‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವರು) ಇವರು ಹಿಂದೂ ರಾಷ್ಟ್ರದ (ಈಶ್ವರೀ ರಾಜ್ಯದ) ಸ್ಥಾಪನೆಯ ಮಹಾನ ಕಾರ್ಯವನ್ನು ಮಾಡುತ್ತಿದ್ದಾರೆ. ಗುರುದೇವರ ದೇವರಮಂಟಪದಲ್ಲಿ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಇಡಲಾಗಿದೆ. ಗುರುದೇವರು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ದೇವರಮಂಟಪದಲ್ಲಿನ ದೇವತೆಗಳಿಗೆ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ್ ಸಮಷ್ಟಿ ಕಾರ್ಯದಲ್ಲಿ ದೇವತೆಗಳು ಗುರುದೇವರಿಗೆ ಸಹಾಯ ಮಾಡುತ್ತಾರೆ. ಗುರುದೇವರಲ್ಲಿರುವ ಭಕ್ತಿಯಿಂದ ದೇವತೆಗಳ ಚಿತ್ರಗಳಲ್ಲಿ ಸೂಕ್ಷ್ಮದಿಂದಾದ ಒಳ್ಳೆಯ ಬದಲಾವಣೆ ಸ್ಥೂಲದಲ್ಲಿಯೂ ಕಾಣಿಸುತ್ತದೆ. ದೇವತೆಗಳ ಚಿತ್ರಗಳಲ್ಲಿನ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿಯ ಸ್ಪಂದನಗಳ ಪ್ರಮಾಣದಲ್ಲಿಯೂ ಮೂಲ ಚಿತ್ರಗಳನ್ನು ಹೋಲಿಸಿದರೆ ಬದಲಾವಣೆಯಾಗಿದೆ. ಈ ಲೇಖನದಿಂದ ನಾವು ಗುರುದೇವರ ದೇವರಮಂಟಪದಲ್ಲಿನ ಸನಾತನ-ನಿರ್ಮಿತ ಶ್ರೀ ಸರಸ್ವತಿದೇವಿಯ ಚಿತ್ರದ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ. ಮೊದಲು ಪಕ್ಕದಲ್ಲಿರುವ ಶ್ರೀ ಸರಸ್ವತಿದೇವಿಯ ಛಾಯಾಚಿತ್ರಗಳ ಕಡೆಗೆ ನೋಡಿ ಸೂಕ್ಷ್ಮ-ಪ್ರಯೋಗ ಮಾಡಬೇಕು.
೧. ಸೂಕ್ಷ್ಮ-ಪ್ರಯೋಗ

೨. ಸೂಕ್ಷ್ಮ-ಪ್ರಯೋಗದ ಉತ್ತರ
ಶ್ರೀ ಸರಸ್ವತಿದೇವಿಯ ಮೂಲಚಿತ್ರವನ್ನು ನೋಡಿದಾಗ ಮುಖ್ಯವಾಗಿ ಶಕ್ತಿಯ ಸ್ಪಂದನಗಳ ಅರಿವಾಗುತ್ತದೆ.ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರ ಮಂಟಪದಲ್ಲಿನ ಶ್ರೀ ಸರಸ್ವತಿದೇವಿಯ ಚಿತ್ರದ ಕಡೆಗೆ ನೋಡಿ ಮುಖ್ಯವಾಗಿ ಆಧ್ಯಾತ್ಮಿಕ ಭಾವದ ಸ್ಪಂದನಗಳ ಅರಿವಾಗುತ್ತದೆ.

೩. ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆಯವರ ದೇವರಮಂಟಪದಲ್ಲಿನ ಶ್ರೀ ಸರಸ್ವತಿದೇವಿಯ ಚಿತ್ರದಲ್ಲಾದ ಬದಲಾವಣೆ
ಹಿಂದೂ ರಾಷ್ಟ್ರವು ಬೇಗನೇ ಬರಬೇಕೆಂದು ಗುರುದೇವರು ಅತ್ಯಂತ ತಳಮಳದಿಂದ ದೇವತೆಗಳ ಬಳಿ ಪ್ರಾರ್ಥನೆ ಮಾಡುತ್ತಾರೆ. ಗುರುದೇವರ ದೇವತೆಗಳ ಬಗ್ಗೆ ಇರುವ ಭಕ್ತಿಭಾವದಿಂದ ಅವರ ದೇವರಮಂಟಪದಲ್ಲಿರುವ ಶ್ರೀ ಸರಸ್ವತಿದೇವಿಯ ಚಿತ್ರವು ನೀಲಿ ಛಾಯೆಯಿಂದ ತುಂಬಿದೆ. ನೀಲಿ ಬಣ್ಣವು ಭಾವಭಕ್ತಿಯ ದರ್ಶಕವಾಗಿದೆ. ಶ್ರೀ ಸರಸ್ವತಿದೇವಿಯು ವಿದ್ಯೆ ಮತ್ತು ಜ್ಞಾನದ ದೇವತೆಯಾಗಿದ್ದಾಳೆ.’
೪. ಸನಾತನ-ನಿರ್ಮಿತ ಶ್ರೀ ಸರಸ್ವತಿದೇವಿಯ ಮೂಲ ಚಿತ್ರ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಮಂಟಪದಲ್ಲಿನ ಶ್ರೀ ಸರಸ್ವತಿದೇವಿಯ ಚಿತ್ರ ಇವುಗಳಲ್ಲಿನ ವಿವಿಧ ಸ್ಪಂದನಗಳ ಪ್ರಮಾಣ (ಶೇ.)

ಇಲ್ಲಿ ನೀಡಲಾದ ಕೋಷ್ಟಕದ ಆಧಾರದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ (ಗುರುದೇವರ) ದೇವರಮಂಟಪದಲ್ಲಿನ ಶ್ರೀ ಸರಸ್ವತಿದೇವಿಯ ಚಿತ್ರದ ಸಂದರ್ಭದಲ್ಲಿ ಮುಂದಿನ ಅಂಶಗಳು ಗಮನಕ್ಕೆ ಬರುತ್ತವೆ.

೫. ಅ. ಆಧ್ಯಾತ್ಮಿಕ ಭಾವದ ಸ್ಪಂದನಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಮಂಟಪದಲ್ಲಿನ ಶ್ರೀ ಸರಸ್ವತಿದೇವಿಯ ಚಿತ್ರದಲ್ಲಿನ ಶಕ್ತಿಯ ಸ್ಪಂದನಗಳು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿ ಆಧ್ಯಾತ್ಮಿಕ ಭಾವದ ಸ್ಪಂದನಗಳು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿವೆ. ಇದು ಗುರುದೇವರಲ್ಲಿರುವ ಭಕ್ತಿಭಾವದಿಂದ ಸಾಧ್ಯವಾಗಿದೆ.
೬. ಆ. ಸಗುಣ-ನಿರ್ಗುಣ ತತ್ತ್ವವು ಇದ್ದಷ್ಟೇ ಇರುವುದು : ಶ್ರೀ ಸರಸ್ವತಿದೇವಿಯ ಚಿತ್ರದಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಆದುದರಿಂದ ಚಿತ್ರದಲ್ಲಿನ ಸಗುಣ-ನಿರ್ಗುಣ ತತ್ತ್ವವು ಇದ್ದಷ್ಟೇ ಇದೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ (ರಸಾಯನಶಾಸ್ತ್ರದಲ್ಲಿ ಪಿಎಚ್.ಡಿ., ಮುಂಬಯಿ ವಿಶ್ವವಿದ್ಯಾಲಯ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೪.೨೦೨೫)
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ