎಂದು ಪ್ರಯತ್ನಿಸಿತು.
ಈಗ ಓದುಗರಿಗೆ ಇದರಲ್ಲಿ ಪಾಶ್ಚಿಮಾತ್ಯ ದೇಶಗಳ ಸ್ವಾರ್ಥ ಏನಿದೆ ಎಂಬ ಪ್ರಶ್ನೆ ಬರಬಹುದು , ?
೨. ಲಸಿಕೆ ಉದ್ಯಮದ ದೊಡ್ಡ ಆಟ !
ಇದರ ಹಿಂದೆ, ‘ಲಸಿಕೆ ಮಾಫಿಯಾದ ದೊಡ್ಡ ವ್ಯವಸಾಯ’ ಇದೆ !’ ಯಾವುದೇ ಲಸಿಕೆಯನ್ನು ತಯಾರಿಸಲು, ಆರಂಭದಲ್ಲಿ ಸಂಶೋಧನೆಗೆ ಮಾತ್ರ ಹೆಚ್ಚಿನ ಖರ್ಚು ಬರುತ್ತದೆ. ಒಮ್ಮೆ ಸಂಶೋಧನೆ ಪೂರ್ಣಗೊಂಡರೆ ಲಸಿಕೆ ತಯಾರಿಸಲು ಬಹಳ ಕಡಿಮೆ ಖರ್ಚು ಬರುತ್ತದೆ. ಉದಾಹರಣೆಗೆ, ಹಾವಿನ ವಿಷಕ್ಕೆ ಲಸಿಕೆ ತಯಾರಿಸುವುದು ತುಂಬಾ ಸುಲಭವಾಗಿದೆ. ಇದಕ್ಕಾಗಿ, ಕುದುರೆಯ ದೇಹಕ್ಕೆ ಹಾವಿನ ವಿಷವನ್ನು ಚುಚ್ಚಲಾಗುತ್ತದೆ. ಅದರಿಂದ ಕುದುರೆಯ ಶರೀರದಲ್ಲಿ ಆ ವಿಷವನ್ನು ವಿರೋಧಿಸುವ ಶಕ್ತಿ ತಯಾರಾಗುತ್ತದೆ. ನಂತರ ಕುದುರೆಯ ದೇಹದಿಂದ ರಕ್ತವನ್ನು ತೆಗೆದು ಅದರಲ್ಲಿನ ‘ಸೀರಮ್’ಅನ್ನು (ರಕ್ತದಲ್ಲಿನ ಸೀರಮ್‌ನ್ನು ಅನೇಕ ಔಷಧಿಗಳಲ್ಲಿ ಬಳಸÀಲಾಗುತ್ತದೆ) ಬೇರ್ಪಡಿಸಿ ಲಸಿಕೆಯನ್ನು ತಯಾರಿಸಲಾಗುತ್ತದೆ; ಆದರೆ ಇತರ ಕಾಯಿಲೆಗಳಿಗೆ ಲಸಿಕೆಗಳನ್ನು ತಯಾರಿಸಲು ಆ ವಿಷಾಣುವಿನ ‘ಡಿ.ಎನ್.ಎ.’, ‘ಎಂ.ಆರ್.ಎನ್.ಎ’ (ಮೆಸೆಂಜರ್ ರೈಬೋನ್ಯೂಲಿಕ್ ಆಸಿಡ್ – ಅನುವಂಶಿಕತೆಯ ಒಂದು ಮಹತ್ವದ ರೇಣು ಯಾವುದು ಪ್ರೋಟೀನ್ ಸಂಶ್ಲೇಷಣೆಗಾಗಿ ‘ಡಿ.ಎನ್.ಎ.’ನಿಂದ ರೈಬೋಸೋಮ್ ವರೆಗೆ ಸೂಚನೆಗಳನ್ನು ಸಾಗಿಸುತ್ತದೆ) ಮತ್ತು ಇತರ ಹಲವು ವಿಷಯಗಳ ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಲಸಿಕೆಯ ಮುಖ್ಯ ಕಾರ್ಯವೆಂದರೆ ಅದು ವೈರಸ್‌ನ ‘ಎಂ.ಆರ್.ಎನ್.ಎ.’ಯ (ಇದು ಅದರ ಅನುವಂಶಿಕ ಸಂಕೇತವನ್ನು ಮತ್ತಷ್ಟು ಹೆಚ್ಚಿಸುತ್ತದೆ) ಬಂಧವನ್ನು ಮುರಿದು ಅದರ ಬೆಳವಣಿಗೆಯನ್ನು ನಿಲ್ಲಿಸುತ್ತದೆ. ಆದ್ದರಿಂದ, ಲಸಿಕೆಗಳ ಮೇಲೆ ಸಂಶೋಧನೆ ಮಾಡಲು ಸಾಕಷ್ಟು ಹಣ ಖರ್ಚಾದರೂ, ಭವಿಷ್ಯದಲ್ಲಿ ಅದನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲು ತಗಲುವ ಖರ್ಚು ತುಂಬಾ ಕಡಿಮೆ ಇರುತ್ತದೆ. ಆದರೂ, ರೇಬಿಸ್ ಲಸಿಕೆ ಔಷಧಿ ಅಂಗಡಿಗಳಲ್ಲಿ ಸಾವಿರಾರು ರೂಪಾಯಿಗಳಿಗೆ ಸಿಗುತ್ತದೆ. ಇದು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ದೊರೆಯುತ್ತದೆ; ಏಕೆಂದರೆ ಭಾರತ ಸರಕಾರವು ಅದನ್ನು ನೇರವಾಗಿ ಸಂಸ್ಥೆಗಳಿಂದ ಖರೀದಿಸುತ್ತದೆ.
ಈಗ ನೀವೇ ಯೋಚಿಸಿ, ‘ಒಂದು ವೇಳೆ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಬ್ರಾಜಿಲ್ ನಂತಹ ದೇಶಗಳಲ್ಲಿ ನಾಯಿಗಳೇ ಇಲ್ಲದಿದ್ದರೆ, ಈ ಪಾಶ್ಚಿಮಾತ್ಯ ಸಂಸ್ಥೆಗಳ ಲಸಿಕೆಗಳ ಮೇಲೆ ಕೋಟ್ಯಂತರ ರೂಪಾಯಿಗಳ ಹೂಡಿಕೆಯ ಭರಿಸುವಿಕೆ ಹೇಗೆ ಆಗುತ್ತದೆ ?’
‘ಪೆಟಾ ಇಂಟರ್‌ನ್ಯಾಶನಲ್’ ಪ್ರಧಾನ ಕಚೇರಿ ಅಮೇರಿಕಾದಲ್ಲಿದೆ, ಅಲ್ಲಿ ನೀವು ಒಂದೇ ಒಂದು ಬೀದಿ ನಾಯಿಯನ್ನು ನೋಡಲಾರಿರಿ; ಆದರೆ ಅವರಿಗೆ ಅಮೇರಿಕಾದಲ್ಲಿನ ನಾಯಿಗಳ ಬಗ್ಗೆ ಕಾಳಜಿ ಇಲ್ಲ. ಅವರಿಗೆ ಭಾರತದಲ್ಲಿರುವ ನಾಯಿಗಳ ಬಗ್ಗೆ ಕಾಳಜಿಯಿದೆ; ಏಕೆಂದರೆ ಇದೇ ಈ ಲಸಿಕೆ ಮಾಫಿಯಾಗಳ ನಿಜವಾದ ಆಟ.
– ಶ್ರೀ ಜೈಸಿಂಗ್ ಮೋಹನ್, ಪುಣೆ. (೨೨.೮.೨೦೨೫)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು