ಶರೀರಕ್ಕೆ ತುರಿಕೆ ಬರುವುದರ ಕಾರಣಗಳು ಮತ್ತು ಅದಕ್ಕೆ ಉಪಾಯ

‘ಶರೀರಕ್ಕೆ ತುರಿಕೆ ಬರುವುದು, ಅಂದರೆ ಚರ್ಮಕ್ಕೆ ಬರುವ ಒಂದು ಅಸ್ವಸ್ಥತೆ. ಆದ್ದರಿಂದ ನಮಗೆ ಅಲ್ಲಿ ತುರಿಸಿಕೊಳ್ಳಬೇಕು ಎಂಬ ಇಚ್ಛೆಯಾಗುತ್ತದೆ. ತುರಿಕೆ ವಿವಿಧ ಕಾರಣಗಳಿಂದ ಬರುತ್ತದೆ. ತುರಿಕೆ ಬರುವುದರ ಕಾರಣಗಳು ಮತ್ತು ಅವುಗಳ ಪರಿಹಾರಗಳನ್ನು ಮುಂದೆ ಕೊಡಲಾಗಿದೆ.

೧. ತುರಿಕೆ ಬರುವುದರ ಕಾರಣಗಳು

೧ ಅ. ಪಿತ್ತ : ಬಹಳಷ್ಟು ಸಲ ನಮಗೆ ಪಿತ್ತದಿಂದ ತುರಿಕೆ ಬರುತ್ತದೆ. ಯಾವಾಗ ನಮ್ಮ ರಕ್ತದಲ್ಲಿ ಪಿತ್ತದ ಪ್ರಮಾಣ ಹೆಚ್ಚಾಗುತ್ತದೆಯೋ, ಆಗ ನಮ್ಮ ಶರೀರಕ್ಕೆ ತುರಿಕೆ ಬರುತ್ತದೆ.

೧ ಆ. ಚರ್ಮರೋಗ :

೧. ‘ಎಕ್ಝಿಮಾ (ಚರ್ಮಕ್ಕೆ ತೀವ್ರ ತುರಿಕೆ ಬರುವುದು ಮತ್ತು ಚರ್ಮ ಒಣಗುವುದು)

೨. ‘ಸೋರೈಸಿಸ್’ (‘ಸೊರೈಸಿಸ್’ ಇದು ತೀವ್ರ ದಾಹಕ, ದೀರ್ಘಕಾಲ ಗುಣವಾಗದಿರುವ ಮತ್ತು ಸಾಂಕ್ರಾಮಿಕವಲ್ಲದ ಚರ್ಮರೋಗವಾಗಿದೆ.)

೧ ಇ. ‘ಎಲರ್ಜಿ’ : ನಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯು ಅತಿಸಂವೇದನಶೀಲವಾಗುವ ಒಂದು ಅವಸ್ಥೆ, ಅಂದರೆ ‘ಎಲರ್ಜಿ’. ಯಾವುದಾದರೊಂದು ಔಷಧಿಯ ‘ಎಲರ್ಜಿ’ಯಿಂದಲೂ ಚರ್ಮವು ತುರಿಸುತ್ತದೆ.

೧ ಈ. ಸೊಳ್ಳೆ ಅಥವಾ ಯಾವುದಾದರೊಂದು ಕೀಟ ಕಚ್ಚುವುದು

೧ ಉ. ಫಂಗಸ್‌ (ಮುಗ್ಗಲು) ಅಥವಾ ಬೆಕ್ಟೇರಿಯಾ (ಜೀವಾಣುಗಳು)

೧ ಊ. ಮಾನಸಿಕ ಒತ್ತಡ

೧ ಎ. ಚರ್ಮ ಶುಷ್ಕವಾಗಿರುವುದು

೧ ಐ. ತುಂಬಾ ಬಿಸಿ ನೀರಿನಿಂದ ಸ್ನಾನ ಮಾಡುವುದು

ನಿಸರ್ಗೋಪಚಾರ ತಜ್ಞ  ದೀಪಕ ಜೋಶಿ

೨. ಉಪಾಯ

೨ ಅ. ಪುನರ್ಪುಳಿಯ (ಕೋಕಮದ) ನೀರನ್ನು ಕುಡಿಯಬೇಕು ಮತ್ತು ಅದನ್ನು ಕೈಗಳಿಗೆ ಮತ್ತು ಕಾಲುಗಳಿಗೆ ಹಚ್ಚಬೇಕು. ಇದರಿಂದ ತುರಿಕೆ ತಕ್ಷಣ ಕಡಿಮೆಯಾಗುತ್ತದೆ.

೨ ಆ. ನೆಲ್ಲಿಕಾಯಿ ಮತ್ತು ಶುಂಠಿಯ ಚೂರ್ಣವನ್ನು ಮಿಶ್ರಣ ಮಾಡಿ ನೀರಿನೊಂದಿಗೆ ಸೇವಿಸುವುದು : ೫೦ ಗ್ರಾಮ್‌ ನೆಲ್ಲಿಕಾಯಿಯ ಚೂರ್ಣದಲ್ಲಿ (ತಿಂಡಿ ತಿನ್ನುವ ೭ ಚಮಚದಷ್ಟು) ಚಹಾದ ಕಾಲು ಚಮಚ (ಅಥವಾ ೪ ರಿಂದ ೫ ಚಿಟಿಕೆಯಷ್ಟು) ಶುಂಠಿಯ ಚೂರ್ಣವನ್ನು ಹಾಕಿ ಅದನ್ನು ಒಟ್ಟಿಗೆ ಸೇರಿಸಿಡಬೇಕು. ಇದನ್ನು ಚಹಾದ ೧ ಚಮಚದಷ್ಟು (ಸುಮಾರು ೫ ಗ್ರಾಮ್) ಮಿಶ್ರಣ ೧ ಲೋಟ (೨೦೦ ಮಿ.ಲೀ.) ನೀರಿನಲ್ಲಿ ಇಡೀರಾತ್ರಿ ನೆನೆಸಬೇಕು. ಆ ನೀರನ್ನು ಬೆಳಗ್ಗೆ ಚಮಚದಿಂದ ಅಲುಗಾಡಿಸಬೇಕು ಮತ್ತು ಸೋಸಿ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು. ಈ ಉಪಾಯವನ್ನು ೨೧ ದಿನಗಳ ವರೆಗೆ ಮಾಡಬೇಕು.

೨ ಇ. ದೇಹಶುದ್ಧಿ ಮಾಡುವುದು : ಚರ್ಮದ ರೋಗ ವಾಸಿಯಾಗಲು ದೇಹಶುದ್ಧಿ ಮಾಡುವುದು ಆವಶ್ಯಕವಾಗಿರುತ್ತದೆ. ಅದಕ್ಕಾಗಿ ಚಹಾದ ಒಂದು ಚಮಚದಷ್ಟು (ಸುಮಾರು ೫ ಗ್ರಾಮ್) ತ್ರಿಫಲಾ ಚೂರ್ಣ ಮತ್ತು ತಿಂಡಿಯನ್ನು ತಿನ್ನುವ ೧ ಚಮಚ ತುಪ್ಪವನ್ನು ಪ್ರತಿದಿನ ರಾತ್ರಿ ಮಲಗುವಾಗ ಮತ್ತು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಉಗುರುಬೆಚ್ಚನೆ ನೀರಿನೊಂದಿಗೆ ಕುಡಿಯಬೇಕು. ಇದನ್ನು ಪ್ರಾರಂಭಿಸಿದ ನಂತರ ಮರುದಿನದಿಂದ ೨ ದಿನ ಉಪವಾಸ (ಕೇವಲ ದ್ರವಪದಾರ್ಥಗಳನ್ನು ಸೇವಿಸುವುದು) ಮಾಡಬೇಕು. ಇದರಲ್ಲಿ ನಾವು ಮಜ್ಜಿಗೆ, ಹಾಲು, ಹೆಸರುಕಾಳಿನ ನೀರು ಅಥವಾ ಸಾಮಾನ್ಯ ನೀರು ಸಹ ಕುಡಿಯಬಹುದು. ಮುಂದಿನ ೨ ದಿನ ಎರಡೂ ಸಮಯದಲ್ಲಿ, ಅಂದರೆ ಬೆಳಗ್ಗೆ ೧೧ ಗಂಟೆಗೆ ಮತ್ತು ಸಾಯಂಕಾಲ ೭ ಗಂಟೆಗೆ ಹೆಸರುಕಾಳಿನ ಖಿಚಡಿ ಮತ್ತು ನಂತರ ಮುಂದಿನ ೩ ದಿನ ಮೇಲಿನ ಎರಡೂ ಸಮಯದಲ್ಲಿ ಪಲ್ಯ-ರೊಟ್ಟಿ ತಿನ್ನಬಹುದು. ಹೀಗೆ ಒಟ್ಟು ೭ ದಿನಗಳ ವರೆಗೆ ಮಾಡಬೇಕು. ಈ ಪ್ರಕ್ರಿಯೆಯನ್ನು ತಿಂಗಳÀ ಆರಂಭದಲ್ಲಿ ಮಾಡಬೇಕು. ಹೀಗೆ ೩-೪ ತಿಂಗಳು ಮಾಡಬೇಕು. ತ್ರಿಫಲಾ ಚೂರ್ಣದ ಪ್ರಮಾಣವು ಮೊದಲನೇ ತಿಂಗಳಿನಲ್ಲಿ ೧ ಚಮಚ, ಎರಡನೇ ತಿಂಗಳಿನಲ್ಲಿ ಮುಕ್ಕಾಲು ಚಮಚ, ಮೂರನೇ ತಿಂಗಳಿನಲ್ಲಿ ಅರ್ಧ ಚಮಚ ಮತ್ತು ನಾಲ್ಕನೇ ತಿಂಗಳಿನಲ್ಲಿ ಕಾಲು ಚಮಚದಷ್ಟು, ಹೀಗೆ ಕಡಿಮೆ ಮಾಡುತ್ತ ಹೋಗಬೇಕು ಮತ್ತು ನಂತರ ಅದನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು.

೨ ಈ. ಶರೀರಕ್ಕೆ ಅಪಾಯವಾಗುವ ಪದಾರ್ಥಗಳನ್ನು ತಿನ್ನಬಾರದು :

‘ನಮ್ಮ ದೇಹಕ್ಕೆ ಯಾವ ಪದಾರ್ಥಗಳ ಎಲರ್ಜಿ ಇದೆ ?’, ಎಂಬುದನ್ನು ಹುಡುಕಿ ಆ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಬೇಕು ಅಥವಾ ಚರ್ಮಕ್ಕೆ ಕ್ರೀಮ್‌ ಇತ್ಯಾದಿ ಹಚ್ಚುತ್ತಿದ್ದರೆ ಅದನ್ನು ತಪ್ಪಿಸಬೇಕು. ಔಷಧಿಗಳಲ್ಲಿನ ಘಟಕಗಳ ಎಲರ್ಜಿ ಇದ್ದರೆ ಆಧುನಿಕ ವೈದ್ಯರ ಬಳಿ ಹೋದಾಗ ಅವರಿಗೆ ಆ ಬಗ್ಗೆ ಮೊದಲೇ ಹೇಳಬೇಕು, ಅಂದರೆ ವ್ಯಾಧಿಗಳಿಗೆ ಔಷಧಿಗಳನ್ನು ಕೊಡುವಾಗ ಅವರು ಕಾಳಜಿವಹಿಸುವರು.

೨ ಉ. ಸೊಳ್ಳೆ ಅಥವಾ ಕೀಟಗಳಿಂದ ರಕ್ಷಣೆಯಾಗಲು ಸೊಳ್ಳೆ ಪರದೆಯನ್ನು ಬಳಸಬೇಕು.

೨ ಊ. ಯೋಗ್ಯ ಔಷಧೋಪಚಾರ ಮಾಡುವುದು : ಫಂಗಸ್‌ (ಮುಗ್ಗಲು) ಅಥವಾ ಬೆಕ್ಟೆರಿಯಾ (ಜೀವಾಣು)ಗಳಿಂದ ಬರುವ ತುರಿಕೆಗೆ ಸರಿಯಾದ ಔಷಧೋಪಚಾರವನ್ನು ಮಾಡಬೇಕು. ಒಂದು ವೇಳೆ ಆ ಜಾಗದಲ್ಲಿ ಮಲಮ್‌ ಹಚ್ಚಿದರೆ ಆ ಭಾಗವನ್ನು ೧೫-೨೦ ನಿಮಿಷಗಳ ವರೆಗೆ ತೆರೆದಿಟ್ಟು ಫ್ಯಾನ್‌ ಕೆಳಗೆ ಕುಳಿತುಕೊಳ್ಳಬೇಕು. ಆ ಭಾಗಕ್ಕೆ ಹೆಚ್ಚೆಚ್ಚು ಗಾಳಿ ಸೋಂಕುವಂತೆ ಇಡಬೇಕು. ಇದರಿಂದ ಫಂಗಸ್‌ದಂತಹ ಚರ್ಮದ ಕಾಯಿಲೆಯು ಬೇಗ ಗುಣವಾಗುತ್ತದೆ.

೨ ಎ. ಮಾನಸಿಕ ಒತ್ತಡವನ್ನು ದೂರಗೊಳಿಸಲು ‘ನಾಮಜಪ, ಧ್ಯಾನ ಮತ್ತು ಪ್ರಾಣಾಯಾಮ’ಗಳಂತಹ ಉಪಾಯಗಳನ್ನು ಮಾಡಬೇಕು ಮತ್ತು ಮನಸ್ಸನ್ನು ಶಾಂತವಾಗಿಡಬೇಕು.

೨ ಐ. ಸಾಬೂನು ಬಳಸದೇ ಸುಗಂಧಿತ ಲೇಪನ ಅಥವಾ ಕಡ್ಲೆಬೇಳೆಯ ಹಿಟ್ಟನ್ನು ಬಳಸುವುದು : ಸ್ನಾನದ ೧೦-೧೫ ನಿಮಿಷಗಳ ಮೊದಲು ಸಂಪೂರ್ಣ ಶರೀರಕ್ಕೆ ಎಳ್ಳಿನ ಅಥವಾ ಕೊಬ್ಬರಿಎಣ್ಣೆಯನ್ನು ಉಜ್ಜಬೇಕು. ಸ್ನಾನವನ್ನು ಮಾಡುವಾಗ ಸಾಧ್ಯವಾದಷ್ಟು ಸಾಬೂನನ್ನು ಬಳಸದೇ ೨ ಚಮಚದಷ್ಟು ಸುಗಂಧಿತ ಲೇಪನ ಅಥವಾ ಕಡ್ಲೆಬೇಳೆಯ ಹಿಟ್ಟನ್ನು ತೆಗೆದುಕೊಂಡು ಅದರಲ್ಲಿ ೪-೫ ಹನಿಗಳಷ್ಟು ಕೊಬ್ಬರಿಎಣ್ಣೆಯನ್ನು ಹಾಕಿ ಅದನ್ನು ಬಳಸಬೇಕು.

೨ ಓ. ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು; ಏಕೆಂದರೆ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡಿದರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆ ಹೊರಗೆ ಹೋಗುತ್ತದೆ ಮತ್ತು ಚರ್ಮವು ಶುಷ್ಕವಾಗಿ (ಒಣಗಿ) ಶರೀರವು ತುರಿಸುತ್ತದೆ.’

– ಡಾ. ದೀಪಕ ಜೋಶಿ, ನಿಸರ್ಗೋಪಚಾರ ತಜ್ಞ (ಬ್ಯಾಚುಲರ್‌ ಆಫ್‌ ನ್ಯಾಚರೋಪಥಿ ಯಾಂಡ್‌ ಯೋಗಿಕ ಸೈನ್ಸ್‌), ದೇವದ, ಪನವೇಲ. (೧೮.೨.೨೦೨೫)