ಪಿತೃಪಕ್ಷದ ನಿಮಿತ್ತ…

ಶ್ರಾದ್ಧಾದಿ ಕರ್ಮಗಳನ್ನು ವಿರೋಧಿಸುವುದು, ಅದರ ಹಿಂದಿನ ನಿಲುವನ್ನು ದುರ್ಲಕ್ಷಿಸುವುದು ಮತ್ತು ಬೇರೆ-ಬೇರೆ ಸ್ಮರಣದಿನಗಳನ್ನು, ಜಯಂತಿಗಳನ್ನು ಆಚರಿಸುವಲ್ಲಿ ಉತ್ಸಾಹದಿಂದ ಭಾಗವಹಿಸುವುದು, ಇದ್ಯಾವ ಬುದ್ಧಿವಾದ ? ವಿವಿಧ ಸನ್ಮಾನ ಸಮಾರಂಭಗಳು, ಪದವಿ ಪ್ರಶಸ್ತಿಗಳ ವಿತರಣೆ, ರಜತ ಮಹೋತ್ಸವ, ಸುವರ್ಣ ಮಹೋತ್ಸವ, ವಜ್ರ ಮಹೋತ್ಸವ, ಅಮೃತ ಮಹೋತ್ಸವ, ಕ್ರಾಂತಿದಿನ ಇವುಗಳ ನಿಮಿತ್ತ ನಡೆಯುವ ವಿವಿಧ ಕಾರ್ಯಕ್ರಮಗಳು, ಶೋಭಾಯಾತ್ರೆಗಳು, ಚರ್ಚಾಗೋಷ್ಠಿಗಳು, ವ್ಯಾಖ್ಯಾನಸರಣಿಗಳು, ಇವೆಲ್ಲ ವಿಭಿನ್ನ ರೀತಿಯ ಕರ್ಮಕಾಂಡಗಳು, ಶ್ರಾದ್ಧ ಮತ್ತು ತರ್ಪಣಗಳಲ್ಲವೇ ?

ತದ್ವಿರುದ್ಧ ಇವೆಲ್ಲಾ ಕಾರ್ಯಗಳು ಹೆಚ್ಚು ದುಬಾರಿ, ಸಮಯ ಮತ್ತು ಸ್ಥಳದ ವ್ಯರ್ಥ, ಭ್ರಷ್ಟಾಚಾರದಿಂದ ಕೂಡಿದ ಮತ್ತು ಪರಸ್ಪರ ದ್ವೇಷವನ್ನು ಹೆಚ್ಚಿಸುವಂತಹವು, ಹೀಗೆ ಇವೆಲ್ಲ ಕೆಲಸಗಳಿವೆ. ಈ ಎಲ್ಲ ಸಮಾರಂಭಗಳ ಸಂದರ್ಭದಲ್ಲಿ ಗುಂಡಾಗಿರಿ (ಗಲಭೆ) ನಡೆಯುತ್ತದೆ ಅದು ಮತ್ತೊಂದು ವಿಷಯ.ಮನೆಮನೆಗಳಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ ಶ್ರಾದ್ಧಾದಿ ಕರ್ಮಕಾಂಡಗಳು ಆಧುನಿಕ ಸಮಾರಂಭದ ಶ್ರಾದ್ಧಗಳಿಗಿಂತ ಎಷ್ಟೋ ಪಟ್ಟು ಸರಳ ಮತ್ತು ಸಾತ್ತ್ವಿಕವಾಗಿದ್ದವು. ಅವು ಕೃತಜ್ಞತೆಯಂತಹ ಉನ್ನತ ಭಾವನೆಯನ್ನು ಪೋಷಿಸುತ್ತಿದ್ದವು. ಕೌಟುಂಬಿಕ ಸದ್ಭಾವನೆಯನ್ನು ಕಾಪಾಡುತ್ತಿದ್ದವು ಮತ್ತು ಹೆಚ್ಚಿಸುತ್ತಿದ್ದವು ಮತ್ತು ಪ್ರತಿಯೊಂದು ಮನೆಯಲ್ಲಿ ಇಂತಹ ಕಾರ್ಯಗಳು ನಡೆಯುತ್ತಿದ್ದುದರಿಂದ ‘ನಾವೆಲ್ಲರೂ ಒಂದೇ, ಸಂಪ್ರದಾಯದ ಭಾಗವಾಗಿದ್ದೇವೆ, ಪರಸ್ಪರರ ಸಮಾಜ ಬಂಧುಗಳಾಗಿದ್ದೇವೆ’, ಎಂಬ ಭಾವನಿಕ ಐಕ್ಯತೆ ತಿಳಿದೋ ಅಥವಾ ತಿಳಿಯದೆಯೋ ಪ್ರತಿಯೊಬ್ಬರ ಹೃದಯದಲ್ಲಿ ಜಾಗೃತವಾಗುತ್ತದೆ. ಸಂಪ್ರದಾಯಗಳನ್ನು ಯಥಾವತ್ತಾಗಿ ಕಾಪಾಡಿಕೊಳ್ಳುವ ಮಹತ್ವ ಇದಾಗಿದೆ.
– ಪ.ಪೂ. ಸ್ವಾಮಿ ವರದಾನಂದ ಭಾರತಿ (ಆಧಾರ : ‘ವರದವಾಣಿ’)
ಯುವಕರ ಸದ್ಯದ ಸ್ಥಿತಿ ಮತ್ತು ಅವರನ್ನು ಸಬಲೀಕರಣಗೊಳಿಸುವ ಅನಿವಾರ್ಯತೆ !
ಆನ್ಲೈನ್ ಗೇಮಿಂಗ್ : ದಾರಿ ತಪ್ಪಿಸುವ ಹೊಸ ಅಸ್ತ್ರ
ಯುವ ಪೀಳಿಗೆಯ ಅವಾಸ್ತವಿಕ ಅಪೇಕ್ಷೆಗಳಿಂದ ಅಸ್ಥಿರಗೊಂಡಿರುವ ವಿವಾಹ ವ್ಯವಸ್ಥೆ !
‘ಜೀವುತ್ತಮ ವಿದ್ಯಾಪೀಠ’ : ಭಾರತೀಯ ಜ್ಞಾನ ಪರಂಪರೆಯ ಆಧುನಿಕ ಪುನರುಜ್ಜೀವನ!
೧೨ ಸೂರ್ಯನಮಸ್ಕಾರಗಳಿಂದ ಸಾಧಕನ ೪ ಕುಂಡಲಿನಿ ಚಕ್ರಗಳು ಈಶ್ವರೀ ತತ್ತ್ವವನ್ನು ಗ್ರಹಿಸಲು ಪೂರಕವಾಗುವುದು
ಎರಡೂವರೆ ಸ್ತರದಲ್ಲಿನ ಯುದ್ಧ ಮತ್ತು ಭಾರತದ ಸಿದ್ಧತೆ !