
ಯೋಗಾಸನಗಳ ಜೊತೆಗೆ ಸರಿಯಾದ ಪ್ರಮಾಣದಲ್ಲಿ (ಸರಿಯಾದ ಸಮಯದಲ್ಲಿ) ಆಹಾರ ಸೇವಿಸುವುದು ಮತ್ತು ನೀರು ಕುಡಿಯುವುದು ಅವಶ್ಯಕವಾಗಿದೆ.
೧. ಊಟಕ್ಕೆ ೩೫ ನಿಮಿಷ ಮೊದಲು ಮತ್ತು ಊಟದ ನಂತರ ೩೫ ನಿಮಿಷಗಳ ವರೆಗೆ ನೀರು ಕುಡಿಯಬಾರದು.
೨. ಊಟ ಮಾಡುವಾಗ ನೀರು ಕುಡಿಯುವುದನ್ನು ತಪ್ಪಿಸಬೇಕು. ಅಗತ್ಯವಿದ್ದರೆ ಅವಶ್ಯಕತೆಗೆ ತಕ್ಕಂತೆ ೧-೨ ಗುಟುಕು ಕುಡಿಯಬಹುದು.
೩. ನೀರು ಕುಡಿಯುವಾಗ ಅತ್ಯಂತ ನಿಧಾನವಾಗಿ, ಸಮಾಧಾನದಿಂದ ಒಂದೊಂದೇ ಗುಟುಕು ತೆಗೆದುಕೊಳ್ಳುತ್ತಾ ಕುಡಿಯಬೇಕು.
೪. ಊಟ ಮಾಡುವಾಗ ಪ್ರತಿಯೊಂದು ತುತ್ತನ್ನು ಚೆನ್ನಾಗಿ ಅಗಿದು ತಿನ್ನಬೇಕು; ಏಕೆಂದರೆ ನಾವು ಎಷ್ಟು ಚೆನ್ನಾಗಿ ಅಗಿದು ತಿನ್ನುತ್ತೇವೆಯೋ, ಆಹಾರವು ಅಷ್ಟೇ ಉತ್ತಮವಾಗಿ ಜೀರ್ಣವಾಗುತ್ತದೆ; ಏಕೆಂದರೆ ಹೊಟ್ಟೆಯಲ್ಲಿ ಹಲ್ಲುಗಳಿರುವುದಿಲ್ಲ.
೫. ಊಟ ಮಾಡುವಾಗ ಹರಟೆ ಹೊಡೆಯುತ್ತಾ ಅಥವಾ ಮೊಬೈಲ್‌ನಲ್ಲಿ ಮಾತನಾಡುತ್ತಾ ಊಟ ಮಾಡಬಾರದು. ಮಾತನಾಡುವಾಗ ಆಹಾರ ಅಗಿಯದೆಯೇ ನುಂಗುತ್ತಾರೆ. ಇದರಿಂದಾಗಿ ಅದು ಜೀರ್ಣವಾಗುವುದಿಲ್ಲ. ಅದರ ಪರಿಣಾಮವಾಗಿ, ಆಹಾರ ದಲ್ಲಿರುವ ಪ್ರೊಟೀನ್ ಮತ್ತು ಜೀವಸತ್ವಗಳು ಸಿಗುವುದಿಲ್ಲ. ಇದರಿಂದ ವಾತ ಹೆಚ್ಚಾಗಿ ಮಲಬದ್ಧತೆ ಉಂಟಾಗುತ್ತದೆ.
೬. ಊಟವಾದ ತಕ್ಷಣ ಮಲಗಬಾರದು, ಬದಲಿಗೆ ೨೦ ನಿಮಿಷಗಳ ಕಾಲ ವಜ್ರಾಸನದಲ್ಲಿ ಕುಳಿತುಕೊಳ್ಳಬೇಕು, ಇದರಿಂದ ಆಹಾರವು ಜೀರ್ಣವಾಗುತ್ತದೆ. ಊಟವಾದ ೪೫ ನಿಮಿಷಗಳ ನಂತರ ಮಲಗಬಹುದು.
೭. ಸ್ನಾನ ಮಾಡಿದ ತಕ್ಷಣ ಊಟ ಮಾಡಬಾರದು; ಏಕೆಂದರೆ ಜೀರ್ಣಕ್ರಿಯೆ ನಡೆಸುವ ಕೋಶಗಳ ತಾಪಮಾನವು ಕಡಿಮೆಯಾಗುವುದರಿಂದ ಅವು ಆಹಾರವನ್ನು ಜೀರ್ಣಿಸಿಕೊಳ್ಳುವುದಿಲ್ಲ. ಇದರಿಂದ ವಾತ ಉಂಟಾಗುತ್ತದೆ ಮತ್ತು ಹೊಟ್ಟೆಯ ಗಾತ್ರ (ದಪ್ಪ) ಹೆಚ್ಚಾಗುತ್ತದೆ. ಊಟ ಮಾಡಿದ ನಂತರ ೧ ಗಂಟೆಯ ವರೆಗೆ ಸ್ನಾನ ಮಾಡಬಾರದು ಅಥವಾ ಸ್ನಾನ ಮಾಡಿದ ೩೦ ನಿಮಿಷಗಳ ನಂತರ ಊಟ ಮಾಡಬೇಕು.
– ಸೌ. ವೈದೇಹಿ ಕುಲಕರ್ಣಿ, ಯೋಗ ಶಿಕ್ಷಕಿ, ಮೆಡಿಕಲ್ ಯೋಗ ಥೆರಪಿಸ್ಟ್, ನ್ಯೂರೋಥೆರಪಿಸ್ಟ್, ಪುಣೆ.
ನಿಧನ ವಾರ್ತೆ
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ರೋಗಗಳಿಗೆ ಯೋಗಾಭ್ಯಾಸ
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ