
ಮನೆ ತೆರಿಗೆ, ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ.), ಆದಾಯ ತೆರಿಗೆ (ಇನ್ಕಮ್ ಟ್ಯಾಕ್ಸ್) ಮುಂತಾದ ತೆರಿಗೆಗಳು ಕೊನೆಗೆ ಸರಕಾರದ ಖಜಾನೆಗೆ ಸೇರುತ್ತವೆ; ಆದರೆ ಮನೆ ತೆರಿಗೆಯನ್ನು ‘ಜಿ.ಎಸ್.ಟಿ.’ ಕಚೇರಿಯವರು ಹಾಗೂ ಆದಾಯ ತೆರಿಗೆಯನ್ನು ನಗರಸಭೆಯ ಕಚೇರಿಯವರು ಸ್ವೀಕರಿಸುವುದಿಲ್ಲ, ಅದೇ ರೀತಿ ಶ್ರಾದ್ಧದ ವಿಚಾರದಲ್ಲೂ ಇದೆ.

ಪಿತೃಗಳನ್ನು ಉದ್ದೇಶಿಸಿ ಮಾಡುವ ಸಮರ್ಪಣೆಯನ್ನು ಮಂತ್ರಸಹಿತ ಮತ್ತು ಸರಿಯಾದ ರೀತಿಯಲ್ಲಿ ಮಾಡಿದರೆ, ಅದು ಖಂಡಿತವಾಗಿಯೂ ಅವರಿಗೆ ತಲುಪುತ್ತದೆ. ಶ್ರಾದ್ಧಕ್ಕೆ ಬದಲಾಗಿ ಅನಾಥಾಶ್ರಮಕ್ಕೆ ಹಣ ನೀಡಿದರೆ, ಅನ್ನದಾನದ ಪುಣ್ಯ ಸಿಗುತ್ತದೆ; ಆದರೆ ಶ್ರಾದ್ಧದ ಪುಣ್ಯವು ಶೇ. ೧೦೦ ರಷ್ಟು ಸಿಗುವುದಿಲ್ಲ. ‘ಇದಕ್ಕೆ ಬದಲಾಗಿ ಅದನ್ನು ಮಾಡೋಣ’, ಎಂಬುದು ತಪ್ಪು. ‘ನಾನು ಸುಂಕ (ಟೋಲ್) ಪಾವತಿಸುತ್ತೇನೆ, ಹಾಗಾಗಿ ಮನೆ ತೆರಿಗೆ ಪಾವತಿಸದಿದ್ದರೂ ನಡೆಯುತ್ತದೆ’, ಎಂದು ಹೇಗೆ ನಡೆಯುವುದಿಲ್ಲವೋ, ಅದೇ ರೀತಿ ‘ಶ್ರಾದ್ಧಕ್ಕೆ ಬದಲಾಗಿ ಬೇರೆ ಕಾರ್ಯಗಳನ್ನು ಮಾಡಿದರೆ, ಶ್ರಾದ್ಧದ ಪುಣ್ಯವು ಲಭಿಸುವುದಿಲ್ಲ.’
ಪ್ರತಿಯೊಂದು ಕರ್ಮದ ಫಲ ಮತ್ತು ಅದರ ಕಾರ್ಯಕ್ಷೇತ್ರವನ್ನು ಶಾಸ್ತ್ರವು ನಿಶ್ಚಯಿಸಿದೆ. ನಿಮಗೆ ಮನಸ್ಸಿಗೆ ಬಂದಂತೆ ಮಾಡಿದರೆ ಗೊಂದಲವಾಗುತ್ತದೆ, ಬೇರೇನೂ ಆಗುವುದಿಲ್ಲ. ಮನೆ ತೆರಿಗೆ, ಆದಾಯ ತೆರಿಗೆ, ಮಾರಾಟ ತೆರಿಗೆ, ಮೋಟಾರು ವಾಹನಗಳ ಮೇಲಿನ ತೆರಿಗೆಗಳು ಬೇರೆ ಬೇರೆಯಾಗಿವೆ. ನಮ್ಮ ಸ್ಥಿರ ಮತ್ತು ಚರ ಆಸ್ತಿಯ ಆದಾಯದ ಕೆಲವು ಭಾಗವನ್ನು ಪ್ರತಿ ವರ್ಷ ಆಯಾ ತೆರಿಗೆಗಳಿಗಾಗಿ ಖರ್ಚು ಮಾಡುವುದು ಕಡ್ಡಾಯವಾಗಿದೆ. ವಾಹನವನ್ನು ತೆಗೆದುಕೊಳ್ಳುವಾಗ ಮೋಟಾರು ವಾಹನದ ಮೇಲಿನ ತೆರಿಗೆಯನ್ನು ಪಾವತಿಸಿದ್ದೇನೆ ಎಂದು ಸುಂಕವನ್ನು ತಪ್ಪಿಸಲು ಆಗುವುದಿಲ್ಲ. ಯಾವ ಕರ್ಮ ಅವಶ್ಯಕವೋ, ಅದನ್ನು ಮಾಡಲೇಬೇಕು. ಆಯುಷ್ಯ, ಸುಪ್ರಜೆ, ಧನ, ವಿದ್ಯೆ, ಸ್ವರ್ಗ, ಮೋಕ್ಷ, ಭೌತಿಕ ಸುಖಗಳು ಮತ್ತು ರಾಜ್ಯವು ಪಿತೃಗಳ ಕೃಪೆಯಿಂದ ದೊರೆಯುತ್ತದೆ. ಯಾವ ಪೂರ್ವಜರು ಕಾಲಕಾಲಕ್ಕೆ ಜಿಜಿಯಾ ತೆರಿಗೆ ಮತ್ತು ಜುಟ್ಟು-ಜನಿವಾರವನ್ನು ಧರಿಸಲು ತೆರಿಗೆ ಪಾವತಿಸಿ ಯವನರು ಮತ್ತು ಕ್ರೈಸ್ತರ (ಪೋರ್ಚುಗೀಸರು, ಬ್ರಿಟಿಷರು) ದೌರ್ಜನ್ಯಗಳನ್ನು ಸಹಿಸಿಕೊಂಡು ತಮ್ಮ ಹಿಂದೂ ಗುರುತನ್ನು ಉಳಿಸಿಕೊಂಡರು, ತಮ್ಮ ಆಚಾರ-ವಿಚಾರ, ಸಂಸ್ಕೃತಿಯನ್ನು ಉಳಿಸಿಕೊಂಡರು, ಅವರ ಬಗ್ಗೆ ಕೃತಜ್ಞತೆ ಇಡಬೇಕೋ ಅಥವಾ ತಮಾಷೆ ಮಾಡಬೇಕೋ ? ಈ ವಿಚಾರ ಸಂಪೂರ್ಣ ನಿಮ್ಮದು.
– ವೇದಮೂರ್ತಿ ಭೂಷಣ ದಿಗಂಬರ ಜೋಷಿ, ವೆಂಗುರ್ಲಾ, ಸಿಂಧುದುರ್ಗ ಜಿಲ್ಲೆ, ಮಹಾರಾಷ್ಟ್ರ. (೧೮.೯.೨೦೨೪)
ಯುವಕರೇ, ನಿಜವಾದ ರಾಷ್ಟ್ರಪ್ರೇಮಿಗಳಾಗಿರಿ !
ಜಿರಳೆ (ಕಾಕ್ರೋಚ್) ಪಾರ್ಟಿಯ ಅದೇ ಅರಾಜಕತಾವಾದಿ ‘ಟೆಂಪ್ಲೆಟ್ (ಪಡಿಅಚ್ಚು) !
‘ಕಾರ್ಪೊರೇಟ್’ ಅಲ್ಲ, ಮತಾಂತರ ಮತ್ತು ಬಲಾತ್ಕಾರಗಳ ಕೇಂದ್ರ !
‘ಡಿಜಿಟಲ್ ಅರೆಸ್ಟ್’ : ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆ !
ಯವಕರೇ, ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿರುವ ‘ವೋಕಿಸಂ’ನಿಂದ ಎಚ್ಚರ !
ಅನಿಶ್ಚಿತ ಮತ್ತು ಅಸ್ಥಿರ ಜಗತ್ತಿನಲ್ಲಿ ಯುವ ಪೀಳಿಗೆಯು ಆಸರೆ ಹಾಗೂ ಸ್ಥಿರತೆಗಾಗಿ ಧರ್ಮ ಮತ್ತು ಅಧ್ಯಾತ್ಮದತ್ತ ಮುಖ ಮಾಡುವುದು