ಆರೋಗ್ಯಪೂರ್ಣ ಜೀವನಕ್ಕಾಗಿ ವ್ಯಾಯಾಮ – ಭಾಗ ೨೪

ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯ ವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ಮೂಡಿದ್ದರೂ, ವ್ಯಾಯಾಮ ಮಾಡುವ ಪ್ರಮಾಣ ಕಡಿಮೆರುವುದು ಕಂಡುಬರುತ್ತದೆ. ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುತ್ತವೆÉ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲಕಾಯಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಉಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆರಿಸುತ್ತಾರೆ.
ಈ ಅಂಕಣದಿಂದ ನಾವು ವ್ಯಾಯಾಮದ ಬಗ್ಗೆ ಜಾಗರೂಕತೆಯನ್ನು ಮೂಡಿಸಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೂ ವ್ಯಾಯಾಮದ ಬಗ್ಗೆ ಸಂದೇಹ ನಿವಾರಣೆ ಮಾಡಲಿದ್ದೇವೆ. ‘ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವು ದರಿಂದ ದೇಹವು ಶಕ್ತಿಗಾಗಿ ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುತ್ತದೆ’. ಎಂಬುದು ಒಂದು ಕಲ್ಪನೆಯಾಗಿದೆ. ಆದರೆ ಇದು ಕೇವಲ ಅರ್ಧ ಸತ್ಯ. ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡುವುದರಿಂದ ಹೆಚ್ಚು ಕೊಬ್ಬು ಕರಗಿದರೂ (ಕ್ಯಾಲೊರಿ ಬರ್ನ್), ಬೇಗನೆ ಆಯಾಸವಾಗುತ್ತದೆ ಮತ್ತು ವ್ಯಾಯಾಮದ ಒಟ್ಟಾರೆ ಫಲಿತಾಂಶ ಕಡಿಮೆಯಾಗಬಹುದು. ನಮ್ಮ ದೇಹದಲ್ಲಿ ಶಕ್ತಿಗಾಗಿ ಕಾರ್ಬೋಹೈಡ್ರೇಟ್‌ಗಳು ಸುಲಭವಾಗಿ ಲಭ್ಯವಿಲ್ಲದ ಕಾರಣ ಖಾಲಿ ಹೊಟ್ಟೆಯಲ್ಲಿ ವ್ಯಾಯಾಮ ಮಾಡಿದಾಗ ಬೇಗ ಆಯಾಸವಾಗುತ್ತದೆ. ಇದರಿಂದ ವ್ಯಾಯಾಮದ ತೀವ್ರತೆ ಮತ್ತು ಸಮಯ ಕಡಿಮೆಯಾಗುತ್ತದೆ. ಇದರ ಬದಲಾಗಿ, ವ್ಯಾಯಾಮದ ಮೊದಲು ಸಮತೋಲಿತ ಮತ್ತು ಹಗುರವಾದ ತಿಂಡಿ ತಿಂದರೆ, ದೇಹಕ್ಕೆ ಉತ್ತಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಶಕ್ತಿ ದೊರೆಯುತ್ತದೆ. ಸಾಮಾನ್ಯವಾಗಿ, ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್‌ಗಳನ್ನು ಹೊಂದಿರುವ ತಿಂಡಿ, ಹೆಚ್ಚು ಪರಿಣಾಮಕಾರಿಯಾಗಿ ಮತ್ತು ದೀರ್ಘಕಾಲದ ವರೆಗೆ ವ್ಯಾಯಾಮ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಬಯಸುವವರಿಗೆ ಇದು ಮುಖ್ಯವಾಗಿದೆ.
– ಕು. ವೈದೇಹಿ ಶಿಂದೆ, ಭೌತಿಕೋಪಚಾರ (ಫಿಜಿಯೋಥೆರಪಿ) ಅಧ್ಯಯನಕಾರರು, ಫೋಂಡಾ, ಗೋವಾ. (೩೦.೯.೨೦೨೪)
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
‘ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (‘ಪಿ.ಸಿ.ಒ.ಡಿ.’) ಅಥವಾ ‘ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (‘ಪಿ.ಸಿ.ಓ.ಸಿ.’) ಮತ್ತು ಆಯುರ್ವೇದ !
ಏಕಾಗ್ರತೆ ಮತ್ತು ಸಕಾರಾತ್ಮಕವಿದ್ದು ಮಾಡಲಾಗುವ ವ್ಯಾಯಾಮವು ಹೆಚ್ಚು ಗುಣಾತ್ಮಕವಾಗುತ್ತದೆ !
ವೈದ್ಯರ ಚೀಟಿ ಇಲ್ಲದೆ ಇನ್ನು ಮುಂದೆ ಯಾವುದೇ ಸಿರಪ್ ಸಿಗುವುದಿಲ್ಲ !
ಕಳೆದ 12 ವರ್ಷಗಳಲ್ಲಿ ಆರೋಗ್ಯ ಸೇವೆಗಳು ಜನರಿಗೆ ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಮಹತ್ವದ ಕೆಲಸ!
ಕೇರಳದಲ್ಲಿ ಈ ವರ್ಷ ‘ನಿಪಾ’ ವೈರಸ್ ನ ಮೊದಲ ರೋಗಿ ‘ವೆಂಟಿಲೇಟರ್’ನಲ್ಲಿ ! : Nipah Outbreak