ಸೂರ್ಯನಮಸ್ಕಾರ ಒಂದು ಪರಿಪೂರ್ಣ ಆಸನ !

ಭಾರತದಲ್ಲಿ ಸೂರ್ಯನಮಸ್ಕಾರ ಮಾಡುವ ಸಂಸ್ಕೃತಿಯೇ ಇದೆ. ನಿಜಕ್ಕೂ ‘ಸೂರ್ಯನಮಸ್ಕಾರವು ಒಂದು ಸರ್ವಾಂಗಾಸನವಾಗಿದೆ (ಸಂಪೂರ್ಣ ದೇಹದ ವ್ಯಾಯಾಮ). ಇದರ ಲಾಭಗಳು ಕೇವಲ ಸ್ನಾಯುಗಳು ಮತ್ತು ಕೀಲುಗಳಿಗೆ ಮಾತ್ರವಲ್ಲ, ದೇಹದ ಬಹುತೇಕ ಎಲ್ಲಾ ಅಂಗಗಳಿಗೂ ಸಿಗುತ್ತವೆ. ‘ಸೂರ್ಯನಮಸ್ಕಾರವನ್ನು ಬೀಜಮಂತ್ರದ ಸಹಿತ ಸೂರ್ಯದೇವನ ವಿವಿಧ ಹೆಸರುಗಳನ್ನು ಉಚ್ಚರಿಸುತ್ತಾ ಮಾಡಿದರೆ ಉಪಾಸನೆ ಹಾಗೂ ವ್ಯಾಯಾಮ ಹೀಗೆ ಎರಡು ಲಾಭವಿದೆ.

ಸೂರ್ಯ ನಮಸ್ಕಾರದ ಲಾಭಗಳು

೧. ಹೃದಯ ಮತ್ತು ಶ್ವಾಸಕೋಶದ ವ್ಯವಸ್ಥೆ ಹೆಚ್ಚು ಕಾರ್ಯಪ್ರವೃತ್ತವಾಗುವುದು

೨. ಸ್ನಾಯುಗಳ ಬಲ ಹೆಚ್ಚಾಗುವುದು

೩. ಕೀಲುಗಳ ಚಲನೆ ಸುಗಮವಾಗಿರುವುದು

೪. ಶ್ವಾಸಕೋಶದ ಕಾರ್ಯಕ್ಷಮತೆ ಸುಧಾರಿಸುವುದು

೫. ಮನಸ್ಸು ಶಾಂತವಾಗಿ ಒತ್ತಡ ಮತ್ತು ಆತಂಕ ಕಡಿಮೆಯಾಗುವುದು

೬. ವಿಶ್ರಾಂತಿ ಸ್ಥಿತಿಯಲ್ಲಿನ ಹೃದಯದ ಬಡಿತ ಮತ್ತು ರಕ್ತದೊತ್ತಡ ಸುಧಾರಿಸುವುದು

೭. ಜೀರ್ಣಕ್ರಿಯೆ ಮತ್ತು ಹೊಟ್ಟೆಯ ಅಂಗಗಳ ಕಾರ್ಯ ಸುಧಾರಿಸುವುದು

೮. ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮತ್ತು ಇನ್ಸುಲಿನ್ ಕಾರ್ಯ ಸುಧಾರಿಸುವುದು

೯. ದೇಹ ಮತ್ತು ಮನಸ್ಸಿನ ಸಮತೋಲನ ಹಾಗೂ ಜಾಗರೂಕತೆ ಹೆಚ್ಚಾಗುವುದು

೧೦. ತೂಕ ಮತ್ತು ಸೊಂಟದ ಸುತ್ತಳತೆ ಕಡಿಮೆ ಆಗಲು ಸಹಾಯವಾಗುವುದು

– ಶ್ರೀ. ನಿಮಿಷ ಮ್ಹಾತ್ರೆ, ಫಿಸಿಯೋಥೆರಪಿಸ್ಟ್ (ಭೌತಿಕೋಪಚಾರ ತಜ್ಞ), ಫೋಂಡಾ, ಗೋವಾ. (೧೫.೧.೨೦೨೬)

ಸೂರ್ಯ ನಮಸ್ಕಾರ ಮಾಡುವಾಗ ಹೇಳುವ ಸೂರ್ಯನ ೧೨ ಹೆಸರುಗಳ ಮಂತ್ರ

೧. ಓಂ ಮಿತ್ರಾಯ ನಮಃ |

೨. ಓಂ ರವಯೇ ನಮಃ |

೩. ಓಂ ಸೂರ್ಯಾಯ ನಮಃ |

೪. ಓಂ ಭಾನವೇ ನಮಃ |

೫. ಓಂ ಖಗಾಯ ನಮಃ |

೬. ಓಂ ಪೂಷ್ಣೇ ನಮಃ |

೭. ಓಂ ಹಿರಣ್ಯಗರ್ಭಾಯ ನಮಃ |

೮. ಓಂ ಮರೀಚಯೇ ನಮಃ |

೯. ಓಂ ಆದಿತ್ಯಾಯ ನಮಃ |

೧೦. ಓಂ ಸವಿತ್ರೇ ನಮಃ |

೧೧. ಓಂ ಅರ್ಕಾಯ ನಮಃ |

೧೨. ಓಂ ಭಾಸ್ಕರಾಯ ನಮಃ |