ಧರ್ಮಾಚರಣಿ ಮಹಾರಾಣಿ ಅಹಿಲ್ಯಾಬಾಯಿ !

ಧರ್ಮವಿಲ್ಲದೇ ಯಾವುದೇ, ಎಂತಹುದೇ, ಸರಕಾರವು ಸ್ಮೃತಿ, ಸುಖ-ಶಾಂತಿಯನ್ನು ಸೃಷ್ಟಿಸಲಾರದು. ನಾವು ಎಲ್ಲ ಪ್ರಯೋಗಗಳನ್ನು ಮಾಡಿದ್ದೇವೆ. ಸ್ತ್ರೀಯು ಧಾರ್ಮಿಕಳಾಗಿದ್ದರೆ, ಅಧರ್ಮದ ಕಡೆಗೆ ಬಾಗಲು ಅಥವಾ ಹೊರಳಲು ಪತಿಯ ಸಾಹಸವಾಗುವುದಿಲ್ಲ. ಮಹಾರಾಣಿ ಅಹಿಲ್ಯಾಬಾಯಿಯ ಪತಿ ವಿಲಕ್ಷಣ ವ್ಯಸನಿಯಾಗಿದ್ದನು. ಅವನು ಮದ್ಯ ಸೇವನೆ ಮಾಡಿ ಕುಡಿದ ಅಮಲಿನಲ್ಲಿ ಹೇಗೆ ಬೇಕೋ ಹಾಗೆ ದೌರ್ಜನ್ಯವೆಸಗುತ್ತಿದ್ದನು. ಅಹಿಲ್ಯಾಬಾಯಿ ಪರಮಧಾರ್ಮಿಕ ಮತ್ತು ಪರಮಸಹನಶೀಲಳಾಗಿದ್ದಳು. ಪತಿಯೊಂದಿಗೆ ಮಾತನಾಡುವುದು, ಅವನಿಗೆ ಏನಾದರೂ ಹೇಳುವುದು, ಆಗಿನ ಕಾಲದ ಪತ್ನಿಯರಿಗೆ ಆ ಧೈರ್ಯ ಇರುತ್ತಿರಲಿಲ್ಲ. ಆ ಕಾಲದಲ್ಲಿ ಪತಿಯು ಹುಲಿಯಂತೆ ಅವರ ಮೈಮೇಲೆ ಏರಿ ಬರುತ್ತಿದ್ದನು. ಇಂತಹ ಸಮಯದಲ್ಲಿಯೂ ಅಹಿಲ್ಯಾಬಾಯಿಯವರ ಮಾತುಗಳನ್ನು ಮೀರುವುದು ಅವಳ ಪತಿಗೆ ಅಸಾಧ್ಯವಾಗಿತ್ತು. ಅವಳೆದುರು ಮಾತನಾಡುವ ಯೋಗ್ಯತೆ ಅವನಿಗಿರಲಿಲ್ಲ. ಅವನು ಅವಳೆದುರು ಸಂಪೂರ್ಣ ನಮ್ರನಾಗಿರುತ್ತಿದ್ದನು. ಶಕ್ತಿಯು ಧರ್ಮದಲ್ಲಿಯೇ ಇದೆ. ಇತರ ಶಕ್ತಿಗಳು ಅನಿಯಂತ್ರಿತ ಮತ್ತು ಕೃತಕವಾಗಿವೆ.

ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ

ಧರ್ಮಾಚರಣೆ ಮಾಡುವುದರ ಮಹತ್ವ

ಧರ್ಮದ ಪಾಲನೆ ಮಾಡುವ ಪತ್ನಿಯ ಮುಂದೆ ಸಹನಶಕ್ತಿ, ಧೈರ್ಯವಿರುವ ಪತಿ ತಲೆಬಾಗಲೇ ಬೇಕಾಗುತ್ತದೆ. ಹೀಗೆ ಆಗದಿದ್ದರೆ, ಅವನು ಅಂತರ್ಮುಖನಾಗಬೇಕು, ಎಲ್ಲಿ ತಪ್ಪುತ್ತೇನೆ ಎಂದು ಹುಡುಕಬೇಕು. ಹೆಚ್ಚೆಚ್ಚು ಧರ್ಮವನ್ನು ಅನುಸರಿಸಬೇಕು. ಧರ್ಮವನ್ನು ಅನುಸರಿಸುವ ಮನುಷ್ಯನು ಜಗತ್ತಿಗೆ ಪ್ರಿಯನಾಗುವುದರೊಂದಿಗೆ ಅವನು ದೇವತೆಗಳಿಗೂ ಇಷ್ಟವಾಗುತ್ತಾನೆ.

– ಪ.ಪೂ. ಗುರುದೇವ ಡಾ, ಕಾಟೇಸ್ವಾಮಿಜಿ(ಆಧಾರ : ಮಾಸಿಕ ‘ಘನಗರ್ಜಿತ’, ನವೆಂಬರ್‌ ೨೦೨೧)