
‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (ಗುರುದೇವರು) ಇವರು ಹಿಂದೂ ರಾಷ್ಟ್ರದ ಸ್ಥಾಪನೆಯ (ಈಶ್ವರೀ ರಾಜ್ಯದ ಸ್ಥಾಪನೆಯ) ಮಹಾನ ಕಾರ್ಯವನ್ನು ಮಾಡುತ್ತಿದ್ದಾರೆ. ಗುರುದೇವರ ದೇವರಕೋಣೆಯಲ್ಲಿ ಸನಾತನ-ನಿರ್ಮಿತ ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಇಟ್ಟಿದ್ದಾರೆ.

ಅವರು ದೇವರಕೋಣೆಯಲ್ಲಿನ ದೇವತೆಗಳಿಗೆ ಪ್ರತಿದಿನ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡುತ್ತಾರೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಮಹಾನ ಸಮಷ್ಟಿ ಕಾರ್ಯದಲ್ಲಿ ದೇವದೇವತೆಗಳು ಗುರುದೇವರಿಗೆ ಸಹಾಯ ಮಾಡುತ್ತಾರೆ. ಗುರುದೇವರಲ್ಲಿನ ಭಕ್ತಿಯಿಂದ ದೇವತೆಗಳ ಚಿತ್ರಗಳಲ್ಲಿ ಸೂಕ್ಷ್ಮದಿಂದ ಆದ ಒಳ್ಳೆಯ ಬದಲಾವಣೆಗಳು ಸ್ಥೂಲದಲ್ಲಿಯೂ ಕಂಡುಬರುತ್ತವೆ. ದೇವತೆಗಳ ಚಿತ್ರಗಳಲ್ಲಿನ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಇವುಗಳ ಸ್ಪಂದನಗಳ ಪ್ರಮಾಣದಲ್ಲಿಯೂ ಬದಲಾವಣೆಯಾಗಿವೆ. ಈ ಲೇಖನದಿಂದ ನಾವು ಗುರುದೇವರ ದೇವರಕೋಣೆಯಲ್ಲಿನ ಸನಾತನ-ನಿರ್ಮಿತ ಶ್ರೀ ಗಣಪತಿಯ ಚಿತ್ರದ ಆಧ್ಯಾತ್ಮಿಕ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳೋಣ. ಮೇಲೆ ನೀಡಿರುವ ಸೂಕ್ಷ್ಮ-ಪ್ರಯೋಗವನ್ನು ಮಾಡೋಣ.
೨. ಸೂಕ್ಷ್ಮ-ಪ್ರಯೋಗದ ಉತ್ತರ

ಶ್ರೀ ಗಣಪತಿಯ ಮೂಲ ಚಿತ್ರದ ಕಡೆಗೆ ನೋಡಿದಾಗ ಮುಖ್ಯವಾಗಿ ಶಕ್ತಿ ಮತ್ತು ಭಾವದ ಸ್ಪಂದನಗಳ ಅರಿವಾಗು ತ್ತದೆÉ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರ ಕೋಣೆಯಲ್ಲಿನ ಗಣಪತಿಯ ಚಿತ್ರವನ್ನು ನೋಡಿದಾಗ ಮುಖ್ಯವಾಗಿ ಚೈತನ್ಯ ಮತ್ತು ಆನಂದದ ಸ್ಪಂದನಗಳ ಅರಿವಾಗುತ್ತವೆ.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಯಲ್ಲಿನ ಸನಾತನ-ನಿರ್ಮಿತ ಶ್ರೀ ಗಣಪತಿಯ ಚಿತ್ರದಲ್ಲಿ ಆದ ಬದಲಾವಣೆ ಮತ್ತು ಅರಿವಾದ ಅಂಶಗಳು
೧. ಮೂಲ ಚಿತ್ರದ ತುಲನೆಯಲ್ಲಿ ಗುರುದೇವರ ದೇವರಕೋಣೆ ಯಲ್ಲಿನ ಚಿತ್ರದಲ್ಲಿನ ಎಲ್ಲ ಬಣ್ಣಗಳು ತುಂಬಾ ತಿಳಿಯಾಗಿವೆ.
೨. ದೇವತೆಯ ತಲೆಯ ಹಿಂದಿನ ಬಿಳಿ ಪ್ರಭಾವಲಯವು ಚಿತ್ರದ ಹಿನ್ನೆಲೆಯಲ್ಲಿ ಎಲ್ಲೆಡೆ ಹರಡಿದೆ ಮತ್ತು ಅದು ಮಸುಕಾಗಿದೆ.
೩. ದೇವತೆಯ ಕಣ್ಣುಗಳ ಕಡೆಗೆ ನೋಡಿ ಮನಸ್ಸಿಗೆ ಶಾಂತಿ ಎನಿಸುತ್ತದೆ.
೪. ‘ದೇವತೆಯಿಂದ ನಿರ್ಗುಣ-ಸಗುಣ ಸ್ಪಂದನಗಳು ಪ್ರಕ್ಷೇಪಿಸುತ್ತಿವೆ’, ಎಂದು ಅರಿವಾಗುತ್ತದೆ.’
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೯.೩.೨೦೨೫)

೪. ಸನಾತನ-ನಿರ್ಮಿತ ಶ್ರೀ ಗಣಪತಿಯ ಮೂಲ ಚಿತ್ರ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಯಲ್ಲಿನ ಶ್ರೀ ಗಣಪತಿಯ ಚಿತ್ರಗಳಲ್ಲಿನ ವಿವಿಧ ಸ್ಪಂದನಗಳ ಪ್ರಮಾಣ (ಶೇಕಡಾವಾರು)

ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುವ ಅಂಶವೆಂದರೆ, ‘ಶ್ರೀ ಗಣಪತಿಯ ಮೂಲ ಚಿತ್ರದಲ್ಲಿ ಶಕ್ತಿ ಮತ್ತು ಭಾವ ಈ ಸ್ಪಂದನಗಳ ಪ್ರಮಾಣಗಳು ಹೆಚ್ಚಿವೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರಕೋಣೆಯಲ್ಲಿನ ಚಿತ್ರದಲ್ಲಿ ಬದಲಾವಣೆಯಾಗಿ ಚೈತನ್ಯ ಮತ್ತು ಆನಂದದ ಪ್ರಮಾಣವು ಮೂಲ ಚಿತ್ರಕ್ಕಿಂತ ಹೆಚ್ಚಾಗಿದೆ. ಚಿತ್ರದಲ್ಲಿನ ಚೈತನ್ಯ ಮತ್ತು ಆನಂದ ಈ ಉಚ್ಚ ಸ್ತರದ ಸ್ಪಂದನಗಳು ಹೆಚ್ಚಾಗಿರುವುದರಿಂದ ಚಿತ್ರದಲ್ಲಿನ ನಿರ್ಗುಣ ಸ್ತರದ ಸ್ಪಂದನಗಳು ಹೆಚ್ಚಾಗಿವೆ. ಆದ್ದರಿಂದ ಆ ಚಿತ್ರವು ಮೂಲ ಚಿತ್ರಕ್ಕಿಂತ ತಿಳಿಯಾಗಿದೆ.’
– (ಸದ್ಗುರು) ಡಾ. ಮುಕುಲ ಗಾಡಗೀಳ (ಪಿಎಚ್.ಡಿ., ಮುಂಬೈ ವಿಶ್ವವಿದ್ಯಾಲಯ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೯.೩.೨೦೨೫)
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !