ಪರಂಪರೆ, ಇತಿಹಾಸ ಮತ್ತು ಮಹತ್ವ !
ಪುರಾಣಗಳ ಪ್ರಕಾರ, ‘ಆಶ್ವಯುಜ ಶುಕ್ಲ ದಶಮಿಯಂದು ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ ‘ವಿಜಯ’ ಎಂಬ ಹೆಸರಿನ ಮುಹೂರ್ತವಿರುತ್ತದೆ, ಆ ಸಮಯದಲ್ಲಿ ಕೈಗೊಂಡ ಯಾವುದೇ ಕೆಲಸಕ್ಕೆ ಯಶಸ್ಸು ಸಿಗುತ್ತದೆ’, ಎಂದು ಹೇಳಲಾಗಿದೆ. – ಶ್ರೀ. ವಿವೇಕ ಭೋರ (ಆಧಾರ : ದೈನಿಕ ‘ನವರಾಷ್ಟ್ರ’)

ಆಶ್ವಯುಜ ಶುಕ್ಲ ದಶಮಿಯನ್ನು ‘ವಿಜಯದಶಮಿ’ ಅಥವಾ ‘ದಸರಾ’ ಎಂದು ಕರೆಯುತ್ತಾರೆ. ಆಶ್ವಯುಜ ಶುಕ್ಲ ಪ್ರತಿಪದೆಯಿಂದ ನವಮಿಯವರೆಗೆ ದೇವಿಯ ನವರಾತ್ರಿ ಇರುತ್ತದೆ. ಇದರ ಮುಕ್ತಾಯ ಈ ದಿನದಂದು ಆಗುತ್ತದೆ. ಶುಂಭ-ನಿಶುಂಭ, ರಕ್ತಬೀಜ ಮತ್ತು ಮಹಿಷಾಸುರ ಎಂಬ ರಾಕ್ಷಸರನ್ನು ಸಂಹರಿಸಲು ದುರ್ಗೆಯು ಚಂಡಿಯ ಅವತಾರವನ್ನು ತಾಳಿ ೯ ದಿನಗಳ ಕಾಲ ಈ ರಾಕ್ಷಸರೊಂದಿಗೆ ಯುದ್ಧ ಮಾಡಿದಳು. ದಶಮಿಯಂದು ಮಹಿಷಾಸುರನನ್ನು ವಧಿಸಿ, ಅಂತಿಮ ವಿಜಯವನ್ನು ಸಾಧಿಸಿದ್ದರಿಂದ ಈ ದಿನ ಆನಂದೋತ್ಸವವನ್ನು ಆಚರಿಸುತ್ತಾರೆ.
ಕೌತ್ಸನಿಗೆ ೧೪ ಕೋಟಿ ಚಿನ್ನದ ನಾಣ್ಯಗಳನ್ನು ನೀಡಲು ರಘುರಾಜನು ಕುಬೇರನ ಮೇಲೆ ಯುದ್ಧ ಸಾರಿದನು. ಅದರಿಂದ ಭಯಗೊಂಡ ಕುಬೇರನು ಅದೇ ದಿನ ಬನ್ನಿ ಗಿಡದ ಮೇಲೆ ಚಿನ್ನದ ನಾಣ್ಯಗಳ ಮಳೆಯನ್ನು ಸುರಿಸಿದನು. ರಘುರಾಜನು ಕೌತ್ಸನಿಗೆ ಅಗತ್ಯವಿದ್ದಷ್ಟು ಚಿನ್ನವನ್ನು ನೀಡಿ ಉಳಿದದ್ದನ್ನು ನಾಗರಿಕರಿಗೆ ತೆಗೆದುಕೊಂಡು ಹೋಗಲು ಹೇಳಿದನು. ನಾಗರಿಕರು ತಮಗೆ ಬೇಕಾದಷ್ಟು ಚಿನ್ನದ ನಾಣ್ಯಗಳನ್ನು ತೆಗೆದುಕೊಂಡರು. ಇದಕ್ಕೇ ‘ಬಂಗಾರ ಹಂಚುವುದು’ ಎನ್ನುತ್ತಾರೆ. ರಾಜಾ ರಘು ಅದರಿಂದ ಒಂದೂ ನಾಣ್ಯ ತೆಗೆದುಕೊಳ್ಳಲಿಲ್ಲ; ಏಕೆಂದರೆ ಅವನು ಎಲ್ಲವನ್ನು ತ್ಯಜಿಸಿ ಸನ್ಯಾಸ ಆಶ್ರಮವನ್ನು ಸ್ವೀಕರಿಸಿರುತ್ತಾನೆ. ಇದು ಸ್ಕಂದಪುರಾಣದಲ್ಲಿದೆ. ಸಾಮಾನ್ಯವಾಗಿ ತ್ರೇತಾಯುಗದಿಂದ ಆಚರಿಸಲಾಗುವ ದಸರಾಕ್ಕೆ ಹಿಂದೂ ಧರ್ಮದಲ್ಲಿ ಅಪಾರ ಮಹತ್ವವಿದೆ.ಇದೇ ದಿನ ಭಗವಾನ ರಾಮನ ಪೂರ್ವಜ ಮತ್ತು ಅಯೋಧ್ಯೆಯ ರಾಜಾ ರಘುವು ವಿಶ್ವಜಿತ ಯಜ್ಞ ಮಾಡಿದ್ದನು. ಅಂದಿನಿಂದ ಅಂದರೆ ತ್ರೇತಾಯುಗದಿಂದ ಹಿಂದೂಗಳು ವಿಜಯದಶಮಿಯನ್ನು ಆಚರಿಸುತ್ತಾರೆ. ಈ ದಿನ ಭಗವಾನ ಶ್ರೀರಾಮನು ರಾವಣನನ್ನು ಸಂಹರಿಸಿದ್ದನು, ಅಂದಿನಿಂದ ಈ ದಿನವನ್ನು ವಿಜಯೋತ್ಸವ ಅಂದರೆ ವಿಜಯ ದಶಮಿ ಎಂದು ಆಚರಿಸಲಾಗುತ್ತದೆ. ಇದು ವಿಜಯಕ್ಕೆ ಪ್ರೇರಣೆ ನೀಡುವ ಹಬ್ಬವಾಗಿದೆ.
– ಶ್ರೀ. ವಿವೇಕ ಭೋರ (ಆಧಾರ : ದೈನಿಕ ‘ನವರಾಷ್ಟ್ರ’)
|| ಶ್ರೀ ರಾಜಮಾತಂಗಿ ಮಹಾಯಾಗ ||
ಶ್ರೀ ಸೋಮನಾಥ ದೇವಸ್ಥಾನದ ಶಿಖರದ ಮೇಲೆ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಗಾಡಗೀಳರವರು ಪೂಜಿಸಿದ ಧರ್ಮಧ್ವಜದ ಆರೋಹಣ !
ಮಹಾಕವಿ ಕಾಳಿದಾಸರು ಮಾಡಿರುವ ರಾಜಮಾತಂಗೀ ದೇವಿಯ ವರ್ಣನೆ
ಶ್ರೀ ರಾಜಮಾತಂಗಿ ಮಹಾಯಜ್ಞ !
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಆರ್ಥಿಕ ಶಿಸ್ತು