ದುರ್ಗಾ ಕ್ಷಮಾ ಶಿವಾ ಧಾತ್ರಿ ಸ್ವಾಹಾ ಸ್ವಧಾ ನಮೋಽಸ್ತು ತೇ |
ಜಯ ತ್ವಂ ದೇವಿ ಚಾಮುಂಡೇ ಜಯ ಭೂತಾರ್ತಿಹಾರಿಣಿ |
ಜಯ ಸರ್ವಗತೇ ದೇವಿ ಕಾಲರಾತ್ರಿ ನಮೋಽಸ್ತುತೇ |
ಅರ್ಥ : ದುರ್ಗಾ, ಕ್ಷಮಾ, ಶಿವಾ ಧಾತ್ರಿ, ಚಾಮುಂಡಾ, ಭೂತಾರ್ತಿಹಾರಿಣಿ, ಕಾಲರಾತ್ರಿ ದೇವಿ ನಿಮಗೆ ನಮಸ್ಕಾರಗಳಿರಲಿ.

ಬ್ರಿಟಿಷರ ಕಾಲದಿಂದಲೂ ಸೈನ್ಯದಲ್ಲಿ ನರ್ಸ್ ಇತ್ಯಾದಿ ಹುದ್ದೆಗಳಲ್ಲಿ ಮಹಿಳೆಯರು ಇದ್ದರು. ೧೯೪೮ ರಲ್ಲಿ ಭಾರತೀಯ ಸೇನೆಯಲ್ಲಿ ಮಹಿಳೆಯರನ್ನು ಇತರ ಹುದ್ದೆಗಳಿಗೆ ಸೇರಿಸಿಕೊಳ್ಳಲಾಯಿತು ಮತ್ತು ೧೯೯೨ ರ ನಂತರ ಅವರಿಗೆ ವ್ಯಾಪಕ ಸೇನಾ ತರಬೇತಿ ಹಾಗೂ ಸೈನ್ಯದಲ್ಲಿನ ಹುದ್ದೆಗಳನ್ನು ನೀಡಲು ಪ್ರಾರಂಭಿಸಲಾಯಿತು. ೨೦೧೩ ರಿಂದ ವಾಯುಸೇನೆಯಲ್ಲಿ ಶೇ. ೧೩ ಮತ್ತು ನೌಕಾದಳದಲ್ಲಿ ಶೇ. ೬ ಮಹಿಳಾ ಅಧಿಕಾರಿಗಳಿದ್ದಾರೆ. ಮೇ ೨೦೨೩ ರಲ್ಲಿ ವಾಯುಸೇನೆಯಲ್ಲಿ ೨೭೩ ಮಹಿಳಾ ತುಕಡಿ ಮತ್ತು ಮಾರ್ಚ್ ೨೦೨೪ ರಲ್ಲಿ ನೌಕಾಪಡೆಗೆ ೧೫೩ ಮಹಿಳಾ ತುಕಡಿಗಳನ್ನು ಸೇರಿಸಲಾಯಿತು. ಈ ಸಂಪ್ರದಾಯವು ಸುಭಾಷಚಂದ್ರ ಬೋಸ್ ಅವರ ಆಜಾದ ಹಿಂದ್ ಸೇನೆಯ ಮಹಿಳಾ ತುಕಡಿಯಿಂದ ಪ್ರಾರಂಭವಾಯಿತು. ಡಾ. ಲಕ್ಷ್ಮಿ ಸೆಹಗಲ್ ಅವರು ಮೊದಲ ಮಹಿಳಾ ಕ್ಯಾಪ್ಟನ್ ಆಗಿದ್ದರು ಮತ್ತು ಅವರ ತುಕಡಿಯು ಈ ಸೇನೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿತು. ಇದರಲ್ಲಿಯೇ, ಸಿಪಾಯಿ ನೀರಾ ಆರ್ಯ ಅವರು ಭಾರತದ ಮೊದಲ ಮಹಿಳಾ ಗೂಢಚಾರಿಯಾಗಿದ್ದರು. ನೀರಾ ಅವರ ಪತಿ ಬ್ರಿಟಿಷರ ಪಕ್ಷ ಸೇರಿದ್ದರು ಮತ್ತು ಬ್ರಿಟಿಷರು ಅವರಿಗೆ ಸುಭಾಷ್ ಬಾಬು ಅವರನ್ನು ಕೊಲ್ಲುವ ಜವಾಬ್ದಾರಿಯನ್ನು ನೀಡಿದ್ದರು. ಅವರು ಸುಭಾಷ್ ಬಾಬು ಅವರ ಮೇಲೆ ಗುಂಡು ಹಾರಿಸಿದರು, ಅದು ಅವರ ಚಾಲಕನಿಗೆ ತಗುಲಿತು. ಆಗ ನೀರಾ ಅವರು ತಮ್ಮ ಪತಿಯ ಹೊಟ್ಟೆಗೆ ಚಾಕುವನ್ನು ತಿವಿದು ಸುಭಾಷ ಬಾಬು ಅವರ ಪ್ರಾಣವನ್ನು ಉಳಿಸಿದರು. ರಾಷ್ಟ್ರಕ್ಕಾಗಿ ಶತ್ರುಗಳ ಜೊತೆ ಸೇರಿದ ಪತಿಯನ್ನು ಕೊಲ್ಲಲು ಸಹ ಅವರು ಹಿಂದೇಟು ಹಾಕಲಿಲ್ಲ ! ನಂತರ ಸುಭಾಷ ಬಾಬು ಅವರ ವಿಳಾಸವನ್ನು ಹೇಳುವಂತೆ ಒತ್ತಾಯಿಸಲು ಬ್ರಿಟಿಷರು ಅವರನ್ನು ಅಂಡಮಾನ್ ಜೈಲಿನಲ್ಲಿ ಇಟ್ಟು ತೀವ್ರ ಹಿಂಸೆ ಕೊಟ್ಟರು. ಅವರನ್ನು ಸರಪಳಿಗಳಿಂದ ಕಟ್ಟಿಹಾಕಲಾಗುತ್ತಿತ್ತು. ಅವರ ಒಂದು ಸ್ತನವನ್ನು ಕತ್ತರಿಸಲಾಯಿತು; ಆದರೆ ಅವರು ಚಕಾರ ಶಬ್ದವನ್ನು ಆಡಲಿಲ್ಲ. ಸ್ವಾತಂತ್ರ್ಯಾನಂತರ ಅವರು ಹೂವುಗಳನ್ನು ಮಾರಿ ತಮ್ಮ ಉಳಿದ ಜೀವನವನ್ನು ಕಳೆದರು, ಇದು ಮತ್ತೊಂದು ದುರ್ದೈವ. ೧೯೯೮ ರಲ್ಲಿ ಅವರ ನಿಧನವಾಯಿತು.
ಈ ಎಲ್ಲ ವೀರ ಮಹಿಳೆಯರ ಮೂಲವೇ ರಾಣಿ ಪದ್ಮಿನಿ, ರಾಣಿ ಚೆನ್ನಮ್ಮ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ! ಇವರೆಲ್ಲರ ಬಳಿಯೂ ಮಹಿಳಾ ಸೈನ್ಯವಿತ್ತು, ಅಂದರೆ ಮಹಿಳೆಯರು ಸೈನಿಕ ತರಬೇತಿಯನ್ನು ಪಡೆಯುವ ಸಂಪ್ರದಾಯವಿತ್ತು. ಪೇಶ್ವೆಯವರ ಪತ್ನಿಯರು ಸಹ ಯುದ್ಧ ಕೌಶಲ್ಯದಲ್ಲಿ ಪ್ರವೀಣರಾಗಿದ್ದರು ಮತ್ತು ಯುದ್ಧದಲ್ಲಿ ಭಾಗವಹಿಸಿದ್ದರು. ಈ ವೀರ ಮಹಿಳೆಯರ ಮೂಲವು ಅಸುರರನ್ನು ಸಂಹರಿಸಲು ಮೇಲಿಂದ ಮೇಲೆ ವಿವಿಧ ಅವತಾರಗಳನ್ನು ತಾಳಿರುವ ದುರ್ಗಾದೇವಿ ಮತ್ತು ರಣಚಂಡಿ ಕಾಳಿ ಮಾತೆ. ಸಪ್ತಶೃಂಗಿ ದೇವಿಯು ಶಸ್ತ್ರಗಳನ್ನು ಹಿಡಿಯಲು ೧೮ ಕೈಗಳನ್ನು ಪಡೆದಿದ್ದಳು. ದಶಭುಜ ಕಾಳಿ ಮಾತೆಯ ಭಯಾನಕ ರೂಪವು ಎಲ್ಲರಿಗೂ ಪರಿಚಿತವಾಗಿದೆ. ಇವೆಲ್ಲವುಗಳಿಂದ ಒಂದೇ ಪಾಠವನ್ನು ಕಲಿಯಬೇಕು. ಯುವತಿಯರು ಮತ್ತು ಮಹಿಳೆಯರು ತಮ್ಮ ಕ್ಷಾತ್ರತೇಜವನ್ನು ನಿರಂತರವಾಗಿ ಜಾಗೃತವಾಗಿರಿಸಿಕೊಳ್ಳಬೇಕು ಮತ್ತು ಅದಕ್ಕಾಗಿ ಆದಿಶಕ್ತಿಯ ಉಪಾಸನೆಯನ್ನು ಮಾಡಬೇಕು !
– ಸೌ. ರೂಪಾಲಿ ಅಭಯ ವರ್ತಕ, ಸನಾತನ ಆಶ್ರಮ, ದೇವದ, ಪನವೇಲ
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು