ಇತ್ತೀಚಿನ ಬದಲಾದ ಜೀವನಶೈಲಿಯಿಂದಾಗಿ ವಿವಿಧ ರೀತಿಯ ಕಾಯಿಲೆಗಳು ಹೆಚ್ಚಾಗಿವೆ. ವಿವಿಧ ಕಾಯಿಲೆಗಳಿಗೆ ಆಧುನಿಕ ವೈದ್ಯಕೀಯ ಚಿಕಿತ್ಸೆ ಪಡೆಯುವುದು ದುಬಾರಿಯಷ್ಟೇ ಅಲ್ಲ, ಅದರಿಂದ ರೋಗವು ಸಂಪೂರ್ಣವಾಗಿ ಗುಣಮುಖವಾಗುತ್ತದೆ ಎಂಬ ಖಾತ್ರಿಯೂ ಇರುವುದಿಲ್ಲ ಅಥವಾ ಕೆಲವು ದಿನಗಳ ನಂತರ ಆ ಕಾಯಿಲೆಯು ಮತ್ತೆ ಮರುಕಳಿಸುತ್ತದೆ. ಇವುಗಳಿಂದ ಮಾನಸಿಕ ತೊಂದರೆ ಆಗುತ್ತದೆ. ನಿಯಮಿತ ಮತ್ತು ಸರಿಯಾದ ಪದ್ಧತಿಯಿಂದ ಮಾಡಿದ ಯೋಗಾಭ್ಯಾಸವು ಕಾಯಿಲೆಯ ಮೂಲ ಕಾರಣವನ್ನು ದೂರಾಗಿಸಲು ಪ್ರಯತ್ನಿಸುತ್ತದೆ. ಕೆಲವು ಬಾರಿ ಕಾಯಿಲೆಯು ಬೇರುಸಹಿತ ಗುಣವಾಗುತ್ತದೆ (ಈ ಲೇಖನದಲ್ಲಿನ ಎಲ್ಲಾ ಬರಹಗಳು ಪುಣೆಯ ಸೌ. ವೈದೇಹಿ ಕುಲಕರ್ಣಿ, ಯೋಗ ಶಿಕ್ಷಕಿ, ಮೆಡಿಕಲ್ ಯೋಗ ಥೆರಪಿಸ್ಟ್ ಹಾಗೂ ನ್ಯೂರೋಥೆರಪಿಸ್ಟ್ ಅವರದ್ದಾಗಿದೆ.) |
ತೀವ್ರ ಬೆನ್ನು ನೋವು

(ಬೆನ್ನಿನ ಕೆಳ ಭಾಗದಲ್ಲಿ ಸ್ನಾಯು ಗಳು ಮತ್ತು ಮೂಳೆಗಳಲ್ಲಿ ೧೨ ವಾರಗಳಿಗಿಂತ ಹೆಚ್ಚು ಕಾಲ ತೀವ್ರ ವೇದನೆ ಗಳು ಇರುವುದು)
ಉಪಾಯ
೧. ಭಾರವಾದ ಬ್ಯಾಗ್‌ಗಳನ್ನು ಬೆನ್ನಿನ ಮೇಲೆ ಹೊತ್ತು ಕೊಳ್ಳಬಾರದು.
೨. ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರು ಪ್ರತಿ ಗಂಟೆಗೆ ೫ ನಿಮಿಷಗಳ ಕಾಲ ಎದ್ದು ನಡೆದಾಡಬೇಕು. (ಇದರಿಂದ ಎರಡು ಕೇಶರುಖಂಡಗಳ ಮಧ್ಯದ ಡಿಸ್ಕಗೆ ರಕ್ತವು ಸರಿಯಾಗಿ ಪೂರೈಕೆಯಾಗುತ್ತದೆ.)
೩. ಕಂಪ್ಯೂಟರ್ ಪರದೆಯ ಎತ್ತರವು ಕಣ್ಣಿನ ಎತ್ತರದ ವರೆಗೆ ಬರುವಂತೆ ಜೋಡಿಸಿಡಿ.
೪. ಸೇತುಬಂಧಾಸನ (೧೦ ರಿಂದ ೨೦ ಬಾರಿ)
೫. ಮರ್ಕಟಾಸನ (೧೫ ರಿಂದ ೨೦ ಬಾರಿ)
೬. ಭುಜಂಗಾಸನ (೧೦ ಬಾರಿ)
೭. ಅರ್ಧ ಭುಜಂಗಾಸನ (೧೦ ಬಾರಿ)
೮. ಪವನಮುಕ್ತಾಸನ (೧೦ ರಿಂದ ೨೦ ಬಾರಿ)
೯. ಮಾರ್ಜರಾಸನ (೧೦ ರಿಂದ ೧೫ ಬಾರಿ)
೧೦. ಉಷ್ಟ್ರಾಸನ (೧೦ ಬಾರಿ)
೧೧. ಮತ್ಸ್ಯಾಸನ (೧೦ ಬಾರಿ)
ವ್ಹೇರಿಕೋಜ ವ್ಹೇನ್ಸ್

(ಕಾಲುಗಳಲ್ಲಿನ ಉಬ್ಬಿದ ಮತ್ತು ಅಂಕುಡೊಂಕಾದ ರಕ್ತನಾಳಗಳು)
ಉಪಾಯ
೧. ಆಹಾರದ ಸೇವನೆಯ ಮೇಲೆ ನಿಯಂತ್ರಣ.
೨. ಕೆಲವು ಸಮಯ ಕುಳಿತು ಕೆಲಸ ಮಾಡಬೇಕು.
೩. ಪ್ರತಿದಿನ ೪೫ ನಿಮಿಷ (ಸಾಧ್ಯವಾದರೆ ನೀರಿನಲ್ಲಿ) ನಡೆಯುವುದು ಅಥವಾ ಅರ್ಧ ಗಂಟೆ ನೀರಿನಲ್ಲಿ ಕಾಲು ಮುಳುಗಿಸಿಡುವುದು).
೪. ಮಲಗಿ ‘ಸೈಕ್ಲಿಂಗ್ (೨೦ ನಿಮಿಷ).
೫. ವಿಪರೀತ ಕರಣಿ (ಕಾಲುಗಳನ್ನು ಗೋಡೆಗೆ ತಾಗಿಸಿ ಮತ್ತು ಸೊಂಟವನ್ನು ನೆಲಕ್ಕೆ ತಗಲಿಸಿ ಗೋಡೆಯ ಹತ್ತಿರ ಮಲಗುವುದು. (೨೦ ನಿಮಿಷಗಳು) (ಚಿತ್ರವನ್ನು ನೋಡಿರಿ)
೬. ಕಿಟಕಿಯ ಕೆಳಗೆ ಮರದ ಹಲಗೆಯನ್ನು ಇಟ್ಟು, ಕಿಟಕಿಯನ್ನು ಹಿಡಿದುಕೊಂಡು ಹಲಗೆಯ ಮೇಲೆ ನಿಂತು ಕಾಲಿನಿಂದ ಕೆಳಗೆ ಜಾರಿಸುತ್ತಿರಬೇಕು. (೧೦ ನಿಮಿಷಗಳು)
‘ಸ್ಲಿಪ್ ಡಿಸ್ಕ್

(ಕಶೇರುಖಂಡಗಳ ನಡುವಿನ ಡಿಸ್ಕ ತನ್ನ ಸ್ಥಾನದಿಂದ ಸರಿಯುವುದು)
ಉಪಾಯ
೧. ಊಟದ ನಂತರ ವಜ್ರಾಸನದಲ್ಲಿ ಕುಳಿತು ಕೊಳ್ಳಬೇಕು.
೨. ಸ್ಪಾಂಡಿಲೈಟಿಸ್‌ಗಾಗಿ ಮಾಡುವ ಎಲ್ಲಾ ಆಸನಗಳನ್ನು ಮಾಡಬೇಕು. (ನಿಯಮಿತವಾಗಿ ಆಸನಗಳನ್ನು ಮಾಡುವಾಗ ಬೆನ್ನುಮೂಳೆಯು ಕೆಳಗಿನಿಂದ ಮೇಲಕ್ಕೆ ಎಳೆಯಲ್ಪಡುತ್ತದೆ, ಜಗ್ಗುತ್ತದೆ. ಇದರಿಂದಾಗಿ ಸರಿದ ಭಾಗಕ್ಕೆ ಯೋಗ್ಯವಾದ ಜಾಗ ಸಿಗುತ್ತದೆ. ಸರಿದ ಡಿಸ್ಕವು ಮರಳಿ ಯಥಾಸ್ಥಿತಿಗೆ ಬರಲು ನಿಯಮಿತವಾಗಿ ಮತ್ತು ಜಾಗರೂಕತೆಯಿಂದ ಆಸನಗಳನ್ನು ಮಾಡ ಬೇಕಾಗುತ್ತದೆ. ಒಂದು ವರ್ಷದ ಅವಧಿಯಲ್ಲಿ ಅದು ತನ್ನ ಜಾಗಕ್ಕೆ ಬಂದು ಶಸ್ತ್ರ ಕ್ರಿಯೆಯನ್ನು ತಪ್ಪಿಸಬಹುದು.)
೪. ಮತ್ಸ್ಯಾಸನ (೧೦ ಬಾರಿ)
೫. ಸೇತುಬಂಧಾಸನ (೧೦ ಬಾರಿ)
೬. ಅರ್ಧ ಭುಜಂಗಾಸನ (೧೦ ಬಾರಿ)
ಸ್ಪಾಂಡಿಲೈಟಿಸ್

(ಬೆನ್ನುಮೂಳೆಗೆ ಬಾವು ಬರುವುದು)
ಉಪಾಯ
೧. ನಡೆಯುವಾಗ ಪಾದಗಳನ್ನು ನೇರವಾಗಿ ಇಡದಿದ್ದರೆ, ನೇರವಾಗಿ ಇಟ್ಟು ನಡೆಯುವ ಅಭ್ಯಾಸ ಮಾಡಿಕೊಳ್ಳಬೇಕು. ನಿಲ್ಲುವಾಗಲೂ ಪಾದಗಳನ್ನು ನೇರವಾಗಿಟ್ಟು ನಿಲ್ಲಬೇಕು.
೨. ‘ಡಿ ಜೀವಸತ್ವವಿರುವ ಪದಾರ್ಥಗಳನ್ನು ತಿನ್ನಬೇಕು (ಇದರ ಕೊರತೆಯೇ ಈ ಕಾಯಿಲೆಗೆ ಮುಖ್ಯ ಕಾರಣವಾಗಿದೆ).
೩. ಅನುಲೋಮ-ವಿಲೋಮ (೧೫ ನಿಮಿಷ)
೪. ಯಾವುದೇ ವಸ್ತು ಅಥವಾ ಬಿಂದು ಅಥವಾ ಶ್ವಾಸದ ಮೇಲೆ ಗಮನ ಕೇಂದ್ರೀಕರಿಸುವುದು ಅಥವಾ ಮನಸ್ಸನ್ನು ದೇವರ ಮೇಲೆ ಕೇಂದ್ರೀಕರಿಸಿ ಧ್ಯಾನ ಮಾಡುವುದು (೧೦ ನಿಮಿಷ).
೫. ಭುಜಂಗಾಸನ (೧೫ ಬಾರಿ)
೬. ಮತ್ಸ್ಯಾಸನ (೧೦ ಬಾರಿ)
೭. ಸೇತುಬಂಧಾಸನ (೧೦ ಬಾರಿ)
೮. ಅರ್ಧ ಭುಜಂಗಾಸನ (೧೦ ಬಾರಿ)
೯. ಪವನಮುಕ್ತಾಸನ (೧೦ ಬಾರಿ)
೧೦. ಉಷ್ಟ್ರಾಸನ (೧೦ ಬಾರಿ)
೧೧. ಬೆನ್ನುಮೂಳೆಯಲ್ಲಿ ಊತ (ಬಾವು) ಬಂದಿದ್ದರೆ, ಮುಂಜುಗಡ್ಡೆಯನ್ನು ಇಡಬೇಕು.
ಥೈರಾಯ್ಡ್

(ಥೈರಾಯ್ಡ್ ಗ್ರಂಥಿಯ ಕಾರ್ಯಕ್ಷಮತೆ ಕಡಿಮೆಯಾಗಿ ವಿವಿಧ ಕಾಯಿಲೆ ಬರುವುದು)
ಉಪಾಯ :
೧. ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಮತ್ತು ತೂಕ ಹೆಚ್ಚಾಗದಂತೆ ಜಾಗ್ರತೆ ವಹಿಸಬೇಕು.
೨. ಉಜ್ಜಯಿ ಪ್ರಾಣಾಯಾಮ (೪೦- ೫೦ ಬಾರಿ)
೩. ಕುತ್ತಿಗೆಯ ವ್ಯಾಯಾಮ (೫-೧೦ ಬಾರಿ)
೪. ಕಪಾಲಭಾತಿ (೫೦೦-೬೦೦ ಬಾರಿ)
೫. ಹಲಾಸನ (೫ ಬಾರಿ)
೬. ಸರ್ವಾಂಗಾಸನ (೫ ಬಾರಿ)
೭. ಮತ್ಸ್ಯಾಸನ (೧೦-೨೦ ಬಾರಿ)
೮. ಸಿಂಹಾಸನ (೫-೧೦ ಬಾರಿ)
೯. ಸುಪ್ತ ವಜ್ರಾಸನ (೫-೧೦ ಬಾರಿ)
೧೦. ವಿಪರೀತ ಕರಣಿ (೧೫ ನಿಮಿಷಗಳು) :
(ಬೆನ್ನು ಮತ್ತು ತಲೆ ಸಮಾನವಾಗಿ ನೆಲದ ಮೇಲೆ ಇಟ್ಟು ಎರಡು ಕಾಲುಗಳನ್ನು ಗೋಡೆಯ ಮೇಲೆ ನೇರವಾಗಿ ಮೇಲಕ್ಕೆ ೯೦ ಡಿಗ್ರಿಯಲ್ಲಿ ಇಡಬೇಕು. ಕಣ್ಣುಗಳ ಮೇಲೆ ಭಾರವಾದ ಟವೆಲ್ ಅಥವಾ ಬೆಡ್‌ಶೀಟ್ ಇಡಬೇಕು. ಇದರಿಂದ ಪಿಟ್ಯುಟರಿ ಗ್ರಂಥಿಯು ಸಕ್ರಿಯವಾಗುತ್ತದೆ.)
ಮೊಣಕಾಲು ನೋವು

ಉಪಾಯ
೧. ಕೆಳಗೆ ಕುಳಿತು ಮಾಡಲು ಸಾಧ್ಯವಿರುವ ಮನೆಗೆಲಸಗಳನ್ನು ತಪ್ಪದೇ ಕುಳಿತು ಮಾಡಬೇಕು; ಉದಾ. ತರಕಾರಿ ಹೆಚ್ಚುವುದು ಇತ್ಯಾದಿ, ಹಾಗೆಯೇ ಕೆಳಗೆ ಕುಳಿತು ಊಟ ಮಾಡಬೇಕು.
೨. ಪ್ರತಿ ೨೦ ನಿಮಿಷಕ್ಕೆ ೩ ಗುಟುಕು ನೀರನ್ನು ಸಾವಕಾಶವಾಗಿ ಕುಳಿತು ಕುಡಿಯಬೇಕು.
೩. ಟೇಬಲ್-ಕುರ್ಚಿಯ ಮೇಲೆ ಹೆಚ್ಚು ಸಮಯ ಕುಳಿತು ಕೆಲಸ ಮಾಡುವವರು ಪ್ರತಿ ಗಂಟೆಗೆ ಕುರ್ಚಿಯಿಂದ ಎದ್ದು ೪ ರಿಂದ ೭ ನಿಮಿಷ ನಡೆಯಬೇಕು. ಕುರ್ಚಿಯ ಮೇಲೆ ಕುಳಿತಿರುವಾಗ ಆಗಾಗ ಕಾಲುಗಳನ್ನು ಅಲುಗಾಡಿಸುತ್ತಿರಬೇಕು.
೫. ಮೊಣಕಾಲಿಗೆ ಎಣ್ಣೆಯಿಂದ ಮಸಾಜ್ ಮಾಡುವುದು (ವಾರದಲ್ಲಿ ೨ ಬಾರಿ ರಾತ್ರಿ ೧೦ ನಿಮಿಷ).
೬. ರಾತ್ರಿ ಮಲಗುವಾಗ ಹೊಕ್ಕುಳಿನಲ್ಲಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ಹಾಕಿ ಮಸಾಜ್ ಮಾಡುವುದು.
ನಿಧನ ವಾರ್ತೆ
ಯೋಗಾಭ್ಯಾಸಕರು ಏನೆಲ್ಲ ಪಾಲಿಸಬೇಕು ?
ದೇವರ ‘ದೇವತ್ವವನ್ನು ಅನುಭವಿಸುವುದಕ್ಕಾಗಿ ಸಾಧನೆ ಮಾಡಿ !
ಯೋಗ ಮತ್ತು ಪ್ರಾಣಾಯಾಮ: ರೋಗ ಮುಕ್ತರಾಗುವ ಪ್ರಕ್ರಿಯೆ
ದೈವ ಗತಿ – ಪ್ರಾರಬ್ಧ ಮತ್ತು ಮುಕ್ತ ಇಚ್ಛೆ
ಎಲ್ಲಾ ಕಾಯಿಲೆಗಳಿಂದ ದೂರವಿರಲು ಊಟ ಮತ್ತು ನೀರು ಕುಡಿಯುವ ನಿಯಮಗಳು !