
ಯೋಗಾಭ್ಯಾಸವನ್ನು ಮಾಡುವಾಗ ಸಾಧ್ಯವಾದಷ್ಟು ಕಣ್ಣುಗಳನ್ನು ಮುಚ್ಚಬೇಕು ಮತ್ತು ಪ್ರತಿಕ್ಷಣ – ‘ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ | ಪ್ರಣತಃ ಕ್ಷೇಷ ನಾಶಾಯ ಗೋವಿಂದಾಯ ನಮೋ ನಮಃ |’ ಈ ಮಂತ್ರವನ್ನು ಮನಸ್ಸಿನಲ್ಲಿ ನಿರಂತರ ಹೇಳುತ್ತಿರಬೇಕು.
ಯೋಗಾಭ್ಯಾಸ ಮಾಡುವವರಿಗೆ ಸೂಚನೆ
- ಪ್ರತಿದಿನ ಬೆಳಗ್ಗೆ ಸೂರ್ಯೋದಯಕ್ಕೂ ಒಂದು ಗಂಟೆ ಮೊದಲು ಏಳಬೇಕು.
- ಬೆಳಗ್ಗೆ ನಿತ್ಯಕರ್ಮಗಳನ್ನು ಮತ್ತು ಹಲ್ಲುಜ್ಜಿದ ನಂತರ, ಸ್ನಾನ ಮುಂತಾದ ದೈನಂದಿನ ಕಾರ್ಯಗಳನ್ನು ಪೂರ್ಣಗೊಳಿಸುವುದು ಸೂಕ್ತ.
- ಮೂತ್ರ ವಿಸರ್ಜನೆ ಅಥವಾ ಮಲವಿಸರ್ಜನೆಯಂತಹ ಸಂವೇದನೆ ಬರುವಾಗ, ಹೊಟ್ಟೆ ತುಂಬಿದಾಗ ಅಥವಾ ದೇಹದಲ್ಲಿ ಜ್ವರವಿರುವಾಗ ಯೋಗಾಭ್ಯಾಸ ಮಾಡಬಾರದು.
- ಹೆಚ್ಚು ಗಾಳಿ ಬೀಸುವ ಸ್ಥಳದಲ್ಲಿ, ವಿಪರೀತ ಬಿಸಿಲು ಅಥವಾ ಚಳಿಯಿರುವ ಸ್ಥಳದಲ್ಲಿ, ತೆರೆದ ಸ್ಥಳದಲ್ಲಿ ಅಥವಾ ಉಸಿರುಗಟ್ಟುವಂತಹ ಸ್ಥಳದಲ್ಲಿ ಆಸನಗಳ ಅಭ್ಯಾಸ ಮಾಡಬಾರದು.
- ಮೊದಲಿಗೆ ಗುರುದೇವರು ಮತ್ತು ಇಷ್ಟ ದೇವತೆಗಳಿಗೆ ನಮಸ್ಕರಿಸಿ, ‘ಅವರ ಕೃಪೆಯಿಂದಲೇ ಯೋಗಾಭ್ಯಾಸವು ಯಶಸ್ವಿಯಾಗುವುದು’ ಎಂಬ ಶ್ರದ್ದೆ ನಮ್ಮ ಮನಸ್ಸಿನಲ್ಲಿರಬೇಕು.
- ಆಸನ, ಪ್ರಾಣಾಯಾಮಗಳ ಅಭ್ಯಾಸದಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತಿದ್ದರೆ, ಆಸನಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು, ಶೀತಲಿ ಪ್ರಾಣಾಯಾಮದ ಅಭ್ಯಾಸ ಮಾಡಬೇಕು. ‘ಶವಾಸನ’ದ ಅವಧಿಯನ್ನು ಹೆಚ್ಚಿಸಬೇಕು.
- ಯೋಗಾಸನ ಮಾಡುವಾಗ, ಆಸನದ ಪ್ರತಿಯೊಂದು ಕೃತಿ, ಸ್ಥಿತಿ ಮತ್ತು ಗತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಮತ್ತು ಎಷ್ಟು ಸುಲಭವಾಗಿ ಸಾಧ್ಯವೋ ಅಷ್ಟೇ ಅಭ್ಯಾಸ ಮಾಡಬೇಕು.
- ತಮ್ಮ ಮೇಲೆ ಬಲವಂತ ಮಾಡದೆ, ದೇಹವನ್ನು ಅನಗತ್ಯವಾಗಿ ಎಳೆಯದೆ ಮತ್ತು ಮುಖ ಕಿವಚುತ್ತ ಅಥವಾ ಹೆದರಿಕೊಂಡಂತೆ ಮಾಡದೆ, ಸುಲಭವಾಗಿ ಮತ್ತು ಪ್ರಸನ್ನವಾದ ಮುಖಮುದ್ರೆಯಿಂದ ಯೋಗಾಭ್ಯಾಸ ಮಾಡಬೇಕು.
- ೧೪ ಯೋಗಾಭ್ಯಾಸ ಮಾಡಿದ ನಂತರ ೧ ಗಂಟೆಯ ನಂತರ ನೀವು ಊಟ ಮಾಡಬಹುದು. ಊಟ ಮಾಡುವಾಗ ಆಹಾರವನ್ನು ಚೆನ್ನಾಗಿ ಅಗಿದು ತಿನ್ನಬೇಕು.
(ಆಧಾರ: ಮಾಸಿಕ ‘ಯೋಗಪ್ರಕಾಶ’, ಮೇ ೨೦೨೨)
ನಿಧನ ವಾರ್ತೆ
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಎಲ್ಲಾ ಕಾಯಿಲೆಗಳಿಂದ ದೂರವಿರಲು ಊಟ ಮತ್ತು ನೀರು ಕುಡಿಯುವ ನಿಯಮಗಳು !