
ಅಲಂಕರಿಸಿರುವ ಆನೆಯ ಮೇಲಿನ ಅಂಬಾರಿಯಲ್ಲಿಹೊರಡುವ ದೇವಿ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ಭಾರತದಲ್ಲಿ ಎಲ್ಲೆಡೆ ದಸರಾ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ; ಆದರೆ ೧೦ ದಿನ ಆಚರಿಸಲಾಗುವ ಮೈಸೂರಿನ ದಸರಾ ಉತ್ಸವವು ‘ನಾಡಹಬ್ಬ’ ಎಂದರೆ ರಾಜ್ಯೋತ್ಸವ ಎಂದು ಪ್ರವಾಸೋದ್ಯಮದ ನಕ್ಷೆಯಲ್ಲಿ ಸ್ಥಾನ ಪಡೆದಿದೆ. ದಸರಾದ ಈ ಉತ್ಸವ ಆರಂಭವಾಗಿರುವುದು, ಅದು ೧೪ ನೇಯ ಶತಮಾನದ ವಿಜಯನಗರ ಸಾಮ್ರಾಜ್ಯದ ಸಮಯದಲ್ಲಿ ! ರಾಜವೈಭವದ ದಸರಾದ ಈ ಸಮಾರಂಭ ಅತ್ಯಂತ ಆಕರ್ಷಕ ಮತ್ತು ಅದ್ಭುತವಾಗಿರುತ್ತದೆ. ಅಲಂಕರಿಸಿರುವ ಆನೆಯ ಮೇಲಿರುವ ಅಂಬಾರಿಯಲ್ಲಿ ಹೊರಡುವ ಕಣ್ಣುಗಳನ್ನು ತೃಪ್ತಗೊಳಿಸುವ ದೇವಿ ಚಾಮುಂಡೇಶ್ವರಿಯ ನಯನಮನೋಹರ ಮೆರವಣಿಗೆ, ವಿದ್ಯುತ್ ದೀಪಗಳ ಅಲಂಕಾರದಲ್ಲಿ ಬೆಳಗುವ ಮೈಸೂರಿನ ಅರಮನೆ ಮತ್ತು ಇತರ ಕಟ್ಟಡಗಳು ಈ ಸಮಾರಂಭ ನೋಡಲು ಜಗತ್ತಿನಾದ್ಯಂತದ ಪ್ರವಾಸಿಗರು ಬರುತ್ತಾರೆ.
ನಯನಮನೋಹರ ‘ಜಂಬೂಸವಾರಿ’ !
ಅಲಂಕರಿಸಿರುವ ಕುದುರೆಗಳು, ಆನೆಗಳು, ಒಂಟೆಗಳು ಮತ್ತು ಬಣ್ಣ ಬಣ್ಣದ ರೇಶ್ಮೆ ಬಟ್ಟೆಯನ್ನು ತೊಟ್ಟಿರುವ ಹಾಗೂ ಅಲಂಕಾರ ಮಾಡಿಕೊಂಡಿರುವ ಜನರು. ಹೀಗೆ ಈ ಮೆರವಣಿಗೆಯ ಆಕರ್ಷಣೆ ಎಂದರೆ ಸೊಂಡಿಲು ಮತ್ತು ಬೆನ್ನು ಮೇಲೆ ಭರ್ಜರಿ ವಸ್ತ್ರದಿಂದ ಅಲಂಕರಿಸಿರುವ ಆನೆಯ ಮೇಲಿನ ೨೫೦ ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿನ ಚಾಮುಂಡೇಶ್ವರಿಯ ಭವ್ಯ ಮತ್ತು ಮಂಗಳ ಅಲಂಕಾರ ಮಾಡಿರುವ ಮೂರ್ತಿ !
ಮೈಸೂರಿನ ಚಾಮುಂಡಿ ಬೆಟ್ಟದ ಮೇಲಿನ ಚಾಮುಂಡೇಶ್ವರಿಯ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ದೇವಿಯ ಪೂಜೆಯೊಂದಿಗೆ ಉತ್ಸವ ಆರಂಭವಾಗುತ್ತದೆ. ದೇವಿಯ ಮೂರ್ತಿ ಅಂಬಾರಿಯಲ್ಲಿ ಇಡುವ ಮೊದಲು ಒಡೆಯರ ಮನೆತನದ ರಾಜ ದಂಪತಿಗಳಿಂದ ದೇವಿಯ ವಿಧಿವತ್ತಾದ ಪೂಜೆ ನಡೆಯುತ್ತದೆ. ಮೆರವಣಿಗೆಯು ಮೈಸೂರು ಅರಮನೆಯಿಂದ ಪ್ರಾರಂಭವಾಗುತ್ತದೆ. ಶಮಿವೃಕ್ಷದ ಹತ್ತಿರ ಈ ಮೆರವಣಿಗೆಯು ಮುಕ್ತಾಯವಾಗುತ್ತದೆ. ಈ ವೃಕ್ಷದ ಹತ್ತಿರ ಭವ್ಯವಾದ ಮಂಟಪ ನಿರ್ಮಿಸಿರುತ್ತಾರೆ. ಅದಕ್ಕೆ ‘ಬನ್ನಿಮಂಟಪ’ ಎಂದು ಕರೆಯುತ್ತಾರೆ.ಈ ಮಂಟಪದಲ್ಲಿ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಪೂಜೆ ನಡೆಯುತ್ತದೆ. ಪಂಜಿನ ಮೆರವಣಿಗೆ ನಡೆಯುತ್ತದೆ. ದಸರಾದ ದಿನದಂದು ಸಂಜೆ ಮೈಸೂರಿನ ಅರಮನೆಯು ಲಕ್ಷಾಂತರ ದೀಪಗಳ ಅಲಂಕಾರದಲ್ಲಿ ಪ್ರಕಾಶಿಸುತ್ತದೆ.ಅರಮನೆಯ ಎದುರಿನ ಮೈದಾನದಲ್ಲಿ ಭವ್ಯ ಪ್ರದರ್ಶನ ನಡೆಸಲಾಗುತ್ತದೆ. ಅನೇಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತದೆ. ವಿವಿಧ ರಾಜ್ಯಗಳಲ್ಲಿನ ಗಾಯಕರು, ವಾದ್ಯಗಾರರು, ನೃತ್ಯ ಕಲಾವಿದರಿಗೆ ಕಲೆಯನ್ನು ಪ್ರಸ್ತುತಪಡಿಸಲು ಅವಕಾಶ ದೊರೆಯುತ್ತದೆ.
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು